Daniel · chapter 4 · verse 2
Daniel 4:2 in Kannada
ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ.
Devaru nanna vishayadalli nadesiruva soochaka kaaryagalannoo adbhutagalannoo prachurapadisabekembadu nanage vihitavaagi tori bandide.
Daniel 4:2 in English
- King James Version (KJV)
- I thought it good to shew the signs and wonders that the high God hath wrought toward me.
- World English Bible (WEB)
- It has seemed good to me to show the signs and wonders that the Most High God has worked toward me.
- American Standard Version (ASV)
- It hath seemed good unto me to show the signs and wonders that the Most High God hath wrought toward me.
- Bible in Basic English (BBE)
- It has seemed good to me to make clear the signs and wonders which the Most High God has done with me.
- Darby Translation (DBY)
- It hath seemed good unto me to declare the signs and wonders that the Most High God hath wrought toward me.
- Webster's Bible (WBS)
- I thought it good to show the signs and wonders that the high God hath wrought towards me.
- Young's Literal Translation (YLT)
- The signs and wonders that God Most High hath done with me, it is good before me to shew.
Read in context
- 1ಅರಸನಾದ ನೆಬೂಕದ್ನೆಚ್ಚರನು, ಭೂಲೋಕದಲ್ಲೆಲ್ಲಾ ವಾಸಮಾಡುವ ಎಲ್ಲಾ ಪ್ರಜೆಗಳಿಗೂ ಜನಾಂಗಗಳಿಗೂ ಭಾಷೆಯವರಿಗೂ--ನಿಮಗೆ ಶಾಂತಿಯು ಹೆಚ್ಚಾಗಲಿ.
- 2ದೇವರು ನನ್ನ ವಿಷಯದಲ್ಲಿ ನಡೆಸಿರುವ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬದು ನನಗೆ ವಿಹಿತವಾಗಿ ತೋರಿ ಬಂದಿದೆ.
- 3ಆತನ ಸೂಚಕ ಕಾರ್ಯಗಳು ಎಷ್ಟೋ ದೊಡ್ಡವುಗಳು! ಆತನ ಅದ್ಭುತ ಗಳು ಪರಾಕ್ರಮವಾದವುಗಳು, ಆತನ ರಾಜ್ಯವು ನಿತ್ಯವಾದ ರಾಜ್ಯವು, ಆತನ ಆಡಳಿತವು ತಲತಲಾಂತರ ವಾಗಿರುವಂತದ್ದು.
- 4ನೆಬೂಕದ್ನೆಚ್ಚರನೆಂಬ ನಾನು ನನ್ನ ಮನೆಯಲ್ಲಿ ಕ್ಷೇಮವಾಗಿಯೂ ನನ್ನ ಅರಮನೆಯಲ್ಲಿ ಸುಖವಾ ಗಿಯೂ ಇರುವಾಗ;
Cross references
- Daniel 3:26 ದಾನಿಯೇಲನು 3:26ಆ ಮೇಲೆ ನೆಬೂಕದ್ನೆಚ್ಚರನು ಧಗಧಗನೆ ಉರಿಯುತ್ತಿರುವ ಬೆಂಕಿಯ ಆವಿಗೆಯ ಬಾಯಿಯ ಸವಿಾಪಕ್ಕೆ ಬಂದು ಮಾತನಾಡಿ--ಓ ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರೇ, ಮಹೋನ್ನತ ದೇವರ ಸೇವಕರೇ, ಹೊರಗೆ ಬನ್ನಿರಿ ಎನ್ನಲು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರು ಬೆಂಕಿಯೊಳಗಿಂದ ಹೊರಗೆ ಬಂದರು.
- Psalm 66:16 ಕೀರ್ತನೆಗಳು 66:16ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.
- Joshua 7:19 ಯೆಹೋಶುವ 7:19ಆಗ ಯೆಹೋಶುವನು ಆಕಾನನಿಗೆ--ನನ್ನ ಮಗನೇ, ನೀನು ಈಗ ಇಸ್ರಾ ಯೇಲಿನ ದೇವರಾದ ಕರ್ತನನ್ನು ಘನಪಡಿಸಿ ಆತನಿಗೆ ಅರಿಕೆಮಾಡು; ಏನು ಮಾಡಿದಿಯೋ ಅದನ್ನು ನನಗೆ ತಿಳಿಸು; ನನಗೆ ಮರೆಮಾಡಬೇಡ ಅಂದನು.
- Psalm 71:18 ಕೀರ್ತನೆಗಳು 71:18ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- Acts 26:9–16 ಅಪೊಸ್ತಲರ ಕೃತ್ಯಗಳು 26:9–16ನಜರೇತಿನ ಯೇಸುವಿನ ಹೆಸರಿಗೆ ಪ್ರತಿಕೂಲವಾಗಿ ಅನೇಕ ಕಾರ್ಯಗಳನ್ನು ಮಾಡಲೇಬೇಕೆಂದು ನಾನು ನಿಜವಾಗಿ ಅಂದುಕೊಂಡಿದ್ದೆನು. ಯೆರೂಸಲೇಮಿ ನಲ್ಲಿ ನಾನು ಹಾಗೆಯೇ ಮಾಡಿದ್ದಲ್ಲದೆ ಪ್ರಧಾನ ಯಾಜಕರಿಂದ ಅಧಿಕಾರವನ್ನು ಪಡೆದು ಪರಿಶುದ್ಧರಲ್ಲಿ ಅನೇಕರನ್ನು ನಾನು ಸೆರೆಯಲ್ಲಿ ಹಾಕಿಸಿದೆನು. ಮಾತ್ರ ವಲ್ಲದೆ ಅವರು ಕೊಲ್ಲಲ್ಪಟ್ಟಾಗ ಅದಕ್ಕೆ ನಾನು ಸಮ್ಮತಿಪಟ್ಟೆನು. ಇದಲ್ಲದೆ ಪ್ರತಿಯೊಂದು ಸಭಾ ಮಂದಿರದಲ್ಲಿ ನಾನು ಅನೇಕ ಸಾರಿ ಅವರನ್ನು ಶಿಕ್ಷಿಸಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆನು ಮತ್ತು ಅವರ ಮೇಲೆ ಮಹಾಕೋಪೋ ದ್ರೇಕದಿಂದ ಬೇರೆ ಪಟ್ಟಣಗಳ ತನಕ ಅವರನ್ನು ಹಿಂಸಿಸಿದೆನು. ಇದಲ್ಲದೆ ಪ್ರಧಾನಯಾಜಕರಿಂದ ಅಧಿಕಾರವನ್ನೂ ಆಜ್ಞೆಯನ್ನೂ ಪಡೆದು ದಮಸ್ಕಕ್ಕೆ ನಾನು ಹೋಗುತ್ತಿದ್ದೆನು. ಓ ರಾಜನೇ, ನಾನು ದಾರಿಯಲ್ಲಿದ್ದಾಗ ಮಧ್ಯಾಹ್ನದಲ್ಲಿ ನನ್ನ ಮತ್ತು ನನ್ನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಸೂರ್ಯನ ಪ್ರಕಾಶಕ್ಕಿಂತ ಹೆಚ್ಚಾದ ಬೆಳಕು ಪರಲೋಕ ದಿಂದ ಪ್ರಕಾಶಿಸುತ್ತಿರುವದನ್ನು ನಾನು ಕಂಡೆನು. ನಾವೆಲ್ಲರೂ ನೆಲಕ್ಕೆ ಬಿದ್ದಾಗ--ಸೌಲನೇ, ಸೌಲನೇ, ಯಾಕೆ ನನ್ನನ್ನು ನೀನು ಹಿಂಸಿಸುತ್ತೀ, ಮುಳ್ಳು ಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ನನ್ನೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ ಒಂದು ಧ್ವನಿಯನ್ನು ನಾನು ಕೇಳಿದೆನು. ಅದಕ್ಕೆ ನಾನು--ಕರ್ತನೇ, ನೀನು ಯಾರು ಎಂದು ಕೇಳಿದೆನು. ಆಗ ಆತನು--ನೀನು ಹಿಂಸೆಪಡಿಸುವ ಯೇಸುವೇ ನಾನು. ಆದರೆ ನೀನು ಎದ್ದು ನಿಂತುಕೋ; ನೀನು ನೋಡಿದವುಗಳ ಮತ್ತು ನಾನು ನಿನಗೆ ಪ್ರತ್ಯಕ್ಷವಾಗಿ ತಿಳಿಯಪಡಿಸುವವುಗಳ ವಿಷಯವಾಗಿ ನಿನ್ನನ್ನು ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಮಾತ್ರ ವಲ್ಲದೆ
- Psalm 51:14 ಕೀರ್ತನೆಗಳು 51:14ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು.
- Acts 22:3–16 ಅಪೊಸ್ತಲರ ಕೃತ್ಯಗಳು 22:3–16ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ ನಾನು ಈ ಮಾರ್ಗವನ್ನು ಹಿಡಿದ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆ ಯೊಳಗೆ ಹಾಕಿಸುತ್ತಾ ಅವರನ್ನು ಕೊಲ್ಲುವ ಮಟ್ಟಿಗೂ ಹಿಂಸಿಸಿದೆನು. ಇದಕ್ಕೆ ಮಹಾಯಾಜಕನೂ ಹಿರೀಸಭೆ ಯವರೆಲ್ಲರೂ ನನಗೆ ಸಾಕ್ಷಿಗಳಾಗಿದ್ದಾರೆ. ಇವರಿಂದಲೇ ಅಲ್ಲಿದ್ದ ಸಹೋದರರಿಗೆ ನಾನು ಪತ್ರಗಳನ್ನು ಪಡೆದು ದಮಸ್ಕದಲ್ಲಿದ್ದವರನ್ನು ಬಂಧಿಸಿ ಯೆರೂಸಲೇಮಿಗೆ ತಂದು ಶಿಕ್ಷಿಸುವದಕ್ಕಾಗಿ ನಾನು ಅಲ್ಲಿಗೆ ಹೋದೆನು. ತರುವಾಯ ನಾನು ಪ್ರಯಾಣಮಾಡುತ್ತಾ ಸುಮಾರು ಮಧ್ಯಾಹ್ನದ ಸಮಯದಲ್ಲಿ ದಮಸ್ಕದ ಹತ್ತಿರ ಬಂದಾಗ ಫಕ್ಕನೆ ಆಕಾಶದಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲೂ ಹೊಳೆಯಿತು. ಆಗ ನಾನು ನೆಲಕ್ಕೆ ಬಿದ್ದು--ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸಿಸುತ್ತೀ? ಎಂದು ಹೇಳುವ ಧ್ವನಿಯನ್ನು ಕೇಳಿದೆನು. ಅದಕ್ಕೆ ನಾನು ಪ್ರತ್ಯುತ್ತರವಾಗಿ--ಕರ್ತನೇ, ನೀನು ಯಾರು ಎಂದು ಕೇಳಿದಾಗ ಆತನು--ನೀನು ಹಿಂಸಿಸುತ್ತಿರುವ ನಜರೇತಿನ ಯೇಸುವೇ ನಾನು ಎಂದು ನನಗೆ ಹೇಳಿದನು. ಆಗ ನನ್ನೊಂದಿಗಿದ್ದವರು ನಿಜವಾಗಿಯೂ ಆ ಬೆಳಕನ್ನು ನೋಡಿ ಭಯಪಟ್ಟರು; ಆದರೆ ನನ್ನೊಂದಿಗೆ ಮಾತನಾಡಿದ ಆತನ ಧ್ವನಿಯನ್ನು ಅವರು ಕೇಳಲಿಲ್ಲ. ನಾನು--ಕರ್ತನೇ, ನಾನೇನು ಮಾಡಬೇಕು ಎಂದು ಕೇಳಿದೆನು; ಅದಕ್ಕೆ ಕರ್ತನು ನನಗೆ--ನೀನೆದ್ದು ದಮಸ್ಕದೊಳಕ್ಕೆ ಹೋಗು; ನಿನಗೆ ನೇಮಿಸಲ್ಪ ಟ್ಟವುಗಳೆಲ್ಲವು ಅಲ್ಲಿ ನಿನಗೆ ತಿಳಿಸಲ್ಪಡುವವು ಎಂದು ಹೇಳಿದನು. ಆ ಬೆಳಕಿನ ಪ್ರಭಾವದ ನಿಮಿತ್ತವಾಗಿ ನನ್ನ ಕಣ್ಣು ಕಾಣಲಾರದೆ ಇದ್ದಾಗ ನನ್ನ ಜೊತೆಯಲ್ಲಿ ದ್ದವರು ನನ್ನ ಕೈ ಹಿಡಿದು ಕರಕೊಂಡು ಹೋದದ್ದರಿಂದ ನಾನು ದಮಸ್ಕಕ್ಕೆ ಬಂದೆನು. ಅಲ್ಲಿ ವಾಸಿಸುತ್ತಿದ್ದ ಅನನೀಯ ಎಂಬ ಒಬ್ಬ ಮನುಷ್ಯನು ಎಲ್ಲಾ ಯೆಹೂದ್ಯರಿಂದ ಒಳ್ಳೆಯವನೆಂದು ಸಾಕ್ಷಿಪಡೆದು ನ್ಯಾಯಪ್ರಮಾಣದ ಪ್ರಕಾರ ಭಕ್ತಿಯುಳ್ಳವನಾಗಿದ್ದನು. ಅವನು ನನ್ನ ಬಳಿಗೆ ಬಂದು ನಿಂತು--ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದು ಎಂದು ಹೇಳಿದನು. ಅದೇ ಗಳಿಗೆಯಲ್ಲಿ ನಾನು ಅವನನ್ನು ನೋಡಿದೆನು. ಆಗ ಅವನು--ನಮ್ಮ ಪಿತೃಗಳ ದೇವರ ಚಿತ್ತವನ್ನು ನೀನು ತಿಳುಕೊಳ್ಳು ವಂತೆಯೂ ಆ ನೀತಿವಂತನನ್ನು ನೋಡುವಂತೆಯೂ ಆತನ ಬಾಯಿಂದ ಬಂದ ಸ್ವರವನ್ನು ಕೇಳುವಂತೆಯೂ ಆತನು ನಿನ್ನನ್ನು ಆರಿಸಿಕೊಂಡಿದ್ದಾನೆ. ನೀನು ನೋಡಿ ಕೇಳಿದವುಗಳ ವಿಷಯವಾಗಿ ಎಲ್ಲಾ ಮನುಷ್ಯ ರಿಗೆ ಆತನ ಸಾಕ್ಷಿಯಾಗಿರುವಿ. ಈಗ ನೀನು ತಡಮಾಡುವದು ಯಾಕೆ? ಎದ್ದು ಬಾಪ್ತಿಸ್ಮ ಮಾಡಿಸಿ ಕೊಂಡು ಕರ್ತನ ಹೆಸರನ್ನು ಹೇಳಿಕೊಳ್ಳುವವನಾಗಿ ನಿನ್ನ ಪಾಪಗಳನ್ನು ತೊಳೆದುಕೋ ಎಂದು ಹೇಳಿದನು.