Daniel · chapter 7 · verse 6
Daniel 7:6 in Kannada
ಇದಾದ ಮೇಲೆ ನಾನು ನೋಡಲಾಗಿ ಇಗೋ, ಚಿರತೆಯ ಹಾಗಿರುವ ಇನ್ನೊಂದು (ಮೃಗ); ಇದರ ಬೆನ್ನಿನ ಮೇಲೆ ಪಕ್ಷಿಯ ನಾಲ್ಕು ರೆಕ್ಕೆಗಳು ಇದ್ದವು; ಈ ಮೃಗಕ್ಕೆ ನಾಲ್ಕು ತಲೆಗಳು ಸಹ ಇದ್ದವು. ಇದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
Idaada mele naanu nodalaagi igo, chirateya haagiruva innondu (mruga); idara bennina mele pakshiya naalku rekkegalu iddavu; ee mrugakke naalku talegalu saha iddavu. Idakke adhikaaravu kodalpattitu.
Daniel 7:6 in English
- King James Version (KJV)
- After this I beheld, and lo another, like a leopard, which had upon the back of it four wings of a fowl; the beast had also four heads; and dominion was given to it.
- World English Bible (WEB)
- “After this I saw, and behold, another, like a leopard, which had on its back four wings of a bird. The animal also had four heads; and dominion was given to it.
- American Standard Version (ASV)
- After this I beheld, and, lo, another, like a leopard, which had upon its back four wings of a bird; the beast had also four heads; and dominion was given to it.
- Bible in Basic English (BBE)
- After this I saw another beast, like a leopard, which had on its back four wings like those of a bird; and the beast had four heads, and the power of a ruler was given to it.
- Darby Translation (DBY)
- After this I saw, and behold, another, like a leopard, and it had four wings of a bird upon its back; and the beast had four heads; and dominion was given to it.
- Webster's Bible (WBS)
- After this I beheld, and lo another, like a leopard, which had upon the back of it four wings of a fowl; the beast had also four heads; and dominion was given to it.
- Young's Literal Translation (YLT)
- 'After this I was seeing, and lo, another like a leopard, and it hath four wings of a fowl on its back, and four heads hath the beast, and dominion is given to it.
Read in context
- 4ಮೊದಲನೆಯದು ಸಿಂಹದ ಹಾಗಿದ್ದು ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ಅದರ ರೆಕ್ಕೆಗಳು ಕೀಳಲ್ಪಟ್ಟು ಅದು ಭೂಮಿಯಿಂದ ಎತ್ತಲ್ಪಟ್ಟು ಮನುಷ್ಯನಂತೆ ಕಾಲೂರಿ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲ್ಪಟ್ಟದ್ದನ್ನು ನಾನು ನೋಡಿದೆನು.
- 5ಇದಲ್ಲದೆ ಇಗೋ, ಇನ್ನೊಂದು ಎರಡ ನೆಯ ಮೃಗವು ಕರಡಿಯ ಹಾಗಿರುವಂಥದ್ದು. ಇದಕ್ಕೆ ಒಂದು ಪಕ್ಕದಲ್ಲಿ ಒಂದು ಹೆಗಲನ್ನು ಮೇಲಕ್ಕೆ ಎತ್ತಿ ಕೊಂಡಿತ್ತು. ಇದರ ಬಾಯಿಯ ಹಲ್ಲುಗಳ ಮಧ್ಯದಲ್ಲಿ ಮೂರು ಪಕ್ಕೆಲುಬುಗಳು ಇದ್ದವು. ಅದಕ್ಕೆ ಅವರು --ಎದ್ದೇಳು ಹೆಚ್ಚು ಮಾಂಸವನ್ನು ತಿನ್ನು ಎಂದು ಹೇಳಿ ದರು.
- 6ಇದಾದ ಮೇಲೆ ನಾನು ನೋಡಲಾಗಿ ಇಗೋ, ಚಿರತೆಯ ಹಾಗಿರುವ ಇನ್ನೊಂದು (ಮೃಗ); ಇದರ ಬೆನ್ನಿನ ಮೇಲೆ ಪಕ್ಷಿಯ ನಾಲ್ಕು ರೆಕ್ಕೆಗಳು ಇದ್ದವು; ಈ ಮೃಗಕ್ಕೆ ನಾಲ್ಕು ತಲೆಗಳು ಸಹ ಇದ್ದವು. ಇದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
- 7ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ ಇಗೋ, ನಾಲ್ಕ ನೆಯ ಮೃಗವು ಭಯಂಕರವಾದದ್ದೂ ಘೋರವಾ ದದ್ದೂ ಬಹಳ ಬಲವುಳ್ಳದ್ದೂ ಆಗಿತ್ತು; ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತಿಂದು ತುಂಡು ತುಂಡು ಮಾಡಿ ಮಿಕ್ಕಿದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದು ಮತ್ತು ಹತ್ತು ಕೊಂಬುಗಳುಳ್ಳದ್ದು ಆಗಿತ್ತು.
- 8ಆ ಕೊಂಬುಗಳ ಬಗ್ಗೆ ನಾನು ಆಲೋಚಿಸು ತ್ತಿರುವಾಗ ಇಗೋ, ಮತ್ತೊಂದು ಚಿಕ್ಕ ಕೊಂಬು ಅವುಗಳಲ್ಲಿ ಎದ್ದು ಕಾಣುತ್ತಿತ್ತು. ಇದರ ಮುಂದೆ ಮೊದ ಲಿನ ಕೊಂಬುಗಳಲ್ಲಿ ಮೂರು ಬೇರುಸಹಿತ ಕೀಳಲ್ಪ ಟ್ಟಿವೆ ಮತ್ತು ಇಗೋ, ಈ ಕೊಂಬಿನಲ್ಲಿ ಮನುಷ್ಯರ ಕಣ್ಣುಗಳ ಹಾಗೆ ಕಣ್ಣುಗಳೂ ಬಡಾಯಿಕೊಚ್ಚುವ ಬಾಯಿಯೂ ಇದ್ದವು.
Cross references
- Revelation 13:2 ಪ್ರಕಟನೆ 13:2ನಾನು ಕಂಡ ಮೃಗವು ಚಿರತೆಯಂತಿತ್ತು; ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು; ಅದಕ್ಕೆ ಘಟಸರ್ಪವು ತನ್ನ ಶಕ್ತಿಯನ್ನೂ ತನ್ನ ಆಸನವನ್ನು ಮಹಾ ಅಧಿಕಾರವನ್ನೂ ಕೊಟ್ಟಿತು.
- Daniel 11:3–20 ದಾನಿಯೇಲನು 11:3–20ಆಗ, ಬಲವುಳ್ಳ ಒಬ್ಬ ಅರಸನು ಎದ್ದು ಮಹಾಅಧಿಕಾರದಿಂದ ಆಳಿ ತನ್ನ ಚಿತ್ತದ ಪ್ರಕಾರ ಮಾಡುವನು. ಅವನು ತಲೆ ಎತ್ತಿದ ಮೇಲೆ ಅವನ ರಾಜ್ಯವು ಮುರಿಯಲ್ಪಟ್ಟು ಆಕಾಶದ ನಾಲ್ಕು ದಿಕ್ಕುಗಳ ಕಡೆಗೆ ವಿಭಾಗಿಸಲ್ಪಡುವದು; ಅವನ ಸಂತತಿಗಾಗಿ ಅಲ್ಲ, ಅಥವಾ ಅವನು ಆಳಿದ ಅಧಿಕಾರದ ಹಾಗಲ್ಲ ಅವನ ರಾಜ್ಯವು ಕೀಳಲ್ಪಟ್ಟು ಅವರಿಗಲ್ಲ, ಮತ್ತೊಬ್ಬರಿಗೆ ಹಂಚಲ್ಪಡುವದು. ದಕ್ಷಿಣದ ಅರಸನು ಬಲಿಷ್ಠನಾಗಿ ರುವನು. ಆದರೆ ಅವನ ಪ್ರಧಾನರಲ್ಲಿ ಒಬ್ಬನು ಇವನಿ ಗಿಂತ ಬಲಿಷ್ಠನಾಗಿದ್ದು ಅವನ ಆಳ್ವಿಕೆಯು ಮಹಾ ಆಳ್ವಿಕೆಯಾಗುವದು. ವರುಷಗಳ ಅಂತ್ಯದಲ್ಲಿ ಅವರು ಒಬ್ಬರಿಗೊಬ್ಬರು ಒಂದಾಗುವರು; ಹೇಗಂದರೆ ದಕ್ಷಿಣದ ಅರಸನ ಮಗಳು ಉತ್ತರದ ಅರಸನ ಬಳಿಗೆ ಬಂದು ಒಪ್ಪಂದ ಮಾಡಿಕೊಳ್ಳುವಳು; ಆದರೆ ಅವಳು ಭುಜ ಬಲವನ್ನು ಉಳಿಸಿಕೊಳ್ಳುವದಿಲ್ಲ; ಅವನೂ ಅವನ ತೋಳುಗಳೂ ನಿಲ್ಲುವದಿಲ್ಲ; ಅವಳೂ ಅವಳನ್ನು ಕರೆ ತಂದವರೂ ಅವಳನ್ನು ಪಡೆದವನೂ ಆ ಕಾಲದಲ್ಲಿ ಅವಳನ್ನು ಬಲಪಡಿಸಿದವನೂ ಉಳಿಯುವದಿಲ್ಲ. ಆದರೆ ಅವಳ ಬೇರುಗಳ ಚಿಗುರಿನಿಂದ ಒಬ್ಬನು ಎದ್ದು ಆ ಸ್ಥಾನದಲ್ಲಿ ನಿಂತು ಸೈನ್ಯದೊಂದಿಗೆ ಬಂದು ಉತ್ತರದ ಅರಸನ ಕೋಟೆಯೊಳಗೆ ನುಗ್ಗಿ ಅವರನ್ನು ವಿರೋಧಿಸಿ ಪ್ರಬಲವಾಗುವನು. ಅವರ ದೇವರು ಗಳನ್ನೂ ಅವರ ಪ್ರಧಾನರನ್ನೂ ಬೆಳ್ಳಿಬಂಗಾರಗಳ ಪಾತ್ರೆಗಳನ್ನೂ ಸೂರೆಮಾಡಿ ಐಗುಪ್ತದೇಶಕ್ಕೆ ಬಂದು ಉತ್ತರದ ಅರಸನಿಗಿಂತ ಹೆಚ್ಚು ವರುಷಗಳು ಆಳುವನು. ಹೀಗೆ ದಕ್ಷಿಣದ ಅರಸನು ಅವನ ರಾಜ್ಯಕ್ಕೆ ಬಂದು ಮತ್ತೆ ಸ್ವಂತ ದೇಶಕ್ಕೆ ಹಿಂತಿರುಗಿ ಹೋಗುವನು. ಆಮೇಲೆ ಅವನ ಮಕ್ಕಳು ಸನ್ನದ್ಧರಾಗಿ ದೊಡ್ಡ ಸೈನ್ಯಗಳ ಸಮೂಹವನ್ನು ಕೂಡಿಸುವರು; ಅವರಲ್ಲಿ ಒಬ್ಬನು ನಿಶ್ಚಯವಾಗಿ ಬಂದು ಅದರಲ್ಲಿ ಪ್ರಳಯದಂತೆ ಹಾದುಹೋಗುವನು. ಅವನು ಮತ್ತೆ ಸನ್ನದ್ಧನಾಗಿ ಕೋಟೆಯನ್ನು ಮುತ್ತುವನು. ಆಗ ದಕ್ಷಿಣದ ಅರಸನು ಕೋಪಿಸಿಕೊಂಡು ಹೊರಟು ಅವನ ಸಂಗಡ ಅಂದರೆ ಉತ್ತರದ ಅರಸನ ಸಂಗಡ ಯುದ್ಧಮಾಡುವನು; ಅವನು ಮಹಾ ಸೈನ್ಯವನ್ನು ನಿಲ್ಲಿಸುವನು; ಆದರೆ ಆ ಮಹಾ ಸಮೂಹವು ಇವನ ಕೈಗೆ ಕೊಡಲ್ಪಡುವದು. ಆ ಸಮೂಹವನ್ನು ಅವನು ತೆಗೆದು ಹಾಕಿದ ಮೇಲೆ ಅವನ ಹೃದಯವು ಹೆಚ್ಚಳಪಡುವದು; ಹೌದು, ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ ಪ್ರಬಲವಾಗ ಲಾರನು. ಉತ್ತರದ ಅರಸನು ಮತ್ತೆ ತಿರುಗಿಕೊಂಡು ಮೊದಲನೇ ಸಾರಿಗಿಂತಲೂ ದೊಡ್ಡ ಸಮೂಹವನ್ನು ನಿಲ್ಲಿಸಿ ಕೆಲವು ವರುಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ ಬಹಳ ಸಂಪತ್ತಿನ ಸಂಗಡವೂ ನಿಶ್ಚಯವಾಗಿ ಬರುವನು. ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು; ಅಲ್ಲದೆ ನಿನ್ನ ಜನರಲ್ಲಿ ದರೋಡೆಕೋರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವರು; ಆದರೆ ಅವರು ಬಿದ್ದು ಹೋಗುವರು. ಆದರೆ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ ದಿಬ್ಬವನ್ನು ಕೆಡವಿ ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳು ವನು; ದಕ್ಷಿಣದ ಭುಜಬಲವಾದರೂ ಅವನು ಆದು ಕೊಂಡ ಜನರಾದರೂ ನಿಲ್ಲುವದಕ್ಕೆ ಬಲವಿರುವದಿಲ್ಲ. ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು; ಯಾರೂ ಅವನ ಮುಂದೆ ನಿಲ್ಲಲಾರರು; ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದು ಅವನ ಕೈಯಿಂದ ನಾಶವಾಗುವದು. ಅವನು ತನ್ನ ರಾಜ್ಯದ ಸಮಸ್ತ ಬಲ ಸಮೇತನಾಗಿ ಹೊರಟು ಅವನನ್ನು ಎದುರುಗೊಳ್ಳುವನು. ಪ್ರಮಾಣಿ ಕರು ಅವನೊಂದಿಗಿರುವರು; ಹೀಗೆ ಅವನು ಮಾಡು ವನು. ಮತ್ತು ಹೆಣ್ಣು ಮಗಳನ್ನು ಕೆಡಿಸುವದಕ್ಕೆ ಅವನಿಗೆ ಕೊಡುವನು. ಆದರೆ ಅವಳು ಅವನ ಕಡೆಗೆ ನಿಲ್ಲುವ ದಿಲ್ಲ, ಅವನಿಗಾಗಿ ಇರುವದಿಲ್ಲ. ಇದಾದ ಮೇಲೆ ಅವನು ತನ್ನ ಮುಖವನ್ನು ದ್ವೀಪಗಳ ಕಡೆಗೆ ತಿರುಗಿಸಿ ಆನೇಕರನ್ನು ವಶಪಡಿಸಿಕೊಳ್ಳುವನು; ಆದರೆ ಒಬ್ಬ ಅಧಿಪತಿಯು ತನಗಾಗಿ ಅವನ ನಿಂದೆಯನ್ನು ಅಡಗಿಸಿ ಬಿಡುವನು; ಆ ನಿಂದೆಯನ್ನು ತನ್ನ ಮೇಲೆ ಹಾಕಿಕೊಳ್ಳದೆ ಅವನ ಮೇಲೆ ತಿರುಗಿಸಿಬಿಡುವನು. ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು; ಆದರೆ ಅವನು ಎಡವಿಬಿದ್ದು ಕಾಣದೆ ಹೋಗುವನು. ಆಗ ಅವನಿಗೆ ಬದಲಾಗಿ ರಮ್ಯವಾದ ರಾಜ್ಯದಲ್ಲಿ ಗುತ್ತಿಗೆಯನ್ನು ಹೆಚ್ಚಿಸುವನು, ತನ್ನ ಸ್ಥಾನದಲ್ಲಿ ನಿಲ್ಲು ವನು ಮತ್ತು ಅವನು ಕೆಲವು ದಿನಗಳೊಳಗೆ ನಾಶ ವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧ ದಿಂದಲೂ ಅಲ್ಲ.
- Daniel 8:20–22 ದಾನಿಯೇಲನು 8:20–22ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು ಏನಂದರೆ ಮೇದ್ಯಯದ ಮತ್ತು ಪಾರಸಿಯರ ಅರಸರು ಗಳು. ಆ ಒರಟು ಹೋತವು ಗ್ರೀಕ್ನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು. ಈಗ ಅದು ಮುರಿಯ ಲ್ಪಟ್ಟು, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ--ಆ ಜನಾಂಗದಿಂದ ನಾಲ್ಕು ರಾಜ್ಯ ಗಳು ಉದಯಿಸುವವು; ಆದರೆ ಅವನ (ಮೊದಲ ನೆಯ ಅರಸನ) ಅಧಿಕಾರದಲ್ಲಿ ಇರುವದಿಲ್ಲ;
- Daniel 7:4 ದಾನಿಯೇಲನು 7:4ಮೊದಲನೆಯದು ಸಿಂಹದ ಹಾಗಿದ್ದು ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ಅದರ ರೆಕ್ಕೆಗಳು ಕೀಳಲ್ಪಟ್ಟು ಅದು ಭೂಮಿಯಿಂದ ಎತ್ತಲ್ಪಟ್ಟು ಮನುಷ್ಯನಂತೆ ಕಾಲೂರಿ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲ್ಪಟ್ಟದ್ದನ್ನು ನಾನು ನೋಡಿದೆನು.
- Ezekiel 17:3 ಯೆಹೆಜ್ಕೇಲನು 17:3ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು.
- Daniel 10:20 ದಾನಿಯೇಲನು 10:20ಅವನು ಹೇಳಿದ್ದೇನಂದರೆ--ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ? ಈಗ ನಾನು ಪಾರಸಿಯ ಪ್ರಭುವಿನ ಸಂಗಡ (ಕಾದಾಡಲು) ತಿರುಗಿ ಹೋಗುತ್ತೇನೆ; ನಾನು ಹೋದ ಮೇಲೆ ಇಗೋ, ಗ್ರೀಕ್ ಪ್ರಭುವು ಬರುವನು.ಆದರೆ ಸತ್ಯದ ಬರಹದಲ್ಲಿ ಸೂಚಿಸಲ್ಪಟ್ಟದ್ದನ್ನು ನಿನಗೆ ತಿಳಿಸುತ್ತೇನೆ; ನಿಮ್ಮ ಪ್ರಭುವಾದ ವಿಾಕಾಯೇಲನೇ ಹೊರತು ಮತ್ತೆ ಯಾರೂ ನನ್ನ ಸಂಗಡ ಈ ಸಂಗತಿಗಳಲ್ಲಿ ಬಲಗೊಳ್ಳಲಿಲ್ಲ.
- Hosea 13:7 ಹೋಶೇಯ 13:7ಆದದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು; ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚಿಹಾಕುವೆನು.
- Daniel 8:5–8 ದಾನಿಯೇಲನು 8:5–8ನಾನು ಆಲೋಚಿ ಸಲಾಗಿ ಇಗೋ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದಂತೆ ಭೂಮಂಡಲವನ್ನೆಲ್ಲಾ ದಾಟಿ ಕೊಂಡು ಬಂತು. ಆ ಹೋತದ ಕಣ್ಣುಗಳ ಮಧ್ಯೆ ಗಮನಿಸತಕ್ಕ ಒಂದು ಕೊಂಬು ಇತ್ತು. ನಾನು ನೋಡಿದ ನದಿಯ ಹತ್ತಿರವಿದ್ದ ಎರಡು ಕೊಂಬಿನ ಟಗರಿನ ಬಳಿಗೆ ಅದು ಬಂದು ಪರಾಕ್ರಮದಿಂದ ರೋಷಗೊಂಡು ಅದರ ಬಳಿಗೆ ಓಡಿತು. ಅದು ಟಗರಿನ ಹತ್ತಿರ ಬರುವದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಅದರ ಮುಂದೆ ನಿಲ್ಲುವದಕ್ಕೆ ಟಗರಿಗೆ ಏನೂ ಶಕ್ತಿಯಿ ರಲಿಲ್ಲ, ಆದರೆ ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಅದರ ಕೈಯಿಂದ ಬಿಡಿಸುವವನು ಯಾರೂ ಇರಲಿಲ್ಲ. ಆದದರಿಂದ ಆ ಹೋತವು ಬಹಳವಾಗಿ ಹೆಚ್ಚಿಕೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.
- Daniel 2:39 ದಾನಿಯೇಲನು 2:39ನಿನ್ನ ತರುವಾಯ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯ ಏಳುವದು; ಅನಂತರ ಮೂರನೇ ಹಿತ್ತಾಳೆಯ ರಾಜ್ಯ ಬರುವದು. ಅದು ಸಮಸ್ತ ಭೂಮಿಯ ಮೇಲೂ ದೊರೆತನ ನಡೆಸುವದು.
Original words (Hebrew)
- After · H870אֲתַר ʼăthar
- this · H1836דֵּן dên
- beheld · H1934הָוָא hâvâʼ
- lo · H718אֲרוּ ʼărûw
- another · H317אׇחֳרִי ʼochŏrîy
- leopard · H5245נְמַר nᵉmar
- upon · H5922עַל ʻal
- back · H1355גַּב gab
- four · H703אַרְבַּע ʼarbaʻ
- wings · H1611גַּף gaph
- fowl · H5776עוֹף ʻôwph
- beast · H2423חֵיוָא chêyvâʼ
- four · H703אַרְבַּע ʼarbaʻ
- heads · H7217רֵאשׁ rêʼsh
- dominion · H7985שׇׁלְטָן sholṭân
- given · H3052יְהַב yᵉhab