Acts · chapter 20 · verse 26
Acts 20:26 in Kannada
ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು.
Aadakaarana ellaa manushyara raktada vishayadalli naanu nirdoshiyaagiddenembadakke ee divasa neeve nanage saakshigalu.
Acts 20:26 in English
- King James Version (KJV)
- Wherefore I take you to record this day, that I [am] pure from the blood of all [men].
- World English Bible (WEB)
- Therefore I testify to you today that I am clean from the blood of all men,
- American Standard Version (ASV)
- Wherefore I testify unto you this day, that I am pure from the blood of all men.
- Bible in Basic English (BBE)
- And so I say to you this day that I am clean from the blood of all men.
- Darby Translation (DBY)
- Wherefore I witness to you this day, that I am clean from the blood of all,
- Webster's Bible (WBS)
- Wherefore I call you to witness this day, that I [am] pure from the blood of all [men] .
- Young's Literal Translation (YLT)
- wherefore I take you to witness this day, that I [am] clear from the blood of all,
Read in context
- 24ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ
- 25ಇಗೋ, ನಿಮ್ಮಲ್ಲಿ ಸಂಚಾರ ಮಾಡಿ ದೇವರ ರಾಜ್ಯವನ್ನು ಸಾರಿದವನಾದ ನನ್ನ ಮುಖವನ್ನು ಇನ್ನು ಮೇಲೆ ನಿಮ್ಮಲ್ಲಿ ಒಬ್ಬರೂ ಕಾಣುವದಿಲ್ಲವೆಂದು ನಾನು ಬಲ್ಲೆನು.
- 26ಆದಕಾರಣ ಎಲ್ಲಾ ಮನುಷ್ಯರ ರಕ್ತದ ವಿಷಯದಲ್ಲಿ ನಾನು ನಿರ್ದೋಷಿಯಾಗಿದ್ದೇನೆಂಬದಕ್ಕೆ ಈ ದಿವಸ ನೀವೇ ನನಗೆ ಸಾಕ್ಷಿಗಳು.
- 27ಯಾಕಂದರೆ ದೇವರ ಸಂಕಲ್ಪ ವನ್ನೆಲ್ಲಾ ನಿಮಗೆ ತಿಳಿಸುವದರಲ್ಲಿ ನಾನು ಹಿಂದೆಗೆಯ ಲಿಲ್ಲ.
- 28ದೇವರು ತನ್ನ ಸ್ವರಕ್ತದಿಂದ ಕೊಂಡುಕೊಂಡ ಸಭೆಯನ್ನು ಪೋಷಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರನ್ನಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.
Cross references
- Acts 18:6 ಅಪೊಸ್ತಲರ ಕೃತ್ಯಗಳು 18:6ಅವರು ಎದುರಿಸಿ ದೇವದೂಷಣೆ ಮಾಡಲಾಗಿ ಅವನು ತನ್ನ ವಸ್ತ್ರವನ್ನು ಝಾಡಿಸಿ ಅವರಿಗೆ--ನಿಮ್ಮ ರಕ್ತವು ನಿಮ್ಮ ತಲೆಗಳ ಮೇಲೆ ಇರಲಿ; ನಾನು ಇಂದಿನಿಂದ ದೋಷರಹಿತನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ
- John 12:17 ಯೋಹಾನನು 12:17ಇದಲ್ಲದೆ ಆತನು ಲಾಜರನನ್ನು ಸಮಾ ಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರು ಸಾಕ್ಷಿಕೊಟ್ಟರು.
- Ezekiel 3:18–21 ಯೆಹೆಜ್ಕೇಲನು 3:18–21ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು. ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ. ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು; ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.
- Ezekiel 33:2–9 ಯೆಹೆಜ್ಕೇಲನು 33:2–9ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳೊಂದಿಗೆ ಮಾತನಾಡು ಮತ್ತು ಅವ ರಿಗೆ--ನಾನು ಒಂದು ದೇಶದ ಮೇಲೆ ಯಾವಾಗ ಕತ್ತಿಯನ್ನು ತರುವೆನೋ ಆಗ ಆ ದೇಶದ ಜನರು ತಮ್ಮ ಪ್ರಾಂತ್ಯದ ಒಬ್ಬ ಮನುಷ್ಯನನ್ನು ಆರಿಸಿ ತಮಗೆ ಕಾವಲುಗಾರನನ್ನಾಗಿ ಇಟ್ಟರೆ, ಅವನ ಕತ್ತಿಯು ದೇಶದ ಮೇಲೆ ಬರುವದನ್ನು ನೋಡಿ, ಕಹಳೆಯನ್ನೂದಿ ಜನರನ್ನು ಎಚ್ಚರಿಸಿದಾಗ, ಯಾವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರವಾಗುವದಿಲ್ಲವೋ? ಆಗ ಕತ್ತಿಯು ಬಂದು ಅವನನ್ನು ತೆಗೆದುಕೊಂಡರೆ ಅವನ ರಕ್ತವು ಅವನ ತಲೆಯ ಮೇಲೆಯೇ ಇರುವದು. ಅವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರಗೊಳ್ಳಲಿಲ್ಲ; ಅವನ ರಕ್ತವು ಅವನ ಮೇಲೆ ಇರುವದು. ಆದರೆ ಎಚ್ಚರಿಕೆಯಾಗುವವನು ತನ್ನ ಪ್ರಾಣವನ್ನು ಉಳಿಸಿಕೊ ಳ್ಳುವನು. ಆದರೆ ಕಾವಲುಗಾರನು ಕತ್ತಿಯನ್ನು ನೋಡಿ, ಒಂದು ವೇಳೆ ಕಹಳೆಯನ್ನು ಊದದೆ ಜನರನ್ನೂ ಎಚ್ಚರಿಸದಿದ್ದರೆ, ಆಗ ಕತ್ತಿಯು ಬಂದು ಅವರೊಳಗಿಂದ ಯಾರೊಬ್ಬನನ್ನಾದರೂ ತೆಗೆದುಕೊಂಡರೆ ಅವನು ತನ್ನ ಅಕ್ರಮದಲ್ಲಿ ತೆಗೆಯಲ್ಪಡುತ್ತಾನೆ. ಆದರೆ ನಾನು ಅವನ ರಕ್ತವನ್ನು ಕಾವಲುಗಾರನ ಕೈಯಿಂದ ವಿಚಾರಿಸುವೆನು. ಓ ಮನುಷ್ಯಪುತ್ರನೇ, ನಿನ್ನನ್ನು ನಾನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ಇಟ್ಟಿದ್ದೇನೆ; ಆದದರಿಂದ ನೀನು ನನ್ನ ಬಾಯಿಯ ವಾಕ್ಯವನ್ನು ಕೇಳು, ನನ್ನಿಂದ ಅವರನ್ನು ಎಚ್ಚರಿಸು. ನಾನು ದುಷ್ಟನಿಗೆ--ಓ ದುಷ್ಟ ಮನುಷ್ಯನೇ, ನೀನು ನಿಶ್ಚಯವಾಗಿ ಸಾಯುವಿ ಎಂದು ಹೇಳುವಾಗ ಒಂದು ವೇಳೆ ನೀನು ಅವನೊಂದಿಗೆ ಮಾತನಾಡದೆ ದುಷ್ಟನನ್ನು ಅವನ ಮಾರ್ಗದಿಂದ ಎಚ್ಚರಿಸದಿದ್ದರೆ ಆ ದುಷ್ಟ ಮನುಷ್ಯನು ಅವನ ಅಕ್ರಮಗಳಲ್ಲಿಯೇ ಸಾಯುವನು; ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು. ಆದಾಗ್ಯೂ ನೀನು ಒಂದು ವೇಳೆ ದುಷ್ಟನನ್ನು ಅವನ ದುಮಾರ್ಗಗಳಿಂದ ತಿರುಗಲು ಎಚ್ಚರಿಸಿದರೂ ಅವನು ತನ್ನ ದುಷ್ಟಮಾರ್ಗದಿಂದ ತಿರುಗದಿದ್ದರೆ ಅವನ ಅಕ್ರಮಗಳಲ್ಲಿಯೇ ಸಾಯುವನು; ಆದರೆ ನೀನು ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಿ.
- Romans 10:2 ರೋಮಾಪುರದವರಿಗೆ 10:2ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದದ್ದಲ್ಲ.
- 2 Corinthians 8:3 2 ಕೊರಿಂಥದವರಿಗೆ 8:3ಅವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು; ಇದಕ್ಕೆ ನಾನು ಸಾಕ್ಷಿ.
- 2 Corinthians 7:2 2 ಕೊರಿಂಥದವರಿಗೆ 7:2ನಮ್ಮನ್ನು ಸೇರಿಸಿಕೊಳ್ಳಿರಿ; ನಾವು ಯಾರಿಗೂ ಅನ್ಯಾಯಮಾಡಲಿಲ್ಲ. ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ.
- 2 Corinthians 1:23 2 ಕೊರಿಂಥದವರಿಗೆ 1:23ಇದಲ್ಲದೆ ನಿಮ್ಮ ಮೇಲೆ ಕನಿಕರವಿರುವದರಿಂದ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲವೆಂಬದಕ್ಕೆ ನನ್ನ ಪ್ರಾಣದೊಂದಿಗೆ ದೇವರೇ ನನಗೆ ಸಾಕ್ಷಿ.ನಿಮ್ಮ ನಂಬಿಕೆಯ ಮೇಲೆ ನಾವು ದೊರೆತನ ಮಾಡುವದಕ್ಕಾಗಿ ಅಲ್ಲ; ಆದರೆ ನಿಮ್ಮ ಸಂತೋಷಕ್ಕೆ ಸಹಾಯಮಾಡುವವರಾಗಿದ್ದೇವೆ. ಯಾಕಂದರೆ ನೀವು ನಂಬಿಕೆಯಲ್ಲಿ ನಿಂತಿದ್ದೀರಿ.
- 2 Samuel 3:28 2 ಸಮುವೇಲನು 3:28ದಾವೀದನು ಅದನ್ನು ಕೇಳಿದಾಗ--ನೇರನ ಮಗ ನಾದ ಅಬ್ನೇರನ ರಕ್ತಾಪರಾಧಕ್ಕೆ ನಾನೂ ನನ್ನ ರಾಜ್ಯವೂ ಎಂದೆಂದಿಗೂ ಕರ್ತನ ಮುಂದೆ ನಿರಪರಾ ಧಿಯಾಗಿದ್ದೇವೆ.
- John 19:35 ಯೋಹಾನನು 19:35ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು.
- 1 Thessalonians 2:10–12 1 ಥೆಸಲೊನೀಕದವರಿಗೆ 2:10–12ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ಶುದ್ಧರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬದಕ್ಕೆ ನೀವು ಸಾಕ್ಷಿಗಳು. ದೇವರೂ ಸಾಕ್ಷಿ. ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ದಿ ಹೇಳುತ್ತಾ ಆದರಿಸುತ್ತಾ ಬಂದೆವು. ತನ್ನ ರಾಜ್ಯಕ್ಕೂ ಪ್ರಭಾವಕ್ಕೂ ಕರೆದ ದೇವರಿಗೆ ನೀವು ಯೋಗ್ಯರಾಗಿ ನಡೆಯಬೇಕೆಂದು ಖಂಡಿತವಾಗಿ ಹೇಳುತ್ತಾ ಇದ್ದೆವೆಂಬದು ನಿಮಗೆ ತಿಳಿದದೆ.
- Job 16:19 ಯೋಬನು 16:19ಈಗ ಇಗೋ, ಆಕಾಶದಲ್ಲಿ ನನ್ನ ಸಾಕ್ಷಿ ಉಂಟು; ನನ್ನ ಸಾಕ್ಷಿಯು ಉನ್ನತದಲ್ಲಿ ಅದೆ.