Daniel · chapter 9 · verse 3
Daniel 9:3 in Kannada
ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದು ಕೊಂಡು, ದೇವರಾದ ಕರ್ತನನ್ನು ಹುಡುಕುವದಕ್ಕಾಗಿ ಪ್ರಾರ್ಥನೆಗಳಿಂದಲೂ ವಿಜ್ಞಾಪನೆ ಗಳಿಂದಲೂ ಆತನ ಕಡೆಗೆ ನನ್ನ ಮುಖವನ್ನು ತಿರುಗಿ ಸಿದೆನು.
Upavaasadinda gonitattannu suttikondu, boodiyannu balidu kondu, devaraada kartanannu hudukuvadakkaagi praarthanegalindaloo vijnyaapane galindaloo aatana kadege nanna mukhavannu tirugi sidenu.
Daniel 9:3 in English
- King James Version (KJV)
- And I set my face unto the Lord God, to seek by prayer and supplications, with fasting, and sackcloth, and ashes:
- World English Bible (WEB)
- I set my face to the Lord God, to seek by prayer and petitions, with fasting and sackcloth and ashes.
- American Standard Version (ASV)
- And I set my face unto the Lord God, to seek by prayer and supplications, with fasting and sackcloth and ashes.
- Bible in Basic English (BBE)
- And turning my face to the Lord God, I gave myself up to prayer, requesting his grace, going without food, in haircloth and dust.
- Darby Translation (DBY)
- And I set my face unto the Lord God, to seek by prayer and supplications, with fasting, and sackcloth, and ashes;
- Webster's Bible (WBS)
- And I set my face to the Lord GOD, to seek by prayer and supplications, with fasting, and sackcloth, and ashes:
- Young's Literal Translation (YLT)
- and I set my face unto the Lord God, to seek [by] prayer and supplications, with fasting, and sackcloth, and ashes.
Read in context
- 1ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಕಸ್ದೀಯ ರಾಜ್ಯದ ಅರ ಸನೂ ಆದ ದಾರ್ಯಾವೆಷನ ಮೊದಲನೆಯ ವರುಷದಲ್ಲಿ
- 2ಅವನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಾದ ನಾನು ಕರ್ತನು ತನ್ನ ವಾಕ್ಯವನ್ನು ಪ್ರವಾದಿಯಾದ ಯೆರೆವಿಾಯನಿಗೆ ದಯಪಾಲಿಸಿದ ಹಾಗೆ ತಾನು ಯೆರೂಸಲೇಮಿಗೆ ಹಾಳು ಬೀಳುವಿಕೆಗಳಲ್ಲಿ ಎಪ್ಪತ್ತು ವರುಷಗಳನ್ನು ಸಂಪೂರ್ಣಮಾಡುವ ಹಾಗೆ ವರುಷಗಳ ಲೆಕ್ಕವನ್ನು ಪುಸ್ತಕದಿಂದ ತಿಳಿದುಕೊಂಡೆನು.
- 3ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದು ಕೊಂಡು, ದೇವರಾದ ಕರ್ತನನ್ನು ಹುಡುಕುವದಕ್ಕಾಗಿ ಪ್ರಾರ್ಥನೆಗಳಿಂದಲೂ ವಿಜ್ಞಾಪನೆ ಗಳಿಂದಲೂ ಆತನ ಕಡೆಗೆ ನನ್ನ ಮುಖವನ್ನು ತಿರುಗಿ ಸಿದೆನು.
- 4ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ,
- 5ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ.
Cross references
- Jeremiah 33:3 ಯೆರೆಮೀಯ 33:3ನನ್ನನ್ನು ಕರೆ, ಆಗ ನಿನಗೆ ಉತ್ತರ ಕೊಡುವೆನು; ನಿನಗೆ ತಿಳಿಯದ ದೊಡ್ಡ ಮಹತ್ತಾದವುಗಳನ್ನು ನಿನಗೆ ತಿಳಿಸುವೆನು.
- Jeremiah 29:10–13 ಯೆರೆಮೀಯ 29:10–13ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನಲ್ಲಿ ಎಪ್ಪತ್ತು ವರುಷ ತುಂಬಿದ ಮೇಲೆ ನಿಮ್ಮನ್ನು ಪರಾಮರಿ ಸುವೆನು; ನನ್ನ ಶುಭ ವಾಕ್ಯವನ್ನು ನಿಮ್ಮ ವಿಷಯದಲ್ಲಿ ಸ್ಥಾಪಿಸಿ ನಿಮ್ಮನ್ನು ತಿರುಗಿ ಈ ಸ್ಥಳಕ್ಕೆ ಬರಮಾಡುವೆನು. ನಾನು ನಿಮ್ಮನ್ನು ಕುರಿತು ಮಾಡುವ ಆಲೋಚನೆ ಗಳನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಅವು ಕೇಡಿ ಗಲ್ಲ, ಸಮಾಧಾನಕ್ಕಿರುವ ಆಲೋಚನೆಗಳು; ನೀವು ನಿರೀಕ್ಷಿಸಿದ್ದ ಸ್ಥಿತಿಯನ್ನು ಕೊಡುವವುಗಳೇ. ಆಗ ನನ್ನನ್ನು ಕರೆಯುವಿರಿ; ಹೋಗಿ ನನಗೆ ಪ್ರಾರ್ಥನೆ ಮಾಡುವಿರಿ; ನಿಮಗೆ ಕಿವಿಗೊಡುವೆನು. ನನ್ನನ್ನು ಹುಡುಕುವಿರಿ; ಪೂರ್ಣ ಹೃದಯದಿಂದ ನನ್ನನ್ನು ಹುಡುಕುವಾಗ ನನ್ನನ್ನು ಕಂಡುಕೊಳ್ಳುವಿರಿ.
- James 5:16–18 ಯಾಕೋಬನು 5:16–18ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ. ಎಲೀಯನು ನಮ್ಮಂಥ ಸ್ವಭಾವವುಳ್ಳವ ನಾಗಿದ್ದನು; ಅವನು ಮಳೆ ಬರಬಾರದೆಂದು ಆಸಕ್ತಿ ಯಿಂದ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆ ಬೀಳಲಿಲ್ಲ. ತಿರಿಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಬೆಳೆಯಿತು.
- Nehemiah 1:4–11 ನೆಹೆಮೀಯ 1:4–11ಈ ಮಾತುಗಳನ್ನು ಕೇಳಿದಾಗ ನಾನು ಕುಳಿತುಕೊಂಡು ಅತ್ತು. ಕೆಲವು ದಿವಸ ದುಃಖಿಸಿ ಉಪವಾಸಮಾಡಿ, ಪರಲೋಕದ ದೇವರ ಮುಂದೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ-- ಓ ಪರಲೋ ಕದ ದೇವರಾದ ಕರ್ತನೇ, ನಿನ್ನನ್ನು ಪ್ರೀತಿಮಾಡಿ ನಿನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಒಡಂಬಡಿಕೆಯನ್ನೂ ಕೃಪೆಯನ್ನೂ ಕೈಕೊಳ್ಳುವವನಾದ ಮತ್ತು ಭಯಂಕರವುಳ್ಳ ದೇವರೇ, ನಿನ್ನ ಸೇವಕರಾದ ಇಸ್ರಾಯೇಲ್ ಮಕ್ಕಳಿ ಗೋಸ್ಕರ ಈಗ ಹಗಲಿರುಳು ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ನಿನಗೆ ವಿರೋಧವಾಗಿ ನಾವು ಮಾಡಿದ ಇಸ್ರಾಯೇಲ್ ಮಕ್ಕಳ ಪಾಪಗಳ ಅರಿಕೆಮಾಡುವದನ್ನೂ ನೀನು ಕೇಳುವ ಹಾಗೆ ನಿನ್ನ ಕಿವಿ ಅಲೈಸುತ್ತಾ ಇರಲಿ, ನಿನ್ನ ಕಣ್ಣುಗಳು ತೆರೆದಿರಲಿ. ನಾನೂ ನನ್ನ ತಂದೆಯ ಮನೆಯವರೂ ಪಾಪಮಾಡಿದ್ದೇವೆ. ನಿನಗೆ ವಿರೋಧವಾಗಿ ಬಹು ಕೆಟ್ಟತನ ಮಾಡಿದ್ದೇವೆ; ನೀನು ನಿನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಾವು ಕೈಕೊಳ್ಳಲಿಲ್ಲ. ದಯಮಾಡಿ ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ಜ್ಞಾಪಕಮಾಡು, ಏನಂದರೆ--ನೀವು ಅಕೃತ್ಯ ಮಾಡಿದರೆ ನಾನು ನಿಮ್ಮನ್ನು ಜನಾಂಗಗಳನ್ನು ಚದರಿಸುವಂತೆ ಚದರಿಸುವೆನು. ಆದರೆ ನೀವು ನನ್ನ ಬಳಿಗೆ ತಿರುಗಿ ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳ ಪ್ರಕಾರ ಮಾಡಿದರೆ ನಿಮ್ಮಲ್ಲಿರುವವರು ಆಕಾಶದ ಅಂತ್ಯದ ವರೆಗೂ ಹೊರಡಿಸಲ್ಪಟ್ಟಿದ್ದರೂ ನಾನು ಅಲ್ಲಿಂದ ಅವ ರನ್ನು ಕೂಡಿಸಿ ನನ್ನ ಹೆಸರನ್ನಿಡಲು ಆದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು ಎಂದು ಹೇಳಿದಿ. ನಿನ್ನ ಮಹಾ ಶಕ್ತಿಯಿಂದಲೂ ಬಲವಾದ ಕೈಯಿಂದಲೂ ನೀನು ವಿಮೋಚಿಸಿದ ನಿನ್ನ ಸೇವಕರೂ ಜನರೂ ಇವರೇ.ಓ ಕರ್ತನೇ, ನಿನ್ನ ನಾಮಕ್ಕೆ ಭಯಪಡಲು ಇಚ್ಛಿಸುವ ನಿನ್ನ ಸೇವಕನ ಪ್ರಾರ್ಥನೆಯನ್ನೂ ಸೇವಕರ ಪ್ರಾರ್ಥನೆಯನ್ನೂ ನಿನ್ನ ಕಿವಿ ಆಲೈಸುತ್ತಾ ಇರಲಿ; ಇಂದು ನಿನ್ನ ಸೇವಕನಿಗೆ ವೃದ್ಧಿಯನ್ನು ಕೊಟ್ಟು ಈ ಮನುಷ್ಯನ ದೃಷ್ಟಿಯಲ್ಲಿ ಅವನಿಗೆ ಕರುಣೆ ದೊರಕುವ ಹಾಗೆ ಮಾಡು. ಯಾಕಂದರೆ ನಾನು ಅರಸನಿಗೆ ಪಾನ ಕೊಡುವವನಾಗಿದ್ದೆನು. ಓ ಕರ್ತನೇ, ನಿನ್ನ ನಾಮಕ್ಕೆ ಭಯಪಡಲು ಇಚ್ಛಿಸುವ ನಿನ್ನ ಸೇವಕನ ಪ್ರಾರ್ಥನೆಯನ್ನೂ ಸೇವಕರ ಪ್ರಾರ್ಥನೆಯನ್ನೂ ನಿನ್ನ ಕಿವಿ ಆಲೈಸುತ್ತಾ ಇರಲಿ; ಇಂದು ನಿನ್ನ ಸೇವಕನಿಗೆ ವೃದ್ಧಿಯನ್ನು ಕೊಟ್ಟು ಈ ಮನುಷ್ಯನ ದೃಷ್ಟಿಯಲ್ಲಿ ಅವನಿಗೆ ಕರುಣೆ ದೊರಕುವ ಹಾಗೆ ಮಾಡು. ಯಾಕಂದರೆ ನಾನು ಅರಸನಿಗೆ ಪಾನ ಕೊಡುವವನಾಗಿದ್ದೆನು.
- Esther 4:16 ಎಸ್ತೇರಳು 4:16ನಾನೂ ನನ್ನ ದಾಸಿಯರೂ ಹಾಗೆಯೇ ಉಪವಾಸ ಮಾಡುವೆವು. ಅನಂತರ ನಾನು ಆಜ್ಞೆ ವಿಾರಿ ಅರಸನ ಬಳಿಗೆ ಪ್ರವೇಶಿಸುವೆನು. ನಾನು ನಾಶವಾದರೆ ನಾಶವಾಗುವೆನು ಅಂದಳು.ಆಗ ಮೊರ್ದೆಕೈ ಹೊರಟು ಹೋಗಿ ಎಸ್ತೇರಳು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಿದನು.
- Ezra 8:21 ಎಜ್ರನು 8:21ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸುಕೊಳ್ಳುವದಕ್ಕೂ ನಮಗೂ ನಮ್ಮ ಮಕ್ಕಳಿಗೂ ನಮ್ಮ ಎಲ್ಲಾ ಸ್ಥಿತಿಗೂ ಆತನಿಂದ ಸರಿಯಾದ ಮಾರ್ಗ ವನ್ನು ಹುಡುಕುವದಕ್ಕೂ ನಾನು ಅಲ್ಲಿ ಅಹವಾ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಸಾರಿದೆನು.
- James 4:8–10 ಯಾಕೋಬನು 4:8–10ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ. ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.
- Ezra 10:6 ಎಜ್ರನು 10:6ಎಜ್ರನು ದೇವರ ಆಲಯದ ಮುಂದಿ ನಿಂದ ಎದ್ದು ಎಲ್ಯಾಷೀಬಿನ ಮಗನಾದ ಯೆಹೋಹಾ ನಾನನ ಕೊಠಡಿಯಲ್ಲಿ ಪ್ರವೇಶಿಸಿ ಅಲ್ಲಿಗೆ ಬಂದಾಗ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಇದ್ದನು; ಯಾಕಂದರೆ ಸೆರೆಯಾಗಿ ಒಯ್ಯಲ್ಪಟ್ಟವರ ಅಕೃತ್ಯಕ್ಕೋಸ್ಕರ ದುಃಖಿಸಿದನು.
- Ezra 9:5 ಎಜ್ರನು 9:5ಆದರೆ ಸಾಯಂಕಾಲದ ಬಲಿಯನ್ನರ್ಪಿಸುವಾಗ ನಾನು ನನ್ನ ಭಾರದಿಂದೆದ್ದು ನನ್ನ ವಸ್ತ್ರವನ್ನೂ ನನ್ನ ನಿಲುವಂಗಿ ಯನ್ನೂ ಹರಿದುಕೊಂಡವನಾಗಿ ನನ್ನ ಮೊಣಕಾಲು ಗಳನ್ನೂರಿ ನನ್ನ ಕೈಗಳನ್ನು ನನ್ನ ದೇವರಾಗಿರುವ ಕರ್ತನ ಮುಂದೆ ಚಾಚಿ ಹೇಳಿದ್ದೇನಂದರೆ--
- Joel 2:12 ಯೋವೇಲ 2:12ಹೀಗಿರುವದರಿಂದ ಈಗ ಕರ್ತನು ಅನ್ನುವದೇ ನಂದರೆ--ಪೂರ್ಣ ಹೃದಯದಿಂದಲೂ ಉಪವಾಸ ದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದ ಲೂ ನನ್ನ ಕಡೆಗೆ ತಿರುಗಿಕೊಳ್ಳಿರಿ.
- Psalm 35:13 ಕೀರ್ತನೆಗಳು 35:13ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
- Acts 10:30 ಅಪೊಸ್ತಲರ ಕೃತ್ಯಗಳು 10:30ಅದಕ್ಕೆ ಕೊರ್ನೇಲ್ಯನು--ನಾನು ನಾಲ್ಕು ದಿನಗಳ ಹಿಂದೆ ಈ ಗಳಿಗೆಯವರೆಗೂ ಉಪವಾಸವಿದ್ದು ಒಂಭತ್ತನೆಯ ತಾಸಿನಲ್ಲಿ (ಮೂರು ಘಂಟೆಗೆ) ನನ್ನ ಮನೆಯಲ್ಲಿ ಪ್ರಾರ್ಥಿಸಿದಾಗ ಇಗೋ, ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತು ಕೊಂಡು--