Acts · chapter 9 · verse 23
Acts 9:23 in Kannada
ಅನೇಕ ದಿವಸಗಳು ಹೋದಮೇಲೆ ಯೆಹೂ ದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿ ಕೊಂಡರು.
Aneka divasagalu hodamele yehoo dyaru avanannu kollabekendu aalochane maadi kondaru.
Acts 9:23 in English
- King James Version (KJV)
- And after that many days were fulfilled, the Jews took counsel to kill him:
- World English Bible (WEB)
- When many days were fulfilled, the Jews conspired together to kill him,
- American Standard Version (ASV)
- And when many days were fulfilled, the Jews took counsel together to kill him:
- Bible in Basic English (BBE)
- Then, after some days, the Jews made an agreement together to put him to death:
- Darby Translation (DBY)
- Now when many days were fulfilled, the Jews consulted together to kill him.
- Webster's Bible (WBS)
- And after many days were fulfilled, the Jews took counsel to kill him.
- Young's Literal Translation (YLT)
- And when many days were fulfilled, the Jews took counsel together to kill him,
Read in context
- 21ಆದರೆ ಕೇಳಿದವರೆಲ್ಲರೂ ಬೆರಗಾಗಿ--ಈ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ಹಾಳು ಮಾಡಿದವನು ಇವನೇ ಅಲ್ಲವೇ, ಅಂಥವರನ್ನು ಬಂಧಿಸಿ ಪ್ರಧಾನಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದನಲ್ಲವೇ ಎಂದು ಮಾತನಾಡಿಕೊಂಡರು.
- 22ಆದರೆ ಸೌಲನು ಇನ್ನೂ ಅಧಿಕ ಸಾಮರ್ಥ್ಯವುಳ್ಳವನಾಗಿ ಈತನೇ ಕ್ರಿಸ್ತ ನೆಂದು ಸಿದ್ಧಾಂತಪಡಿಸಿ ದಮಸ್ಕದಲ್ಲಿದ್ದ ಯೆಹೂದ್ಯರನ್ನು ದಿಗ್ಭ್ರಮೆಗೊಳಿಸಿದನು.
- 23ಅನೇಕ ದಿವಸಗಳು ಹೋದಮೇಲೆ ಯೆಹೂ ದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿ ಕೊಂಡರು.
- 24ಆದರೆ ಅವರು ಹೊಂಚುಹಾಕಿ ಕೊಂಡಿರುವದು ಸೌಲನಿಗೆ ತಿಳಿಯಬಂತು. ಅವನನ್ನು ಕೊಲ್ಲುವದಕ್ಕಾಗಿ ಅವರು ಹಗಲಿರುಳೂ ದ್ವಾರಗಳನ್ನು ಕಾಯುತ್ತಿದ್ದರು;
- 25ಆಗ ಶಿಷ್ಯರು ರಾತ್ರಿ ಕಾಲದಲ್ಲಿ ಅವನನ್ನು ಕರೆದುಕೊಂಡು ಹೋಗಿ ಒಂದು ಹೆಡಿಗೆ ಯಲ್ಲಿ ಕೂಡ್ರಿಸಿ ಗೋಡೆಯಿಂದ ಇಳಿಸಿದರು.
Cross references
- Galatians 1:17–18 ಗಲಾತ್ಯದವರಿಗೆ 1:17–18ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರ ಬಳಿಗೂ ಹೋಗದೆ ಅರಬಸ್ಥಾನಕ್ಕೆ ಹೋಗಿ ತಿರಿಗಿ ದಮಸ್ಕಕ್ಕೆ ಬಂದೆನು. ಮೂರು ವರುಷಗಳಾದ ಮೇಲೆ ಪೇತ್ರನನ್ನು ನೋಡುವದಕ್ಕಾಗಿ ಯೆರೂಸಲೇಮಿಗೆ ಹೋಗಿ ಅವನ ಬಳಿಯಲ್ಲಿ ಹದಿನೈದು ದಿವಸ ಇದ್ದೆನು.
- 1 Thessalonians 2:15–16 1 ಥೆಸಲೊನೀಕದವರಿಗೆ 2:15–16ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- Acts 13:50 ಅಪೊಸ್ತಲರ ಕೃತ್ಯಗಳು 13:50ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.
- Acts 14:19 ಅಪೊಸ್ತಲರ ಕೃತ್ಯಗಳು 14:19ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯ ದಿಂದಲೂ ಕೆಲವು ಯೆಹೂದ್ಯರು ಅಲ್ಲಿಗೆ ಬಂದು ಜನರನ್ನು ಪ್ರೇರೇಪಿಸಿ ಪೌಲನ ಮೇಲೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಪಟ್ಟಣದ ಹೊರಕ್ಕೆ ಎಳೆದುಬಿಟ್ಟರು.
- Joshua 10:1–6 ಯೆಹೋಶುವ 10:1–6ಯೆಹೋಶುವನು ಆಯಿಯನ್ನು ಹಿಡಿದು ಯೆರಿಕೋವಿಗೂ ಅದರ ಅರಸನಿಗೂ ಮಾಡಿದ ಹಾಗೆಯೇ ಆಯಿಗೂ ಅದರ ಅರಸನಿಗೂ ಮಾಡಿ ಅದನ್ನು ಹಿಡಿದು ಸಂಪೂರ್ಣ ನಾಶ ಮಾಡಿ ದನೆಂದೂ ಗಿಬ್ಯೋನಿನ ನಿವಾಸಿಗಳು ಇಸ್ರಾಯೇಲಿನ ಸಂಗಡ ಸಮಾಧಾನ ಮಾಡಿಕೊಂಡು ಅವರಲ್ಲಿ ಇದ್ದಾ ರೆಂದೂ ಯೆರೂಸಲೇಮಿನ ಅರಸನಾದ ಅದೋನೀ ಚೆದೆಕನು ಕೇಳಿ ಬಹು ಭಯಪಟ್ಟರು. ಯಾಕಂದರೆ ಗಿಬ್ಯೋನ್ ರಾಜಪಟ್ಟಣಗಳ ಹಾಗೆ ದೊಡ್ಡ ಪಟ್ಟಣ ವಾಗಿತ್ತು; ಮತ್ತು ಆಯಿಗಿಂತಲೂ ದೊಡ್ಡದಾಗಿತ್ತು; ಇದಲ್ಲದೆ ಅದರ ಮನುಷ್ಯರು ಪರಾಕ್ರಮಶಾಲಿಗಳಾ ಗಿದ್ದರು. ಆದದರಿಂದ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನಿಗೂ ಯರ್ಮೂತಿನ ಅರಸನಾದ ಪಿರಾಮನಿಗೂ ಲಾಕೀಷಿನ ಅರಸನಾದ ಯಾಫೀಯ ನಿಗೂ ಎಗ್ಲೋನಿನ ಅರಸನಾದ ದೆಬೀರನಿಗೂ ಹೇಳಿ ಕಳುಹಿಸಿದ್ದೇನಂದರೆ-- ಗಿಬ್ಯೋನು ಯೆಹೋಶುವನ ಸಂಗಡವೂ ಇಸ್ರಾಯೇಲ್ ಮಕ್ಕಳ ಸಂಗಡವೂ ಸಮಾಧಾನಮಾಡಿಕೊಂಡದ್ದರಿಂದ ನಾವು ಅದನ್ನು ಹೊಡೆಯುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ ಅಂದನು. ಹಾಗೆಯೇ ಅಮೋರಿ ಯರ ಅರಸುಗಳಾದ ಯೆರೂಸಲೇಮಿನ ಅರಸನೂ ಹೆಬ್ರೋನಿನ ಅರಸನೂ ಯರ್ಮೂತಿನ ಅರಸನೂ ಲಾಕೀಷಿನ ಅರಸನೂ ಎಗ್ಲೋನಿನ ಅರಸನೂ ಈ ಐದು ಮಂದಿ ಅರಸುಗಳು ಕೂಡಿಕೊಂಡು ಅವರೂ ಅವರ ಸೈನ್ಯವೂ ಹೊರಟುಹೋಗಿ ಗಿಬ್ಬೋನಿನ ಮುಂದೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿ ದರು. ಆಗ ಗಿಬ್ಯೋನಿನ ಜನರು--ಪರ್ವತಗಳಲ್ಲಿ ವಾಸವಾಗಿರುವ ಅಮೋರಿಯರ ಅರಸುಗಳೆಲ್ಲರೂ ನಮಗೆ ವಿರೋಧವಾಗಿ ಕೂಡಿದ್ದರಿಂದ ನಿನ್ನ ಸೇವಕರನ್ನು ಕೈಬಿಡದೆ ಶೀಘ್ರವಾಗಿ ನಮ್ಮ ಬಳಿಗೆ ಬಂದು ನಮ್ಮನ್ನು ರಕ್ಷಿಸಿ ಸಹಾಯಮಾಡು ಎಂದು ಗಿಲ್ಗಾಲಿನಲ್ಲಿ ಪಾಳೆಯ ಮಾಡಿಕೊಂಡಿದ್ದ ಯೆಹೋಶುವನ ಬಳಿಗೆ ಹೇಳಿ ಕಳುಹಿಸಿದರು.
- Matthew 10:16–23 ಮತ್ತಾಯನು 10:16–23ಇಗೋ, ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳು ಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದದ ರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳಾಗಿರ್ರಿ. ಆದರೆ ಜನರ ವಿಷಯದಲ್ಲಿ ಎಚ್ಚ ರಿಕೆಯಾಗಿರ್ರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ತಮ್ಮ ಸಭಾ ಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯು ವರು. ಇದಲ್ಲದೆ ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿ ಕಾರಿಗಳ ಮತ್ತು ಅರಸುಗಳ ಮುಂದಕ್ಕೆ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು. ಆದರೆ ಅವರು ನಿಮ್ಮನ್ನು ಒಪ್ಪಿಸಿ ಕೊಟ್ಟಾಗ ನೀವು ಹೇಗೆ ಇಲ್ಲವೆ ಏನು ಮಾತನಾಡ ಬೇಕೆಂಬದಾಗಿ ಯೋಚಿಸಬೇಡಿರಿ; ಯಾಕಂದರೆ ನೀವು ಏನು ಮಾತನಾಡಬೇಕೆಂಬದು ಆ ಗಳಿಗೆಯಲ್ಲಿಯೇ ನಿಮಗೆ ತಿಳಿಸಲ್ಪಡುವದು. ಯಾಕಂದರೆ ಮಾತನಾಡು ವವರು ನೀವಲ್ಲ, ಆದರೆ ನಿಮ್ಮ ತಂದೆಯ ಆತ್ಮನು ನಿಮ್ಮೊಳಗೆ ಮಾತನಾಡುತ್ತಾನೆ. ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡುವರು; ಆದರೆ ಕಡೆಯ ವರೆಗೆ ತಾಳುವವನು ರಕ್ಷಣೆ ಹೊಂದುವನು. ಇದಲ್ಲದೆ ಈ ಪಟ್ಟಣದಲ್ಲಿ ಅವರು ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಪಟ್ಟಣಕ್ಕೆ ಓಡಿಹೋಗಿರಿ; ಯಾಕಂದರೆ-- ಮನುಷ್ಯ ಕುಮಾರನು ಬರುವದರೊಳಗಾಗಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವದಕ್ಕಾಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Acts 9:16 ಅಪೊಸ್ತಲರ ಕೃತ್ಯಗಳು 9:16ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಕಠಿಣವಾದ ಶ್ರಮೆಯನ್ನನುಭವಿಸಬೇಕೆಂಬದನ್ನು ನಾನೇ ಅವನಿಗೆ ತೋರಿಸುವೆನು ಎಂದು ಹೇಳಿದನು.
- 2 Corinthians 11:26 2 ಕೊರಿಂಥದವರಿಗೆ 11:26ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನೀರಿನ ಅಪಾಯಗಳು ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯ ಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳು ಸಹೋ ದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು.
- Acts 14:2 ಅಪೊಸ್ತಲರ ಕೃತ್ಯಗಳು 14:2ಆದರೆ ನಂಬದೆಹೋದ ಯೆಹೂದ್ಯರು ಅನ್ಯಜನರ ಮನಸ್ಸನ್ನು ಸಹೋದರರಿಗೆ ವಿರುದ್ಧವಾಗಿ ರೇಗಿಸಿ ಕೆಡಿಸಿದರು.
- Acts 22:21–23 ಅಪೊಸ್ತಲರ ಕೃತ್ಯಗಳು 22:21–23ಅದಕ್ಕೆ ಆತನು--ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುವೆನು ಎಂದು ನನಗೆ ಹೇಳಿದನು. ಈ ಮಾತಿನತನಕ ಅವನು ಹೇಳಿದ್ದನ್ನು ಅವರು ಕೇಳಿ ತಮ್ಮ ಧ್ವನಿಗಳನ್ನೆತ್ತಿ--ಇಂಥವನನ್ನು ಭೂಮಿ ಯಿಂದ ತೆಗೆದುಹಾಕಿರಿ; ಇವನು ಜೀವಿಸುವದು ಯುಕ್ತವಲ್ಲ ಎಂದು ಕೂಗಿದರು. ಅವರು ಕೂಗಾಡಿ ತಮ್ಮ ವಸ್ತ್ರಗಳನ್ನು ಕಿತ್ತುಹಾಕುತ್ತಾ ಧೂಳನ್ನು ಗಾಳಿಗೆ ತೂರುತ್ತಿದ್ದಾಗ