Deuteronomy · chapter 11 · verse 5
Deuteronomy 11:5 in Kannada
ನೀವು ಈ ಸ್ಥಳಕ್ಕೆ ಬರುವ ವರೆಗೆ ಕರ್ತನು ಅರಣ್ಯದಲ್ಲಿ ನಿಮಗೆ ಮಾಡಿದ್ದನ್ನೂ
Neevu ee sthalakke baruva varege kartanu aranyadalli nimage maadiddannoo
Deuteronomy 11:5 in English
- King James Version (KJV)
- And what he did unto you in the wilderness, until ye came into this place;
- World English Bible (WEB)
- and what he did to you in the wilderness until you came to this place;
- American Standard Version (ASV)
- and what he did unto you in the wilderness, until ye came unto this place;
- Bible in Basic English (BBE)
- And what he did for you in the waste land, till you came to this place;
- Darby Translation (DBY)
- — and what he did unto you in the wilderness, until ye came to this place;
- Webster's Bible (WBS)
- And what he did to you in the wilderness, until ye came to this place;
- Young's Literal Translation (YLT)
- and that which He hath done to you in the wilderness, till your coming in unto this place;
Read in context
- 3ಆತನು ಐಗುಪ್ತದ ಮಧ್ಯದಲ್ಲಿ ಐಗುಪ್ತದ ಅರಸನಾದ ಫರೋಹನಿಗೆ ಮತ್ತು ಅವನ ಎಲ್ಲಾ ದೇಶಕ್ಕೆ ಮಾಡಿದ ಆತನ ಸೂಚಕಕಾರ್ಯಗಳನ್ನೂ ಕೃತ್ಯಗ ಳನ್ನೂ
- 4ಐಗುಪ್ತದ ಸೈನ್ಯಕ್ಕೆ ಅವರ ಕುದುರೆಗಳಿಗೆ ಮತ್ತು ರಥಗಳಿಗೆ ಮಾಡಿದ್ದನ್ನೂ ಅವರು ನಿಮ್ಮನ್ನು ಹಿಂದಟ್ಟುವಾಗ ಕೆಂಪು ಸಮುದ್ರದ ನೀರು ಅವರ ಮೇಲೆ ಬರಮಾಡಿದ್ದನ್ನೂ ಕರ್ತನು ಇಂದಿನ ವರೆಗೆ ಅವರನ್ನು ನಾಶಮಾಡಿದ್ದನ್ನೂ
- 5ನೀವು ಈ ಸ್ಥಳಕ್ಕೆ ಬರುವ ವರೆಗೆ ಕರ್ತನು ಅರಣ್ಯದಲ್ಲಿ ನಿಮಗೆ ಮಾಡಿದ್ದನ್ನೂ
- 6ಆತನು ರೂಬೇನನ ಮಗನಾದ ಎಲಿಯಾಬನ ಕುಮಾರರಾಗಿರುವ ದಾತಾನನಿಗೂ ಅಬೀರಾಮನಿಗೂ ಮಾಡಿದ್ದನ್ನೂ ಭೂಮಿಯು ತನ್ನ ಬಾಯನ್ನು ತೆರೆದು ಅವರ ಮನೆಗಳನ್ನೂ ಡೇರೆಗಳನ್ನೂ ಮೇರೆಗಳನ್ನೂ ಅವರಿಗಿದ್ದ ಎಲ್ಲಾ ಆಸ್ತಿಯನ್ನೂ ಸಮಸ್ತ ಇಸ್ರಾಯೇಲ್ ಮಧ್ಯದಲ್ಲಿ ಹೇಗೆ ನುಂಗಿತೆಂಬದನ್ನೂ ನೋಡದೆ ತಿಳಿಯದೆ ಇರುವ ನಿಮ್ಮ ಮಕ್ಕಳ ಸಂಗಡ ನಾನು ಮಾತನಾಡುವದಿಲ್ಲ.
- 7ಆದರೆ ನಿಮ್ಮ ಕಣ್ಣು ಗಳು ಕರ್ತನು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ನೋಡಿದವು.
Cross references
- Psalm 77:20 ಕೀರ್ತನೆಗಳು 77:20ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
- Psalm 106:12–48 ಕೀರ್ತನೆಗಳು 106:12–48ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು. ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು. ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು. ಆಗ ಅವರ ಬೇಡಿಕೆಯಂತೆ ಅವರಿಗೆ ಆತನು ಕೊಟ್ಟನು; ಆದರೆ ಅವರ ಪ್ರಾಣದಲ್ಲಿ ಕ್ಷೀಣತೆಯನ್ನು ಕಳುಹಿಸಿದನು. ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು. ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು. ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು. ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು. ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು. ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು. ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು. ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು. ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು. ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು. ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು. ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು. ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು. ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು. ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು. ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು. ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು. ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು. ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು. ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು. ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು. ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು. ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು. ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು. ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು. ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು. ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ. ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
- Psalm 78:14–72 ಕೀರ್ತನೆಗಳು 78:14–72ಹಗಲಿನಲ್ಲಿ ಮೇಘದಿಂದ, ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡಿಸಿದನು. ಅರಣ್ಯ ದಲ್ಲಿ ಆತನು ಬಂಡೆಗಳನ್ನು ಸೀಳಿ ಅವರಿಗೆ ಮಹಾ ಜಲಾಗಾಧಗಳ ಹಾಗೆ ನೀರು ಕುಡಿಯಲು ಕೊಟ್ಟನು. ಬಂಡೆಯೊಳಗಿಂದ ಹೊಳೆಗಳನ್ನು ಹೊರಗೆ ತಂದು ನದಿಗಳಂತೆ ನೀರನ್ನು ಹರಿಯಮಾಡಿದನು. ಆದರೆ ಅವರು ಇನ್ನೂ ಆತನಿಗೆ ವಿರೋಧವಾಗಿ ಪಾಪಮಾಡಿ ಅರಣ್ಯದಲ್ಲಿ ಮಹೋನ್ನತನಿಗೆ ಕೋಪ ವನ್ನೆಬ್ಬಿಸಿ ದೇವರನ್ನು ತಮ್ಮ ಹೃದಯದಲ್ಲಿ ಶೋಧಿಸು ವವರಾಗಿ ತಮ್ಮ ದುರಾಶೆಗಳಿಗ್ಕೋಸ್ಕರ ಆಹಾರವನ್ನು ಕೇಳಿದರು. ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು. ಇಗೋ, ಆತನು ಬಂಡೆಯನ್ನು ಹೊಡೆಯಲಾಗಿ ನೀರು ಹೊರಟಿತು; ಹಳ್ಳಗಳು ಹರಿದವು; ರೊಟ್ಟಿಯನ್ನೂ ಕೊಡಬಲ್ಲನೋ? ತನ್ನ ಜನರಿಗೆ ಮಾಂಸವನ್ನು ಸಿದ್ಧ ಮಾಡುವನೋ ಅಂದರು. ಆದದರಿಂದ ಕರ್ತನು ಇದನ್ನು ಕೇಳಿದಾಗ ಉಗ್ರನಾದನು; ಯಾಕೋಬನಲ್ಲಿ ಬೆಂಕಿ ಹೊತ್ತಿತ್ತು; ಇಸ್ರಾಯೇಲಿನ ಮೇಲೆ ಕೋಪವು ಸಹ ಎದ್ದಿತು. ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ; ಆತನ ರಕ್ಷಣೆಯಲ್ಲಿ ಭರವಸವಿಡಲಿಲ್ಲ. ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು. ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು. ಮೂಡಣ ಗಾಳಿ ಯನ್ನು ಆಕಾಶದಲ್ಲಿ ಹುಟ್ಟಿಸಿ ತನ್ನ ಬಲದಿಂದ ದಕ್ಷಿಣ ಗಾಳಿಯನ್ನು ತಂದನು. ಧೂಳಿನಂತೆ ಮಾಂಸವನ್ನೂ ಸಮುದ್ರದ ಮರಳಿನಂತೆ ರೆಕ್ಕೆಯುಳ್ಳ ಪಕ್ಷಿಗಳನ್ನೂ ಅವರ ಮೇಲೆ ಸುರಿಸಿ ಅವರ ಮಧ್ಯದಲ್ಲಿಯೂ ಅವರ ನಿವಾಸಗಳ ಸುತ್ತಲೂ ಬೀಳಮಾಡಿದನು. ಅವರು ತಿಂದು ಬಹಳ ತೃಪ್ತಿಯಾದರು; ಅವರು ಆಶಿಸಿದ್ದನ್ನು ಆತನು ಅವರಿಗೆ ಕೊಟ್ಟನು. ಅವರು ತಮ್ಮ ಆಶೆಯನ್ನು ಬಿಡದೆ ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ ದೇವರ ಕೋಪವು ಅವರ ಮೇಲೆ ಎದ್ದು ಅವರಲ್ಲಿ ಕೊಬ್ಬಿದವ ರನ್ನು ಕೊಂದುಹಾಕಿ ಇಸ್ರಾಯೇಲಿನ ಪ್ರಾಯಸ್ಥರನ್ನು ಹೊಡೆದು ಬೀಳಿಸಿತು. ಇದೆಲ್ಲಾ ಆದಾಗ್ಯೂ ಅವರು ಇನ್ನೂ ಪಾಪಮಾಡಿ ಆತನ ಆದ್ಭುತಗಳನ್ನು ನಂಬ ಲಿಲ್ಲ. ಆಗ ಆತನು ಅವರ ದಿವಸಗಳನ್ನು ಉಸಿರಿ ನಂತೆಯೂ ಅವರ ವರುಷಗಳನ್ನು ಕಳವಳದಲ್ಲಿಯೂ ಮುಗಿಸಿದನು. ಅವರನ್ನು ಕೊಲ್ಲುವಾಗ ಅವರು ಆತನನ್ನು ಹುಡುಕಿ ತಿರುಗಿಕೊಂಡು ದೇವರನ್ನು ಹೊತ್ತಾರೆ ವಿಚಾರಿಸಿ ದೇವರು ತಮ್ಮ ಬಂಡೆ ಎಂದೂ ಮಹೋನ್ನತ ನಾದ ದೇವರು ತಮ್ಮ ವಿಮೋಚಕನೆಂದೂ ಜ್ಞಾಪಕ ಮಾಡಿಕೊಂಡರು. ಆದಾಗ್ಯೂ ತಮ್ಮ ಬಾಯಿಗಳಿಂದ ಆತನಿಗೆ ಮುಖಸ್ತುತಿ ಮಾಡಿ ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದರು. ಅವರ ಹೃದಯವು ಆತನ ಸಂಗಡ ಇರಲಿಲ್ಲ ಅವರು ಆತನ ಒಡಂಬಡಿ ಕೆಯಲ್ಲೂ ಸ್ಥಿರವಾಗಿರಲಿಲ್ಲ ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ. ಅವರು ಕೇವಲ ಮನುಷ್ಯ ರೆಂದು, ಹಾರಿಹೋಗಿ ತಿರುಗಿಬಾರದ ಗಾಳಿಯಾಗಿ ದ್ದಾರೆಂದು ಆತನು ಜ್ಞಾಪಕಮಾಡಿಕೊಂಡನು. ಎಷ್ಟೋ ಸಾರಿ ಅವರು ಅರಣ್ಯದಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಕಾಡಿನಲ್ಲಿ ಆತನನ್ನು ದುಃಖ ಪಡಿಸಿದರು. ಹೌದು, ಅವರು ತಿರುಗಿಬಿದ್ದು ದೇವ ರನ್ನು ಪರೀಕ್ಷಿಸಿ ಇಸ್ರಾಯೇಲಿನ ಪರಿಶುದ್ಧನಿಗೆ ಮಿತಿ ಮಾಡಿದರು. ಆತನು ಅವರನ್ನು ವೈರಿಯಿಂದ ವಿಮೋಚಿಸಿದ್ದನ್ನೂ ಐಗುಪ್ತದಲ್ಲಿ ಆದ ಸೂಚಕ ಕಾರ್ಯಗಳನ್ನೂ ಸೋನ್ ಬೈಲಿನಲ್ಲಿ ನಡಿಸಿದ ಅದ್ಭುತ ಗಳನ್ನೂ ಮಾಡಿದ ದಿವಸವನ್ನೂ ಆತನ ಕೈಯನ್ನೂ ಅವರು ಜ್ಞಾಪಕಮಾಡಿಕೊಳ್ಳಲಿಲ್ಲ. ಅವರು ಕುಡಿ ಯಲಾರದ ಹಾಗೆ ಅವರ ನದಿಗಳನ್ನೂ ಹೊಳೆಗ ಳನ್ನೂ ಆತನು ರಕ್ತಕ್ಕೆ ಮಾರ್ಪಡಿಸಿದನು. ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು. ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು ಅವರ ದ್ರಾಕ್ಷೇ ಬಳ್ಳಿಗ ಳನ್ನು ಕಲ್ಮಳೆಯಿಂದಲೂ ಆಲದ ಮರಗಳನ್ನು ಮಂಜಿ ನಿಂದಲೂ ನಾಶ ಮಾಡಿ ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು. ಉಪದ್ರಪಡಿಸುವ ದೂತರನ್ನೋ ಎಂಬಂತೆ ತನ್ನ ಕೋಪದ ಉರಿಯನ್ನು ಉಗ್ರ, ರೋಷ, ಇಕ್ಕಟ್ಟುಗಳನ್ನು ಅವರ ಮೇಲೆ ಸುರಿಸಿದನು. ತನ್ನ ಕೋಪಕ್ಕೆ ದಾರಿಮಾಡಿ ಅವರ ಪ್ರಾಣವನ್ನು ಸಾವಿನಿಂದ ಉಳಿಸದೆ ಅವರ ಜೀವವನ್ನು ಜಾಡ್ಯಕ್ಕೆ ಒಪ್ಪಿಸಿ ಐಗುಪ್ತದಲ್ಲಿ ಚೊಚ್ಚಲವಾದವರೆಲ್ಲರನ್ನೂ ಹಾಮನ ಗುಡಾರಗಳಲ್ಲಿ ಶಕ್ತಿಯ ಪ್ರಥಮ ಫಲವನ್ನೂ ಹೊಡೆದನು. ಕುರಿಗಳ ಹಾಗೆ ತನ್ನ ಜನರನ್ನು ಹೊರತಂದು, ಮಂದೆಯ ಹಾಗೆ ಅರಣ್ಯದಲ್ಲಿ ಅವರನ್ನು ನಡಿಸಿದನು. ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು. ತನ್ನ ಪರಿಶುದ್ದಾಲಯದ ಮೇರೆಗೂ ಆತನ ಬಲಗೈ ಕೊಂಡುಕೊಂಡ ಈ ಪರ್ವತಕ್ಕೂ ಅವರನ್ನು ಬರ ಮಾಡಿದನು. ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು. ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ. ತಮ್ಮ ಪಿತೃಗಳ ಹಾಗೆ ತಿರುಗಿಬಿದ್ದು ಅಪ ನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ವಾರೆ ಯಾದರು. ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು. ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು, ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು, ತನ್ನ ಬಲ ವನ್ನು ಸೆರೆಗೂ ಮಹಿಮೆಯನ್ನು ವೈರಿಯ ಕೈಗೂ ಕೊಟ್ಟುಬಿಟ್ಟನು. ತನ್ನ ಜನರನ್ನು ಕತ್ತಿಗೆ ಒಪ್ಪಿಸಿಕೊಟ್ಟು ತನ್ನ ಬಾಧ್ಯತೆಗೆ ವಿರೋಧವಾಗಿ ಉಗ್ರನಾದನು. ಅವರ ಪ್ರಾಯಸ್ಥರನ್ನು ಬೆಂಕಿಯು ದಹಿಸಿಬಿಟ್ಟಿತು; ಅವರ ಕನ್ಯೆಯರು ಮದುವೆಯಾಗಲಿಲ್ಲ. ಅವರ ಯಾಜಕರು ಕತ್ತಿಯಿಂದ ಸಂಹಾರವಾದರು; ಅವರ ವಿಧವೆಯರು ಗೋಳಾಡಲಿಲ್ಲ. ಆಗ ಕರ್ತನು ನಿದ್ದೆಯಿಂದ ಎಚ್ಚತ್ತವನ ಹಾಗೆಯೂ ದ್ರಾಕ್ಷಾರಸದಿಂದ ಆರ್ಭಟಿಸುವ ಪರಾಕ್ರಮಶಾಲಿಯ ಹಾಗೆಯೂ ಎಚ್ಚತ್ತು, ತನ್ನ ವೈರಿಗಳನ್ನು ಹಿಂದಕ್ಕೆ ಹೊಡೆದು, ನಿತ್ಯ ನಿಂದೆಯನ್ನು ಅವರಿಗೆ ಕೊಟ್ಟನು. ಆತನು ಯೋಸೇಫನ ಗುಡಾರವನ್ನು ತಿರಸ್ಕರಿಸಿ, ಎಫ್ರಾಯಾಮನ ಗೋತ್ರವನ್ನು ಆದು ಕೊಳ್ಳದೆ, ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು, ಉನ್ನತವಾದವುಗಳಂತೆಯೂ ಯುಗಯುಗಕ್ಕೂ ತಾನು ಅಸ್ತಿವಾರ ಹಾಕಿದ ಭೂಮಿಯಂತೆಯೂ ತನ್ನ ಪರಿಶುದ್ಧಾಲಯವನ್ನು ಕಟ್ಟಿದನು ಇದಲ್ಲದೆ ತನ್ನ ಸೇವಕನಾದ ದಾವೀದನನ್ನು ಆದುಕೊಂಡು, ಕುರಿ ಹಟ್ಟಿಗಳಿಂದ ಅವನನ್ನು ತೆಗೆದು, ತನ್ನ ಪ್ರಜೆಯಾದ ಯಾಕೋಬನ್ನೂ ಭಾದ್ಯತೆಯಾದ ಇಸ್ರಾಯೇಲನ್ನೂ ಮೇಯಿಸುವ ಹಾಗೆ, ಅವನನ್ನು ಕುರಿಮರಿಗಳ ಹಿಂಡಿ ನಿಂದ ತಂದನು.ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು. ಆತನು ತನ್ನ ಹೃದಯದ ಯಥಾ ರ್ಥತ್ವದ ಪ್ರಕಾರ ಅವರನ್ನು ಮೇಯಿಸಿ ತನ್ನ ಹಸ್ತ ಕೌಶಲ್ಯದಿಂದ ಅವರನ್ನು ನಡಿಸಿದನು.
- Psalm 105:39–41 ಕೀರ್ತನೆಗಳು 105:39–41ಆತನು ನೆರಳಿಗಾಗಿ ಮೇಘ ವನ್ನೂ ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ವಿಸ್ತರಿಸಿದನು. ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು. ಆತನು ಬಂಡೆಯನ್ನು ತೆರೆಯಲು ನೀರು ಹೊರಟಿತು; ಅದು ಒಣಗಿದ ಸ್ಥಳಗಳಲ್ಲಿ ನದಿಯಾಗಿ ಹರಿಯಿತು.