Acts · chapter 17 · verse 26
Acts 17:26 in Kannada
ಆತನು ಒಂದೇ ರಕ್ತದಿಂದ ಎಲ್ಲಾ ಜನಾಂಗಗಳ ಮನುಷ್ಯರನ್ನು ಭೂಮುಖದ ಮೇಲೆಲ್ಲಾ ವಾಸಿಸುವದಕ್ಕಾಗಿ ಉಂಟು ಮಾಡಿದನು.
Aatanu onde raktadinda ellaa janaangagala manushyarannu bhoomukhada melellaa vaasisuvadakkaagi untu maadidanu.
Acts 17:26 in English
- King James Version (KJV)
- And hath made of one blood all nations of men for to dwell on all the face of the earth, and hath determined the times before appointed, and the bounds of their habitation;
- World English Bible (WEB)
- He made from one blood every nation of men to dwell on all the surface of the earth, having determined appointed seasons and the boundaries of their dwellings,
- American Standard Version (ASV)
- and he made of one every nation of men to dwell on all the face of the earth, having determined [their] appointed seasons, and the bounds of their habitation;
- Bible in Basic English (BBE)
- And he has made of one blood all the nations of men living on all the face of the earth, ordering their times and the limits of their lands,
- Darby Translation (DBY)
- and has made of one blood every nation of men to dwell upon the whole face of the earth, having determined ordained times and the boundaries of their dwelling,
- Webster's Bible (WBS)
- And hath made of one blood all nations of men to dwell on all the face of the earth, and hath determined the times before appointed, and the bounds of their habitation;
- Young's Literal Translation (YLT)
- He made also of one blood every nation of men, to dwell upon all the face of the earth — having ordained times before appointed, and the bounds of their dwellings —
Read in context
- 24ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ ನಾಗಿರುವದರಿಂದ ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವಾತನಲ್ಲ.
- 25ಇಲ್ಲವೆ ತಾನೇ ಎಲ್ಲರಿಗೆ ಜೀವವನ್ನು ಶ್ವಾಸವನ್ನು ಎಲ್ಲವನ್ನು ಕೊಡುವಾತ ನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಆರಾಧನೆ ಹೊಂದುವಾತನಲ್ಲ;
- 26ಆತನು ಒಂದೇ ರಕ್ತದಿಂದ ಎಲ್ಲಾ ಜನಾಂಗಗಳ ಮನುಷ್ಯರನ್ನು ಭೂಮುಖದ ಮೇಲೆಲ್ಲಾ ವಾಸಿಸುವದಕ್ಕಾಗಿ ಉಂಟು ಮಾಡಿದನು.
- 27ಆತನು ನಮ್ಮಲ್ಲಿ ಒಬ್ಬನಿಗೂ ದೂರ ವಾದವನಲ್ಲದಿದ್ದರೂ ಅವರು ಕರ್ತನನ್ನು ತಡವಾಡಿ ಕಂಡುಕೊಂಡಾರೇನೋ ಎಂದು ಮೊದಲೇ ನೇಮಕ ವಾದ ಕಾಲಗಳನ್ನೂ ಅವರ ನಿವಾಸದ ಮೇರೆಗಳನ್ನೂ ನಿಶ್ಚಯಿಸಿದನು.
- 28ಆತನಲ್ಲಿಯೇ ನಾವು ಜೀವಿಸುತ್ತೇವೆ ಚಲಿಸುತ್ತೇವೆ ಇರುತ್ತೇವೆ. ನಿಮ್ಮ ಸ್ವಂತ ಕವಿಗಳಲ್ಲಿಯೂ ಕೆಲವರು--ನಾವೂ ಆತನ ಸಂತಾನದವರೇ ಎಂಬ ದಾಗಿ ಹೇಳಿದ್ದಾರೆ.
Cross references
- Deuteronomy 32:7–8 ಧರ್ಮೋಪದೇಶಕಾಂಡ 32:7–8ಪೂರ್ವದ ದಿವಸಗಳನ್ನು ಜ್ಞಾಪಕಮಾಡಿಕೊ; ತಲ ತಲಾಂತರಗಳ ವರುಷಗಳನ್ನು ಗ್ರಹಿಸಿಕೊ; ನಿನ್ನ ತಂದೆ ಯನ್ನು ಕೇಳು, ಅವನು ನಿನಗೆ ತಿಳಿಸುವನು. ನಿನ್ನ ಹಿರಿಯರನ್ನು ಕೇಳು, ಅವರು ನಿನಗೆ ಹೇಳುವರು. ಮಹೋನ್ನತನು ಜನಾಂಗಗಳಿಗೆ ಸ್ವಾಸ್ತ್ಯ ಹಂಚಿ ಆತನು ಆದಾಮನ ಮಕ್ಕಳನ್ನು ವಿಂಗಡಿಸಿದಾಗ ಇಸ್ರಾ ಯೇಲ್ ಮಕ್ಕಳ ಲೆಕ್ಕದ ಪ್ರಕಾರ ಜನಗಳ ಮೇರೆಗಳನ್ನು ಇಟ್ಟನು.
- Malachi 2:10 ಮಲಾಕಿಯ 2:10ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ?
- Genesis 3:20 ಆದಿಕಾಂಡ 3:20ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು. ಯಾಕಂದರೆ ಆಕೆಯು ಜೀವವುಳ್ಳ ವರಿಗೆಲ್ಲಾ ತಾಯಿಯಾಗಿದ್ದಾಳೆ.
- Romans 5:12–19 ರೋಮಾಪುರದವರಿಗೆ 5:12–19ಈ ವಿಷಯ ಹೇಗಂದರೆ, ಒಬ್ಬ ಮನುಷ್ಯ ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕ ದೊಳಗೆ ಸೇರಿದವು; ಎಲ್ಲರೂ ಪಾಪಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು. (ನ್ಯಾಯಪ್ರಮಾಣವು ಕೊಡಲ್ಪಡುವ ತನಕ ಪಾಪವು ಲೋಕದಲ್ಲಿತ್ತು; ಆದರೆ ನ್ಯಾಯಪ್ರಮಾಣ ವಿಲ್ಲದಿರುವಾಗ ಪಾಪವು ಲೆಕ್ಕಕ್ಕೆ ಬರುವದಿಲ್ಲ. ಆದರೂ ಆದಾಮನಿಂದ ಮೋಶೆಯವರೆಗೂ ಮರಣದ ಆಳಿಕೆಯು ನಡೆಯುತ್ತಿತ್ತು. ಆದಾಮನ ಆ ಅತಿಕ್ರಮಣಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಿಗೆ ಸೂಚನೆ ಯಾಗಿದ್ದಾನೆ. ಆದರೆ ಆ ಅಪರಾಧವು ಇದ್ದಂತೆ ಉಚಿತವಾದ ದಾನವು ಇರುವದಿಲ್ಲ; ಹೇಗಂದರೆ ಆ ಒಬ್ಬನ ಅಪ ರಾಧದಿಂದ ಎಲ್ಲಾ ಮನುಷ್ಯರು ಸತ್ತವರಾಗಿದ್ದರೆ ದೇವರ ಕೃಪೆಯೂ ಯೇಸು ಕ್ರಿಸ್ತನೆಂಬ ಈ ಒಬ್ಬ ಮನುಷ್ಯನ ಕೃಪೆಯಿಂದಾದ ದಾನವೂ ಅನೇಕರಿಗೆ ಹೇರಳವಾಗಿ ದೊರೆಯುವದು ಮತ್ತೂ ನಿಶ್ಚಯವಲ್ಲವೇ. ಇದಲ್ಲದೆ ಪಾಪಮಾಡಿದ ಆ ಒಬ್ಬನಿಂದಲೇ ಬಂದಂತೆ ಈ ದಾನವು ಬರಲಿಲ್ಲ; ಯಾಕಂದರೆ ಒಬ್ಬ ಮನುಷ್ಯನ ಅಪರಾಧದ ದೆಸೆಯಿಂದಲೇ ತೀರ್ಪು ಉಂಟಾಯಿತು. ಆದರೆ ಉಚಿತವಾದ ದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ನಿರ್ಣಯಿಸುವಂಥದ್ದಾಗಿದೆ. ಒಬ್ಬನ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಆಳಿದ್ದರೆ ಕೃಪೆಯನ್ನೂ ನೀತಿಯ ದಾನವನ್ನೂ ಹೇರಳವಾಗಿ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬನ ಮೂಲಕ ಜೀವದಲ್ಲಿ ಆಳುವದು ಮತ್ತೂ ನಿಶ್ಚಯವಲ್ಲವೇ). ಹೀಗಿರಲಾಗಿ ಒಬ್ಬನ ಅಪರಾಧದಿಂದಲೇ ಎಲ್ಲಾ ಮನುಷ್ಯರಿಗೆ ಅಪರಾಧ ನಿರ್ಣಯವು ಹೇಗೆ ಬಂತೋ ಹಾಗೆಯೇ ಒಬ್ಬನ ನೀತಿಯಿಂದಲೇ ಉಚಿತಾರ್ಥವಾದ ದಾನವು ಎಲ್ಲಾ ಮನುಷ್ಯರಿಗೆ ಜೀವದ ನೀತಿ ನಿರ್ಣಯಕ್ಕಾಗಿ ಬಂದಿತು. ಒಬ್ಬ ಮನುಷ್ಯನ ಅವಿಧೇಯತ್ವದಿಂದ ಅನೇಕರು ಹೇಗೆ ಪಾಪಿಗಳಾ ದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಅನೇಕರು ನೀತಿವಂತರಾಗುವರು.
- 1 Corinthians 15:22 1 ಕೊರಿಂಥದವರಿಗೆ 15:22ಯಾವ ಪ್ರಕಾರ ಆದಾಮನಲ್ಲಿ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನಲ್ಲಿ ಎಲ್ಲರೂ ಜೀವಿತರಾಗುವರು.
- 1 Corinthians 15:47 1 ಕೊರಿಂಥದವರಿಗೆ 15:47ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
- Job 14:5 ಯೋಬನು 14:5ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ.
- Job 12:23 ಯೋಬನು 12:23ಆತನು ಜನಾಂಗಗಳನ್ನು ಹೆಚ್ಚಿಸಿ ಅವುಗಳನ್ನು ನಾಶಮಾಡುತ್ತಾನೆ. ಜನಾಂಗ ಗಳನ್ನು ವಿಸ್ತಾರಮಾಡಿ ತಿರುಗಿ ಅವುಗಳನ್ನು ಹತ್ತಿಕ್ಕುತ್ತಾನೆ.
- Psalm 31:15 ಕೀರ್ತನೆಗಳು 31:15ನನ್ನ ಆಯ ಷ್ಕಾಲವು ನಿನ್ನ ಕೈಯಲ್ಲಿದೆ; ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸು.
- Genesis 9:19 ಆದಿಕಾಂಡ 9:19ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
- Daniel 11:35 ದಾನಿಯೇಲನು 11:35ಇದಲ್ಲದೆ ಅಂತ್ಯಕಾಲದ ವರೆಗೆ ಅವರನ್ನು ಶೋಧಿಸುವದಕ್ಕೂ ಶುದ್ಧಮಾಡುವದಕ್ಕೂ ಶುಭ್ರ ಪಡಿಸುವದಕ್ಕೂ ವಿವೇಕಿಗಳಲ್ಲಿ ಕೆಲವರು ಬೀಳುವರು; ಇದು (ಅಂತ್ಯವು) ನಿಯಮಿತ ಕಾಲಕ್ಕೆ ಇರುವದು;
- Daniel 11:27 ದಾನಿಯೇಲನು 11:27ಈ ಇಬ್ಬರು ಅರಸರ ಹೃದಯ ಗಳನ್ನು ಕೇಡನ್ನು ಮಾಡುವಂತವುಗಳಾಗಿರುವವು; ಒಂದೇ ಮೇಜಿನಲ್ಲಿ ಕುಳಿತು ಸುಳ್ಳು ಹೇಳುವರು; ಆದರೆ ಅದು ಅನುಕೂಲವಾಗದು; ಅದು ಹೇಗಾದರೂ ನಿಯಮಿಸಲ್ಪಟ್ಟ ಕಾಲದಲ್ಲಿ ಅಂತ್ಯವಾಗುವದು.
Original words (Greek)
- And · G5037τέ té
- made · G4160ποιέω poiéō
- of · G1537ἐκ ek
- one · G1520εἷς heîs
- blood · G129αἷμα haîma
- all · G3956πᾶς pâs
- nations · G1484ἔθνος éthnos
- men · G444ἄνθρωπος ánthrōpos
- dwell · G2730κατοικέω katoikéō
- on · G1909ἐπί epí
- all · G3956πᾶς pâs
- face · G4383πρόσωπον prósōpon
- earth · G1093γῆ gē
- determined · G3724ὁρίζω horízō
- times · G2540καιρός kairós
- appointed · G4384προτάσσω protássō
- and · G2532καί kaí
- bounds · G3734ὁροθεσία horothesía
- their · G846αὐτός autós
- habitation · G2733κατοικία katoikía