Amos · chapter 6 · verse 7
Amos 6:7 in Kannada
ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು; ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು.
Adarinda serege oyyalpaduvavarige modalu taave serege hoguvaru; bhoga maaduvavara harshadhvaniyu bittu hoguvadu.
Amos 6:7 in English
- King James Version (KJV)
- Therefore now shall they go captive with the first that go captive, and the banquet of them that stretched themselves shall be removed.
- World English Bible (WEB)
- Therefore they will now go captive with the first who go captive. The feasting and lounging will end.
- American Standard Version (ASV)
- Therefore shall they now go captive with the first that go captive; and the revelry of them that stretched themselves shall pass away.
- Bible in Basic English (BBE)
- So now they will go away prisoners with the first of those who are made prisoners, and the loud cry of those who were stretched out will come to an end.
- Darby Translation (DBY)
- Therefore shall they now go captive, with the first that go captive, and the revelry of them that stretched themselves shall pass away.
- Webster's Bible (WBS)
- Therefore now shall they go captive with the first that go captive, and the banquet of them that stretched themselves shall be removed.
- Young's Literal Translation (YLT)
- Therefore now they remove at the head of the captives, And turned aside is the mourning-feast of stretched-out ones.
Read in context
- 5ವೀಣೆಯ ಸ್ವರಕ್ಕೆ ಹಾಡುತ್ತಾರೆ; ದಾವೀದನ ಹಾಗೆ ತಮಗೆ ತಾವೇ ಗಾನ ವಾದ್ಯಗಳನ್ನು ಕಲ್ಪಿಸಿಕೊಳ್ಳು ತ್ತಾರೆ.
- 6ದ್ರಾಕ್ಷಾರಸದ ಪಾತ್ರೆಗಳಲ್ಲಿ ಕುಡಿಯುತ್ತಾರೆ. ಶ್ರೇಷ್ಠವಾದ ಎಣ್ಣೆಗಳಿಂದ ತಮ್ಮನ್ನು ಅಭಿಷೇಕಿಸಿ ಕೊಳ್ಳುತ್ತಾರೆ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನಪಡು ವದಿಲ್ಲ.
- 7ಅದರಿಂದ ಸೆರೆಗೆ ಒಯ್ಯಲ್ಪಡುವವರಿಗೆ ಮೊದಲು ತಾವೇ ಸೆರೆಗೆ ಹೋಗುವರು; ಭೋಗ ಮಾಡುವವರ ಹರ್ಷಧ್ವನಿಯು ಬಿಟ್ಟು ಹೋಗುವದು.
- 8ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ದೇವರಾದ ಕರ್ತನು ತನ್ನ ಮೇಲೆ ಆಣೆಯಿಟ್ಟುಕೊಂಡಿ ದ್ದಾನೆ; ಅದೇನಂದರೆ--ನಾನು ಯಾಕೋಬಿನ ಹೆಚ್ಚಳ ವನ್ನು ಅಸಹ್ಯಿಸಿಕೊಂಡು ಅವನ ಅರಮನೆಗಳನ್ನು ಹಗೆ ಮಾಡುತ್ತೇನೆ; ಅದಕಾರಣ ಪಟ್ಟಣವನ್ನೂ ಅದರಲ್ಲಿ ರುವ ಸಮಸ್ತವನ್ನೂ ನಾನು ಒಪ್ಪಿಸಿಬಿಡುತ್ತೇನೆ.
- 9ಆಗುವದೇನಂದರೆ, ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ ಅವರು ಸಾಯುವರು.
Cross references
- Amos 7:11 ಆಮೋಸ 7:11ಯಾರೊಬ್ಬಾಮನು ಕತ್ತಿಯಿಂದ ಸಾಯುವನೆಂದೂ ಇಸ್ರಾಯೇಲ್ಯರು ನಿಶ್ಚಯವಾಗಿ ತಮ್ಮ ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವರೆಂದೂ ಆಮೋಸನು ಹೇಳಿದನು.
- 1 Kings 20:16–20 1 ಅರಸುಗಳು 20:16–20ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು. ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು. ಅವರು ತಿರಿಗಿ ಬಂದು --ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು. ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು. ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು. ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು.
- Daniel 5:4–6 ದಾನಿಯೇಲನು 5:4–6ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಹೊಗಳತೊಡಗಿದರು. ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು; ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು. ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
- Amos 5:5 ಆಮೋಸ 5:5ಆದರೆ ಬೇತೇಲನ್ನು ಆಶ್ರಯಿಸಬೇಡಿರಿ, ಗಿಲ್ಗಾಲಿಗೆ ಹೋಗಬೇಡಿರಿ, ಬೇರ್ಷೆಬಕ್ಕೆ ಹಾದು ಹೋಗ ಬೇಡಿರಿ, ಯಾಕಂದರೆ ಗಿಲ್ಗಾಲು ಸೆರೆಗೆ ನಿಶ್ಚಯವಾಗಿ ಹೋಗುವದು. ಬೇತೇಲು ಏನಿಲ್ಲದೆ ಹೋಗುವದು.
- Amos 5:27 ಆಮೋಸ 5:27ಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ.
- Esther 5:12–14 ಎಸ್ತೇರಳು 5:12–14ಇದಲ್ಲದೆ--ರಾಣಿಯಾದ ಎಸ್ತೇ ರಳು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೊಬ್ಬರನ್ನು ಕರೆಯಲಿಲ್ಲ. ನಾಳೆಗೂ ಆಕೆಯಿಂದ ನಾನು ಅರಸನ ಸಂಗಡ ಆಕೆಯ ಬಳಿಗೆ ಕರೆಯಲ್ಪಟ್ಟಿದ್ದೇನೆ. ಆದರೆ ಯೆಹೂದ್ಯನಾದ ಮೊರ್ದೆಕೈ ಅರಮನೆಯ ಬಾಗಲಲ್ಲಿ ಕುಳಿತಿರುವದನ್ನು ನಾನು ನೋಡುವ ವರೆಗೆ ಇದೆಲ್ಲಾ ನನಗೆ ಪ್ರಯೋ ಜನವಿಲ್ಲ ಅಂದನು.ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು. ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು. ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆಐವತ್ತು ಮೊಳ ಉದ್ದವಾದ ಒಂದು ಗಲ್ಲಿನ ಮರವು ಮಾಡಲ್ಪಡಲಿ; ಮೊರ್ದೆಕೈ ಅದರಲ್ಲಿ ಹಾಕಲ್ಪಡುವ ಹಾಗೆ ನಾಳೆ ಅರಸನ ಸಂಗಡ ಮಾತನಾಡು; ತರುವಾಯ ಅರಸನ ಸಂಗಡ ಔತಣಕ್ಕೆ ಸಂತೋಷ ವಾಗಿ ಹೋಗು ಅಂದರು. ಈ ಮಾತು ಹಾಮಾನನಿಗೆ ಚೆನ್ನಾಗಿ ಕಾಣಿಸಿದ್ದರಿಂದ ಗಲ್ಲಿನ ಮರವನ್ನು ಸಿದ್ಧ ಮಾಡಿಸಿದನು.
- Isaiah 21:4 ಯೆಶಾಯ 21:4ನನ್ನ ಹೃದಯವು (ಎದುರಿಸುತ್ತದೆ) ಗಾಬರಿಗೊಂಡಿದೆ, ನಡು ಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನನ್ನ ಆನಂ ದದ ರಾತ್ರಿಯನ್ನು ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
- Esther 7:1–2 ಎಸ್ತೇರಳು 7:1–2ಅರಸನೂ ಹಾಮಾನನೂ ರಾಣಿಯಾದ ಎಸ್ತೇರಳ ಔತಣಕ್ಕೆ ಬಂದರು. ಎರಡನೇ ದಿನ ದ್ರಾಕ್ಷಾರಸದ ಔತಣಕ್ಕೆ ಬಂದಾಗ ಅರಸನು ಮತ್ತೂ ಎಸ್ತೇರಳಿಗೆ--ರಾಣಿಯಾದ ಎಸ್ತೇರಳೇ, ನಿನ್ನ ಬೇಡುವಿಕೆ ಏನು? ಅದು ನಿನಗೆ ಕೊಡಲ್ಪಡುವದು; ನಿನ್ನ ವಿಜ್ಞಾಪನೆ ಏನು? ಅದು ನನ್ನ ರಾಜ್ಯದ ಅರ್ಧದ ವರೆಗೆ ಇದ್ದರೂ ಕೊಡಲ್ಪಡುವದು ಅಂದನು.
- Amos 7:17 ಆಮೋಸ 7:17ಆದದರಿಂದ ಕರ್ತನು ಹೇಳುವದೇ ನಂದರೆ--ನಿನ್ನ ಹೆಂಡತಿ ಪಟ್ಟಣದಲ್ಲಿ ಸೂಳೆಯಾಗು ವಳು; ನಿನ್ನ ಕುಮಾರರೂ ಕುಮಾರ್ತೆಯರೂ ಕತ್ತಿ ಯಿಂದ ಬೀಳುವರು; ನಿನ್ನ ದೇಶವು ನೂಲಿನಿಂದ ವಿಭಾಗಿಸಲ್ಪಡುವದು; ನೀನು ಅಪವಿತ್ರವಾದ ದೇಶದಲ್ಲಿ ಸಾಯುವಿ. ಇಸ್ರಾಯೇಲ್ ನಿಶ್ಚಯವಾಗಿ ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು.
- Luke 21:24 ಲೂಕನು 21:24ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Esther 5:8 ಎಸ್ತೇರಳು 5:8ನನ್ನ ಬೇಡುವಿಕೆಯ ಪ್ರಕಾರ ಕೊಡಲೂ ನನ್ನ ವಿಜ್ಞಾಪನೆಯ ಪ್ರಕಾರ ಮಾಡಲೂ ಅರಸನಿಗೆ ಸಮ್ಮತಿ ಯಾದರೆ ಅರಸನಿಗೂ ಹಾಮಾನನಿಗೂ ನಾನು ಇನ್ನೂ ಮಾಡುವ ಔತಣಕ್ಕೆ ಬರಬೇಕು. ನಾಳೆ ಅರಸನು ಹೇಳಿದ ಪ್ರಕಾರ ಮಾಡುವೆನು ಅಂದಳು.
- Nahum 1:10 ನಹೂಮ 1:10ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.