Skip to content
ThuthiThuthiThuthi
Daniel · chapter 8 of 12 · 27 verses

Daniel 8 in Kannada

ದಾನಿಯೇಲನು 8

  1. ಮೊದಲು ನನಗೆ ಕಾಣಿಸಿದ ದರ್ಶನವಲ್ಲದೆ ಅರಸನಾದ ಬೇಲ್ಯಚ್ಚರನ ಆಳಿಕೆಯ ಮೂರನೆಯ ವರುಷದಲ್ಲಿಯೂ ಇನ್ನೊಂದು ದರ್ಶನವು ದಾನಿಯೇಲನಾದ ನನಗೆ ಕಾಣಿಸಿತು.

    In the third year of the reign of king Belshazzar a vision appeared unto me, [even unto] me Daniel, after that which appeared unto me at the first.

  2. ಈ ದರ್ಶನದಲ್ಲಿ ನಾನು ನೋಡಿದ್ದೇನಂದರೆ--ನಾನು ಏಲಾಮ್‌ ಸೀಮೆ ಯಲ್ಲಿರುವ ಶೂಷನ್‌ನ ಅರಮನೆಯಲ್ಲಿದ್ದೆನು. ಆ ದರ್ಶನದಲ್ಲಿ ಊಲಾ ನದಿಯ ದಡದ ಮೇಲೆ ನಿಂತಿ ರುವ ಹಾಗೆ ನನಗೆ ತೋರಿತು.

    And I saw in a vision; and it came to pass, when I saw, that I [was] at Shushan [in] the palace, which [is] in the province of Elam; and I saw in a vision, and I was by the river of Ulai.

  3. ಆಗ ನಾನು ಕಣ್ಣೆತ್ತಿ ನೋಡಿದಾಗ ಇಗೋ, ಆ ನದಿಯ ಮುಂದೆ ಎರಡು ಕೊಂಬುಗಳುಳ್ಳ ಒಂದು ಟಗರು ನಿಂತಿತ್ತು. ಅದರ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದಕ್ಕಿಂತ ಒಂದು ಉದ್ದವಾಗಿತ್ತು. ಆ ದೊಡ್ಡ ಕೊಂಬು, ಚಿಕ್ಕ ಕೊಂಬು ಮೊಳೆತ ಮೇಲೆ ಮೊಳೆತದ್ದು.

    Then I lifted up mine eyes, and saw, and, behold, there stood before the river a ram which had [two] horns: and the [two] horns [were] high; but one [was] higher than the other, and the higher came up last.

  4. ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹಾದಾಡುತ್ತಿರು ವದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವದಕ್ಕೂ ಸಾಧ್ಯವಾಗು ವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ ತನ್ನನ್ನು ಹೆಚ್ಚಿಸಿಕೊಂಡಿತು.

    I saw the ram pushing westward, and northward, and southward; so that no beasts might stand before him, neither [was there any] that could deliver out of his hand; but he did according to his will, and became great.

  5. ನಾನು ಆಲೋಚಿ ಸಲಾಗಿ ಇಗೋ, ಪಶ್ಚಿಮದಿಂದ ಒಂದು ಹೋತವು ನೆಲವನ್ನು ಸೋಕದಂತೆ ಭೂಮಂಡಲವನ್ನೆಲ್ಲಾ ದಾಟಿ ಕೊಂಡು ಬಂತು. ಆ ಹೋತದ ಕಣ್ಣುಗಳ ಮಧ್ಯೆ ಗಮನಿಸತಕ್ಕ ಒಂದು ಕೊಂಬು ಇತ್ತು.

    And as I was considering, behold, an he goat came from the west on the face of the whole earth, and touched not the ground: and the goat [had] a notable horn between his eyes.

  6. ನಾನು ನೋಡಿದ ನದಿಯ ಹತ್ತಿರವಿದ್ದ ಎರಡು ಕೊಂಬಿನ ಟಗರಿನ ಬಳಿಗೆ ಅದು ಬಂದು ಪರಾಕ್ರಮದಿಂದ ರೋಷಗೊಂಡು ಅದರ ಬಳಿಗೆ ಓಡಿತು.

    And he came to the ram that had [two] horns, which I had seen standing before the river, and ran unto him in the fury of his power.

  7. ಅದು ಟಗರಿನ ಹತ್ತಿರ ಬರುವದನ್ನು ನಾನು ನೋಡಿದೆನು. ಅದರ ಮೇಲಿನ ಕ್ರೋಧದಿಂದ ಅದನ್ನು ಹಾದು ಅದರ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಅದರ ಮುಂದೆ ನಿಲ್ಲುವದಕ್ಕೆ ಟಗರಿಗೆ ಏನೂ ಶಕ್ತಿಯಿ ರಲಿಲ್ಲ, ಆದರೆ ಅದು ಟಗರನ್ನು ನೆಲಕ್ಕೆ ಉರುಳಿಸಿ ತುಳಿಯಿತು. ಟಗರನ್ನು ಅದರ ಕೈಯಿಂದ ಬಿಡಿಸುವವನು ಯಾರೂ ಇರಲಿಲ್ಲ.

    And I saw him come close unto the ram, and he was moved with choler against him, and smote the ram, and brake his two horns: and there was no power in the ram to stand before him, but he cast him down to the ground, and stamped upon him: and there was none that could deliver the ram out of his hand.

  8. ಆದದರಿಂದ ಆ ಹೋತವು ಬಹಳವಾಗಿ ಹೆಚ್ಚಿಕೊಂಡಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದ ಮೇಲೆ ಅದರ ದೊಡ್ಡ ಕೊಂಬು ಮುರಿದು ಹೋಯಿತು. ಅದರ ಸ್ಥಾನದಲ್ಲಿ ನಾಲ್ಕು ಅದ್ಭುತವಾದ ಕೊಂಬುಗಳು ಮೊಳೆತು ಆಕಾಶದ ಚತುರ್ದಿಕ್ಕಿಗೆ ಚಾಚಿಕೊಂಡವು.

    Therefore the he goat waxed very great: and when he was strong, the great horn was broken; and for it came up four notable ones toward the four winds of heaven.

  9. ಅವುಗಳಲ್ಲಿ ಒಂದರೊಳಗಿಂದ ಚಿಕ್ಕ ಕೊಂಬು ಮೊಳೆತು, ಬಹಳ ದೊಡ್ಡದಾಗಿ ಬೆಳೆದು, ದಕ್ಷಿಣದ ಕಡೆಗೂ ಪೂರ್ವದ ಕಡೆಗೂ ರಮ್ಯ ದೇಶದ ಕಡೆಗೂ ಪ್ರಬಲವಾಯಿತು.

    And out of one of them came forth a little horn, which waxed exceeding great, toward the south, and toward the east, and toward the pleasant [land].

  10. ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.

    And it waxed great, [even] to the host of heaven; and it cast down [some] of the host and of the stars to the ground, and stamped upon them.

  11. ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು;

    Yea, he magnified [himself] even to the prince of the host, and by him the daily [sacrifice] was taken away, and the place of his sanctuary was cast down.

  12. ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.

    And an host was given [him] against the daily [sacrifice] by reason of transgression, and it cast down the truth to the ground; and it practised, and prospered.

  13. ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ

    Then I heard one saint speaking, and another saint said unto that certain [saint] which spake, How long [shall be] the vision [concerning] the daily [sacrifice], and the transgression of desolation, to give both the sanctuary and the host to be trodden under foot?

  14. ಅವನು ನನಗೆ--ಎರಡು ಸಾವಿರದ ಮುನ್ನೂರು ದಿನಗಳ ವರೆಗೂ ನಡೆಯುವವು; ಅನಂತರ ಪರಿಶುದ್ಧ ಸ್ಥಳವು ಶುದ್ಧೀಕರಿಸಲ್ಪಡುವದು ಎಂದು ಹೇಳಿದನು.

    And he said unto me, Unto two thousand and three hundred days; then shall the sanctuary be cleansed.

  15. ನಾನು, ಹೌದು, ದಾನಿಯೇಲನೆಂಬ ನಾನು ಆ ದರ್ಶನವನ್ನು ನೋಡಿ ಅದರ ಅರ್ಥವನ್ನು ಶೋಧಿಸಿ ದಾಗ, ಇಗೋ, ಮನುಷ್ಯನ ರೂಪದಂತೆ ಇದ್ದದ್ದು ನನ್ನ ಮುಂದೆ ನಿಂತಿತು;

    And it came to pass, when I, [even] I Daniel, had seen the vision, and sought for the meaning, then, behold, there stood before me as the appearance of a man.

  16. ನಾನು ಊಲಾ ನದಿಯ ಮಧ್ಯದಲ್ಲಿದ್ದಾಗ--ಗಬ್ರಿಯೇಲನೇ, ಈ ಮನುಷ್ಯನು ದರ್ಶನವನ್ನು ಅರ್ಥಮಾಡಿಕೊಳ್ಳುವಂತೆ ಮಾಡು ಎಂದು ಹೇಳುವ ಮನುಷ್ಯನ ಧ್ವನಿಯನ್ನು ಕೇಳಿದೆನು.

    And I heard a man’s voice between [the banks of] Ulai, which called, and said, Gabriel, make this [man] to understand the vision.

  17. ಅದರಂತೆ ಅವನು ನನ್ನ ಬಳಿಗೆ ಬಂದನು; ಅವನು ಬಂದಾಗ ನಾನು ಭಯಪಟ್ಟು ಮುಖ ಕೆಳಗಾಗಿಬಿದ್ದೆನು; ಆದರೆ ಅವನು ನನಗೆ--ಓ ಮನುಷ್ಯ ಪುತ್ರನೇ, ಇದು ಮಂದಟ್ಟಾಗಿರಲಿ; ಅಂತ್ಯಕಾಲದಲ್ಲಿ ಈ ದರ್ಶನವು ನೆರವೇರುವದು ಅಂದನು.

    So he came near where I stood: and when he came, I was afraid, and fell upon my face: but he said unto me, Understand, O son of man: for at the time of the end [shall be] the vision.

  18. ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢ ನಿದ್ರೆಯಲ್ಲಿ ಬಿದ್ದಿದ್ದೆನು; ಆದರೆ ಅವನು ನನ್ನನ್ನು ಮುಟ್ಟಿ ನಾನು ನಿಂತುಕೊಳ್ಳುವಂತೆ ಮಾಡಿದನು.

    Now as he was speaking with me, I was in a deep sleep on my face toward the ground: but he touched me, and set me upright.

  19. ಅವನು ಹೇಳಿದ್ದೇನಂದರೆ--ಇಗೋ, ಕ್ರೋಧದ ಕಟ್ಟಕಡೆಯಲ್ಲಿ ಆಗುವದನ್ನು ನಿನಗೆ ತಿಳಿಸು ತ್ತೇನೆ. ನಿಯಮಿತ ಕಾಲದಲ್ಲಿ ಅದು ಅಂತ್ಯವಾಗುವದು.

    And he said, Behold, I will make thee know what shall be in the last end of the indignation: for at the time appointed the end [shall be].

  20. ನೀನು ಕಂಡ ಆ ಎರಡು ಕೊಂಬುಗಳುಳ್ಳ ಟಗರು ಏನಂದರೆ ಮೇದ್ಯಯದ ಮತ್ತು ಪಾರಸಿಯರ ಅರಸರು ಗಳು.

    The ram which thou sawest having [two] horns [are] the kings of Media and Persia.

  21. ಆ ಒರಟು ಹೋತವು ಗ್ರೀಕ್‌ನ ಅರಸನು ಮತ್ತು ಕಣ್ಣುಗಳ ಮಧ್ಯೆ ಇದ್ದ ಆ ದೊಡ್ಡ ಕೊಂಬು ಮೊದಲನೆಯ ಅರಸನು.

    And the rough goat [is] the king of Grecia: and the great horn that [is] between his eyes [is] the first king.

  22. ಈಗ ಅದು ಮುರಿಯ ಲ್ಪಟ್ಟು, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ--ಆ ಜನಾಂಗದಿಂದ ನಾಲ್ಕು ರಾಜ್ಯ ಗಳು ಉದಯಿಸುವವು; ಆದರೆ ಅವನ (ಮೊದಲ ನೆಯ ಅರಸನ) ಅಧಿಕಾರದಲ್ಲಿ ಇರುವದಿಲ್ಲ;

    Now that being broken, whereas four stood up for it, four kingdoms shall stand up out of the nation, but not in his power.

  23. ಅವರ ರಾಜ್ಯದ ಕಡೆಯ ಕಾಲದಲ್ಲಿ, ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.

    And in the latter time of their kingdom, when the transgressors are come to the full, a king of fierce countenance, and understanding dark sentences, shall stand up.

  24. ಅವನ ಶಕ್ತಿಯು ಬಲವಾಗಿರುವದು, ಆದರೆ ಅದು ಸ್ವಂತ ಶಕ್ತಿಯಿಂದಲ್ಲ; ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ವೃದ್ಧಿಗೊಂಡು ಅಭ್ಯಾಸಮಾಡಿ, ಬಲವಾದ ಮತ್ತು ಪರಿಶುದ್ಧ ಜನರನ್ನು ನಾಶಮಾಡುವನು.

    And his power shall be mighty, but not by his own power: and he shall destroy wonderfully, and shall prosper, and practise, and shall destroy the mighty and the holy people.

  25. ಅವನು ತನ್ನ ಯುಕ್ತಿಯಿಂದಲೇ ತಂತ್ರವನ್ನು ತನ್ನ ಕೈಯಲ್ಲಿಯೇ ಸಿದ್ಧಮಾಡಿಕೊಳ್ಳುವನು; ಅವನು ಹೃದಯ ದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಶಾಂತಿಯಿಂದಲೇ ಅನೇಕರನ್ನು ನಾಶಮಾಡುವನು; ಅಲ್ಲದೆ ಅವನು ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಹೇಳುವನು; ಆದರೆ ಅವನು ಯಾರ ಕೈಸೋಕದೆ ಮುರಿಯಲ್ಪಡು ವನು.

    And through his policy also he shall cause craft to prosper in his hand; and he shall magnify [himself] in his heart, and by peace shall destroy many: he shall also stand up against the Prince of princes; but he shall be broken without hand.

  26. ದರ್ಶನದಲ್ಲಿ ಹೇಳಿದ ಆ ಉದಯಾಸ್ತಮಾನ ಗಳ ವಿಷಯವು ಸತ್ಯವೇ; ಆದಕಾರಣ ಆ ದರ್ಶನವನ್ನು ನೀನು ಮುಚ್ಚಿಡು, ಅದು ಬಹಳ ದಿವಸಗಳ ವರೆಗೆ ಇರುವದು.ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.

    And the vision of the evening and the morning which was told [is] true: wherefore shut thou up the vision; for it [shall be] for many days.

  27. ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.

    And I Daniel fainted, and was sick [certain] days; afterward I rose up, and did the king’s business; and I was astonished at the vision, but none understood [it].

All chapters of Daniel · Kannada Bible · Daniel 8 in Tamil

Kannada Bible: Kannada Old Version, public domain.

King James Version: public domain.