Deuteronomy · chapter 15 · verse 1
Deuteronomy 15:1 in Kannada
ಪ್ರತಿ ಏಳು ವರುಷಗಳ ಅಂತ್ಯದಲ್ಲಿ ಬಿಡುಗಡೆಯನ್ನು ಮಾಡಬೇಕು.
Prati elu varushagala antyadalli bidugadeyannu maadabeku.
Deuteronomy 15:1 in English
- King James Version (KJV)
- At the end of [every] seven years thou shalt make a release.
- World English Bible (WEB)
- At the end of every seven years, you shall cancel debts.
- American Standard Version (ASV)
- At the end of every seven years thou shalt make a release.
- Bible in Basic English (BBE)
- At the end of every seven years there is to be a general forgiveness of debt.
- Darby Translation (DBY)
- At the end of seven years thou shalt make a release,
- Webster's Bible (WBS)
- At the end of [every] seven years thou shalt make a release.
- Young's Literal Translation (YLT)
- 'At the end of seven years thou dost make a release,
Read in context
- 1ಪ್ರತಿ ಏಳು ವರುಷಗಳ ಅಂತ್ಯದಲ್ಲಿ ಬಿಡುಗಡೆಯನ್ನು ಮಾಡಬೇಕು.
- 2ಬಿಡು ಗಡೆಯ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡ ಬೇಕು; ಅದು ಕರ್ತನ ಬಿಡುಗಡೆ ಎಂದು ಕರೆಯಲ್ಪಟ್ಟ ಕಾರಣ ತನ್ನ ನೆರೆಯವನಿಂದಲೂ ತನ್ನ ಸಹೋದರ ನಿಂದಲೂ ಸಾಲ ತೆಗೆದುಕೊಳ್ಳಬಾರದು.
- 3ಅನ್ಯನಿಂದ ತಿರಿಗಿ ತೆಗೆದುಕೊಳ್ಳಬಹುದು; ಆದರೆ ನಿನ್ನ ಸಹೋದರನ ಬಳಿಯಲ್ಲಿ ನಿನಗಿರುವದನ್ನು ನೀನು ಬಿಟ್ಟುಬಿಡಬೇಕು.
Cross references
- Deuteronomy 31:10 ಧರ್ಮೋಪದೇಶಕಾಂಡ 31:10ಮೋಶೆಯು ಅವರಿಗೆ--ಪ್ರತಿ ಏಳು ವರುಷಗಳ ಕೊನೆಯಲ್ಲಿರುವ ಬಿಡುಗಡೆಯ ಪರಿಶುದ್ಧವಾದ ವರುಷದಲ್ಲಿ, ಅಂದರೆ ಗುಡಾರಗಳ ಹಬ್ಬದಲ್ಲಿ
- Leviticus 25:2–4 ಯಾಜಕಕಾಂಡ 25:2–4ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು. ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು. ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.
- Exodus 23:10–11 ವಿಮೋಚನಕಾಂಡ 23:10–11ಆರು ವರುಷ ನಿನ್ನ ಭೂಮಿಗೆ ಬೀಜಹಾಕಿ ಅದರ ಬೆಳೆಯನ್ನು ಕೂಡಿಸಬೇಕು. ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು ಅದನ್ನು ಬೀಳು ಬಿಡಬೇಕು. ಆಗ ನಿನ್ನ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ; ಅವರು ಬಿಟ್ಟದ್ದನ್ನು ಹೊಲದ ಪಶುಗಳು ತಿನ್ನಲಿ. ಹೀಗೆ ನಿನ್ನ ದ್ರಾಕ್ಷೇ ತೋಟದಲ್ಲಿಯೂ ಎಣ್ಣೇಮರಗಳ ತೋಪಿನಲ್ಲಿಯೂ ಮಾಡಬೇಕು.
- Exodus 21:2 ವಿಮೋಚನಕಾಂಡ 21:2ನೀನು ಇಬ್ರಿಯ ದಾಸನನ್ನು ಕೊಂಡುಕೊಂಡರೆ ಅವನು ಆರು ವರುಷ ನಿನಗೆ ಸೇವೆಮಾಡಬೇಕು; ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಅವನು ಹೋಗಲಿ.
- Luke 4:18–19 ಲೂಕನು 4:18–19ಕರ್ತನ ಆತ್ಮವು ನನ್ನ ಮೇಲೆ ಇದೆ; ಯಾಕಂದರೆ ಬಡವರಿಗೆ ಸುವಾರ್ತೆ ಸಾರುವದಕ್ಕೆ ಆತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯ ವುಳ್ಳವರನ್ನು ಸ್ವಸ್ಥಮಾಡುವದಕ್ಕೂ ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವದಕ್ಕೂ ಕುರುಡರಿಗೆ ದೃಷ್ಟಿ ಕೊಡುವದಕ್ಕೂ ಜಜ್ಜಲ್ಪಟ್ಟವರನ್ನು ಬಿ ಕರ್ತನ ಅಂಗೀಕೃತವಾದ ವರುಷವನ್ನು ಸಾರುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ ಎಂದು ಬರೆದಿರುವದನ್ನು ಕಂಡು ಓದಿದನು.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Jeremiah 36:8–18 ಯೆರೆಮೀಯ 36:8–18ಆಗ ಪ್ರವಾದಿ ಯಾದ ಯೆರೆವಿಾಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಬಾರೂಕನು ಮಾಡಿ ಕರ್ತನ ವಾಕ್ಯಗಳನ್ನು ಪುಸ್ತಕ ದಿಂದ ಕರ್ತನ ಆಲಯದಲ್ಲಿ ಓದಿದನು. ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾ ಕೀಮನ ಐದನೇ ವರುಷದ ಒಂಭತ್ತನೇ ತಿಂಗಳಲ್ಲಿ ಅವರು ಯೆರೂಸಲೇಮಿನಲ್ಲಿರುವ ಎಲ್ಲಾ ಜನರಿಗೂ ಯೆಹೂದದ ಪಟ್ಟಣಗಳಿಂದ ಯೆರೂಸಲೇಮಿಗೆ ಬಂದ ಜನರೆಲ್ಲರಿಗೂ ಕರ್ತನ ಸನ್ನಿಧಿಯಲ್ಲಿ ಉಪವಾಸವನ್ನು ಸಾರಿದರು. ಆಗ ಬಾರೂಕನು ಪುಸ್ತಕದಿಂದ ಯೆರೆ ವಿಾಯನ ವಾಕ್ಯಗಳನ್ನು ಕರ್ತನ ಆಲಯದಲ್ಲಿ ಲೇಖಕ ನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೊಠಡಿ ಯಲ್ಲಿ, ಮೇಲಿನ ಅಂಗಳದಲ್ಲಿ, ಕರ್ತನ ಆಲಯದ ಹೊಸ ಬಾಗಿಲಿನ ಪ್ರವೇಶದಲ್ಲಿ ಎಲ್ಲಾ ಜನರ ಕಿವಿಗಳಲ್ಲಿ ಓದಿ ಹೇಳಿದನು. ಶಾಫಾನನ ಮಗನಾದ ಗೆಮ ರ್ಯನ ಮಗನಾದ ವಿಾಕಾಯನು ಕರ್ತನ ವಾಕ್ಯಗಳ ನ್ನೆಲ್ಲಾ ಆ ಪುಸ್ತಕದ ಮೇರೆಗೆ ಕೇಳಿದ ತರುವಾಯ ಅವನು ಅರಸನ ಮನೆಗೆ, ಲೇಖಕನ ಕೊಠಡಿಗೆ ಇಳಿದು ಹೋದನು; ಅಗೋ, ಅಲ್ಲಿ ಪ್ರಧಾನರೆಲ್ಲರು ಕೂತುಕೊಂಡಿದ್ದರು; ಯಾರಂದರೆ--ಲೇಖಕನಾದ ಎಲೀಷಾಮನೂ ಶೆಮಾಯನ ಮಗನಾದ ದೆಲಾ ಯನೂ ಅಕ್ಬೋರನ ಮಗನಾದ ಎಲ್ನಾಥಾನೂ ಶಾಫಾ ನನ ಮಗನಾದ ಗೆಮರ್ಯನೂ ಹನನೀಯನ ಮಗ ನಾದ ಚಿದ್ಕೀಯನೂ ಇವರೇ. ಆಗ ಬಾರೂಕನು ಆ ಪುಸ್ತಕವನ್ನು ಜನರಿಗೆ ಓದಿ ಹೇಳಿದಾಗ ವಿಾಕಾ ಯನು ತಾನು ಕೇಳಿದ ವಾಕ್ಯಗಳನ್ನೆಲ್ಲಾ ಅವರಿಗೆ ತಿಳಿಸಿದನು. ಆದದರಿಂದ ಪ್ರಧಾನರೆಲ್ಲರೂ ಕೂಷಿಯ ಮಗನಾದ ಶೆಲೆಮ್ಯನ ಮಗನಾದ ನೆಥನ್ಯನ ಮಗನಾದ ಯೆಹೂದಿಯನ್ನು ಬಾರೂಕನ ಬಳಿಗೆ ಕಳುಹಿಸಿ--ನೀನು ಜನರಿಗೆ ಓದಿ ಹೇಳಿದ ಸುರಳಿಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಬಾ ಎಂದು ಹೇಳಿದರು; ಹಾಗೆಯೇ ನೇರೀಯನ ಮಗನಾದ ಬಾರೂಕನು ಸುರಳಿಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು. ಆಗ ಅವರು ಅವನಿಗೆ--ಈಗ ಕೂತುಕೊಂಡು ನಮಗೆ ಓದಿ ಹೇಳು ಅಂದರು; ಆಗ ಬಾರೂಕನು ಅವರಿಗೆ ಓದಿ ಹೇಳಿದನು. ಆಗ ಆದದ್ದೇನಂದರೆ--ಅವರು ಆ ವಾಕ್ಯಗಳನ್ನೆಲ್ಲಾ ಕೇಳಿದ ಮೇಲೆ ಒಬ್ಬರಿಗೊಬ್ಬರು ಹೆದರಿಕೊಂಡು--ನಾವು ನಿಶ್ಚಯವಾಗಿ ಈ ವಾಕ್ಯಗಳನ್ನೆಲ್ಲಾ ಅರಸನಿಗೆ ತಿಳಿಸುತ್ತೇ ವೆಂದು ಬಾರೂಕನಿಗೆ ಹೇಳಿದರು. ಅವರು ಬಾರೂಕ ನಿಗೆ--ನೀನು ಅವನ ಬಾಯಿಂದ ಈ ವಾಕ್ಯಗಳನ್ನೆಲ್ಲಾ ಹೇಗೆ ಬರೆದದ್ದನ್ನು ನಮಗೆ ತಿಳಿಸು ಅಂದರು. ಆಗ ಬಾರೂಕನು ಅವರಿಗೆ--ಅವನು ಬಾಯಿಂದ ಈ ವಾಕ್ಯ ಗಳನ್ನೆಲ್ಲಾ ನನಗೆ ಹೇಳಿಕೊಟ್ಟನು; ನಾನು ಅವುಗಳನ್ನು ಮಸಿಯಿಂದ ಪುಸ್ತಕದಲ್ಲಿ ಬರೆದೆನು ಅಂದನು.