Genesis · chapter 9 · verse 19
Genesis 9:19 in Kannada
ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
Ee moovaru nohana makkalu. Ivarinda bhoomiyallellaa janaru vistarisidaru.
Genesis 9:19 in English
- King James Version (KJV)
- These [are] the three sons of Noah: and of them was the whole earth overspread.
- World English Bible (WEB)
- These three were the sons of Noah, and from these the whole earth was populated.
- American Standard Version (ASV)
- These three were the sons of Noah: and of these was the whole earth overspread.
- Bible in Basic English (BBE)
- These three were the sons of Noah and from them all the earth was peopled.
- Darby Translation (DBY)
- These three are the sons of Noah; and from these was [the population of] the whole earth spread abroad.
- Webster's Bible (WBS)
- These three [were] the sons of Noah: and from them was the whole earth overspread.
- Young's Literal Translation (YLT)
- These three [are] sons of Noah, and from these hath all the earth been overspread.
Read in context
- 17ದೇವರು ನೋಹನಿಗೆ--ನಾನು ನನಗೂ ಭೂಮಿಯ ಮೇಲಿರುವ ಎಲ್ಲಾ ದೇಹಗಳಿಗೂ ಮಧ್ಯ ದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತು ಇದೇ ಎಂದು ಹೇಳಿದನು.
- 18ನಾವೆಯೊಳಗಿನಿಂದ ಹೊರಟು ಬಂದ ನೋಹನ ಕುಮಾರರು ಯಾರಂದರೆ, ಶೇಮ್ ಹಾಮ್ ಯೆಫೆತ್; ಹಾಮನು ಕಾನಾನನ ತಂದೆಯು.
- 19ಈ ಮೂವರು ನೋಹನ ಮಕ್ಕಳು. ಇವರಿಂದ ಭೂಮಿಯಲ್ಲೆಲ್ಲಾ ಜನರು ವಿಸ್ತರಿಸಿದರು.
- 20ನೋಹನು ವ್ಯವಸಾಯಗಾರನಾಗುವದಕ್ಕೆ ಪ್ರಾರಂಭಿಸಿ ಒಂದು ದ್ರಾಕ್ಷೇತೋಟವನ್ನು ಮಾಡಿದನು.
- 21ಅವನು ದ್ರಾಕ್ಷಾರಸವನ್ನು ಕುಡಿದು ಅಮಲೇರಿ ತನ್ನ ಗುಡಾರದಲ್ಲಿ ಬೆತ್ತಲೆಯಾಗಿದ್ದನು.
Cross references
- 1 Chronicles 1:4–28 1 ಪೂರ್ವಕಾಲವೃತ್ತಾಂತ 1:4–28ನೋಹನು, ಶೇಮನು, ಹಾಮನು, ಮತ್ತು ಯೆಫೆತನು, ಯೆಫೆತನ ಮಕ್ಕಳು--ಗೋಮೆರನು ಮಾಗೋ ಗನು ಮಾದಯನು, ಯಾವಾನನು, ತೂಬಲನು, ಮೇಷಕನು, ತೀರಾಸನು. ಗೋಮೆರನ ಮಕ್ಕಳ --ಅಷ್ಕೆನಜನು, ರೀಫತನು, ತೊಗರ್ಮನು ಯಾವಾ ನನ ಮಕ್ಕಳು -- ಎಲೀಷನು, ತಾರ್ಷೀಷನು, ಕಿತ್ತೀ ಮನು, ದೋದಾನೀಮನು. ಹಾಮನ ಮಕ್ಕಳು -- ಕೂಷನು, ಮಿಚ್ರಯಾ ಮನು, ಪೂಟನು, ಕಾನಾನನು. ಕೂಷನ ಮಕ್ಕಳು --ಸೇಬನು, ಹವೀಲನು, ಸಬ್ತನು, ರಮ್ಮನು, ಸಬ್ತೆಕನು. ರಮ್ಮನ ಮಕ್ಕಳು--ಶೆಬನು, ದೆದಾನನು. ಕೂಷನು ನಿಮ್ರೋದನನ್ನು ಪಡೆದನು; ಅವನು ಭೂಮಿಯಲ್ಲಿ ಪರಾಕ್ರಮಶಾಲಿಯಾಗಲು ಪ್ರಾರಂಭಿಸಿದನು. ಮಿಚ್ರಯಿಮ್ಯನ್ನೂ ಲೂದ್ಯರನ್ನೂ ಅನಾಮ್ಯರನ್ನೂ ಲೆಹಾಬ್ಯರನ್ನೂ ನಫ್ತುಹ್ಯರನ್ನೂ ಪತ್ರುಸ್ಯರನ್ನೂ ಕಫ್ತೋರ್ಯರನ್ನೂ ಕಸ್ಲುಹ್ಯರನ್ನೂ ಪಡೆದನು; ಕಸ್ಲುಹ್ಯರೊಳಗಿಂದ ಫಿಲಿಷ್ಟಿಯರು ಉಂಟಾದರು. ಕಾನಾನನು ತನ್ನ ಚೊಚ್ಚಲ ಮಗನಾದ ಸೀದೋನ ನನ್ನೂ ಹೇತನನ್ನೂ ಯೆಬೂಸ್ಯರನ್ನೂ ಅಮೋರ್ಯ ರನ್ನೂ ಗಿರ್ಗಾಷಿಯರನ್ನೂ ಹಿವ್ವಿಯರನ್ನೂ ಅರ್ಕಿ ಯರನ್ನೂ ಸೀನೀಯರನ್ನೂ ಅರ್ವಾದಿಯರನ್ನೂ ಚೆಮಾರಿಯರನ್ನೂ ಹಮಾತಿಯರನ್ನೂ ಪಡೆದನು. ಶೇಮನ ಮಕ್ಕಳು--ಏಲಾಮನು ಅಶ್ಯೂರನು, ಅರ್ಪಕ್ಷದನು, ಲೂದನು, ಅರಾಮನು, ಊಚನು, ಹೂಲನು, ಗೆತೆರನು, ಮೆಷಕನು. ಅರ್ಪಕ್ಷದನು ಶೆಲಹನನ್ನು ಪಡೆದನು; ಶೆಲಹನು ಏಬೆರನನ್ನು ಪಡೆ ದನು. ಏಬೆರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನಿಗೆ ಪೆಲೆಗನೆಂದು ಹೆಸರಿಡಲ್ಪಟ್ಟಿತು; ಯಾಕಂದರೆ ಅವನ ದಿವಸಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು, ಅವನ ತಮ್ಮನ ಹೆಸರು ಯೊಕ್ತಾನನು. ಯೊಕ್ತಾನನು ಅಲ್ಮೋದಾದನನ್ನೂ, ಶೇಲೆಫನನ್ನೂ, ಹಚರ್ಮಾ ವೇತನನ್ನೂ, ಯೆರಹನನ್ನೂ, ಹದೋರಾಮನನ್ನೂ, ಊಜಾಲನನ್ನೂ, ದಿಕ್ಲನನ್ನೂ, ಏಬಾಲನನ್ನೂ, ಅಬೀ ಮಾಯೇಲನನ್ನೂ, ಶೆಬಾನನ್ನೂ, ಓಫೀರನನ್ನೂ ಹವೀಲಾನನ್ನೂ, ಯೋಬಾಬನನ್ನೂ ಪಡೆದನು. ಇವ ರೆಲ್ಲರು ಯೊಕ್ತಾನನ ಮಕ್ಕಳು. ಶೇಮನು ಅರ್ಪಕ್ಷದನು, ಶೆಲಹನು, ಏಬೆ ರನು, ಪೆಲೆಗನು, ರೆಯೂ, ಸೆರೂಗನು, ನಾಹೋ ರನು, ತೆರಹನು; ಅಬ್ರಹಾಮನೆಂಬ ಅಬ್ರಾಮನು. ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.
- Genesis 10:2–32 ಆದಿಕಾಂಡ 10:2–32ಯೆಫೆತನ ಕುಮಾರರು ಯಾರಂದರೆ, ಗೋಮೆರ್ ಮಾಗೋಗ್ ಮಾದಯ್ ಯಾವಾನ್ ತೂಬಲ್ ಮೇಷೆಕ್ ತೀರಾಸ್ ಎಂಬವರು. ಗೋಮೆರನ ಕುಮಾರರು ಯಾರಂದರೆ, ಅಷ್ಕೆನಸ್ ರೀಫತ್ ತೋಗರ್ಮ ಎಂಬವರು. ಯಾವಾನನ ಕುಮಾರರು ಯಾರಂದರೆ, ಎಲೀಷಾ ತಾರ್ಷೀಷ್ ಕಿತ್ತೀಮ್ ದೋದಾನಿಮ್ ಇವರೇ. ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು. ಹಾಮನ ಕುಮಾರರು ಯಾರಂದರೆ, ಕೂಷ್ ಮಿಚ್ರಯಿಮ್ ಪೂತ್ ಕಾನಾನ್ ಎಂಬವರು. ಕೂಷನ ಕುಮಾರರು ಯಾರಂದರೆ, ಸೆಬಾ ಹವೀಲ ಸಬ್ತಾ ರಗ್ಮ ಸಬ್ತಕಾ ಎಂಬವರು. ರಗ್ಮನ ಕುಮಾರರು ಯಾರಂದರೆ, ಶೆಬಾ ದೆದಾನ್ ಎಂಬವರು. ಕೂಷನಿಂದ ನಿಮ್ರೋದನು ಹುಟ್ಟಿದನು. ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು. ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು. ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು. ಶಿನಾರ್ ದೇಶದಲ್ಲಿರುವ ಬಾಬೆಲ್ ಯೆರೆಕ್ ಅಕ್ಕದ್ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು. ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್ ಎಂಬ ಪಟ್ಟಣ, ಕೆಲಹ, ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್ನನ್ನು ಕಟ್ಟಿದನು. ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು. ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ ಯೆಬೂಸಿಯನೂ ಅಮೋರಿಯನೂ ಗಿರ್ಗಾಷಿಯನೂ ಹಿವ್ವಿಯನೂ ಅರ್ಕಿಯನೂ ಸೀನಿಯನೂ ಅರ್ವಾದಿಯನೂ ಚೆಮಾರಿಯನೂ ಹಮಾತಿಯನೂ ಹುಟ್ಟಿದರು. ತರುವಾಯ ಕಾನಾನ್ ಕುಟುಂಬಗಳು ವಿಸ್ತಾರವಾಗಿ ಹರಡಿದವು. ಕಾನಾನ್ಯರ ಮೇರೆಯು ಸೀದೋನಿ ನಿಂದ ಗೆರಾರಿನ ಮಾರ್ಗವಾಗಿ ಗಾಜಾದ ವರೆಗೆ ಸೊದೋಮ್ ಗೊಮೋರ ಅದ್ಮಾ ಚೆಬೋಯಿಮ್ ಮಾರ್ಗವಾಗಿ ಲೆಷಾದ ವರೆಗೂ ಇರುತ್ತದೆ. ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು. ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು. ಶೇಮನ ಮಕ್ಕಳು ಯಾರಂದರೆ, ಏಲಾಮ್ ಅಶ್ಶೂರ್ ಅರ್ಪಕ್ಷದ್ ಲೂದ್ ಅರಾಮ್. ಅರಾಮನ ಮಕ್ಕಳು ಯಾರಂದರೆ, ಊಸ್ ಹೂಲ್ ಗೆತೆರ್ ಮಷ್ ಇವರೇ. ಅರ್ಪಕ್ಷದನಿಂದ ಶೆಲಹನು ಹುಟ್ಟಿದನು. ಶೆಲಹ ನಿಂದ ಎಬರನು ಹುಟ್ಟಿದನು. ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್. ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ ಹದೋರಾಮನೂ ಊಜಾಲನೂ ದಿಕ್ಲಾನನೂ ಓಬಾಲನೂ ಅಬೀಮಯೇಲನೂ ಶೆಬನೂ ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು. ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು. ಇವರೇ ತಮ್ಮ ಕುಟುಂಬಗಳ ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿ ತಮ್ಮ ಜನಾಂಗಗಳ ಪ್ರಕಾರ ಶೇಮನ ಕುಮಾರರು.ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು. ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.
- Genesis 8:17 ಆದಿಕಾಂಡ 8:17ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.
- Genesis 5:32 ಆದಿಕಾಂಡ 5:32ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು.