Deuteronomy · chapter 10 · verse 21
Deuteronomy 10:21 in Kannada
ನಿನ್ನ ಕಣ್ಣುಗಳು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿನಗೆ ಮಾಡಿದ ಆತನೇ ನಿನ್ನ ಸ್ತೋತ್ರವು, ಆತನೇ ನಿನ್ನ ದೇವರು.ಎಪ್ಪತ್ತು ಮಂದಿಯಾಗಿ ನಿನ್ನ ಪಿತೃಗಳು ಐಗುಪ್ತಕ್ಕೆ ಇಳಿದುಹೋದರು; ಈಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯ ವಾಗಿ ಮಾಡಿದ್ದಾನೆ.
Ninna kannugalu nodida aa mahaa bhayankaravaada kaaryagalannu ninage maadida aatane ninna stotravu, aatane ninna devaru.eppattu mandiyaagi ninna pitrugalu aiguptakke iliduhodaru; eega ninna devaraada kartanu ninnannu aakaashada nakshatragala haage asankhya vaagi maadiddaane.
Deuteronomy 10:21 in English
- King James Version (KJV)
- He [is] thy praise, and he [is] thy God, that hath done for thee these great and terrible things, which thine eyes have seen.
- World English Bible (WEB)
- He is your praise, and he is your God, who has done for you these great and awesome things which your eyes have seen.
- American Standard Version (ASV)
- He is thy praise, and he is thy God, that hath done for thee these great and terrible things, which thine eyes have seen.
- Bible in Basic English (BBE)
- He is your God, the God of your praise, your God who has done for you all these works of power which your eyes have seen.
- Darby Translation (DBY)
- He is thy praise, and he is thy God, who hath done for thee these great and terrible things, which thine eyes have seen.
- Webster's Bible (WBS)
- He [is] thy praise, and he [is] thy God, that hath done for thee these great and terrible things which thy eyes have seen.
- Young's Literal Translation (YLT)
- He [is] thy praise, and He [is] thy God, who hath done with thee these great and fearful [things] which thine eyes have seen:
Read in context
- 19ಹೀಗಿರುವ ದರಿಂದ ನೀವು ಪರದೇಶಿಯನ್ನು ಪ್ರೀತಿಮಾಡಬೇಕು; ಯಾಕಂದರೆ ನೀವು ಐಗುಪ್ತದಲ್ಲಿ ಪರದೇಶಿಗಳಾಗಿದ್ದಿರಿ.
- 20ನಿನ್ನ ಕರ್ತನಾದ ದೇವರಿಗೆ ನೀನು ಭಯಪಡಬೇಕು; ಆತನ ಸೇವೆಮಾಡಿ ಆತನಿಗೆ ಅಂಟಿಕೊಂಡು ಆತನ ಹೆಸರಿನಲ್ಲಿ ಪ್ರಮಾಣಮಾಡಬೇಕು.
- 21ನಿನ್ನ ಕಣ್ಣುಗಳು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿನಗೆ ಮಾಡಿದ ಆತನೇ ನಿನ್ನ ಸ್ತೋತ್ರವು, ಆತನೇ ನಿನ್ನ ದೇವರು.ಎಪ್ಪತ್ತು ಮಂದಿಯಾಗಿ ನಿನ್ನ ಪಿತೃಗಳು ಐಗುಪ್ತಕ್ಕೆ ಇಳಿದುಹೋದರು; ಈಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯ ವಾಗಿ ಮಾಡಿದ್ದಾನೆ.
- 22ಎಪ್ಪತ್ತು ಮಂದಿಯಾಗಿ ನಿನ್ನ ಪಿತೃಗಳು ಐಗುಪ್ತಕ್ಕೆ ಇಳಿದುಹೋದರು; ಈಗ ನಿನ್ನ ದೇವರಾದ ಕರ್ತನು ನಿನ್ನನ್ನು ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯ ವಾಗಿ ಮಾಡಿದ್ದಾನೆ.
Cross references
- Jeremiah 17:14 ಯೆರೆಮೀಯ 17:14ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ಆಗ ಸ್ವಸ್ಥನಾಗು ವೆನು; ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನ್ನ ಸ್ತೋತ್ರವು.
- Revelation 21:23 ಪ್ರಕಟನೆ 21:23ಪಟ್ಟಣದಲ್ಲಿ ಬೆಳಕನ್ನು ಕೊಡು ವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಯಾಕಂದರೆ ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಕುರಿಮರಿಯಾದಾತನೇ ಅದರ ದೀಪ.
- Exodus 15:2 ವಿಮೋಚನಕಾಂಡ 15:2ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ, ಆತನು ನನ್ನ ರಕ್ಷಣೆಯಾದನು, ಆತನು ನನ್ನ ದೇವರು, ಆತನಿಗಾಗಿ ನಾನು ಒಂದು ನಿವಾಸವನ್ನು ಸಿದ್ಧಮಾಡುವೆನು. ಆತನು ನನ್ನ ತಂದೆಯ ದೇವರು, ನಾನು ಆತನನ್ನು ಘನಪಡಿಸುವೆನು.
- 2 Samuel 7:23 2 ಸಮುವೇಲನು 7:23ಭೂಲೋಕದಲ್ಲಿ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಸಮಾನವಾದ ಜನಾಂಗ ಯಾವದು? ಅವರನ್ನು ಸ್ವಜನರಾಗಿ ವಿಮೋಚಿಸು ವಂತೆಯೂ ತನಗೆ ಹೆಸರನ್ನು ಪಡಕೊಳ್ಳುವಂತೆಯೂ ದೇವರು ಹೋದನು; ಅವರಿಗೋಸ್ಕರ ನಿನ್ನ ದೇಶಕ್ಕೆ, ಐಗುಪ್ತದಿಂದ ಜನಾಂಗಗಳಿಂದಲೂ ಅವರ ದೇವರು ಗಳಿಂದಲೂ ವಿಮೋಚಿಸಿದ ನಿನ್ನ ಜನರ ಮುಂದೆ ಈ ಮಹಾಭಯಂಕರವಾದ ಕಾರ್ಯಗಳನ್ನು ಮಾಡು ವದಕ್ಕಾಗಿಯೇ ದೇವರು ಹೋದನು.
- Psalm 22:3 ಕೀರ್ತನೆಗಳು 22:3ಆದರೆ ನೀನು ಪರಿಶುದ್ಧನಾಗಿದ್ದೀ; ನೀನು ಇಸ್ರಾಯೇಲಿನ ಸ್ತೋತ್ರಗಳಲ್ಲಿ ವಾಸ ಮಾಡುವಾ ತನು.
- Deuteronomy 4:32–35 ಧರ್ಮೋಪದೇಶಕಾಂಡ 4:32–35ನಿನ್ನ ಮುಂದೆ ಇದ್ದ ಪೂರ್ವದ ದಿವಸಗಳನ್ನು ದೇವರು ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿ ದಂದಿನಿಂದ ವಿಚಾರಿಸು; ಆಕಾಶದ ಈ ಕಡೆಯಿಂದ ಆ ಕಡೆಯವರೆಗೂ ವಿಚಾರಿಸು; ಇದರಂತೆ ದೊಡ್ಡ ಕಾರ್ಯ ಉಂಟಾಯಿತೇ? ಇಲ್ಲವೆ ಇದರಂತೆ ಕೇಳ ಲ್ಪಟ್ಟಿತೇ? ನೀನು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೆಯೇ? ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ? ಕರ್ತನೇ ದೇವರೆಂದು ನೀನು ತಿಳುಕೊಳ್ಳುವ ಹಾಗೆ ಅವು ನಿನಗೆ ತೋರಿಸಲ್ಪಟ್ಟವು; ಆತನಲ್ಲದೆ ಮತ್ತೊಬ್ಬನಿಲ್ಲ.
- Isaiah 60:19 ಯೆಶಾಯ 60:19ಇನ್ನು ಮೇಲೆ ಸೂರ್ಯನು ನಿನಗೆ ಹಗಲಿ ನಲ್ಲಿ ಬೆಳಕಾಗಿರುವದಿಲ್ಲ, ಚಂದ್ರನು ಪ್ರಕಾಶಕ್ಕಾಗಿ ನಿನಗೆ ಬೆಳಕು ಕೊಡುವದಿಲ್ಲ; ಆದರೆ ಕರ್ತನು ನಿನಗೆ ನಿತ್ಯವಾದ ಬೆಳಕಾಗಿರುವನು. ನಿನ್ನ ದೇವರು ನಿನ್ನ ಪ್ರಭೆಯಾಗಿರುವನು.
- Psalm 106:21–22 ಕೀರ್ತನೆಗಳು 106:21–22ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.
- 1 Samuel 12:24 1 ಸಮುವೇಲನು 12:24ಆದರೆ ನೀವು ಕರ್ತನಿಗೆ ಭಯ ಪಟ್ಟು ನಿಮ್ಮ ಪೂರ್ಣ ಹೃದಯದಿಂದ ಸತ್ಯದಲ್ಲಿ ಆತ ನನ್ನು ಸೇವಿಸಿರಿ. ಆತನು ನಿಮಗೋಸ್ಕರ ಎಂಥ ಮಹತ್ತಾದ ಕಾರ್ಯಗಳನ್ನು ಮಾಡಿದನೆಂದು ಆಲೋ ಚಿಸಿರಿ.ಆದರೆ ನೀವು ಕೆಟ್ಟತನವನ್ನು ಇನ್ನೂ ಮಾಡಿದರೆ ನೀವೂ ನಿಮ್ಮ ಅರಸನೂ ನಾಶವಾಗುವಿರಿ ಅಂದನು.
- Isaiah 64:3 ಯೆಶಾಯ 64:3ನಾವು ಎದುರು ನೋಡದೆ ಇದ್ದ ಭಯಂಕರವಾದವುಗಳನ್ನು ನೀನು ಮಾಡಿದಾಗ ಇಳಿದು ಬಂದಿ; ಬೆಟ್ಟಗಳು ನಿನ್ನ ಪ್ರಸನ್ನತೆಯಿಂದ ಕರಗಿಹೋದವು.
- Jeremiah 32:20–21 ಯೆರೆಮೀಯ 32:20–21ನೀನು ಈ ದಿನದ ವರೆಗೂ ಐಗುಪ್ತ ದೇಶದಲ್ಲಿಯೂ ಇಸ್ರಾ ಯೇಲಿನಲ್ಲಿಯೂ ಮನುಷ್ಯರೊಳಗೆ ಗುರುತುಗಳನ್ನೂ ಲಕ್ಷಣಗಳನ್ನೂ ಇಟ್ಟಿದ್ದೀ; ಇಂದಿನ ಪ್ರಕಾರ ನಿನಗೆ ಹೆಸರನ್ನು ಉಂಟುಮಾಡಿಕೊಂಡಿದ್ದೀ. ನಿನ್ನ ಜನರಾದ ಇಸ್ರಾಯೇಲನ್ನು ಗುರುತುಗಳಿಂದಲೂ ಲಕ್ಷಣಗಳಿಂ ದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಮಹಾಭಯದಿಂದಲೂ ಐಗುಪ್ತದೇಶದೊಳ ಗಿಂದ ಹೊರಗೆ ತಂದಿದ್ದೀ.
- Luke 2:32 ಲೂಕನು 2:32ಅದು ಅನ್ಯಜನರನ್ನು ಬೆಳಗಿಸುವ ಬೆಳಕೂ ನಿನ್ನ ಪ್ರಜೆಯಾದ ಇಸ್ರಾಯೇಲ್ಯರ ಮಹಿ ಮೆಯೂ ಆಗಿದೆ ಅಂದನು.