Daniel · chapter 8 · verse 12
Daniel 8:12 in Kannada
ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.
Pratidina yajnyada sangada sainyavoo saha apa raadhada nimittavaagi adakke kodalpattitu. Adu satyavannu nelakke kedavi tanna ishtaarthavannu pooraisi kondu anukoola padedu vruddhige banditu.
Daniel 8:12 in English
- King James Version (KJV)
- And an host was given [him] against the daily [sacrifice] by reason of transgression, and it cast down the truth to the ground; and it practised, and prospered.
- World English Bible (WEB)
- The army was given over to it together with the continual burnt offering through disobedience. It cast down truth to the ground, and it did its pleasure and prospered.
- American Standard Version (ASV)
- And the host was given over [to it] together with the continual [burnt-offering] through transgression; and it cast down truth to the ground, and it did [its pleasure] and prospered.
- Bible in Basic English (BBE)
- ... against the regular burned offering; and ... crushed down to the earth, and it did its pleasure and things went well for it.
- Darby Translation (DBY)
- And a time of trial was appointed unto the continual [sacrifice] by reason of transgression.) And it cast down the truth to the ground; and it practised and prospered.
- Webster's Bible (WBS)
- And a host was given [him] against the daily [sacrifice] by reason of transgression, and it cast down the truth to the ground; and it practiced, and prospered.
- Young's Literal Translation (YLT)
- And the host is given up, with the continual [sacrifice], through transgression, and it throweth down truth to the earth, and it hath worked, and prospered.
Read in context
- 10ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.
- 11ಹೌದು, ಸೈನ್ಯದ ಅಧಿಪತಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡು ನಿತ್ಯ ಯಜ್ಞವನ್ನು ಆತನಿಗೆ ಸಲ್ಲದಂತೆ ಮಾಡಿ ಆತನ ಪವಿತ್ರ ಸ್ಥಾನವನ್ನು ಕೆಡವಿಹಾಕಿತು;
- 12ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.
- 13ಆ ಮೇಲೆ ಒಬ್ಬ ಪರಿಶುದ್ಧನು ಮಾತನಾಡುವದನ್ನು ಕೇಳಿದೆನು; ಮಾತನಾಡಿದಾತನಿಗೆ ಮತ್ತೊಬ್ಬ ಪರಿ ಶುದ್ಧನು ಹೇಳಿದ್ದೇನಂದರೆ--ನಿತ್ಯ ಯಜ್ಞವನ್ನು ನಿಲ್ಲಿಸು ವದೂ ಹಾಳು ಮಾಡುವ ಅಪರಾಧವನ್ನು ತಡೆಯು ವದೂ ಪರಿಶುದ್ಧ ಸ್ಥಳವನ್ನೂ ಸೈನ್ಯವನ್ನೂ ಕಾಲಡಿಯಲ್ಲಿ ತುಳಿಯುವದೂ ಆಗುವಂತೆ ಕನಸು ಎಷ್ಟು ಕಾಲ ನಿಲ್ಲುವದು ಅಂದಾಗ
- 14ಅವನು ನನಗೆ--ಎರಡು ಸಾವಿರದ ಮುನ್ನೂರು ದಿನಗಳ ವರೆಗೂ ನಡೆಯುವವು; ಅನಂತರ ಪರಿಶುದ್ಧ ಸ್ಥಳವು ಶುದ್ಧೀಕರಿಸಲ್ಪಡುವದು ಎಂದು ಹೇಳಿದನು.
Cross references
- Isaiah 59:14 ಯೆಶಾಯ 59:14ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ.
- Jeremiah 12:1 ಯೆರೆಮೀಯ 12:1ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು.
- Daniel 11:31–36 ದಾನಿಯೇಲನು 11:31–36ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು. ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆ ಯುವವರನ್ನು ವ್ಯರ್ಥವಾದ ಮಾತುಗಳಿಂದ ಕೆಡಿ ಸುವನು; ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಕೃತಾರ್ಥರಾಗುವರು. ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದಾಗ್ಯೂ ಕತ್ತಿಯಿಂದಲೂ ಬೆಂಕಿಯಿಂದಲೂ ಸೆರೆ ಯಿಂದಲೂ ಕೊಳ್ಳೆಯಿಂದಲೂ ಅನೇಕ ದಿನಗಳು ಸಿಕ್ಕಿಬೀಳುವರು. ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವದು; ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಅಂಟಿಕೊಳ್ಳು ವರು. ಇದಲ್ಲದೆ ಅಂತ್ಯಕಾಲದ ವರೆಗೆ ಅವರನ್ನು ಶೋಧಿಸುವದಕ್ಕೂ ಶುದ್ಧಮಾಡುವದಕ್ಕೂ ಶುಭ್ರ ಪಡಿಸುವದಕ್ಕೂ ವಿವೇಕಿಗಳಲ್ಲಿ ಕೆಲವರು ಬೀಳುವರು; ಇದು (ಅಂತ್ಯವು) ನಿಯಮಿತ ಕಾಲಕ್ಕೆ ಇರುವದು; ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು; ತನ್ನನ್ನು ತಾನೇ ಹೆಚ್ಚಿಸಿಕೊಂಡು ತನ್ನನ್ನು ಎಲ್ಲಾ ದೇವರುಗಳಿಗೂ ದೊಡ್ಡವನನ್ನಾಗಿ ಮಾಡಿ ಕೊಂಡು ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ ರೋಷವು ತೀರುವ ವರೆಗೂ ವೃದ್ಧಿಯಾಗಿರುವನು; ಯಾಕಂದರೆ ನಿಶ್ಚಯಿ ಸಲ್ಪಟ್ಟದ್ದು ಮಾಡಲ್ಪಡಲೇ ಬೇಕಾಗುವದು.
- Revelation 13:11–17 ಪ್ರಕಟನೆ 13:11–17ಮತ್ತೊಂದು ಮೃಗವು ಭೂಮಿಯೊಳಗಿಂದ ಬರು ವದನ್ನು ನಾನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು; ಇದು ಘಟಸರ್ಪದಂತೆ ಮಾತನಾಡಿತು. ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಮುಂದೆಯೇ ನಡಿಸುತ್ತದೆ. ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸು ವಂತೆ ಇದು ಮಾಡುವಂಥದ್ದಾಗಿದೆ. ಇದು ಮಹ ತ್ತಾದ ಸೂಚಕಕಾರ್ಯಗಳನ್ನು ನಡಿಸುವಂಥದ್ದಾಗಿ ಜನರ ಮುಂದೆ ಬೆಂಕಿಯು ಆಕಾಶದಿಂದ ಭೂಮಿಗೆ ಇಳಿದು ಬರುವಂತೆ ಮಾಡುತ್ತದೆ. ಮೃಗದ ಮುಂದೆ ಇಂಥಾ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರ ವನ್ನು ಹೊಂದಿ ಭೂಮಿಯ ಮೇಲೆ ವಾಸಿಸುವ ಜನರನ್ನು ಮೋಸಗೊಳಿಸುವದಲ್ಲದೆ ಕತ್ತಿಯಿಂದ ಗಾಯಹೊಂದಿ ಬದುಕಿದ ಮೃಗಕ್ಕಾಗಿ ವಿಗ್ರಹವನ್ನು ಮಾಡಿಕೊಳ್ಳ ಬೇಕೆಂದು ಅವರಿಗೆ ಹೇಳುತ್ತದೆ. ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು. ಅದು ಚಿಕ್ಕವರು ದೊಡ್ಡ ವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಗಳ ಮೇಲಾಗಲಿ ಗುರುತು ಹೊಂದಬೇಕೆಂತಲೂ ಆ ಗುರುತಾಗಲಿ ಮೃಗದ ಹೆಸರಾಗಲಿ ಅದರ ಹೆಸರಿನ ಅಂಕೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುತ್ತದೆ.ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.
- 2 Thessalonians 2:10–12 2 ಥೆಸಲೊನೀಕದವರಿಗೆ 2:10–12ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ. ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- Daniel 11:28 ದಾನಿಯೇಲನು 11:28ಆಗ ಅವನು ಮಹಾ ಐಶ್ವರ್ಯದೊಂದಿಗೆ ಸ್ವದೇಶಕ್ಕೆ ಹಿಂತಿರುಗವನು; ಅವನ ಹೃದಯವು ಪರಿಶುದ್ಧ ಒಡಂಬಡಿಕೆಗೆ ವಿರೋಧವಾಗಿರುವದು; ಅವನು ಹೀಗೆ ಕಾರ್ಯ ಸಾಧಿಸಿ ಸ್ವಂತ ದೇಶಕ್ಕೆ ಹಿಂತಿರುಗುವನು.
- Revelation 13:7 ಪ್ರಕಟನೆ 13:7ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು.
- Psalm 119:142 ಕೀರ್ತನೆಗಳು 119:142ನಿನ್ನ ನೀತಿಯು ನಿತ್ಯವಾದ ನೀತಿಯೇ; ನಿನ್ನ ನ್ಯಾಯಪ್ರಮಾಣವು ಸತ್ಯವೇ.
- Daniel 8:4 ದಾನಿಯೇಲನು 8:4ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಹಾದಾಡುತ್ತಿರು ವದನ್ನು ನಾನು ನೋಡಿದೆನು. ಮೃಗಗಳಲ್ಲಿ ಯಾವದೂ ಅದರೆದುರಿಗೆ ನಿಲ್ಲಲಾರದೇ ಹೋಯಿತು. ಅದರ ಕೈಯಿಂದ ತಪ್ಪಿಸಿಕೊಳ್ಳಲು ಯಾವದಕ್ಕೂ ಸಾಧ್ಯವಾಗು ವಂತಿರಲಿಲ್ಲ. ಆದರೆ ಅದು ತನ್ನ ಮನಸ್ಸಿಗೆ ಬಂದಂತೆ ಮಾಡಿ ತನ್ನನ್ನು ಹೆಚ್ಚಿಸಿಕೊಂಡಿತು.
- Psalm 119:43 ಕೀರ್ತನೆಗಳು 119:43ಸತ್ಯದ ವಾಕ್ಯವನ್ನು ನನ್ನ ಬಾಯಿಂದ ಪೂರ್ಣವಾಗಿ ತೆಗೆದುಹಾಕಬೇಡ; ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿದ್ದೇನೆ,
- 1 Samuel 23:9 1 ಸಮುವೇಲನು 23:9ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿ ದ್ದರಿಂದ ಯಾಜಕನಾದ ಎಬ್ಯಾತಾರನಿಗೆ--ಎಫೋದನ್ನು ಇಲ್ಲಿಗೆ ತಕ್ಕೊಂಡು ಬಾ ಅಂದನು.
- Job 12:6 ಯೋಬನು 12:6ಕಳ್ಳರ ಗುಡಾರಗಳು ವೃದ್ಧಿಯಾ ಗುತ್ತವೆ; ದೇವರಿಗೆ ಕೋಪ ಎಬ್ಬಿಸುವವರಿಗೆ ಅಭಯ ಉಂಟು. ದೇವರು ಅವರ ಕೈಯಲ್ಲಿ ಸಮೃದ್ಧಿಯನ್ನು ಬರ ಮಾಡುತ್ತಾನೆ.