Amos · chapter 4 · verse 8
Amos 4:8 in Kannada
ಆದ್ದರಿಂದ ನೀರು ಕುಡಿಯುವದಕ್ಕಾಗಿ ಒಂದು ಪಟ್ಟಣದವರು ಮತ್ತೊಂದು ಪಟ್ಟಣಕ್ಕೆ ಅಲೆದಾಡುತ್ತಾ ಹೋದರೂ ಅವರಿಗೆ ತೃಪ್ತಿಯಾಗಲಿಲ್ಲ, ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
Aaddarinda neeru kudiyuvadakkaagi ondu pattanadavaru mattondu pattanakke aledaaduttaa hodaroo avarige truptiyaagalilla, aadaroo neevu nanna kadege hintirugikollalillavendu kartanu heluttaane.
Amos 4:8 in English
- King James Version (KJV)
- So two [or] three cities wandered unto one city, to drink water; but they were not satisfied: yet have ye not returned unto me, saith the LORD.
- World English Bible (WEB)
- So two or three cities staggered to one city to drink water, and were not satisfied; yet you haven’t returned to me,” says the LORD.
- American Standard Version (ASV)
- So two or three cities wandered unto one city to drink water, and were not satisfied: yet have ye not returned unto me, saith Jehovah.
- Bible in Basic English (BBE)
- So two or three towns went wandering to one town looking for water, and did not get enough: and still you have not come back to me, says the Lord.
- Darby Translation (DBY)
- And two, three, cities wandered unto one city, to drink water, and were not satisfied: yet have ye not returned unto me, saith Jehovah.
- Webster's Bible (WBS)
- So two [or] three cities wandered to one city, to drink water; but they were not satisfied: yet have ye not returned to me, saith the LORD.
- Young's Literal Translation (YLT)
- And wandered have two or three cities, Unto the same city to drink water, And they are not satisfied, And ye have not turned back unto Me, An affirmation of Jehovah.
Read in context
- 6ನಾನು ಸಹ ನಿಮಗೆ ಎಲ್ಲಾ ಪಟ್ಟಣಗಳಲ್ಲಿ ಹಲ್ಲಿಗೆ ಏನೂ ಸಿಕ್ಕದಂತೆ ನಿಮ್ಮ ಎಲ್ಲಾ ಸ್ಥಳಗಳಲ್ಲಿ ರೊಟ್ಟಿಯ ಕೊರತೆಯನ್ನು ಕೊಟ್ಟಿದ್ದೇನೆ; ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲ ಎಂದು ಕರ್ತನು ಹೇಳು ತ್ತಾನೆ.
- 7ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ ಮಳೆಯನ್ನು ನಿಮ್ಮಿಂದ ನಾನು ಹಿಂತೆಗೆದಿದ್ದೇನೆ; ಒಂದು ಪಟ್ಟಣದ ಮೇಲೆ ಮಳೆ ಸುರಿಸಿ ಮತ್ತೊಂದು ಪಟ್ಟಣದ ಮೇಲೆ ಮಳೆ ಸುರಿಸದ ಹಾಗೆ ಮಾಡಿದೆನು; ಮಳೆ ಸುರಿಯದ ಭಾಗವು ಒಣಗಿ ಹೋಯಿತು.
- 8ಆದ್ದರಿಂದ ನೀರು ಕುಡಿಯುವದಕ್ಕಾಗಿ ಒಂದು ಪಟ್ಟಣದವರು ಮತ್ತೊಂದು ಪಟ್ಟಣಕ್ಕೆ ಅಲೆದಾಡುತ್ತಾ ಹೋದರೂ ಅವರಿಗೆ ತೃಪ್ತಿಯಾಗಲಿಲ್ಲ, ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- 9ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- 10ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
Cross references
- Amos 4:6 ಆಮೋಸ 4:6ನಾನು ಸಹ ನಿಮಗೆ ಎಲ್ಲಾ ಪಟ್ಟಣಗಳಲ್ಲಿ ಹಲ್ಲಿಗೆ ಏನೂ ಸಿಕ್ಕದಂತೆ ನಿಮ್ಮ ಎಲ್ಲಾ ಸ್ಥಳಗಳಲ್ಲಿ ರೊಟ್ಟಿಯ ಕೊರತೆಯನ್ನು ಕೊಟ್ಟಿದ್ದೇನೆ; ಆದರೂ ನೀವು ನನ್ನ ಕಡೆಗೆ ಹಿಂತಿರುಗಿಕೊಳ್ಳಲಿಲ್ಲ ಎಂದು ಕರ್ತನು ಹೇಳು ತ್ತಾನೆ.
- Haggai 1:6 ಹಗ್ಗಾಯ 1:6ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.
- 1 Kings 18:5 1 ಅರಸುಗಳು 18:5ಅಹಾ ಬನು ಓಬದ್ಯನಿಗೆ--ನೀನು ದೇಶದಲ್ಲಿರುವ ಎಲ್ಲಾ ನೀರು ಬುಗ್ಗೆಗಳ ಬಳಿಗೂ ಎಲ್ಲಾ ಹಳ್ಳಗಳ ಬಳಿಗೂ ಹೋಗು. ನಾವು ಸಮಸ್ತ ಪಶುಗಳನ್ನು ಕಳಕೊಳ್ಳದ ಹಾಗೆ ಕುದುರೆಗಳನ್ನೂ ಹೇಸರ ಕತ್ತೆಗಳನ್ನೂ ಜೀವ ದಿಂದ ಇರಿಸುವದಕ್ಕೆ ನಮಗೆ ಒಂದು ವೇಳೆ ಹುಲ್ಲು ದೊರಕಬಹುದು ಅಂದನು.
- Jeremiah 14:3–4 ಯೆರೆಮೀಯ 14:3–4ಅವರ ಶ್ರೇಷ್ಠರು ತಮ್ಮ ಚಿಕ್ಕವರನ್ನು ನೀರಿಗೆ ಕಳುಹಿಸುತ್ತಾರೆ; ಇವರು ಬಾವಿಗಳಿಗೆ ಬರುತ್ತಾರೆ; ಆದರೆ ನೀರು ಸಿಕ್ಕಲಿಲ್ಲ; ಬರೀ ಪಾತ್ರೆಗಳುಳ್ಳ ವರಾಗಿ ತಿರುಗಿಕೊಳ್ಳುತ್ತಾರೆ; ಅವರು ನಾಚಿಕೆಪಟ್ಟು ದಿಗ್ಭ್ರಮೆಗೊಂಡವರಾಗಿ ತಮ್ಮ ತಲೆಗಳನ್ನು ಮುಚ್ಚಿ ಕೊಂಡರು. ದೇಶದಲ್ಲಿ ಮಳೆ ಇಲ್ಲದ ಕಾರಣ ಭೂಮಿಯು ಬಿರುಕುಬಿಟ್ಟಿದೆ. ಒಕ್ಕಲಿಗರು ನಾಚಿಕೆ ಯಿಂದ ತಮ್ಮ ತಲೆಗಳನ್ನು ಮುಚ್ಚಿಕೊಂಡರು.
- Micah 6:14 ಮೀಕ 6:14ನೀನು ಉಂಡು ತೃಪ್ತಿಯಾಗದೆ ಇರುವಿ; ನಿನ್ನೊಳಗೆ ನಿನ್ನ ಬೀಳ್ವಿಕೆಯು ಇರುವದು; ನೀನು ಹಿಡಿದು ತಪ್ಪಿಸದೆ ಇರುವಿ; ನೀನು ತಪ್ಪಿಸುವಂಥದ್ದನ್ನು ನಾನು ಕತ್ತಿಗೆ ಒಪ್ಪಿಸುವೆನು.
- Hosea 7:10 ಹೋಶೇಯ 7:10ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ; ಆದರೆ ಅವರು ತಮ್ಮ ಕರ್ತನಾದ ದೇವರ ಕಡೆಗೆ ತಿರುಗದೆ ಇದ್ದಾರೆ, ಇಲ್ಲವೆ ಆತನನ್ನು ಇದಕ್ಕೆಲ್ಲಾ ಹುಡು ಕುವದಿಲ್ಲ.
- Jeremiah 3:7 ಯೆರೆಮೀಯ 3:7ಅವಳು ಇವುಗಳನ್ನೆಲ್ಲಾ ಮಾಡಿದ ಮೇಲೆ ನಾನು--ನನ್ನ ಬಳಿಗೆ ತಿರುಗಿಕೋ ಅಂದೆನು; ಆದರೆ ಅವಳು ತಿರುಗಿಕೊಳ್ಳಲಿಲ್ಲ; ಅವಳ ವಂಚನೆಯುಳ್ಳ ಸಹೋದರಿಯಾದ ಯೆಹೂದಳು ಅದನ್ನು ನೋಡಿದಳು.
- Ezekiel 4:16–17 ಯೆಹೆಜ್ಕೇಲನು 4:16–17ಇದಾದ ಮೇಲೆ ಆತನು ನನಗೆ ಮನುಷ್ಯ ಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಅನ್ನದಾನವನ್ನು ಮುರಿಯುವೆನು. ಅವರು ತೂಕದ ಪ್ರಕಾರ ಜಾಗರೂಕತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ಆಶ್ಚರ್ಯದಿಂದ ಕುಡಿಯುವರು.ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು. ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.
- Isaiah 41:17–18 ಯೆಶಾಯ 41:17–18ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ ಕರ್ತನಾದ ನಾನೇ ಅವರನ್ನು ಅಲೈಸುವೆನು, ಇಸ್ರಾಯೇಲ್ ದೇವ ರಾಗಿರುವ ನಾನು ಅವರನ್ನು ಕೈಬಿಡೆನು. ಎತ್ತರವಾದ ಸ್ಥಳಗಳಲ್ಲಿ ನದಿಗಳನ್ನು, ತಗ್ಗುಗಳ ಮಧ್ಯದಲ್ಲಿ ಬುಗ್ಗೆ ಗಳನ್ನು ಹೊರಡಿಸಿ ಅರಣ್ಯವನ್ನು ನೀರಿನ ಕೆರೆಯ ನ್ನಾಗಿಯೂ ಒಣನೆಲವನ್ನು ನೀರಿನ ಒರತೆಗಳನ್ನಾ ಗಿಯೂ ಮಾಡುವೆನು.
- Amos 4:9–11 ಆಮೋಸ 4:9–11ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ. ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮ್ಮೊಳಗೆ ಕಳುಹಿಸಿದ್ದೇನೆ.ನಿಮ್ಮ ಕುದುರೆಗಳನ್ನು ತೆಗೆದುಕೊಂಡು ಹೋದವರ ಜೊತೆಯಲ್ಲಿ ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದುಹಾಕಿದ್ದೇನೆ. ನಿಮ್ಮ ದಂಡುಗಳ ದುರ್ವಾಸ ನೆಯು ನಿಮ್ಮ ಮೂಗುಗಳಲ್ಲಿ ಸೇರುವ ಹಾಗೆ ಮಾಡಿ ದ್ದೇನೆ. ಆದಾಗ್ಯೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ. ದೇವರು ಸೊದೋಮನ್ನೂ ಗೊಮೋರವನ್ನೂ ಕೆಡವಿದ ಹಾಗೆ ನಾನು ನಿಮ್ಮಲ್ಲಿ ಕೆಲವರನ್ನು ಕೆಡವಿ ಹಾಕಿದ್ದೇನೆ; ಹೌದು, ಬೆಂಕಿ ಉರಿಯೊಳಗಿಂದ ತೆಗೆದ ಕೊಳ್ಳಿಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- Jeremiah 23:14 ಯೆರೆಮೀಯ 23:14ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಸುಳ್ಳಿನಲ್ಲಿ ನಡಕೊಂಡದ್ದ ಲ್ಲದೆ ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ; ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ.