Acts · chapter 22 · verse 4
Acts 22:4 in Kannada
ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು.
Naanu ee maargavannu hidida gandasarannoo hengasarannoo bandhisi seremane yolage haakisuttaa avarannu kolluva mattigoo hinsisidenu.
Acts 22:4 in English
- King James Version (KJV)
- And I persecuted this way unto the death, binding and delivering into prisons both men and women.
- World English Bible (WEB)
- I persecuted this Way to the death, binding and delivering into prisons both men and women,
- American Standard Version (ASV)
- and I persecuted this Way unto the death, binding and delivering into prisons both men and women.
- Bible in Basic English (BBE)
- And I made attacks on this Way, even to death, taking men and women and putting them in prison.
- Darby Translation (DBY)
- who have persecuted this way unto death, binding and delivering up to prisons both men and women;
- Webster's Bible (WBS)
- And I persecuted this way even to death, binding and delivering into prisons both men and women.
- Young's Literal Translation (YLT)
- 'And this way I persecuted unto death, binding and delivering up to prisons both men and women,
Read in context
- 2(ಅವನು ತಮ್ಮೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ್ದನ್ನು ಅವರು ಕೇಳಿ ಮತ್ತೂ ನಿಶ್ಶಬ್ದ ವಾದರು). ಆಗ ಅವನು--
- 3ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ
- 4ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು.
- 5ಇದಕ್ಕೆ ಮಹಾಯಾಜಕನೂ ಹಿರೀಸಭೆ ಯವರೆಲ್ಲರೂ ನನಗೆ ಸಾಕ್ಷಿಗಳಾಗಿದ್ದಾರೆ. ಇವರಿಂದಲೇ ಅಲ್ಲಿದ್ದ ಸಹೋದರರಿಗೆ ನಾನು ಪತ್ರಗಳನ್ನು ಪಡೆದು ದಮಸ್ಕದಲ್ಲಿದ್ದವರನ್ನು ಬಂಧಿಸಿ ಯೆರೂಸಲೇಮಿಗೆ ತಂದು ಶಿಕ್ಷಿಸುವದಕ್ಕಾಗಿ ನಾನು ಅಲ್ಲಿಗೆ ಹೋದೆನು.
- 6ತರುವಾಯ ನಾನು ಪ್ರಯಾಣಮಾಡುತ್ತಾ ಸುಮಾರು ಮಧ್ಯಾಹ್ನದ ಸಮಯದಲ್ಲಿ ದಮಸ್ಕದ ಹತ್ತಿರ ಬಂದಾಗ ಫಕ್ಕನೆ ಆಕಾಶದಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲೂ ಹೊಳೆಯಿತು.
Cross references
- Acts 22:19–20 ಅಪೊಸ್ತಲರ ಕೃತ್ಯಗಳು 22:19–20ಅದಕ್ಕೆ ನಾನು--ಕರ್ತನೇ, ಪ್ರತಿಯೊಂದು ಸಭಾ ಮಂದಿರದಲ್ಲಿ ನಿನ್ನ ಮೇಲೆ ನಂಬಿಕೆಯಿಟ್ಟವರನ್ನು ನಾನು ಸೆರೆಮನೆಯಲ್ಲಿ ಹಾಕಿಸಿ ಹೊಡೆದೆನೆಂದು ಅವರಿಗೆ ತಿಳಿದದೆ; ಹತಸಾಕ್ಷಿಯಾದ ಸ್ತೆಫನನ ರಕ್ತವು ಸುರಿಯಲ್ಪಟ್ಟಿದ್ದಾಗ ನಾನು ಸಹ ಹತ್ತಿರ ನಿಂತು ಅವನ ಸಾವಿಗೆ ಒಪ್ಪಿದವನಾಗಿ ಅವನನ್ನು ಕೊಂದವರ ವಸ್ತ್ರವನ್ನು ಕಾಯುತ್ತಿದ್ದೆನು ಎಂದು ಹೇಳಿದೆನು.
- Acts 26:9–11 ಅಪೊಸ್ತಲರ ಕೃತ್ಯಗಳು 26:9–11ನಜರೇತಿನ ಯೇಸುವಿನ ಹೆಸರಿಗೆ ಪ್ರತಿಕೂಲವಾಗಿ ಅನೇಕ ಕಾರ್ಯಗಳನ್ನು ಮಾಡಲೇಬೇಕೆಂದು ನಾನು ನಿಜವಾಗಿ ಅಂದುಕೊಂಡಿದ್ದೆನು. ಯೆರೂಸಲೇಮಿ ನಲ್ಲಿ ನಾನು ಹಾಗೆಯೇ ಮಾಡಿದ್ದಲ್ಲದೆ ಪ್ರಧಾನ ಯಾಜಕರಿಂದ ಅಧಿಕಾರವನ್ನು ಪಡೆದು ಪರಿಶುದ್ಧರಲ್ಲಿ ಅನೇಕರನ್ನು ನಾನು ಸೆರೆಯಲ್ಲಿ ಹಾಕಿಸಿದೆನು. ಮಾತ್ರ ವಲ್ಲದೆ ಅವರು ಕೊಲ್ಲಲ್ಪಟ್ಟಾಗ ಅದಕ್ಕೆ ನಾನು ಸಮ್ಮತಿಪಟ್ಟೆನು. ಇದಲ್ಲದೆ ಪ್ರತಿಯೊಂದು ಸಭಾ ಮಂದಿರದಲ್ಲಿ ನಾನು ಅನೇಕ ಸಾರಿ ಅವರನ್ನು ಶಿಕ್ಷಿಸಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆನು ಮತ್ತು ಅವರ ಮೇಲೆ ಮಹಾಕೋಪೋ ದ್ರೇಕದಿಂದ ಬೇರೆ ಪಟ್ಟಣಗಳ ತನಕ ಅವರನ್ನು ಹಿಂಸಿಸಿದೆನು.
- 1 Timothy 1:13–15 1 ತಿಮೊಥೆಯನಿಗೆ 1:13–15ಮೊದಲು ದೇವದೂಷಕನೂ ಹಿಂಸಕನೂ ಕೇಡು ಮಾಡುವವನೂ ಆಗಿದ್ದ ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು. ನಮ್ಮ ಕರ್ತನ ಕೃಪೆಯು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆ ಮತ್ತು ಪ್ರೀತಿಯೊಂದಿಗೆ ಅತ್ಯಧಿಕವಾಯಿತು. ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂದು ಹೇಳುವದು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ; ಆ ಪಾಪಿಗಳಲ್ಲಿ ನಾನೇ ಮುಖ್ಯನು.
- Acts 16:17 ಅಪೊಸ್ತಲರ ಕೃತ್ಯಗಳು 16:17ಈಕೆಯು ಪೌಲನನ್ನೂ ನಮ್ಮನ್ನೂ ಹಿಂಬಾಲಿಸಿ--ಇವರು ನಮಗೆ ರಕ್ಷಣೆಯ ಮಾರ್ಗವನ್ನು ತೋರಿಸುವ ಮಹೋನ್ನತ ನಾದ ದೇವರ ಸೇವಕರು ಎಂದು ಕೂಗಿ ಹೇಳುತ್ತಿದ್ದಳು.
- 1 Corinthians 15:9 1 ಕೊರಿಂಥದವರಿಗೆ 15:9ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ. ಯಾಕಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿ ದ್ದರಿಂದ ಆಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ.
- Acts 8:1–4 ಅಪೊಸ್ತಲರ ಕೃತ್ಯಗಳು 8:1–4ಸೌಲನು ಅವನ ಕೊಲೆಗೆ ಸಮ್ಮತಿಸು ವವನಾಗಿದ್ದನು. ಆ ಕಾಲದಲ್ಲಿ ಯೆರೂಸ ಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರ ಹೊರತಾಗಿ ಎಲ್ಲರೂ ಯೂದಾಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು. ಭಕ್ತರಾದ ಜನರು ಸ್ತೆಫನನನ್ನು ಹೊತ್ತುಕೊಂಡು ಹೋಗಿ ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು. ಆದರೆ ಸೌಲನು ಮನೆಮನೆಗಳಲ್ಲಿ ಹೊಕ್ಕು ಗಂಡಸರನ್ನೂ ಹೆಂಗಸರನ್ನೂ ಎಳಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ಹಾಳುಮಾಡುತ್ತಿದ್ದನು. ಚದರಿಹೋದವರು ಎಲ್ಲಾ ಕಡೆಗೂ ಹೋಗಿ ವಾಕ್ಯವನ್ನು ಸಾರುತ್ತಿದ್ದರು.
- Acts 7:58 ಅಪೊಸ್ತಲರ ಕೃತ್ಯಗಳು 7:58ಅವನನ್ನು ಊರಹೊರಕ್ಕೆ ನೂಕಿಕೊಂಡು ಹೋಗಿ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಪಾದಗಳ ಬಳಿಯಲ್ಲಿ ಇಟ್ಟರು.
- Acts 9:13–14 ಅಪೊಸ್ತಲರ ಕೃತ್ಯಗಳು 9:13–14ಅದಕ್ಕೆ ಅನನೀಯನು--ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನ ಪರಿಶುದ್ಧರಿಗೆ ಎಷ್ಟೋ ಕೇಡನ್ನುಂಟು ಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ನಾನು ಕೇಳಿದ್ದೇನೆ; ಇಲ್ಲಿಯೂ ನಿನ್ನ ಹೆಸರನ್ನು ಹೇಳಿಕೊಳ್ಳುವವರೆಲ್ಲರನ್ನು ಬಂಧಿಸುವ ಅಧಿಕಾರವನ್ನು ಪ್ರಧಾನಯಾಜಕರಿಂದ ಹೊಂದಿದ್ದಾನೆ ಅಂದನು.
- Acts 24:14 ಅಪೊಸ್ತಲರ ಕೃತ್ಯಗಳು 24:14ಆದರೆ ನ್ಯಾಯಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಬರೆಯಲ್ಪಟ್ಟವುಗಳೆಲ್ಲವನ್ನು ನಂಬಿಕೊಂಡು ಅವರು ಪಾಷಾಂಡವೆಂದು ಹೇಳುವ ಮಾರ್ಗಕ್ಕನುಸಾರವಾಗಿ ನನ್ನ ಪಿತೃಗಳ ದೇವರನ್ನು ಆರಾಧಿಸುವವನಾಗಿದ್ದೇನೆ ಎಂದು ನಾನು ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ.
- Acts 18:26 ಅಪೊಸ್ತಲರ ಕೃತ್ಯಗಳು 18:26ಅವನು ಸಭಾಮಂದಿರದಲ್ಲಿ ಧೈರ್ಯದಿಂದ ಮಾತನಾಡುವದಕ್ಕೆ ಪ್ರಾರಂಭಿಸಿದನು. ಅವನ ಮಾತುಗಳನ್ನು ಪ್ರಿಸ್ಕಿಲ್ಲಳೂ ಅಕ್ವಿಲನೂ ಕೇಳಿ ಅವನನ್ನು ತಮ್ಮಲ್ಲಿಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಪೂರ್ಣವಾಗಿ ವಿವರಿಸಿದರು.
- Acts 9:1–2 ಅಪೊಸ್ತಲರ ಕೃತ್ಯಗಳು 9:1–2ಸೌಲನು ಕರ್ತನ ಶಿಷ್ಯರಿಗೆ ಇನ್ನೂ ವಿರೋಧವಾಗಿ ಬೆದರಿಕೆಯ ಮಾತುಗಳ ನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಮಹಾ ಯಾಜಕನ ಬಳಿಗೆ ಹೋಗಿ ಆ ಮಾರ್ಗದಲಿ ಇದ್ದವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ತಾನು ಅವರನ್ನು ಬಂಧಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರ ದವರಿಗೆ ಪತ್ರಗಳನ್ನು ಕೊಡಬೇಕೆಂದು ಅವನನ್ನು ಬೇಡಿಕೊಂಡನು.
- Philippians 3:6 ಫಿಲಿಪ್ಪಿಯವರಿಗೆ 3:6ಆಸಕ್ತಿಯನ್ನು ನೋಡಿದರೆ ನಾನು ಸಭೆಯ ಹಿಂಸಕನು, ನ್ಯಾಯಪ್ರಮಾಣದಲ್ಲಿ ಹೇಳಿರುವ ನೀತಿ ಯನ್ನು ನೋಡಿದರೆ ನಾನು ನಿರ್ದೋಷಿ.
Original words (Greek)
- And · G3739ὅς hós
- persecuted · G1377διώκω diṓkō
- this · G3778οὗτος hoûtos
- way · G3598ὁδός hodós
- unto · G891ἄχρι áchri
- death · G2288θάνατος thánatos
- binding · G1195δεσμεύω desmeúō
- and · G2532καί kaí
- delivering · G3860παραδίδωμι paradídōmi
- into · G1519εἰς eis
- prisons · G5438φυλακή phylakḗ
- both · G5037τέ té
- men · G435ἀνήρ anḗr
- and · G2532καί kaí
- women · G1135γυνή gynḗ