Deuteronomy · chapter 1 · verse 36
Deuteronomy 1:36 in Kannada
ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಕರ್ತನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದ ಅವನು ಸಂಚರಿಸಿದ ದೇಶ ವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು.
Yephunneya maganaada kaalebanu maatra adannu noduvanu. Avanu kartanannu poorna vaagi himbaalisiddarinda avanu sancharisida desha vannu avanigoo avana makkaligoo koduvenu.
Deuteronomy 1:36 in English
- King James Version (KJV)
- Save Caleb the son of Jephunneh; he shall see it, and to him will I give the land that he hath trodden upon, and to his children, because he hath wholly followed the LORD.
- World English Bible (WEB)
- except Caleb the son of Jephunneh. He shall see it. I will give the land that he has trodden on to him and to his children, because he has wholly followed the LORD.”
- American Standard Version (ASV)
- save Caleb the son of Jephunneh; he shall see it; and to him will I give the land that he hath trodden upon, and to his children, because he hath wholly followed Jehovah.
- Bible in Basic English (BBE)
- But only Caleb, the son of Jephunneh, he will see it; and to him and to his children I will give the land over which his feet have gone, because he has been true to the Lord with all his heart.
- Darby Translation (DBY)
- Except Caleb the son of Jephunneh, he shall see it, and to him will I give the land that he hath trodden upon, and to his children, because he hath wholly followed Jehovah.
- Webster's Bible (WBS)
- Save Caleb the son of Jephunneh; he shall see it, and to him will I give the land that he hath trod upon, and to his children, because he hath wholly followed the LORD.
- Young's Literal Translation (YLT)
- save Caleb son of Jephunneh — he doth see it, and to him I give the land on which he hath trodden, and to his sons, because that he hath been fully after Jehovah.
Read in context
- 34ಕರ್ತನು ನಿಮ್ಮ ಮಾತುಗಳ ಧ್ವನಿಯನ್ನು ಕೇಳಿ ಕೋಪಿಸಿಕೊಂಡು ಪ್ರಮಾಣಮಾಡಿ--
- 35ನಿಶ್ಚಯವಾಗಿ ಕೆಟ್ಟಸಂತತಿಯಾದ ಈ ಮನುಷ್ಯರಲ್ಲಿ ಒಬ್ಬನಾದರೂ ನಾನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಆ ಒಳ್ಳೇ ದೇಶವನ್ನು ನೋಡುವದಿಲ್ಲ.
- 36ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಅದನ್ನು ನೋಡುವನು. ಅವನು ಕರ್ತನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದ ಅವನು ಸಂಚರಿಸಿದ ದೇಶ ವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವೆನು.
- 37ನನ್ನ ಮೇಲೆಯೂ ಕರ್ತನು ನಿಮ್ಮ ದೆಸೆಯಿಂದ ಕೋಪಗೊಂಡು--ನೀನು ಸಹ ಅದರಲ್ಲಿ ಪ್ರವೇಶಿಸು ವದಿಲ್ಲ.
- 38ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗನಾದ ಯೆಹೋಶುವನೇ ಅದರಲ್ಲಿ ಪ್ರವೇಶಿ ಸುವನು; ಅವನಿಗೆ ಧೈರ್ಯಕೊಡು; ಅವನೇ ಅದನ್ನು ಇಸ್ರಾಯೇಲಿಗೆ ಸ್ವಾಸ್ತ್ಯವಾಗಿ ಕೊಡುವನು.
Cross references
- Numbers 14:24 ಅರಣ್ಯಕಾಂಡ 14:24ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ನನ್ನ ಆತ್ಮವಿದದ್ದರಿಂದಲೂ ಅವನು ನನ್ನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದಲೂ ಅವನು ಸಂಚರಿಸಿದ ದೇಶಕ್ಕೆ ಅವನನ್ನು ತರುವೆನು; ಅವನ ಸಂತಾನವು ಅದನ್ನು ಸ್ವತಂತ್ರಿಸಿಕೊಳ್ಳುವದು.
- Joshua 14:6–14 ಯೆಹೋಶುವ 14:6–14ಯೂದನ ಮಕ್ಕಳು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಸೇರಿದರು. ಆಗ ಕೆನೆಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಅವನಿಗೆ--ಕಾದೇಶ್ ಬರ್ನೇಯದಲ್ಲಿ ಕರ್ತನು ನನ್ನನ್ನೂ ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ; ಕರ್ತನ ಸೇವಕನಾದ ಮೋಶೆಯು ದೇಶವನ್ನು ಪಾಳತಿ ನೋಡಲು ನನ್ನನ್ನು ಕಾದೇಶ್ ಬರ್ನೇಯದಿಂದ ಕಳುಹಿಸಿದಾಗ ನಾನು ನಾಲ್ವತ್ತು ವರುಷ ಪ್ರಾಯದವನಾಗಿದ್ದೆನು; ನನ್ನ ಹೃದಯದಲ್ಲಿ ಇದ್ದ ಹಾಗೆಯೇ ಅವನಿಗೆ ಒಂದು ಮಾತನ್ನು ತಿರಿಗಿ ತಕ್ಕೊಂಡು ಬಂದೆನು. ಆದಾಗ್ಯೂ ನನ್ನ ಸಂಗಡ ಹೋಗಿ ಬಂದ ನನ್ನ ಸಹೋದರರು ಜನರ ಹೃದಯ ವನ್ನು ಕರಗಿಸಿದರು. ಆದರೆ ನಾನು ನನ್ನ ದೇವರಾದ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿದೆನು. ಆ ದಿನದಲ್ಲಿ ಮೋಶೆಯು ನನಗೆ--ನೀನು ನನ್ನ ದೇವರಾದ ಕರ್ತನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದ್ದರಿಂದ ನಿನ್ನ ಕಾಲು ತುಳಿದ ದೇಶವು ನಿನಗೂ ನಿನ್ನ ಮಕ್ಕಳಿಗೂ ಎಂದೆಂದಿಗೂ ಬಾಧ್ಯತೆಯಾಗಿರುವದು ಎಂದು ಆಣೆ ಇಟ್ಟು ಹೇಳಿದನು. ಈಗ ಇಗೋ, ಕರ್ತನು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲ್ ಮಕ್ಕಳು ಅರಣ್ಯದಲ್ಲಿ ಸಂಚರಿಸಿದ ನಾಲ್ವತ್ತೈದು ವರುಷ ಕರ್ತನು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾನೆ. ಈಗ ಇಗೋ, ನಾನು ಇಂದು ಎಂಭತ್ತೈದು ವರುಷ ಪ್ರಾಯದವನಾಗಿದ್ದೇನೆ. ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲವಾಗಿ ಇದ್ದೆನೋ ಹಾಗೆಯೇ ಇದು ವರೆಗೂ ಬಲವಾಗಿದ್ದೇನೆ. ನಾನು ಯುದ್ಧಕ್ಕೆ ಹೋಗಿ ಬರುವದಕ್ಕೆ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳ ವನಾಗಿದ್ದೇನೆ. ಆದದರಿಂದ ಕರ್ತನು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಯಾಕಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿನದಲ್ಲಿ ಕೇಳಿದ್ದೀ. ಕರ್ತನು ನನ್ನ ಸಂಗಡ ಇದ್ದರೆ ಕರ್ತನು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಶಕ್ತನಾಗಿರುವೆನು ಅಂದನು. ಆಗ ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬ ನನ್ನು ಆಶೀರ್ವದಿಸಿ ಅವನಿಗೆ ಹೆಬ್ರೋನನ್ನು ಬಾಧ್ಯತೆ ಯಾಗಿ ಕೊಟ್ಟನು. ಹೀಗೆಯೇ ಕೆನೆಜ್ಯನಾದ ಯೆಫು ನ್ನೆಯ ಮಗನಾದ ಕಾಲೇಬನು ಇಸ್ರಾಯೇಲಿನ ದೇವರಾದ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿ ದ್ದರಿಂದ ಹೆಬ್ರೋನು ಇಂದಿನ ವರೆಗೂ ಅವನ ಬಾಧ್ಯತೆ ಯಾಯಿತು.ಹೆಬ್ರೋನಿನ ಹೆಸರು ಮೊದಲು ಕಿರ್ಯತ್ಅರ್ಬ; ಈ ಹೆಸರು ಅನಾಕ್ಯರಲ್ಲಿ ಒಬ್ಬ ದೊಡ್ಡ ಮನುಷ್ಯನದು. ದೇಶವು ಯುದ್ಧವಿಲ್ಲದೆ ಶಾಂತವಾಯಿತು.
- Numbers 32:12 ಅರಣ್ಯಕಾಂಡ 32:12ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಹೊರತು ಒಬ್ಬನಾದರೂ ನೋಡುವದಿಲ್ಲ; ಯಾಕಂದರೆ ಇವರೇ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿದ್ದಾರೆ.
- Numbers 26:65 ಅರಣ್ಯಕಾಂಡ 26:65ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
- Numbers 13:6 ಅರಣ್ಯಕಾಂಡ 13:6ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು,
- Numbers 13:30 ಅರಣ್ಯಕಾಂಡ 13:30ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.
- Numbers 34:19 ಅರಣ್ಯಕಾಂಡ 34:19ಈ ಮನುಷ್ಯರ ಹೆಸರುಗಳು ಇವೇ: ಯೆಹೂದನ ಕುಟುಂಬದಿಂದ ಯೆಪುನ್ನೆಯ ಮಗನಾದ ಕಾಲೇಬನೂ
- Judges 1:12–15 ನ್ಯಾಯಸ್ಥಾಪಕರು 1:12–15ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು. ಆಗ ಕಾಲೇಬನ ತಮ್ಮನು ಕೆನಜನ ಮಗನಾದ ಒತ್ನೀಯೇಲನು ಅದನ್ನು ಹಿಡಿದನು. ಆಗ ಅವನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಅವಳು ಅವನ ಬಳಿಗೆ ಹೋಗುವಾಗ ತನ್ನ ತಂದೆಯಿಂದ ಒಂದು ಹೊಲವನ್ನು ಕೇಳುವದಕ್ಕೆ ಅವನನ್ನು ಪ್ರೇರೇಪಿಸಿದವಳಾಗಿ ಕತ್ತೆಯಿಂದ ಇಳಿದಳು; ಕಾಲೇಬನು ಅವಳಿಗೆ--ನಿನಗೆ ಏನು ಬೇಕು ಅಂದನು. ಅವಳು ಅವನಿಗೆ--ನನಗೆ ಆಶೀರ್ವಾದಕೊಡು; ನೀನು ದಕ್ಷಿಣ ಭೂಮಿಯನ್ನು ನನಗೆ ಕೊಟ್ಟುಬಿಟ್ಟೆ ಯಲ್ಲಾ, ನೀರು ಬುಗ್ಗೆಗಳನ್ನು ಸಹ ಕೊಡು ಅಂದಳು. ಕಾಲೇಬನು ಮೇಲಿನ ಬುಗ್ಗೆಗಳನ್ನೂ ಕೆಳಗಿನ ಬುಗ್ಗೆಗಳನ್ನೂ ಅವಳಿಗೆ ಕೊಟ್ಟನು.