Daniel · chapter 8 · verse 24
Daniel 8:24 in Kannada
ಅವನ ಶಕ್ತಿಯು ಬಲವಾಗಿರುವದು, ಆದರೆ ಅದು ಸ್ವಂತ ಶಕ್ತಿಯಿಂದಲ್ಲ; ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ವೃದ್ಧಿಗೊಂಡು ಅಭ್ಯಾಸಮಾಡಿ, ಬಲವಾದ ಮತ್ತು ಪರಿಶುದ್ಧ ಜನರನ್ನು ನಾಶಮಾಡುವನು.
Avana shaktiyu balavaagiruvadu, aadare adu svanta shaktiyindalla; avanu aashcharyada reetiyalli naashamaadi vruddhigondu abhyaasamaadi, balavaada mattu parishuddha janarannu naashamaaduvanu.
Daniel 8:24 in English
- King James Version (KJV)
- And his power shall be mighty, but not by his own power: and he shall destroy wonderfully, and shall prosper, and practise, and shall destroy the mighty and the holy people.
- World English Bible (WEB)
- His power will be mighty, but not by his own power. He will destroy awesomely, and will prosper in what he does. He will destroy the mighty ones and the holy people.
- American Standard Version (ASV)
- And his power shall be mighty, but not by his own power; and he shall destroy wonderfully, and shall prosper and do [his pleasure]; and he shall destroy the mighty ones and the holy people.
- Bible in Basic English (BBE)
- And his power will be great, and he will be purposing strange things. And all will go well for him and he will do his pleasure; and he will send destruction on the strong ones.
- Darby Translation (DBY)
- And his power shall be mighty, but not by his own power; and he shall destroy marvellously, and shall prosper, and shall practise, and shall destroy the mighty ones, and the people of the saints.
- Webster's Bible (WBS)
- And his power shall be mighty, but not by his own power: and he shall destroy wonderfully, and shall prosper, and practice, and shall destroy the mighty and the holy people.
- Young's Literal Translation (YLT)
- and his power hath been mighty, and not by his own power; and wonderful things he destroyeth, and he hath prospered, and wrought, and destroyed mighty ones, and the people of the Holy Ones.
Read in context
- 22ಈಗ ಅದು ಮುರಿಯ ಲ್ಪಟ್ಟು, ಅದಕ್ಕೆ ಬದಲಾಗಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ--ಆ ಜನಾಂಗದಿಂದ ನಾಲ್ಕು ರಾಜ್ಯ ಗಳು ಉದಯಿಸುವವು; ಆದರೆ ಅವನ (ಮೊದಲ ನೆಯ ಅರಸನ) ಅಧಿಕಾರದಲ್ಲಿ ಇರುವದಿಲ್ಲ;
- 23ಅವರ ರಾಜ್ಯದ ಕಡೆಯ ಕಾಲದಲ್ಲಿ, ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.
- 24ಅವನ ಶಕ್ತಿಯು ಬಲವಾಗಿರುವದು, ಆದರೆ ಅದು ಸ್ವಂತ ಶಕ್ತಿಯಿಂದಲ್ಲ; ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ವೃದ್ಧಿಗೊಂಡು ಅಭ್ಯಾಸಮಾಡಿ, ಬಲವಾದ ಮತ್ತು ಪರಿಶುದ್ಧ ಜನರನ್ನು ನಾಶಮಾಡುವನು.
- 25ಅವನು ತನ್ನ ಯುಕ್ತಿಯಿಂದಲೇ ತಂತ್ರವನ್ನು ತನ್ನ ಕೈಯಲ್ಲಿಯೇ ಸಿದ್ಧಮಾಡಿಕೊಳ್ಳುವನು; ಅವನು ಹೃದಯ ದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಶಾಂತಿಯಿಂದಲೇ ಅನೇಕರನ್ನು ನಾಶಮಾಡುವನು; ಅಲ್ಲದೆ ಅವನು ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಹೇಳುವನು; ಆದರೆ ಅವನು ಯಾರ ಕೈಸೋಕದೆ ಮುರಿಯಲ್ಪಡು ವನು.
- 26ದರ್ಶನದಲ್ಲಿ ಹೇಳಿದ ಆ ಉದಯಾಸ್ತಮಾನ ಗಳ ವಿಷಯವು ಸತ್ಯವೇ; ಆದಕಾರಣ ಆ ದರ್ಶನವನ್ನು ನೀನು ಮುಚ್ಚಿಡು, ಅದು ಬಹಳ ದಿವಸಗಳ ವರೆಗೆ ಇರುವದು.ದಾನಿಯೇಲನಾದ ನಾನು ಮೂರ್ಛೆ ಹೋಗಿ ಕೆಲವು ದಿನಗಳ ವರೆಗೂ ಅಸ್ವಸ್ಥನಾದೆನು; ಅನಂತರ ನಾನು ಎದ್ದು ಅರಸನ ಕೆಲಸ ಕಾರ್ಯಗಳನ್ನು ಮಾಡಿದೆನು; ನಾನು ಆ ದರ್ಶನದ ವಿಷಯ ಆಶ್ಚರ್ಯ ಪಟ್ಟೆನು, ಆದರೆ ಅದನ್ನು ಅರ್ಥಮಾಡಿಕೊಂಡವರು ಯಾರೂ ಇಲ್ಲ.
Cross references
- Daniel 8:12 ದಾನಿಯೇಲನು 8:12ಪ್ರತಿದಿನ ಯಜ್ಞದ ಸಂಗಡ ಸೈನ್ಯವೂ ಸಹ ಅಪ ರಾಧದ ನಿಮಿತ್ತವಾಗಿ ಅದಕ್ಕೆ ಕೊಡಲ್ಪಟ್ಟಿತು. ಅದು ಸತ್ಯವನ್ನು ನೆಲಕ್ಕೆ ಕೆಡವಿ ತನ್ನ ಇಷ್ಟಾರ್ಥವನ್ನು ಪೂರೈಸಿ ಕೊಂಡು ಅನುಕೂಲ ಪಡೆದು ವೃದ್ಧಿಗೆ ಬಂದಿತು.
- Revelation 17:17 ಪ್ರಕಟನೆ 17:17ಯಾಕಂದರೆ ಅವರು ದೇವರ ಚಿತ್ತವನ್ನು ನೆರವೇರಿಸುವದಕ್ಕೆ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ರಾಜ್ಯವನ್ನು ಮೃಗಕ್ಕೆ ಕೊಡುವಂತೆ ದೇವರು ತನ್ನ ವಾಕ್ಯಗಳು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರೇಪಿಸಿದನು.ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುತ್ತಿರುವ ಮಹಾನಗರಿಯೇ ಎಂದು ಹೇಳಿದನು.
- Revelation 13:3–10 ಪ್ರಕಟನೆ 13:3–10ಅದರ ತಲೆಗಳಲ್ಲಿ ಒಂದು ಗಾಯ ಹೊಂದಿ ಸಾಯುವಹಾಗಿರುವದನ್ನು ನಾನು ಕಂಡೆನು. ಮರಣಕರವಾದ ಆ ಗಾಯವು ವಾಸಿಯಾಯಿತು; ಆಗ ಭೂಲೋಕದವರೆಲ್ಲರು ಆ ಮೃಗದ ವಿಷಯವಾಗಿ ಆಶ್ಚರ್ಯಪಟ್ಟರು. ಘಟ ಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವ ನಾದ್ದರಿಂದ ಅವರು ಆ ಘಟಸರ್ಪನನ್ನು ಆರಾಧನೆ ಮಾಡುವವರಾದರು. ಇದಲ್ಲದೆ ಆ ಮೃಗವನ್ನು ಆರಾ ಧಿಸಿ--ಈ ಮೃಗಕ್ಕೆ ಸಮಾನರು ಯಾರು? ಇದರ ಮೇಲೆ ಯುದ್ಧ ಮಾಡುವದಕ್ಕೆ ಯಾರು ಶಕ್ತರು ಅಂದರು. ಬಡಾಯಿ ಮಾತುಗಳನ್ನೂ ದೂಷಣೆಯ ಮಾತು ಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು. ನಾಲ್ವತ್ತೆರಡು ತಿಂಗಳುಗಳವರೆಗೆ ಮುಂದುವರಿಯುವ ಹಾಗೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಆಗ ಅದು ದೇವರ ಹೆಸರನ್ನೂ ಆತನ ಗುಡಾರವನ್ನೂ ಪರಲೋಕದಲ್ಲಿ ವಾಸವಾಗಿರುವವರನ್ನೂ ದೂಷಿಸಿ ದ್ದಲ್ಲದೆ ದೇವರಿಗೆ ವಿರೋಧವಾದ ದೂಷಣೆಗೆ ತನ್ನ ಬಾಯಿಯನ್ನು ತೆರೆಯಿತು. ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು. ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು. ಕಿವಿಯುಳ್ಳವನು ಕೇಳಲಿ. ಸೆರೆಗೆ ನಡಿಸುವವನು ಸೆರೆಗೆ ಹೋಗುವನು; ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗಬೇಕು. ಇದರಲ್ಲಿ ಪರಿ ಶುದ್ಧರ ತಾಳ್ಮೆಯೂ ನಂಬಿಕೆಯೂ ಇರುತ್ತದೆ.
- Daniel 7:25 ದಾನಿಯೇಲನು 7:25ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು; ಕಾಲವು ಕಾಲನಿಯಮವು ವಿಭಾಗಿಸುವ ತನಕ ಅವರು ಅವನ ಕೈಯಲ್ಲಿ ಒಪ್ಪಿಸ ಲ್ಪಡುವರು.
- Daniel 12:7 ದಾನಿಯೇಲನು 12:7ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತವಾಗಿರುವಾತನ ಮೇಲೆ ಆಣೆ ಇಟ್ಟು--ಅದು ಕಾಲ, ಕಾಲಗಳು, ಅರ್ಧಕಾಲ ಇರುವದೆಂದೂ ಆತನು ಪರಿಶುದ್ಧ ಜನರ ಬಲವನ್ನು ಚದರಿಸಿದ ಮೇಲೆ ಇವೆಲ್ಲವುಗಳು ಈಡೇರುವವೆಂದೂ ಅಂದದ್ದನ್ನು ನಾನು ಕೇಳಿದೆನು.
- Daniel 11:31–36 ದಾನಿಯೇಲನು 11:31–36ಅವನು ಕೂಡಿಸುವ ಸೈನ್ಯವು ಆಶ್ರಯ ದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸಿ, ನಿತ್ಯ ಯಜ್ಞವನ್ನು ನೀಗಿಸಿ, ಹಾಳು ಮಾಡುವ ಅಸಹ್ಯವಾದವುಗಳನ್ನು ಪ್ರತಿಷ್ಠಿಸುವದು. ಒಡಂಬಡಿಕೆಗೆ ವಿರೋಧವಾಗಿ ಕೆಟ್ಟವರಾಗಿ ನಡೆ ಯುವವರನ್ನು ವ್ಯರ್ಥವಾದ ಮಾತುಗಳಿಂದ ಕೆಡಿ ಸುವನು; ಆದರೆ ತಮ್ಮ ದೇವರನ್ನು ಅರಿಯುವ ಜನರು ದೃಢಚಿತ್ತರಾಗಿ ಕೃತಾರ್ಥರಾಗುವರು. ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದಾಗ್ಯೂ ಕತ್ತಿಯಿಂದಲೂ ಬೆಂಕಿಯಿಂದಲೂ ಸೆರೆ ಯಿಂದಲೂ ಕೊಳ್ಳೆಯಿಂದಲೂ ಅನೇಕ ದಿನಗಳು ಸಿಕ್ಕಿಬೀಳುವರು. ಅವರು ಬೀಳುವಾಗ ಅವರಿಗೆ ಸ್ವಲ್ಪ ಸಹಾಯ ದೊರೆಯುವದು; ಆದರೆ ಅನೇಕರು ವಂಚನೆಯ ನುಡಿಗಳಿಂದ ಅವರನ್ನು ಅಂಟಿಕೊಳ್ಳು ವರು. ಇದಲ್ಲದೆ ಅಂತ್ಯಕಾಲದ ವರೆಗೆ ಅವರನ್ನು ಶೋಧಿಸುವದಕ್ಕೂ ಶುದ್ಧಮಾಡುವದಕ್ಕೂ ಶುಭ್ರ ಪಡಿಸುವದಕ್ಕೂ ವಿವೇಕಿಗಳಲ್ಲಿ ಕೆಲವರು ಬೀಳುವರು; ಇದು (ಅಂತ್ಯವು) ನಿಯಮಿತ ಕಾಲಕ್ಕೆ ಇರುವದು; ಅರಸನು ತನ್ನ ಇಷ್ಟದ ಪ್ರಕಾರ ಮಾಡುವನು; ತನ್ನನ್ನು ತಾನೇ ಹೆಚ್ಚಿಸಿಕೊಂಡು ತನ್ನನ್ನು ಎಲ್ಲಾ ದೇವರುಗಳಿಗೂ ದೊಡ್ಡವನನ್ನಾಗಿ ಮಾಡಿ ಕೊಂಡು ದೇವರುಗಳ ದೇವರಿಗೆ ವಿರೋಧವಾಗಿ ಆಶ್ಚರ್ಯವಾದ ಸಂಗತಿಗಳನ್ನು ಮಾತನಾಡಿ ರೋಷವು ತೀರುವ ವರೆಗೂ ವೃದ್ಧಿಯಾಗಿರುವನು; ಯಾಕಂದರೆ ನಿಶ್ಚಯಿ ಸಲ್ಪಟ್ಟದ್ದು ಮಾಡಲ್ಪಡಲೇ ಬೇಕಾಗುವದು.
- Daniel 8:10 ದಾನಿಯೇಲನು 8:10ಅದು ಆಕಾಶ ಸೈನ್ಯದ ಎತ್ತರಕ್ಕೆ ಬೆಳೆದು ಆ ಸೈನ್ಯದಲ್ಲಿಯೂ ನಕ್ಷತ್ರಗಳಲ್ಲಿಯೂ ಕೆಲವನ್ನು ನೆಲಕ್ಕೆ ತಳ್ಳಿ ಅವುಗಳನ್ನು ತುಳಿದುಹಾಕಿತು.
- Revelation 19:2 ಪ್ರಕಟನೆ 19:2ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು.
- Revelation 17:12–13 ಪ್ರಕಟನೆ 17:12–13ನೀನು ಕಂಡ ಆ ಹತ್ತು ಕೊಂಬುಗಳು ರಾಜ್ಯವನ್ನು ಇನ್ನೂ ಹೊಂದದಿರುವ ಹತ್ತು ಮಂದಿ ರಾಜರು. ಅವರು ಮೃಗದೊಂದಿಗೆ ರಾಜರಂತೆ ಒಂದು ತಾಸಿನವರೆಗೆ ಅಧಿಕಾರವನ್ನು ಹೊಂದುತ್ತಾರೆ. ಅವರು ಒಂದೇ ಮನಸ್ಸುಳ್ಳವರಾಗಿದ್ದು ತಮ್ಮ ಅಧಿಕಾರವನ್ನೂ ಶಕ್ತಿಯನ್ನೂ ಮೃಗಕ್ಕೆ ಕೊಡುತ್ತಾರೆ.
- Revelation 17:6 ಪ್ರಕಟನೆ 17:6ಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕ
- Revelation 16:6 ಪ್ರಕಟನೆ 16:6ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು.