Psalms · chapter 71 · verse 18
Psalm 71:18 in Kannada
ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
O devare, naanu muppinavanoo nare koodalinavanoo aadaaga ee santatiyavarige ninna shaktiyannoo munde baruva pratiyobbanige ninna adhikaaravannoo tilisuva varegoo nannannu kaibidabeda.
Psalm 71:18 in English
- King James Version (KJV)
- Now also when I am old and grayheaded, O God, forsake me not; until I have shewed thy strength unto [this] generation, [and] thy power to every one [that] is to come.
- World English Bible (WEB)
- Yes, even when I am old and gray-haired, God, don’t forsake me, until I have declared your strength to the next generation, your might to everyone who is to come.
- American Standard Version (ASV)
- Yea, even when I am old and grayheaded, O God, forsake me not, Until I have declared thy strength unto [the next] generation, Thy might to every one that is to come.
- Bible in Basic English (BBE)
- Now when I am old and grey-headed, O God, give me not up; till I have made clear your strength to this generation, and your power to all those to come.
- Darby Translation (DBY)
- Now also, when I am old and greyheaded, O God, forsake me not, until I have proclaimed thine arm unto [this] generation, thy might to every one that is to come.
- Webster's Bible (WBS)
- Now also when I am old and gray-headed, O God, forsake me not; until I have shown thy strength to [this] generation, [and] thy power to every one [that] is to come.
- Young's Literal Translation (YLT)
- And also unto old age and grey hairs, O God, forsake me not, Till I declare Thy strength to a generation, To every one that cometh Thy might.
Read in context
- 16ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು.
- 17ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
- 18ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- 19ಓ ದೇವರೇ, ಮಹತ್ಕಾರ್ಯಗಳನ್ನು ಮಾಡಿದ ನಿನ್ನ ನೀತಿಯು ಬಹಳ ಉನ್ನತವಾಗಿದೆ. ಓ ದೇವರೇ, ನಿನ್ನ ಹಾಗೆ ಯಾರಿದ್ದಾರೆ!
- 20ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
Cross references
- Isaiah 46:4 ಯೆಶಾಯ 46:4ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.
- Psalm 78:4 ಕೀರ್ತನೆಗಳು 78:4ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ.
- Psalm 71:9 ಕೀರ್ತನೆಗಳು 71:9ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡ. ನನ್ನ ಶಕ್ತಿಯು ಕುಂದಿಹೋಗುವಾಗ ನನ್ನನ್ನು ಕೈಬಿಡ ಬೇಡ.
- Psalm 145:4–5 ಕೀರ್ತನೆಗಳು 145:4–5ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ. ನಿನ್ನ ಮಹಿಮೆಯ ಘನದ ಪ್ರಭೆಯ ವಿಷಯ ವಾಗಿಯೂ ನಿನ್ನ ಅದ್ಭುತಕಾರ್ಯಗಳ ವಿಷಯ ವಾಗಿಯೂ
- Psalm 78:6 ಕೀರ್ತನೆಗಳು 78:6ಮುಂದಿನ ವಂಶವು ಅಂದರೆ ಹುಟ್ಟುವ ದಕ್ಕಿರುವ ಮಕ್ಕಳು ತಿಳಿದು, ಎದ್ದು, ತಮ್ಮ ಮಕ್ಕಳಿಗೆ ವಿವರಿಸಲಾಗಿ
- Psalm 22:31 ಕೀರ್ತನೆಗಳು 22:31ಅವರು ಬಂದು ಆತನೇ ಇದನ್ನು ಮಾಡಿದ್ದಾನೆಂದೂ ಆತನ ನೀತಿಯನ್ನೂ ಹುಟ್ಟಲಿರುವ ಜನರಿಗೆ ತಿಳಿಸುವರು.
- Exodus 13:14–17 ವಿಮೋಚನಕಾಂಡ 13:14–17ಇದಲ್ಲದೆ ಮುಂದೆ ಬರುವ ಕಾಲದಲ್ಲಿ ನಿನ್ನ ಮಗನು ನಿನಗೆ--ಇದೇನು ಎಂದು ಕೇಳುವಾಗ ನೀನು ಅವನಿಗೆಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದ ದಾಸತ್ವದ ಮನೆಯಿಂದ ಹೊರಗೆ ಬರಮಾಡಿದ್ದಾನೆ. ಫರೋಹನು ನಮ್ಮನ್ನು ಕಳುಹಿಸದೆ ಕಠಿಣವಾಗಿದ್ದದರಿಂದ ಕರ್ತನು ಐಗುಪ್ತದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಅಂದರೆ ಮನುಷ್ಯರಲ್ಲಿ ಚೊಚ್ಚಲಾ ದದ್ದು ಮೊದಲುಗೊಂಡು ಪಶುಗಳ ಚೊಚ್ಚಲಾದ ವುಗಳ ವರೆಗೆ ಕೊಂದುಹಾಕಿದನು. ಆದ್ದರಿಂದ ನಾನು ಚೊಚ್ಚಲಾದ ಗಂಡಾದವುಗಳನ್ನೆಲ್ಲಾ ಕರ್ತನಿಗೆ ಅರ್ಪಿ ಸುತ್ತೇನೆ. ನನ್ನ ಮಕ್ಕಳಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇನೆ ಎಂದು ಹೇಳಬೇಕು ಅಂದನು. ಇದು ನಿನ್ನ ಕೈಮೇಲೆ ಗುರುತಾಗಿಯೂ ನಿನ್ನ ಕಣ್ಣುಗಳ ನಡುವೆ ಹಣೆಯ ಕಟ್ಟಾಗಿಯೂ ಇರಲಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದೊಳಗಿನಿಂದ ಹೊರಗೆ ಬರಮಾಡಿದ್ದಾನೆ. ಫರೋಹನು ಜನರನ್ನು ಕಳುಹಿಸಿಬಿಟ್ಟಾಗ ಫಿಲಿಷ್ಟಿಯರ ದೇಶದ ದಾರಿಯು ಸವಿಾಪವಿದ್ದರೂ ದೇವರು ಅವರನ್ನು ಅದರಲ್ಲಿ ನಡಿಸಲಿಲ್ಲ; ಯಾಕಂದರೆ ದೇವರು--ಜನರು ಯುದ್ಧವನ್ನು ನೋಡಿ ಮನಸ್ಸನ್ನು ಬೇರೆ ಮಾಡಿಕೊಂಡು ಅವರು ಐಗುಪ್ತಕ್ಕೆ ಹಿಂದಿರುಗಾರು ಎಂದು ಅಂದುಕೊಂಡನು.
- 1 Samuel 4:18 1 ಸಮುವೇಲನು 4:18ಅವನು ದೇವರ ಒಡಂಬಡಿಕೆಯ ಮಂಜೂಷದ ಮಾತನ್ನು ಹೇಳಿದಾಗ ಏಲಿಯು ಆಸನದ ಮೇಲಿನಿಂದ ಬಾಗಲಿನ ಪಾರ್ಶ್ವವಾಗಿ ಹಿಂದಕ್ಕೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಯಾಕಂದರೆ ಅವನು ಮುದುಕನಾಗಿಯೂ ಭಾರವುಳ್ಳ ವನಾಗಿಯೂ ಇದ್ದನು. ಅವನು ನಾಲ್ವತ್ತು ವರುಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.
- Isaiah 51:9 ಯೆಶಾಯ 51:9ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
- Exodus 13:8 ವಿಮೋಚನಕಾಂಡ 13:8ಆ ದಿನದಲ್ಲಿ ನಿನ್ನ ಮಗನಿಗೆ ತಿಳಿಸಿ ಹೇಳಬೇಕಾದದ್ದೇನಂದರೆ--ನಾನು ಐಗುಪ್ತದಿಂದ ಹೊರಗೆ ಬಂದಾಗ ಕರ್ತನು ನನಗೆ ಮಾಡಿದ್ದಕ್ಕಾಗಿ ಇದು ಆಚರಿಸಲ್ಪಡುತ್ತದೆ.
- Acts 13:36 ಅಪೊಸ್ತಲರ ಕೃತ್ಯಗಳು 13:36ದಾವೀದನು ದೇವರ ಚಿತ್ತಕ್ಕನು ಸಾರವಾಗಿ ತನ್ನ ಸ್ವಂತ ಸಂತತಿಯವರಿಗೆ ಸೇವೆ ಮಾಡಿದ ನಂತರ ಅವನು ನಿದ್ರೆಹೋಗಿ ತನ್ನ ಪಿತೃಗಳ ಬಳಿಯಲಿ ಸೇರಿ ಕೊಳೆಯುವ ಅವಸ್ಥೆಯನ್ನು ನೋಡಿದನು.
- Isaiah 53:1 ಯೆಶಾಯ 53:1ನಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು?