Isaiah · chapter 21 · verse 4
Isaiah 21:4 in Kannada
ನನ್ನ ಹೃದಯವು (ಎದುರಿಸುತ್ತದೆ) ಗಾಬರಿಗೊಂಡಿದೆ, ನಡು ಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನನ್ನ ಆನಂ ದದ ರಾತ್ರಿಯನ್ನು ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
Nanna hrudayavu (edurisuttade) gaabarigondide, nadu guvikeyu nannannu kalavalagoliside, nanna aanam dada raatriyannu nanage bhayabhraantiyaagi maadiddaane.
Isaiah 21:4 in English
- King James Version (KJV)
- My heart panted, fearfulness affrighted me: the night of my pleasure hath he turned into fear unto me.
- World English Bible (WEB)
- My heart flutters. Horror has frightened me. The twilight that I desired has been turned into trembling for me.
- American Standard Version (ASV)
- My heart fluttereth, horror hath affrighted me; the twilight that I desired hath been turned into trembling unto me.
- Bible in Basic English (BBE)
- My mind is wandering, fear has overcome me: the evening of my desire has been turned into shaking for me.
- Darby Translation (DBY)
- My heart panteth, horror affrighteth me: the night of my pleasure hath he turned into trembling unto me.
- Webster's Bible (WBS)
- My heart panted, fearfulness affrighted me: the night of my pleasure hath he turned into fear to me.
- Young's Literal Translation (YLT)
- Wandered hath my heart, trembling hath terrified me, The twilight of my desire He hath made a fear to me,
Read in context
- 2ಘೋರದರ್ಶನವು ನನಗೆ ತಿಳಿಯಬಂದಿದೆ. ಬಾಧ ಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡು ತ್ತಿದ್ದಾನೆ. ಏಲಾಮೇ, ಏಳು ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ.
- 3ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ.
- 4ನನ್ನ ಹೃದಯವು (ಎದುರಿಸುತ್ತದೆ) ಗಾಬರಿಗೊಂಡಿದೆ, ನಡು ಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನನ್ನ ಆನಂ ದದ ರಾತ್ರಿಯನ್ನು ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
- 5ಮೇಜನ್ನು ಸಿದ್ಧಮಾಡು ಬುರುಜಿನ ಮೇಲೆ ಕಾವ ಲಿರು, ಉಣ್ಣು, ಕುಡಿ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಬಳಿಯಿರಿ.
- 6ಕರ್ತನು ನನಗೆ ಹೇಳಿರುವ ದೇನಂದರೆ--ಹೋಗು, ಕಾವಲುಗಾರನನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ.
Cross references
- Luke 21:34–36 ಲೂಕನು 21:34–36ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ. ಯಾಕಂದರೆ ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಉರ್ಲಿನಂತೆ ಬರುವದು. ಆದಕಾರಣ ಸಂಭವಿಸುವದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವದಕ್ಕೆ ಯೋಗ್ಯರೆಂದು ಎಣಿಸಲ್ಪಡು ವಂತೆಯೂ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು.
- Jeremiah 51:57 ಯೆರೆಮೀಯ 51:57ಇದಲ್ಲದೆ ನಾನು ಅವಳ ಪ್ರಧಾನಿಗಳನ್ನೂ, ಜ್ಞಾನಿಗಳನ್ನೂ, ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, ಪರಾಕ್ರಮಶಾಲಿಗಳನ್ನೂ, ಮತ್ತರಾಗಮಾಡುತ್ತೇನೆ; ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವದಿಲ್ಲವೆಂದು ಸೈನ್ಯಗಳ ಕರ್ತನೆಂಬ ಹೆಸರುಳ್ಳ ಅರಸನು ಅನ್ನುತ್ತಾನೆ.
- Job 21:11–13 ಯೋಬನು 21:11–13ತಮ್ಮ ಚಿಕ್ಕವರನ್ನು ಮಂದೆಯ ಹಾಗೆ ಕಳುಹಿಸು ತ್ತಾರೆ; ಅವರ ಮಕ್ಕಳು ಕುಣಿದಾಡುತ್ತಾರೆ. ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ. ಸಂಪತ್ತಿನಲ್ಲಿ ತಮ್ಮ ದಿವಸ ಗಳನ್ನು ಕಳೆಯುತ್ತಾರೆ; ಕ್ಷಣದಲ್ಲಿ ಪಾತಾಳಕ್ಕೆ ಇಳಿ ಯುತ್ತಾರೆ.
- Esther 7:6–10 ಎಸ್ತೇರಳು 7:6–10ಅದಕ್ಕೆ ಎಸ್ತೇರಳು--ವೈರಿಯೂ ಶತ್ರುವೂ ಯಾರಂದರೆ ಈ ಕೆಟ್ಟವನಾದ ಹಾಮಾನನೇ ಅಂದಳು. ಆಗ ಹಾಮಾನನು ಅರಸನ, ರಾಣಿಯ ಸಮ್ಮುಖದಲ್ಲಿ ಹೆದರಿ ಕೊಂಡನು. ಅರಸನು ಕೋಪವುಳ್ಳವನಾಗಿ ದ್ರಾಕ್ಷಾ ರಸದ ಔತಣದಿಂದ ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇ ರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು, ಯಾಕಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ತಿಳಿದನು. ಅರಸನು ಅರ ಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ತಿರಿಗಿ ಬಂದಾಗ ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು--ನನ್ನ ಮುಂದೆ ಅವನು ರಾಣಿಯನ್ನು ಬಲಾತ್ಕಾರ ಮಾಡು ವನೋ ಅಂದನು. ಆ ಮಾತು ಅರಸನ ಬಾಯಿಂದ ಹೊರಟಾಗ ಸೇವಕರು ಹಾಮಾನನ ಮುಖವನ್ನು ಮುಚ್ಚಿದರು. ಆಗ ಮನೆ ವಾರ್ತೆಯರಲ್ಲಿ ಒಬ್ಬನಾದ ಹರ್ಬೋನನು ಅರಸನ ಮುಂದೆ--ಇಗೋ, ಅರಸ ನನ್ನು ಕುರಿತು ಒಳ್ಳೇದನ್ನು ಹೇಳಿದ ಮೊರ್ದೆಕೈಗೋಸ್ಕರ ಹಾಮಾನನು ಮಾಡಿಸಿದ ಐವತ್ತು ಮೊಳ ಉದ್ದವಾದ ಗಲ್ಲಿನ ಮರವು ಹಾಮಾನನ ಮನೆಯಲ್ಲಿ ಅದೆ ಅಂದನು. ಅದಕ್ಕೆ ಅರಸನು--ಅವನನ್ನು ಅದರಲ್ಲಿ ತೂಗು ಹಾಕಿರಿ ಅಂದನು.ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು. ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.
- 2 Samuel 13:28–29 2 ಸಮುವೇಲನು 13:28–29ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು. ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು.
- Jeremiah 51:39 ಯೆರೆಮೀಯ 51:39ಅವರ ಉರಿಯಲ್ಲಿ ನಾನು ಅವರ ಔತಣವನ್ನು ಸಿದ್ಧಮಾಡುವೆನು; ಅವರು ಉಲ್ಲಾಸಿಸಿ ನಿತ್ಯವಾದ ನಿದ್ರೆಯನ್ನು ಮಾಡಿ ಎಚ್ಚರವಾಗದ ಹಾಗೆ ಅವರಿಗೆ ಅಮಲೇರಿಸುವೆನೆಂದು ಕರ್ತನು ಅನ್ನುತ್ತಾನೆ.
- Deuteronomy 28:67 ಧರ್ಮೋಪದೇಶಕಾಂಡ 28:67ನಿನ್ನ ಹೃದಯದಲ್ಲಿ ಆಗುವ ಹೆದರಿಕೆಯ ನಿಮಿತ್ತವೂ ನಿನ್ನ ಕಣ್ಣುಗಳು ನೋಡುವ ನೋಟದ ನಿಮಿತ್ತವೂ ಮುಂಜಾನೆಯಲ್ಲಿ--ಅಯ್ಯೋ, ಸಂಜೆ ಆಗ ಬೇಕು ಅನ್ನುವಿ. ಸಂಜೆಯಲ್ಲಿ--ಅಯ್ಯೋ, ಮುಂಜಾನೆ ಆಗಬೇಕು ಅನ್ನುವಿ.ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.
- Nahum 1:10 ನಹೂಮ 1:10ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.
- 1 Samuel 25:36–38 1 ಸಮುವೇಲನು 25:36–38ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ. ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು. ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು.
- Esther 5:12 ಎಸ್ತೇರಳು 5:12ಇದಲ್ಲದೆ--ರಾಣಿಯಾದ ಎಸ್ತೇ ರಳು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೊಬ್ಬರನ್ನು ಕರೆಯಲಿಲ್ಲ. ನಾಳೆಗೂ ಆಕೆಯಿಂದ ನಾನು ಅರಸನ ಸಂಗಡ ಆಕೆಯ ಬಳಿಗೆ ಕರೆಯಲ್ಪಟ್ಟಿದ್ದೇನೆ.
- Daniel 5:5 ದಾನಿಯೇಲನು 5:5ಅದೇ ಸಮಯದಲ್ಲಿ ಒಬ್ಬ ಮನುಷ್ಯನ ಹಸ್ತವು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಸುಣ್ಣದಲ್ಲಿ ಬರೆದವು; ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು.
- Daniel 5:1 ದಾನಿಯೇಲನು 5:1ಅರಸನಾದ ಬೆಲ್ಯಚ್ಚರನು ತನ್ನ ಪ್ರಭುಗಳಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಆ ಸಾವಿರ ಮಂದಿಯ ಮುಂದೆ ಅವನು ದ್ರಾಕ್ಷಾರಸವನ್ನು ಕುಡಿದನು.