Acts · chapter 19 · verse 30
Acts 19:30 in Kannada
ಪೌಲನು ಜನರೊಳಗೆ ಹೋಗ ಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
Paulanu janarolage hoga bekendiddaaga shishyaru avanannu bidalilla.
Acts 19:30 in English
- King James Version (KJV)
- And when Paul would have entered in unto the people, the disciples suffered him not.
- World English Bible (WEB)
- When Paul wanted to enter in to the people, the disciples didn’t allow him.
- American Standard Version (ASV)
- And when Paul was minded to enter in unto the people, the disciples suffered him not.
- Bible in Basic English (BBE)
- And when Paul was about to go in to the people, the disciples did not let him.
- Darby Translation (DBY)
- But Paul intending to go in to the people, the disciples suffered him not;
- Webster's Bible (WBS)
- And when Paul would have entered in to the people, the disciples suffered him not.
- Young's Literal Translation (YLT)
- And on Paul's purposing to enter in unto the populace, the disciples were not suffering him,
Read in context
- 28ಅವರು ಈ ಮಾತುಗಳನ್ನು ಕೇಳಿ ರೌದ್ರವುಳ್ಳವರಾಗಿ-- ಎಫೆಸದವರ ಡಯಾನಿಯು ದೊಡ್ಡವಳು ಎಂದು ಕೂಗುತ್ತಾ ಹೇಳಿದರು.
- 29ಆಗ ಊರೆಲ್ಲಾ ಗಲಿಬಿಲಿಯಾಯಿತು; ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನು ಅರಿಸ್ತಾರ್ಕನನ್ನು ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.
- 30ಪೌಲನು ಜನರೊಳಗೆ ಹೋಗ ಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.
- 31ಇದಲ್ಲದೆ ಆಸ್ಯದಲ್ಲಿ ಅವನಿಗೆ ಸ್ನೇಹಿತರಾಗಿದ್ದ ಪ್ರಮುಖರಲ್ಲಿ ಕೆಲವರು ಅವನು ನಾಟಕ ಶಾಲೆಯೊಳಗೆ ಹೋಗಿ ಅಪಾಯಕ್ಕೆ ಗುರಿಮಾಡಿಕೊಳ್ಳ ಬಾರದೆಂದು ಅವನಿಗೆ ಹೇಳಿ ಕಳುಹಿಸಿದರು.
- 32ಯಾಕಂದರೆ ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. ಸಭೆಯು ಗಲಿಬಿಲಿಯಾಗಿತ್ತು ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿಬಂದಿದ್ದ ಕಾರಣವು ಗೊತ್ತಿರಲಿಲ್ಲ.
Cross references
- Acts 21:39 ಅಪೊಸ್ತಲರ ಕೃತ್ಯಗಳು 21:39ಆದರೆ ಪೌಲನು--ನಾನು ಪ್ರಖ್ಯಾತವಾದ ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ನಿವಾಸಿಯಾಗಿರುವ ಯೆಹೂದ್ಯನು; ಈ ಜನರಿಗೆ ಮಾತನಾಡುವಂತೆ ನನಗೆ ಅಪ್ಪಣೆ ಕೊಡು ಎಂದು ನಾನು ನಿನ್ನನ್ನು ಕೇಳಿಕೊಳ್ಳುತ್ತೇನೆ ಅಂದನು.ಅವನು ಅಪ್ಪಣೆ ಕೊಟ್ಟಾಗ ಪೌಲನು ಮೆಟ್ಟಲುಗಳ ಮೇಲೆ ನಿಂತು ಜನರಿಗೆ ಕೈಸನ್ನೆ ಮಾಡಿದನು. ದೊಡ್ಡ ನಿಶ್ಶಬ್ದತೆ ಉಂಟಾದಾಗ ಇಬ್ರಿಯ ಭಾಷೆಯಲ್ಲಿ ಅವರೊಂದಿಗೆ--
- Acts 17:22–31 ಅಪೊಸ್ತಲರ ಕೃತ್ಯಗಳು 17:22–31ಆಗ ಪೌಲನು ಅಂಗಾರಕದ ಬೆಟ್ಟದ ಮಧ್ಯದಲ್ಲಿ ನಿಂತು--ಅಥೇನೆಯ ಜನರೇ, ಎಲ್ಲಾ ವಿಷಯಗಳಲ್ಲಿ ನೀವು ಮೂಢ ಭಕ್ತರೆಂದು ನಾನು ಗ್ರಹಿಸುತ್ತೇನೆ. ನಾನು ಹಾದು ಹೋಗುತ್ತಿರಲು ನಿಮ್ಮ ಧ್ಯಾನಗಳನ್ನು ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ--ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿ ಸುತ್ತೇನೆ. ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯ ನಾಗಿರುವದರಿಂದ ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವಾತನಲ್ಲ. ಇಲ್ಲವೆ ತಾನೇ ಎಲ್ಲರಿಗೆ ಜೀವವನ್ನು ಶ್ವಾಸವನ್ನು ಎಲ್ಲವನ್ನು ಕೊಡುವಾತ ನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಆರಾಧನೆ ಹೊಂದುವಾತನಲ್ಲ; ಆತನು ಒಂದೇ ರಕ್ತದಿಂದ ಎಲ್ಲಾ ಜನಾಂಗಗಳ ಮನುಷ್ಯರನ್ನು ಭೂಮುಖದ ಮೇಲೆಲ್ಲಾ ವಾಸಿಸುವದಕ್ಕಾಗಿ ಉಂಟು ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರ ವಾದವನಲ್ಲದಿದ್ದರೂ ಅವರು ಕರ್ತನನ್ನು ತಡವಾಡಿ ಕಂಡುಕೊಂಡಾರೇನೋ ಎಂದು ಮೊದಲೇ ನೇಮಕ ವಾದ ಕಾಲಗಳನ್ನೂ ಅವರ ನಿವಾಸದ ಮೇರೆಗಳನ್ನೂ ನಿಶ್ಚಯಿಸಿದನು. ಆತನಲ್ಲಿಯೇ ನಾವು ಜೀವಿಸುತ್ತೇವೆ ಚಲಿಸುತ್ತೇವೆ ಇರುತ್ತೇವೆ. ನಿಮ್ಮ ಸ್ವಂತ ಕವಿಗಳಲ್ಲಿಯೂ ಕೆಲವರು--ನಾವೂ ಆತನ ಸಂತಾನದವರೇ ಎಂಬ ದಾಗಿ ಹೇಳಿದ್ದಾರೆ. ನಾವು ದೇವರ ಸಂತಾನದವ ರಾಗಿದ್ದ ಮೇಲೆ ದೈವತ್ವವು ಮನುಷ್ಯನ ಶಿಲ್ಪ ವಿದ್ಯೆ ಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲಿಗೆ ಸಮಾನವೆಂದು ನಾವು ಭಾವಿಸಲೇಬಾರದು. ಈ ಅಜ್ಞಾನಕಾಲಗಳನ್ನು ದೇವರುಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನು ಷ್ಯರೆಲ್ಲರೂ ಮಾನಸಾಂತರಪಡಬೇಕೆಂದು ಅಪ್ಪಣೆ ಕೊಡುತ್ತಾನೆ. ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.
- Acts 14:14–18 ಅಪೊಸ್ತಲರ ಕೃತ್ಯಗಳು 14:14–18ಇದನ್ನು ಕೇಳಿ ಅಪೊಸ್ತಲ ರಾದ ಬಾರ್ನಬ ಪೌಲರು ತಮ್ಮ ವಸ್ತ್ರಗಳನ್ನು ಹರ ಕೊಂಡು ಜನರ ಗುಂಪಿನೊಳಗೆ ಕೂಗುತ್ತಾ ನುಗ್ಗಿ-- ಅಯ್ಯಗಳಿರಾ, ನೀವು ಇವುಗಳನ್ನು ಯಾಕೆ ಮಾಡು ತ್ತೀರಿ? ನಾವೂ ಮನುಷ್ಯರು, ನಿಮ್ಮಂಥ ಸ್ವಭಾವ ವುಳ್ಳವರು. ನೀವು ಈ ವ್ಯರ್ಥವಾದವುಗಳನ್ನು ಬಿಟ್ಟು ಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳ ಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿದ ಜೀವ ಸ್ವರೂಪನಾದ ದೇವರ ಕಡೆಗೆ ತಿ ಗತಿಸಿಹೋದ ಕಾಲಗಳಲ್ಲಿ ಆತನು ಎಲ್ಲಾ ಜನಾಂಗಗಳವರನ್ನು ತಮ್ಮ ಸ್ವಂತ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟುಬಿಟ್ಟನು; ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲ ಗಳನ್ನೂ ದಯಪಾಲಿಸಿ ನಮಗೆ ಆಹಾರ ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸಿ ಒಳ್ಳೇದನ್ನು ಮಾಡುತ್ತಾ ಬಂದನು ಎಂದು ಹೇಳಿದರು. ಅವರು ಈ ಮಾತುಗಳನ್ನು ಹೇಳಿದರೂ ತಮಗೆ ಬಲಿಕೊಡದಂತೆ ಜನರನ್ನು ತಡೆಯವದು ಕಷ್ಟವಾಗಿತ್ತು.
- 2 Samuel 18:2–3 2 ಸಮುವೇಲನು 18:2–3ಅವನು ಸೈನ್ಯವನ್ನು ಮೂರು ಪಾಲು ಮಾಡಿ ಒಂದು ಪಾಲನ್ನು ಯೋವಾಬನಿಗೂ ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ ಮತ್ತೊಂದನ್ನು ಗಿತ್ತೀಯನಾದ ಇತ್ತೈಗೂ ಒಪ್ಪಿಸಿ--ನಾನೂ ನಿಮ್ಮ ಸಂಗಡ ಬರುತ್ತೇನೆ ಎಂದು ಹೇಳಿದನು. ಆದರೆ ಜನರು ಅವನಿಗೆ--ನೀನು ನಮ್ಮ ಸಂಗಡ ಬರಬೇಡ; ಯಾಕಂದರೆ ನಾವು ಓಡಿ ಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತುಹೋದರೂ ಅವರು ನಮ್ಮನ್ನು ಲಕ್ಷಿಸುವದಿಲ್ಲ. ನೀನಾದರೆ ನಮ್ಮಲ್ಲಿ ಹತ್ತು ಸಾವಿರ ಜನಕ್ಕೆ ಸರಿಯಾಗಿದ್ದೀ. ಈಗ ನೀನು ಪಟ್ಟಣದಲ್ಲಿದ್ದು ನಮಗೆ ಸಹಾಯವಾಗಿರುವದು ಉತ್ತಮ ಅಂದರು.
- 2 Samuel 21:17 2 ಸಮುವೇಲನು 21:17ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು.