Acts · chapter 7 · verse 1
Acts 7:1 in Kannada
ಆಗ ಮಹಾಯಾಜಕನು--ಈ ವಿಷಯ ಗಳು ಹೌದೋ ಎಂದು ಕೇಳಿದನು.
Aaga mahaayaajakanu--ee vishaya galu haudo endu kelidanu.
Acts 7:1 in English
- King James Version (KJV)
- Then said the high priest, Are these things so?
- World English Bible (WEB)
- The high priest said, “Are these things so?”
- American Standard Version (ASV)
- And the high priest said, Are these things so?
- Bible in Basic English (BBE)
- Then the high priest said, Are these things true?
- Darby Translation (DBY)
- And the high priest said, Are these things then so?
- Webster's Bible (WBS)
- Then said the high priest, Are these things so?
- Young's Literal Translation (YLT)
- And the chief priest said, 'Are then these things so?'
Read in context
- 1ಆಗ ಮಹಾಯಾಜಕನು--ಈ ವಿಷಯ ಗಳು ಹೌದೋ ಎಂದು ಕೇಳಿದನು.
- 2ಅದಕ್ಕವನು--ಜನರೇ, ಸಹೋದರರೇ, ತಂದೆಗಳೇ, ಕಿವಿಗೊಡಿರಿ; ನಮ್ಮ ತಂದೆಯಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಅವನು ಮೆಸೊಪೊತಾಮ್ಯದಲ್ಲಿದ್ದಾಗ ಮಹಿಮೆಯುಳ್ಳ ದೇವರು ಪ್ರತ್ಯಕ್ಷನಾಗಿ ಅವನಿಗೆ--
- 3ನೀನು ನಿನ್ನ ದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ನಿನಗೆ ತೋರಿ ಸುವ ದೇಶಕ್ಕೆ ಬರಬೇಕು ಎಂದು ಹೇಳಿದನು.
Cross references
- John 18:19–21 ಯೋಹಾನನು 18:19–21ತರುವಾಯ ಮಹಾಯಾಜಕನು ಆತನ ಶಿಷ್ಯರ ವಿಷಯವಾಗಿಯೂ ಆತನ ಬೋಧನೆಯ ವಿಷಯವಾಗಿಯೂ ಯೇಸುವನ್ನು ಕೇಳಿದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ; ಯೆಹೂದ್ಯರು ಯಾವಾಗಲೂ ಕೂಡುವಂಥ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಉಪದೇಶಿಸಿದ್ದೆನು; ಗುಪ್ತವಾಗಿ ಯಾವದನ್ನೂ ನಾನು ಹೇಳಲಿಲ್ಲ. ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಅವರಿಗೆ ಏನು ಹೇಳಿದ್ದೇನೆಂದು ಕೇಳಿದವರನ್ನು ವಿಚಾರಿಸು ಇಗೋ, ನಾನು ಹೇಳಿದ್ದು ಅವರಿಗೆ ತಿಳಿ ದದೆ ಅಂದನು.
- Matthew 26:61–62 ಮತ್ತಾಯನು 26:61–62ನಾನು ದೇವಾಲಯ ವನ್ನು ಕೆಡವಿ ಮೂರು ದಿವಸಗಳಲ್ಲಿ ಕಟ್ಟಬಲ್ಲೆನೆಂದು ಇವನು ಹೇಳಿದನು ಅಂದರು. ಮಹಾಯಾಜಕರು ಎದ್ದು ಆತನಿಗೆ--ನೀನು ಏನೂ ಉತ್ತರ ಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವದು ಏನು ಅಂದನು.
- Acts 6:13–14 ಅಪೊಸ್ತಲರ ಕೃತ್ಯಗಳು 6:13–14ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ. ನಜ ರೇತಿನ ಯೇಸು ಈ ಸ್ಥಳವನ್ನು (ದೇವಾಲಯವನ್ನು) ಕೆಡವಿ ಮೋಶೆಯು ನಮಗೆ ಒಪ್ಪಿಸಿಕೊಟ್ಟ ಆಚಾರಗಳನ್ನು ಮಾರ್ಪಡಿಸುವನು ಎಂದು ಇವನು ಹೇಳುವದನ್ನು ನಾವು ಕೇಳಿದ್ದೇವೆ ಅಂದರು.ಆಗ ಆಲೋಚನಾ ಸಭೆಯಲ್ಲಿ ಕೂತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲಾಗಿ ಅವನ ಮುಖವು ದೂತನ ಮುಖದಂತೆ ಇರುವದನ್ನು ಕಂಡರು.
- John 18:33–35 ಯೋಹಾನನು 18:33–35ತರುವಾಯ ಪಿಲಾತನು ತಿರಿಗಿ ನ್ಯಾಯಾಲಯ ದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಆತ ನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೆ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿ ದ್ದಾರೋ? ಅಂದನು. ಪಿಲಾತನು ಪ್ರತ್ಯುತ್ತರ ವಾಗಿ--ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ ಪ್ರಧಾನಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ; ನೀನು ಏನು ಮಾಡಿದ್ದೀ ಎಂದು ಕೇಳಿ ದನು.
- Mark 14:58–60 ಮಾರ್ಕನು 14:58–60ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ ಅಂದರು. ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ. ಆಗ ಮಹಾಯಾಜಕನು ಎದ್ದು ನಡುವೆ ನಿಂತು ಯೇಸುವಿಗೆ--ನೀನು ಏನೂ ಉತ್ತರಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಹೇಳುವ ಈ ಸಾಕ್ಷಿ ಏನು ಎಂದು ಕೇಳಿದನು.