Daniel · chapter 7 · verse 4
Daniel 7:4 in Kannada
ಮೊದಲನೆಯದು ಸಿಂಹದ ಹಾಗಿದ್ದು ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ಅದರ ರೆಕ್ಕೆಗಳು ಕೀಳಲ್ಪಟ್ಟು ಅದು ಭೂಮಿಯಿಂದ ಎತ್ತಲ್ಪಟ್ಟು ಮನುಷ್ಯನಂತೆ ಕಾಲೂರಿ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲ್ಪಟ್ಟದ್ದನ್ನು ನಾನು ನೋಡಿದೆನು.
Modalaneyadu sinhada haagiddu haddina rekkegalulladdaagittu. Adara rekkegalu keelalpattu adu bhoomiyinda ettalpattu manushyanante kaaloori nillisalpattittu. Adakke manushyana hrudayavu kodalpattaddannu naanu nodidenu.
Daniel 7:4 in English
- King James Version (KJV)
- The first [was] like a lion, and had eagle’s wings: I beheld till the wings thereof were plucked, and it was lifted up from the earth, and made stand upon the feet as a man, and a man’s heart was given to it.
- World English Bible (WEB)
- “The first was like a lion, and had eagle’s wings. I watched until its wings were plucked, and it was lifted up from the earth and made to stand on two feet as a man. A man’s heart was given to it.
- American Standard Version (ASV)
- The first was like a lion, and had eagle’s wings: I beheld till the wings thereof were plucked, and it was lifted up from the earth, and made to stand upon two feet as a man; and a man’s heart was given to it.
- Bible in Basic English (BBE)
- The first was like a lion and had eagle's wings; while I was watching its wings were pulled off, and it was lifted up from the earth and placed on two feet like a man, and a man's heart was given to it.
- Darby Translation (DBY)
- The first was like a lion, and had eagle's wings: I beheld till its wings were plucked; and it was lifted up from the earth, and made to stand upon two feet as a man, and a man's heart was given to it.
- Webster's Bible (WBS)
- The first [was] like a lion, and had eagles' wings: I beheld till its wings were plucked, and it was lifted up from the earth, and made to stand upon the feet as a man, and a man's heart was given to it.
- Young's Literal Translation (YLT)
- The first [is] like a lion, and it hath an eagle's wings. I was seeing till that its wings have been plucked, and it hath been lifted up from the earth, and on feet as a man it hath been caused to stand, and a heart of man is given to it.
Read in context
- 2ದಾನಿಯೇಲನು ಮಾತನಾಡಿ--ಇಗೋ, ನಾನು ರಾತ್ರಿ ಕಂಡ ಕನಸಿನಲ್ಲಿ ಚತುರ್ದಿಕ್ಕಿನ ಗಾಳಿಗಳು ಮಹಾ ಸಾಗರದ ಮೇಲೆ ರಭಸವಾಗಿ ಬೀಸುತ್ತಿದ್ದವು.
- 3ಒಂದಕ್ಕೊಂದು ಬೇರೆ ಬೇರೆಯ ರೂಪದ ನಾಲ್ಕು ದೊಡ್ಡ ಮೃಗಗಳು ಸಮು ದ್ರದೊಳಗಿಂದ ಮೇಲೆ ಬಂದವು.
- 4ಮೊದಲನೆಯದು ಸಿಂಹದ ಹಾಗಿದ್ದು ಹದ್ದಿನ ರೆಕ್ಕೆಗಳುಳ್ಳದ್ದಾಗಿತ್ತು. ಅದರ ರೆಕ್ಕೆಗಳು ಕೀಳಲ್ಪಟ್ಟು ಅದು ಭೂಮಿಯಿಂದ ಎತ್ತಲ್ಪಟ್ಟು ಮನುಷ್ಯನಂತೆ ಕಾಲೂರಿ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವು ಕೊಡಲ್ಪಟ್ಟದ್ದನ್ನು ನಾನು ನೋಡಿದೆನು.
- 5ಇದಲ್ಲದೆ ಇಗೋ, ಇನ್ನೊಂದು ಎರಡ ನೆಯ ಮೃಗವು ಕರಡಿಯ ಹಾಗಿರುವಂಥದ್ದು. ಇದಕ್ಕೆ ಒಂದು ಪಕ್ಕದಲ್ಲಿ ಒಂದು ಹೆಗಲನ್ನು ಮೇಲಕ್ಕೆ ಎತ್ತಿ ಕೊಂಡಿತ್ತು. ಇದರ ಬಾಯಿಯ ಹಲ್ಲುಗಳ ಮಧ್ಯದಲ್ಲಿ ಮೂರು ಪಕ್ಕೆಲುಬುಗಳು ಇದ್ದವು. ಅದಕ್ಕೆ ಅವರು --ಎದ್ದೇಳು ಹೆಚ್ಚು ಮಾಂಸವನ್ನು ತಿನ್ನು ಎಂದು ಹೇಳಿ ದರು.
- 6ಇದಾದ ಮೇಲೆ ನಾನು ನೋಡಲಾಗಿ ಇಗೋ, ಚಿರತೆಯ ಹಾಗಿರುವ ಇನ್ನೊಂದು (ಮೃಗ); ಇದರ ಬೆನ್ನಿನ ಮೇಲೆ ಪಕ್ಷಿಯ ನಾಲ್ಕು ರೆಕ್ಕೆಗಳು ಇದ್ದವು; ಈ ಮೃಗಕ್ಕೆ ನಾಲ್ಕು ತಲೆಗಳು ಸಹ ಇದ್ದವು. ಇದಕ್ಕೆ ಅಧಿಕಾರವು ಕೊಡಲ್ಪಟ್ಟಿತು.
Cross references
- Isaiah 14:13–17 ಯೆಶಾಯ 14:13–17ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ. ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.
- Jeremiah 4:7 ಯೆರೆಮೀಯ 4:7ಸಿಂಹವು ತನ್ನ ಅಡವಿಯೊಳಗಿಂದ ಏರಿ ಬರುತ್ತದೆ, ಅನ್ಯ ಜನಾಂಗ ಗಳನ್ನು ನಾಶಮಾಡುವವನು ಹೊರಟಿದ್ದಾನೆ, ನಿನ್ನ ದೇಶವನ್ನು ಹಾಳು ಮಾಡುವದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ; ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವದು.
- Ezekiel 17:3 ಯೆಹೆಜ್ಕೇಲನು 17:3ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು.
- Habakkuk 1:6–8 ಹಬಕ್ಕೂಕ 1:6–8ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು. ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ. ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು.
- Daniel 5:18–23 ದಾನಿಯೇಲನು 5:18–23ಓ ಅರಸನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯವನ್ನೂ ಮಹತ್ತನ್ನೂ ಕೀರ್ತಿಯನ್ನೂ ಘನ ವನ್ನೂ ಕೊಟ್ಟನು. ಆತನು ಅವನಿಗೆ ಕೊಟ್ಟ ಮಹ ತ್ತಿನ ನಿಮಿತ್ತ ಸಕಲ ಪ್ರಜೆಗಳೂ ಜನಾಂಗಗಳೂ ಭಾಷೆಯವರೂ ಅವನ ಮುಂದೆ ಹೆದರಿ ನಡುಗಿ ದರು; ತನಗೆ ಬೇಕಾದವರನ್ನು ಬದುಕಿಸಿ ಬೇಡವಾದ ವರನ್ನು ಕೊಂದನು, ಇಷ್ಟವಿದ್ದವರನ್ನು ಎತ್ತಿ ಇಷ್ಟವಿಲ್ಲ ದವರನ್ನು ಬಿಟ್ಟನು. ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು; ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು. ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ.
- Matthew 24:28 ಮತ್ತಾಯನು 24:28ಯಾಕಂದರೆ ಹೆಣ ಇದ್ದಲ್ಲಿ ಹದ್ದುಗಳು ಕೂಡಿಕೊಳ್ಳುವವು.
- Habakkuk 2:5–10 ಹಬಕ್ಕೂಕ 2:5–10ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ. ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ? ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ. ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ. ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ! ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ.
- Daniel 4:36 ದಾನಿಯೇಲನು 4:36ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- 2 Samuel 1:23 2 ಸಮುವೇಲನು 1:23ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.
- Jeremiah 48:40 ಯೆರೆಮೀಯ 48:40ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವನು ಹದ್ದಿನ ಹಾಗೆ ಹಾರಿ ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವೆನು.
- Jeremiah 25:9–26 ಯೆರೆಮೀಯ 25:9–26ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ. ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ. ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು. ಎಪ್ಪತ್ತು ವರುಷ ತುಂಬಿದ ಮೇಲೆ ನಾನು ಬಾಬೆಲಿನ ಅರಸನನ್ನೂ ಆ ಜನಾಂಗವನ್ನೂ ಕಸ್ದೀಯರ ದೇಶವನ್ನೂ ಅವರ ಅಕ್ರಮಕ್ಕಾಗಿ ವಿಚಾರಿಸಿ ದಂಡಿಸುವೆನು. ಅದನ್ನು ನಿತ್ಯವಾಗಿ ಹಾಳುಮಾಡುವೆನು. ನಿಶ್ಚಯವಾಗಿ ಆ ದೇಶದ ಮೇಲೆ ನಾನು ಅದಕ್ಕೆ ವಿರೋಧವಾಗಿ ಹೇಳಿದ ನನ್ನ ಎಲ್ಲಾ ವಾಕ್ಯಗಳನ್ನೂ ಯೆರವಿಾಯನು ಜನಾಂಗ ಗಳಿಗೆ ವಿರೋಧವಾಗಿ ಪ್ರವಾದಿಸಿ ಈ ಪುಸ್ತಕದಲ್ಲಿ ಬರೆದಿರುವ ಎಲ್ಲವನ್ನೂ ಅವರ ಮೇಲೆ ಬರಮಾಡು ವೆನು. ಅನೇಕ ಜನಾಂಗಗಳೂ ದೊಡ್ಡ ಅರಸರೂ ಅವರಿಂದ ಸೇವೆ ಮಾಡಿಸಿಕೊಳ್ಳುವರು. ಅವರ ಕ್ರಿಯೆ ಗಳ ಪ್ರಕಾರವೂ ಅವರ ಕೈ ಕೆಲಸದ ಪ್ರಕಾರವೂ ನಾನು ಅವರಿಗೆ ಪ್ರತಿಫಲ ಕೊಡುವೆನು ಎಂದು ಕರ್ತನು ಅನ್ನುತ್ತಾನೆ. ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ. ಆಗ ಅವರು ಕುಡಿದು ನಾನು ಅವರ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತ ಕದಲಿ ಹುಚ್ಚರಾಗುವರು ಅಂದನು. ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು. ಯೆರೂಸ ಲೇಮಿಗೂ ಯೆಹೂದದ ಪಟ್ಟಣಗಳಿಗೂ ಅದರ ಅರಸುಗಳಿಗೂ ಪ್ರಭುಗಳಿಗೂ ಅವರನ್ನು ಇಂದಿನ ಪ್ರಕಾರ ಹಾಳುಮಾಡಿ ವಿಸ್ಮಯಕ್ಕೂ ಸಿಳ್ಳಿಡುವಿಕೆಗೂ ಶಾಪಕ್ಕೂ ಗುರಿಮಾಡುವ ಹಾಗೆ ಕುಡಿಸಿದೆನು. ಐಗುಪ್ತದ ಅರಸನಾದ ಫರೋಹನಿಗೂ ಅವನ ಸೇವಕರಿಗೂ ಅವನ ಪ್ರಭುಗಳಿಗೂ ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ ಎದೋಮಿಗೂ ಮೋವಾ ಬಿಗೂ ಅಮ್ಮೋನನ ಮಕ್ಕಳಿಗೂ ತೂರಿನ ಅರಸರೆ ಲ್ಲರಿಗೂ ಚೀದೋನಿನ ಅರಸರೆಲ್ಲರಿಗೂ ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ ದೆದಾನಿಗೂ ತೇಮಾಗೂ ಬೂಜಿಗೂ ಕಟ್ಟಕಡೆಯ ಮೂಲೆಯ ವರೆಗೂ ಅರಬಿಯದ ಅರಸರೆಲ್ಲರಿಗೂ ಅರಣ್ಯದಲ್ಲಿ ವಾಸಿಸುವ ಮಿಶ್ರವಾದ ಜನರ ಅರಸರೆಲ್ಲರಿಗೂ ಜಿಮ್ರಿಯ ಅರಸರೆಲ್ಲರಿಗೂ ಏಲಾಮಿನ ಅರಸರೆ ಲ್ಲರಿಗೂ ಮೇದ್ಯದ ಅರಸರೆಲ್ಲರಿಗೂ ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.
- Jeremiah 25:38 ಯೆರೆಮೀಯ 25:38ಆತನು ಸಿಂಹದಂತೆ ತನ್ನ ಮರೆಯನ್ನು ತೊರೆದು ಬಿಟ್ಟಿದ್ದಾನೆ; ಉಪದ್ರಪಡಿಸುವವನ ಉರಿಯ ನಿಮಿ ತ್ತವೂ ಆತನ ಕೋಪದ ಉರಿಯ ನಿಮಿತ್ತವೂ ಅವರ ದೇಶವು ಹಾಳಾಯಿತು.
Original words (Hebrew)
- first · H6933קַדְמַי qadmay
- lion · H744אַרְיֵה ʼaryêh
- eagle’s · H5403נְשַׁר nᵉshar
- wings · H1611גַּף gaph
- beheld · H1934הָוָא hâvâʼ
- till · H5705עַד ʻad
- wings · H1611גַּף gaph
- plucked · H4804מְרַט mᵉraṭ
- up · H5191נְטַל nᵉṭal
- from · H4481מִן min
- earth · H772אֲרַע ʼăraʻ
- stand · H6966קוּם qûwm
- upon · H5922עַל ʻal
- feet · H7271רְגַל rᵉgal
- man · H606אֱנָשׁ ʼĕnâsh
- man’s · H606אֱנָשׁ ʼĕnâsh
- heart · H3825לְבַב lᵉbab
- given · H3052יְהַב yᵉhab