Deuteronomy · chapter 18 · verse 5
Deuteronomy 18:5 in Kannada
ಅವನೂ ಅವನ ಕುಮಾರರೂ ನಿತ್ಯವಾಗಿ ಕರ್ತನ ಹೆಸರಿನಲ್ಲಿ ಸೇವಿಸುತ್ತಾ ನಿಂತಿರುವ ಹಾಗೆ ಅವನನ್ನು ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡಿದ್ದಾನೆ.
Avanoo avana kumaararoo nityavaagi kartana hesarinalli sevisuttaa nintiruva haage avanannu ninna devaraada kartanu ninna ellaa gotragalo laginda aadukondiddaane.
Deuteronomy 18:5 in English
- King James Version (KJV)
- For the LORD thy God hath chosen him out of all thy tribes, to stand to minister in the name of the LORD, him and his sons for ever.
- World English Bible (WEB)
- For the LORD your God has chosen him out of all your tribes to stand to minister in the LORD’s name, him and his sons forever.
- American Standard Version (ASV)
- For Jehovah thy God hath chosen him out of all thy tribes, to stand to minister in the name of Jehovah, him and his sons for ever.
- Bible in Basic English (BBE)
- For he, and his sons after him for ever, have been marked out by the Lord your God from all your tribes, to do the work of priests in the name of the Lord.
- Darby Translation (DBY)
- for Jehovah thy God hath chosen him out of all thy tribes, that he may stand to serve in the name of Jehovah, he and his sons continually.
- Webster's Bible (WBS)
- For the LORD thy God hath chosen him out of all thy tribes, to stand to minister in the name of the LORD, him and his sons for ever.
- Young's Literal Translation (YLT)
- for on him hath Jehovah thy God fixed, out of all thy tribes, to stand to serve in the name of Jehovah, He and his sons continually.
Read in context
- 3ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು.
- 4ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು.
- 5ಅವನೂ ಅವನ ಕುಮಾರರೂ ನಿತ್ಯವಾಗಿ ಕರ್ತನ ಹೆಸರಿನಲ್ಲಿ ಸೇವಿಸುತ್ತಾ ನಿಂತಿರುವ ಹಾಗೆ ಅವನನ್ನು ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡಿದ್ದಾನೆ.
- 6ಇದಲ್ಲದೆ ಲೇವಿಯು ಸಮಸ್ತ ಇಸ್ರಾಯೇಲಿನ ಲ್ಲಿರುವ ನಿನ್ನ ಯಾವ ಬಾಗಲುಗಳಿಂದ ಅವನು ಪ್ರವಾಸವಾಗಿರುವ ಸ್ಥಳದಿಂದ ಬಂದು ತನ್ನ ಮನಸ್ಸಿನ ಪೂರ್ಣಾಪೇಕ್ಷೆಯೊಂದಿಗೆ ಕರ್ತನು ಆದುಕೊಳ್ಳುವ ಸ್ಥಳಕ್ಕೆ ಬಂದರೆ
- 7ಅಲ್ಲಿ ಕರ್ತನ ಮುಂದೆ ನಿಂತು ಕೊಳ್ಳುವ ಅವನ ಸಹೋದರರಾದ ಲೇವಿಯರ ಹಾಗೆ ಅವನು ತನ್ನ ದೇವರಾದ ಕರ್ತನ ಹೆಸರಿ ನಲ್ಲಿ ಸೇವೆಮಾಡಬಹುದು.
Cross references
- Deuteronomy 10:8 ಧರ್ಮೋಪದೇಶಕಾಂಡ 10:8ಆ ಕಾಲದಲ್ಲಿ ಕರ್ತನು ಲೇವಿಗೋತ್ರವನ್ನು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರು ವದಕ್ಕೂ ಕರ್ತನ ಮುಂದೆ ನಿಂತುಕೊಂಡು ಆತನಿಗೆ ಸೇವೆಮಾಡಿ ಆತನ ಹೆಸರಿನಲ್ಲಿ ಆಶೀರ್ವದಿಸುವ ದಕ್ಕೂ ಈ ದಿನದ ವರೆಗೂ ಪ್ರತ್ಯೇಕಿಸಿದನು.
- Numbers 3:10 ಅರಣ್ಯಕಾಂಡ 3:10ಇದಲ್ಲದೆ ಆರೋನನನ್ನೂ ಅವನ ಕುಮಾರ ರನ್ನೂ ನೇಮಿಸಬೇಕು. ಅವರು ತಮ್ಮ ಯಾಜಕತ್ವವನ್ನು ನಡಿಸಲಿ. ಪರಕೀಯನು ಸವಿಾಪಿಸಿದರೆ ಸಾಯಬೇಕು.
- Deuteronomy 17:12 ಧರ್ಮೋಪದೇಶಕಾಂಡ 17:12ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು;
- Numbers 16:5 ಅರಣ್ಯಕಾಂಡ 16:5ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ:
- Numbers 17:5–9 ಅರಣ್ಯಕಾಂಡ 17:5–9ಆಗ ಏನಾಗುವ ದಂದರೆ, ನಾನು ಯಾವನನ್ನು ಆದುಕೊಳ್ಳುತ್ತೇನೋ ಆ ಮನುಷ್ಯನ ಕೋಲು ಚಿಗುರುವದು. ಹೀಗೆ ಇಸ್ರಾ ಯೇಲ್ ಮಕ್ಕಳು ನಿಮಗೆ ವಿರೋಧವಾಗಿ ಗುಣುಗುಟ್ಟು ವದನ್ನು ನಾನು ನಿಲ್ಲಿಸಿಬಿಡುವೆನು ಅಂದನು. ಹಾಗೆಯೇ ಮೋಶೆಯು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಮನೆಗಳ ಪ್ರಕಾರ ಒಬ್ಬೊಬ್ಬ ಪ್ರಧಾನಿ ಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು. ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರ ದೊಳಗೆ ಕರ್ತನ ಸಮ್ಮುಖದಲ್ಲಿ ಇಟ್ಟನು. ಮರು ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಸಾಕ್ಷೀ ಗುಡಾರದೊಳೆಗೆ ಪ್ರವೇಶಿಸುವಾಗ ಇಗೋ, ಲೇವಿ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. ಆಗ ಮೋಶೆಯು ಎಲ್ಲಾ ಕೋಲುಗಳನ್ನು ಕರ್ತನ ಸನ್ನಿಧಿಯಿಂದ ಇಸ್ರಾಯೇಲ್ ಮಕ್ಕಳೆಲ್ಲರಿಗೆ ತೋರಿಸುವದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲನ್ನು ತೆಗೆದುಕೊಂಡರು.
- Exodus 28:1–14 ವಿಮೋಚನಕಾಂಡ 28:1–14ಇದಲ್ಲದೆ ನನಗೆ ಯಾಜಕನ ಸೇವೆಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್ ಅಬೀಹೂ ಎಲಿಯೇಜರ್ ಈತಾಮಾರ್ ಎಂಬವರನ್ನೂ ಇಸ್ರಾಯೇಲ್ ಮಕ್ಕಳಿಂದ ನಿನ್ನ ಹತ್ತಿರ ಬರಮಾಡ ಬೇಕು. ನಿನ್ನ ಸಹೋದರನಾದ ಆರೋನನ ಗೌರವ ಕ್ಕೋಸ್ಕರವೂ ಅಲಂಕಾರಕ್ಕೋಸ್ಕರವೂ ಪರಿಶುದ್ಧ ವಸ್ತ್ರಗಳನ್ನು ನೀನು ಮಾಡಿಸಬೇಕು. ಇದಲ್ಲದೆ ನಾನು ಜ್ಞಾನದ ಆತ್ಮವನ್ನು ತುಂಬಿಸಿದ ವಿವೇಕ ಹೃದಯ ವಿರುವವರ ಸಂಗಡ ನೀನು ಮಾತನಾಡು, ಅವರು ಆರೋನನ ವಸ್ತ್ರಗಳನ್ನು ಮಾಡಲಿ. ಅವನು ನನಗೆ ಯಾಜಕ ಸೇವೆಮಾಡುವಂತೆ ನೀನು ಅವನನ್ನು ಪ್ರತಿಷ್ಠಿಸ ಬೇಕು. ಅವರು ಮಾಡಬೇಕಾದ ವಸ್ತ್ರಗಳು ಇವೇ: ಎದೆಪದಕವು ಎಫೋದ ನಿಲುವಂಗಿ ಕಸೂತಿಯ ಕೆಲಸದ ಮೇಲಂಗಿ ಮುಂಡಾಸ ನಡುಕಟ್ಟು; ನಿನ್ನ ಸಹೋದರ ನಾದ ಆರೋನನೂ ಅವನ ಕುಮಾರರೂ ನನಗೆ ಯಾಜಕ ಸೇವೆಮಾಡುವದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಬೇಕು. ಅವರು ಬಂಗಾರವನ್ನೂ ನೀಲಿ ಧೂಮ್ರ ರಕ್ತವರ್ಣದ ನೂಲನ್ನೂ ನಯವಾದ ನಾರು ಮಡಿಯನ್ನೂ ತಕ್ಕೊಳ್ಳಬೇಕು. ಎಫೋದನ್ನು ಬಂಗಾರದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಕುಶಲ ಕಲೆಯಿಂದಲೂ ಮಾಡಬೇಕು. ಅದರ ಎರಡೂ ಅಂಚುಗಳಲ್ಲಿ ಜೋಡಿಸುವದಕ್ಕೆ ಅದಕ್ಕೆ ಎರಡು ಹೆಗಲು ಭಾಗಗಳಿರಬೇಕು, ಅವು ಜೋಡಿಸಲ್ಪಡಬೇಕು. ಅದರ ಮೇಲಿರುವ ವಿಚಿತ್ರ ವಾದ ಎಫೋದಿನ ನಡುಕಟ್ಟು ಅದೇ ಕೆಲಸದ್ದಾಗಿ ಅಂದರೆ ಬಂಗಾರದಿಂದಲೂ ನೀಲಿ ಧೂಮ್ರ ರಕ್ತ ವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಮಾಡಿದ್ದಾಗಿರಬೇಕು. ನೀನು ಎರಡು ಗೋಮೇಧಿಕ ಕಲ್ಲುಗಳನ್ನು ತೆಗೆದುಕೊಂಡು ಇಸ್ರಾ ಯೇಲ್ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು. ಒಂದು ಕಲ್ಲಿನ ಮೇಲೆ ಆರು ಹೆಸರು ಗಳನ್ನೂ ಇನ್ನೊಂದು ಕಲ್ಲಿನ ಮೇಲೆ ಉಳಿದ ಆರು ಹೆಸರುಗಳನ್ನೂ ಅವರವರ ಜನನದ ಪ್ರಕಾರ ಕೆತ್ತಬೇಕು. ಕಲ್ಲು ಕೆತ್ತುವವರ ಕೆಲಸದಿಂದ ಮುದ್ರೆ ಕೆತ್ತುವ ಪ್ರಕಾರ ಆ ಎರಡು ಕಲ್ಲುಗಳನ್ನು ಇಸ್ರಾಯೇಲ್ ಮಕ್ಕಳ ಹೆಸರುಗಳಿಗನುಸಾರವಾಗಿ ಕೆತ್ತಿಸಿ ಅವುಗಳನ್ನು ಬಂಗಾ ರದ ಜವೆಗಳಲ್ಲಿ ಹೊದಿಸಿದ್ದಾಗಿ ಮಾಡಬೇಕು. ಆ ಎರಡು ಕಲ್ಲುಗಳನ್ನು ಎಫೋದಿನ ಹೆಗಲು ಭಾಗದ ಮೇಲೆ ಇಸ್ರಾಯೇಲ್ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಕರ್ತನ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು. ನೀನು ಬಂಗಾರದ ಜವೆಗಳನ್ನು ಮಾಡಬೇಕು. ಶುದ್ಧ ಬಂಗಾರದ ಎರಡು ಸರಪಣಿಗಳನ್ನು ಹೆಣಿಗೇ ಕೆಲಸದಿಂದ ಮಾಡಿ ಆ ಹೆಣೆದ ಸರಪಣಿಗಳ ಕೊನೆ ಗಳನ್ನು ಜವೆಗಳಿಗೆ ಸೇರಿಸಬೇಕು.
- Numbers 16:9–10 ಅರಣ್ಯಕಾಂಡ 16:9–10ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ? ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ?
- Numbers 25:13 ಅರಣ್ಯಕಾಂಡ 25:13ಅವನು ತನ್ನ ದೇವರಿಗೋಸ್ಕರ ಆಸಕ್ತನಾಗಿದ್ದು ಇಸ್ರಾಯೇಲಿನ ಮಕ್ಕಳಿಗೋಸ್ಕರ ಪಾಪ ಪ್ರಾಯಶ್ಚಿತ್ತ ಮಾಡಿದ್ದರಿಂದ ಅವನಿಗೂ ಅವನ ಹಿಂದೆ ಬರುವ ಅವನ ಸಂತತಿಗೂ ನಿತ್ಯ ಯಾಜಕತ್ವದ ಒಡಂಬಡಿಕೆಯಾಗಿರುವದು ಎಂದು ಹೇಳಿದನು.