Deuteronomy · chapter 1 · verse 11
Deuteronomy 1:11 in Kannada
ನೀವು ಈಗ ಇರುವದಕ್ಕಿಂತಲೂ ನಿಮ್ಮನ್ನು ಸಾವಿರದಷ್ಟು ಹೆಚ್ಚು ಮಾಡಿ ನಿಮಗೆ ಪ್ರಮಾಣ ಮಾಡಿದ ಹಾಗೆ ನಿಮ್ಮ ಪಿತೃಗಳ ದೇವರಾದ ಕರ್ತನು ಆಶೀರ್ವದಿಸಲಿ.
Neevu eega iruvadakkintaloo nimmannu saaviradashtu hechchu maadi nimage pramaana maadida haage nimma pitrugala devaraada kartanu aasheervadisali.
Deuteronomy 1:11 in English
- King James Version (KJV)
- (The LORD God of your fathers make you a thousand times so many more as ye [are], and bless you, as he hath promised you!)
- World English Bible (WEB)
- May the LORD, the God of your fathers, make you a thousand times as many as you are and bless you, as he has promised you!
- American Standard Version (ASV)
- Jehovah, the God of your fathers, make you a thousand times as many as ye are, and bless you, as he hath promised you!
- Bible in Basic English (BBE)
- May the Lord, the God of your fathers, make you a thousand times greater in number than you are, and give you his blessing as he has said!
- Darby Translation (DBY)
- Jehovah, the God of your fathers, make you a thousand times so many more as ye are, and bless you as he hath said unto you!
- Webster's Bible (WBS)
- (The LORD God of your fathers make you a thousand times so many more as ye [are] , and bless you, as he hath promised you!)
- Young's Literal Translation (YLT)
- Jehovah, God of your fathers, is adding to you, as ye [are], a thousand times, and doth bless you as He hath spoken to you.
Read in context
- 9ಆ ಕಾಲದಲ್ಲಿ ನಾನು ನಿಮ್ಮೊಂದಿಗೆ ಮಾತನಾಡಿ-- ನಾನೊಬ್ಬನೇ ನಿಮ್ಮನ್ನು ಹೊರಲಾರೆನಂದೆನು.
- 10ನಿಮ್ಮ ದೇವರಾದ ಕರ್ತನು ನಿಮ್ಮನ್ನು ಹೆಚ್ಚಿಸಿದ್ದಾನೆ. ಇಗೋ, ನೀವು ಈ ಹೊತ್ತು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಾಗಿದ್ದೀರಿ.
- 11ನೀವು ಈಗ ಇರುವದಕ್ಕಿಂತಲೂ ನಿಮ್ಮನ್ನು ಸಾವಿರದಷ್ಟು ಹೆಚ್ಚು ಮಾಡಿ ನಿಮಗೆ ಪ್ರಮಾಣ ಮಾಡಿದ ಹಾಗೆ ನಿಮ್ಮ ಪಿತೃಗಳ ದೇವರಾದ ಕರ್ತನು ಆಶೀರ್ವದಿಸಲಿ.
- 12ನಿಮ್ಮ ಚಿಂತೆಯನ್ನೂ ಭಾರವನ್ನೂ ವ್ಯಾಜ್ಯವನ್ನೂ ನಾನೊಬ್ಬನೇ ಹೇಗೆ ಹೊರಲಿ?
- 13ನಿಮ್ಮ ಗೋತ್ರಗಳಲ್ಲಿ ಪ್ರಸಿದ್ಧರಾಗಿದ್ದು ಜ್ಞಾನವೂ ಬುದ್ಧಿಯೂಳ್ಳ ಮನುಷ್ಯರನ್ನು ಆರಿಸಿಕೊಳ್ಳಿರಿ; ಆಗ ನಾನು ಅವರನ್ನು ನಿಮಗೆ ಮುಖ್ಯಸ್ಥರನ್ನಾಗಿ ಮಾಡುವೆನು ಅಂದನು.
Cross references
- Psalm 115:14 ಕೀರ್ತನೆಗಳು 115:14ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು.
- Genesis 22:17 ಆದಿಕಾಂಡ 22:17ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು.
- Numbers 6:27 ಅರಣ್ಯಕಾಂಡ 6:27ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
- Genesis 26:4 ಆದಿಕಾಂಡ 26:4ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯಲ್ಲಿ ಭೂಮಿಯ ಜನಾಂಗ ಗಳೆಲ್ಲಾ ಆಶೀರ್ವದಿಸಲ್ಪಡುವವು.
- Genesis 15:5 ಆದಿಕಾಂಡ 15:5ಕರ್ತನು ಅವನನ್ನು ಹೊರಗೆ ಕರಕೊಂಡು ಬಂದು--ಈಗ ನೀನು ಆಕಾಶವನ್ನು ದೃಷ್ಟಿಸಿ ನಕ್ಷತ್ರ ಗಳನ್ನು ಲೆಕ್ಕಿಸಶಕ್ತನಾದರೆ ಅವುಗಳನ್ನು ಲೆಕ್ಕಿಸು ಅಂದನು. ಆತನು ಅವನಿಗೆ--ಅದರಂತೆಯೇ ನಿನ್ನ ಸಂತತಿಯು ಆಗುವದು ಎಂದು ಅವನಿಗೆ ಹೇಳಿದನು.
- 2 Samuel 24:3 2 ಸಮುವೇಲನು 24:3ಆಗ ಯೋವಾಬನು ಅರಸನಿಗೆ-- ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ನೋಡುವ ಹಾಗೆ ನಿನ್ನ ದೇವರಾದ ಕರ್ತನು ಈಗ ಇರುವದಕ್ಕಿಂತ ಜ ರನ್ನು ನೂರರಷ್ಟಾಗಿ ಹೆಚ್ಚು ಮಾಡಲಿ; ಆದರೆ ಅರಸ ನಾದ ನನ್ನ ಒಡೆಯನು ಈ ಕಾರ್ಯವನ್ನು ಆಶಿಸುವ ದೇನು ಅಂದನು. ಆದಾಗ್ಯೂ ಅರಸನ ಮಾತು ಯೋವಾಬನಿಗೂ ಸೈನ್ಯಾಧಿಪತಿಗಳಿಗೂ ವಿರೋಧವಾಗಿ ಪ್ರೇರೇಪಿಸಿತು.
- Genesis 49:25 ಆದಿಕಾಂಡ 49:25ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.)
- Exodus 32:13 ವಿಮೋಚನಕಾಂಡ 32:13ಆಕಾಶದ ನಕ್ಷತ್ರಗಳ ಹಾಗೆ ನಿಮ್ಮ ಸಂತತಿಯನ್ನು ಹೆಚ್ಚಿಸಿ, ನಾನು ಹೇಳಿದ ಈ ದೇಶವನ್ನು ನಿಮ್ಮ ಸಂತತಿಯು ನಿತ್ಯವಾಗಿ ಸ್ವತಂತ್ರಿಸಿಕೊಳ್ಳುವರು ಎಂದು ಯಾರಿಗೆ ನಿನ್ನ ಆಣೆಯಿಟ್ಟು ಪ್ರಮಾಣಮಾಡಿ ದಿಯೋ ಆ ನಿನ್ನ ಸೇವಕರಾದ ಅಬ್ರಹಾಮನನ್ನೂ ಇಸಾಕನನ್ನೂ ಇಸ್ರಾಯೇಲನನ್ನೂ ಜ್ಞಾಪಕ ಮಾಡಿಕೋ ಅಂದನು.
- Numbers 22:12 ಅರಣ್ಯಕಾಂಡ 22:12ಆಗ ದೇವರು ಬಿಳಾಮನಿಗೆ ಹೇಳಿದ್ದೇನಂದರೆನೀನು ಅವರ ಸಂಗಡ ಹೋಗಬೇಡ; ನೀನು ಆ ಜನವನ್ನು ಶಪಿಸಬೇಡ; ಅದು ಆಶೀರ್ವದಿಸಲ್ಪಟ್ಟಿದೆ.
- 1 Chronicles 21:3 1 ಪೂರ್ವಕಾಲವೃತ್ತಾಂತ 21:3ಅದಕ್ಕೆ ಯೋವಾಬನು--ಕರ್ತನು ತನ್ನ ಜನರನ್ನು ಈಗ ಇರುವದಕ್ಕಿಂತ ನೂರರಷ್ಟಾಗಿ ಮಾಡಲಿ; ಆದರೆ ನನ್ನ ಒಡೆಯನಾದ ಅರಸನೇ, ಅವರೆಲ್ಲರು ನನ್ನ ಒಡೆಯನ ಸೇವಕರಲ್ಲವೋ? ನನ್ನ ಒಡೆಯನು ಈ ಕಾರ್ಯವನ್ನು ವಿಚಾರಿಸುವದು ಯಾಕೆ? ಅವನು ಇಸ್ರಾಯೇಲಿನಲ್ಲಿ ಅಪರಾಧಕ್ಕೆ ಕಾರಣವಾಗುವದು ಯಾಕೆ ಅಂದನು.