Deuteronomy · chapter 10 · verse 19
Deuteronomy 10:19 in Kannada
ಹೀಗಿರುವ ದರಿಂದ ನೀವು ಪರದೇಶಿಯನ್ನು ಪ್ರೀತಿಮಾಡಬೇಕು; ಯಾಕಂದರೆ ನೀವು ಐಗುಪ್ತದಲ್ಲಿ ಪರದೇಶಿಗಳಾಗಿದ್ದಿರಿ.
Heegiruva darinda neevu paradeshiyannu preetimaadabeku; yaakandare neevu aiguptadalli paradeshigalaagiddiri.
Deuteronomy 10:19 in English
- King James Version (KJV)
- Love ye therefore the stranger: for ye were strangers in the land of Egypt.
- World English Bible (WEB)
- Therefore love the foreigner, for you were foreigners in the land of Egypt.
- American Standard Version (ASV)
- Love ye therefore the sojourner; for ye were sojourners in the land of Egypt.
- Bible in Basic English (BBE)
- So be kind to the man from a strange country who is living among you, for you yourselves were living in a strange country in the land of Egypt.
- Darby Translation (DBY)
- And ye shall love the stranger; for ye have been strangers in the land of Egypt.
- Webster's Bible (WBS)
- Love ye therefore the stranger: for ye were strangers in the land of Egypt.
- Young's Literal Translation (YLT)
- 'And ye have loved the sojourner, for sojourners ye were in the land of Egypt.
Read in context
- 17ನಿಮ್ಮ ದೇವರಾದ ಕರ್ತನು ಆತನೇ ದೇವರುಗಳ ದೇವರು, ಕರ್ತರ ಕರ್ತನು, ಮಹಾ ದೇವರು, ಪರಾಕ್ರಮಿಯೂ ಭಯಂಕರನೂ. ಆತನು ಮುಖದಾಕ್ಷಿಣ್ಯ ನೋಡುವದಿಲ್ಲ, ಲಂಚ ತೆಗೆದುಕೊಳ್ಳು ವದಿಲ್ಲ.
- 18ಆತನು ತಂದೆ ಇಲ್ಲದವರಿಗೂ ವಿಧವೆ ಯರಿಗೂ ನ್ಯಾಯತೀರಿಸುತ್ತಾನೆ; ಪರದೇಶಿಯನ್ನು ಪ್ರೀತಿಮಾಡಿ ಅನ್ನ ವಸ್ತ್ರ ಕೊಡುತ್ತಾನೆ.
- 19ಹೀಗಿರುವ ದರಿಂದ ನೀವು ಪರದೇಶಿಯನ್ನು ಪ್ರೀತಿಮಾಡಬೇಕು; ಯಾಕಂದರೆ ನೀವು ಐಗುಪ್ತದಲ್ಲಿ ಪರದೇಶಿಗಳಾಗಿದ್ದಿರಿ.
- 20ನಿನ್ನ ಕರ್ತನಾದ ದೇವರಿಗೆ ನೀನು ಭಯಪಡಬೇಕು; ಆತನ ಸೇವೆಮಾಡಿ ಆತನಿಗೆ ಅಂಟಿಕೊಂಡು ಆತನ ಹೆಸರಿನಲ್ಲಿ ಪ್ರಮಾಣಮಾಡಬೇಕು.
- 21ನಿನ್ನ ಕಣ್ಣುಗಳು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿನಗೆ ಮಾಡಿದ ಆತನೇ ನಿನ್ನ ಸ್ತೋತ್ರವು, ಆತನೇ ನಿನ್ನ ದೇವರು.ಎಪ್ಪತ್ತು ಮಂದಿಯಾಗಿ ನಿನ್ನ ಪಿತೃಗಳು ಐಗುಪ್ತಕ್ಕೆ ಇಳಿದುಹೋದರು; ಈಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯ ವಾಗಿ ಮಾಡಿದ್ದಾನೆ.
Cross references
- Exodus 22:21 ವಿಮೋಚನಕಾಂಡ 22:21ಪರದೇಶಸ್ಥನನ್ನು ಉಪದ್ರವಪಡಿಸಬೇಡ, ಬಾಧೆ ಪಡಿಸಲೂಬೇಡ; ಯಾಕಂದರೆ ನೀವು ಐಗುಪ್ತದೇಶ ದಲ್ಲಿ ಪರದೇಶಿಗಳಾಗಿದ್ದಿರಿ.
- Leviticus 19:33–34 ಯಾಜಕಕಾಂಡ 19:33–34ಒಬ್ಬ ಪರಕೀಯನು ನಿಮ್ಮ ದೇಶದಲ್ಲಿ ನಿನ್ನೊಂದಿಗೆ ಪ್ರವಾಸಿಯಾಗಿದ್ದರೆ ಅವನನ್ನು ಉಪದ್ರಪಡಿಸಬೇಡಿರಿ. ಆದರೆ ನಿಮ್ಮಲ್ಲಿ ವಾಸವಾಗಿರುವ ಪರಕೀಯನು ನಿಮ್ಮೊಳಗೆ ಹುಟ್ಟಿದವನಂತಿರಲಿ, ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು. ಯಾಕಂದರೆ ನೀವು ಐಗುಪ್ತದೇಶದಲ್ಲಿ ಪರಕೀಯರಾಗಿದ್ದಿರಿ; ನಿಮ್ಮ ದೇವರಾ ಗಿರುವ ಕರ್ತನು ನಾನೇ.
- Galatians 6:10 ಗಲಾತ್ಯದವರಿಗೆ 6:10ಆದದ ರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ವಿಶ್ವಾಸದ ಮನೆತನ ದವರಿಗೆ ಮಾಡೋಣ.
- Luke 17:18 ಲೂಕನು 17:18ದೇವ ರನ್ನು ಮಹಿಮೆಪಡಿಸುವದಕ್ಕೆ ಹಿಂದಿರುಗಿದವರಲ್ಲಿ ಈ ಅನ್ಯನ ಹೊರತು ಯಾರೂ ಕಾಣಿಸಲಿಲ್ಲ ಎಂದು ಹೇಳಿ
- 1 John 3:17–18 1 ಯೋಹಾನನು 3:17–18ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ? ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
- James 2:15–16 ಯಾಕೋಬನು 2:15–16ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ--ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿರಿ, ಹೊಟ್ಟೆತುಂಬಿಸಿ ಕೊಳ್ಳಿರಿ ಎಂದು ಹೇಳಿದರೆ ಪ್ರಯೋಜನವೇನು?
- Luke 6:35 ಲೂಕನು 6:35ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ,
- Luke 10:28–37 ಲೂಕನು 10:28–37ಆಗ ಆತನು ಅವನಿಗೆ--ನೀನು ಸರಿಯಾಗಿ ಉತ್ತರ ಕೊಟ್ಟಿದ್ದೀ; ಅದರಂತೆಯೇ ಮಾಡು, ಆಗ ನೀನು ಬದುಕುವಿ ಅಂದನು. ಆದರೆ ಅವನು ತನ್ನನ್ನು ತಾನೇ ನೀತಿವಂತನೆಂದು ತೋರಿಸು ವದಕ್ಕೆ ಅಪೇಕ್ಷೆಯುಳ್ಳವನಾಗಿ ಯೇಸುವಿಗೆ--ನನ ನೆರೆಯವನು ಯಾರು ಎಂದು ಕೇಳಿದನು. ಆಗ ಯೇಸು ಪ್ರತ್ಯುತ್ತರವಾಗಿ--ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುತ್ತಿದ್ದಾಗ ಕಳ್ಳರ ಮಧ್ಯದಲ್ಲಿ ಸಿಕ್ಕಿಬಿದ್ದನು. ಅವರು ಅವನ ಬಟ್ಟೆಯನ್ನು ತೆಗೆದುಹಾಕಿ ಅವನನ್ನು ಗಾಯ ಪಡಿಸಿ ಅರೆಜೀವ ಮಾಡಿ ಬಿಟ್ಟು ಹೊರಟುಹೋದರು. ಆಗ ಅನಿರೀಕ್ಷಿತವಾಗಿ ಒಬ್ಬಾನೊಬ್ಬ ಯಾಜಕನು ಆ ಮಾರ್ಗವಾಗಿ ಬಂದು ಅವನನ್ನು ನೋಡಿ ಓರೆ ಯಾಗಿ ಹೋದನು. ಅದೇ ಪ್ರಕಾರ ಒಬ್ಬ ಲೇವಿ ಯೂ ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಓರೆಯಾಗಿ ಹೋದನು. ಆದರೆ ಒಬ್ಬಾನೊಬ್ಬ ಸಮಾರ್ಯದ ವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ನೋಡಿ ಅವನ ಮೇಲೆ ಕನಿಕರಪಟು ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸ ವನ್ನೂ ಹೊಯ್ದು ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ಪಶುವಿನ ಮೇಲೆ ಕೂಡ್ರಿಸಿ ವಸತಿ ಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು. ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ನಾಣ್ಯ ಗಳನ್ನು ತೆಗೆದು ವಸತಿಗೃಹದ ಯಜಮಾನನಿಗೆ ಕೊಟ್ಟು ಅವನಿಗೆ--ಇವನನ್ನು ಆರೈಕೆ ಮಾಡು, ನೀನು ಏನಾ ದರೂ ಹೆಚ್ಚು ವೆಚ್ಚ ಮಾಡಿದರೆ ನಾನು ತಿರಿಗಿ ಬಂದಾಗ ಕೊಟ್ಟು ತೀರಿಸುತ್ತೇನೆ ಅಂದನು. ಈ ಮೂವರಲ್ಲಿ ಯಾರು ಆ ಕಳ್ಳರ ನಡುವೆ ಸಿಕ್ಕಿ ಬಿದ್ದವನಿಗೆ ನೆರೆಯವ ನಾದನೆಂದು ನೀನು ಯೋಚಿಸುತ್ತೀ ಎಂದು ಕೇಳಿದ್ದಕ್ಕೆ ಅವನು-- ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ಅಂದನು. ಆಗ ಯೇಸು ಅವನಿಗೆ--ಹೋಗು, ನೀನೂ ಅದರಂತೆಯೇ ಮಾಡು ಎಂದು ಹೇಳಿದನು.