Psalms · chapter 115 · verse 14
Psalm 115:14 in Kannada
ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು.
Kartanu nimmannoo nimma makkalannoo abhivruddhi maaduvanu.
Psalm 115:14 in English
- King James Version (KJV)
- The LORD shall increase you more and more, you and your children.
- World English Bible (WEB)
- May the LORD increase you more and more, you and your children.
- American Standard Version (ASV)
- Jehovah increase you more and more, You and your children.
- Bible in Basic English (BBE)
- May the Lord give you and your children still greater increase.
- Darby Translation (DBY)
- Jehovah will add unto you more, unto you and unto your children.
- Webster's Bible (WBS)
- The LORD will increase you more and more, you and your children.
- Young's Literal Translation (YLT)
- Jehovah addeth to you, to you, and to your sons.
Read in context
- 12ಕರ್ತನು ನಮ್ಮನ್ನು ಜ್ಞಾಪಕಮಾಡಿಕೊಂಡಿದ್ದಾನೆ,ಆತನು ನಮ್ಮನ್ನು ಆಶೀರ್ವದಿಸುವನು; ಇಸ್ರಾಯೇಲಿನ ಮನೆಯನ್ನು ಆಶೀರ್ವದಿಸುವನು; ಆರೋನನ ಮನೆ ಯನ್ನು ಆಶೀರ್ವದಿಸುವನು.
- 13ಕರ್ತನಿಗೆ ಭಯ ಪಡುವವರಾದ ಹಿರಿಯರ ಸಂಗಡ ಕಿರಿಯರನ್ನು ಆಶೀರ್ವದಿಸುವನು.
- 14ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು.
- 15ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನಿಂದ ನೀವು ಆಶೀರ್ವದಿಸಲ್ಪಟ್ಟವರು.
- 16ಆಕಾಶಗಳು ಕರ್ತನವುಗಳೇ. ಆತನು ಭೂಮಿ ಯನ್ನು ನರಪುತ್ರರಿಗೆ ಕೊಟ್ಟಿದ್ದಾನೆ.
Cross references
- Deuteronomy 1:11 ಧರ್ಮೋಪದೇಶಕಾಂಡ 1:11ನೀವು ಈಗ ಇರುವದಕ್ಕಿಂತಲೂ ನಿಮ್ಮನ್ನು ಸಾವಿರದಷ್ಟು ಹೆಚ್ಚು ಮಾಡಿ ನಿಮಗೆ ಪ್ರಮಾಣ ಮಾಡಿದ ಹಾಗೆ ನಿಮ್ಮ ಪಿತೃಗಳ ದೇವರಾದ ಕರ್ತನು ಆಶೀರ್ವದಿಸಲಿ.
- Acts 2:39 ಅಪೊಸ್ತಲರ ಕೃತ್ಯಗಳು 2:39ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- Acts 3:25 ಅಪೊಸ್ತಲರ ಕೃತ್ಯಗಳು 3:25ಇದಲ್ಲದೆ ಅಬ್ರಹಾಮನಿಗೆ--ನಿನ್ನ ಸಂತ ತಿಯ ಮೂಲಕ ಭೂಲೋಕದ ಎಲ್ಲಾ ಕುಲದವರು ಆಶೀರ್ವದಿಸಲ್ಪಡುವರು ಎಂದು ದೇವರು ನಮ್ಮ ಪಿತೃಗಳೊಂದಿಗೆ ಮಾಡಿದ ಒಡಂಬಡಿಕೆಯ ಮಕ್ಕಳೂ ಪ್ರವಾದಿಗಳ ಮಕ್ಕಳೂ ನೀವಾಗಿದ್ದೀರಿ.ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.
- Jeremiah 33:22 ಯೆರೆಮೀಯ 33:22ಆಕಾಶದ ಸೈನ್ಯವನ್ನು ಹೇಗೆ ಎಣಿಸಲಿಕ್ಕಾಗದೋ ಸಮುದ್ರದ ಮರಳನ್ನು ಹೇಗೆ ಅಳಿಯಲಿಕ್ಕಾಗದೋ ಹಾಗೆಯೇ ನಾನು ನನ್ನ ಸೇವಕನಾದ ದಾವೀದನ ಸಂತಾನವನೂ ನನಗೆ ಸೇವೆ ಮಾಡುವ ಲೇವಿಯ ರನ್ನೂ ಹೆಚ್ಚಿಸುವೆನು.
- Genesis 17:7 ಆದಿಕಾಂಡ 17:7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- Genesis 13:16 ಆದಿಕಾಂಡ 13:16ನಿನ್ನ ಸಂತತಿಯನ್ನು ಭೂಮಿಯ ಧೂಳಿನಷ್ಟು ಮಾಡುವೆನು. ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ ನಿನ್ನ ಸಂತಾನವು ಸಹ ಲೆಕ್ಕಿಸಲ್ಪಡುವದು.
- 2 Samuel 24:3 2 ಸಮುವೇಲನು 24:3ಆಗ ಯೋವಾಬನು ಅರಸನಿಗೆ-- ಅರಸನಾದ ನನ್ನ ಒಡೆಯನ ಕಣ್ಣುಗಳು ಅದನ್ನು ನೋಡುವ ಹಾಗೆ ನಿನ್ನ ದೇವರಾದ ಕರ್ತನು ಈಗ ಇರುವದಕ್ಕಿಂತ ಜ ರನ್ನು ನೂರರಷ್ಟಾಗಿ ಹೆಚ್ಚು ಮಾಡಲಿ; ಆದರೆ ಅರಸ ನಾದ ನನ್ನ ಒಡೆಯನು ಈ ಕಾರ್ಯವನ್ನು ಆಶಿಸುವ ದೇನು ಅಂದನು. ಆದಾಗ್ಯೂ ಅರಸನ ಮಾತು ಯೋವಾಬನಿಗೂ ಸೈನ್ಯಾಧಿಪತಿಗಳಿಗೂ ವಿರೋಧವಾಗಿ ಪ್ರೇರೇಪಿಸಿತು.
- Revelation 7:4 ಪ್ರಕಟನೆ 7:4ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ.
- Revelation 7:9 ಪ್ರಕಟನೆ 7:9ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ
- Jeremiah 30:19 ಯೆರೆಮೀಯ 30:19ಅವುಗಳೊಳಗಿಂದ ಕೃತಜ್ಞತಾ ಸ್ತೋತ್ರವೂ ಸಂತೋ ಷಪಡುವವರ ಸ್ವರವೂ ಹೊರಡುವದು; ಅವರನ್ನು ಅಭಿವೃದ್ಧಿಮಾಡುವೆನು; ಅವರು ಕೊಂಚವಾಗಿರರು, ಅವರು ಅಲ್ಪವಾಗದ ಹಾಗೆ ಅವರಿಗೆ ಘನವನ್ನು ಕೊಡುವೆನು.
- Jeremiah 32:38–39 ಯೆರೆಮೀಯ 32:38–39ಅವರು ನನಗೆ ಜನರಾಗಿರುವರು; ನಾನು ಅವರಿಗೆ ದೇವರಾಗಿರುವೆನು. ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು.
- Zechariah 8:20–23 ಜೆಕರ್ಯ 8:20–23ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು; ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು. ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.