Deuteronomy · chapter 19 · verse 2
Deuteronomy 19:2 in Kannada
ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ಕೊಡುವ ನಿನ್ನ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.
Ninna devaraada kartanu ninage svaadheenamaadikolluvadakke koduva ninna deshada madhyadalli mooru pattanagalannu ninagaagi pratyekisabeku.
Deuteronomy 19:2 in English
- King James Version (KJV)
- Thou shalt separate three cities for thee in the midst of thy land, which the LORD thy God giveth thee to possess it.
- World English Bible (WEB)
- you shall set apart three cities for yourselves in the middle of your land, which the LORD your God gives you to possess.
- American Standard Version (ASV)
- thou shalt set apart three cities for thee in the midst of thy land, which Jehovah thy God giveth thee to possess it.
- Bible in Basic English (BBE)
- You are to have three towns marked out in the land which the Lord your God is giving you for your heritage.
- Darby Translation (DBY)
- thou shalt separate three cities for thyself in the midst of thy land, which Jehovah thy God giveth thee to possess.
- Webster's Bible (WBS)
- Thou shalt separate three cities for thee in the midst of thy land which the LORD thy God giveth thee to possess it.
- Young's Literal Translation (YLT)
- three cities thou dost separate for thee in the midst of thy land which Jehovah thy God is giving to thee to possess it.
Read in context
- 1ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶದ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ಕಡಿದುಬಿಟ್ಟ ತರುವಾಯ ನೀನು ಅವುಗಳನ್ನು ಸ್ವಾಧೀನಮಾಡಿಕೊಂಡು ಅವುಗಳ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಾಗ
- 2ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ಕೊಡುವ ನಿನ್ನ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.
- 3ನರಹತ್ಯೆ ಮಾಡುವವ ರೆಲ್ಲರೂ ಅಲ್ಲಿಗೆ ಓಡಿಹೋಗುವ ಹಾಗೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶದ ಮೇರೆ ಯನ್ನು ಮೂರು ಭಾಗಮಾಡಿ ನಿನಗಾಗಿ ಮಾರ್ಗವನ್ನು ಸಿದ್ಧಮಾಡಿಕೊಳ್ಳಬೇಕು.
- 4ಬದುಕುವ ಹಾಗೆ ಅಲ್ಲಿಗೆ ಓಡಿಹೋಗತಕ್ಕ ಕೊಲೆ ಪಾತಕನ ವಿವರವೇನಂದರೆ -- ತಿಳಿಯದೆ ಇಲ್ಲವೆ ಪೂರ್ವಕಾಲದಲ್ಲಿ ಹಗೆಮಾಡದೆ ತನ್ನ ನೆರೆಯವನನ್ನು ಹೊಡೆದವನೇ.
Cross references
- Exodus 21:13 ವಿಮೋಚನಕಾಂಡ 21:13ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು.
- Hebrews 6:18 ಇಬ್ರಿಯರಿಗೆ 6:18ಆಶ್ರಯವನ್ನು ಹೊಂದುವದಕ್ಕೆ ಓಡಿ ಬಂದು ನಮ್ಮ ಮುಂದೆ ಇಟ್ಟಿರುವ ನಿರೀಕ್ಷೆಯನ್ನು ಹಿಡುಕೊಂಡವರಾದ ನಮಗೆ ಸುಳ್ಳಾಡದ ದೇವರ ಎರಡು ನಿಶ್ಚಲವಾದ ಆಧಾರಗಳಲ್ಲಿ ನಮಗೆ ಬಲವಾದ ಆದರಣೆ ಉಂಟಾ ಯಿತು.
- Deuteronomy 4:41–43 ಧರ್ಮೋಪದೇಶಕಾಂಡ 4:41–43ಆಗ ಮೋಶೆಯು ಯೊರ್ದನಿನ ಈಚೆಯಲ್ಲಿರುವ ಸೂರ್ಯೋದಯದ ಕಡೆಗೆ ಮೂರು ಪಟ್ಟಣಗಳನ್ನು ಪ್ರತ್ಯೇಕ ಮಾಡಿದನು. ತಿಳಿಯದೆ, ಮುಂಚೆ ಹಗೆ ಮಾಡಿರದೆ, ತನ್ನ ನೆರೆಯವನನ್ನು ಕೊಂದುಹಾಕಿದ ಕೊಲೆಪಾತಕನು ಓಡಿಹೋಗುವ ಹಾಗೆ ಅವುಗಳನ್ನು ಬೇರೆ ಮಾಡಿದನು. ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕುವನು. ಅವು ಯಾವವಂದರೆ--ರೂಬೇನ್ಯರಿಗೆ ಅರಣ್ಯದ ಬೈಲಿನಲ್ಲಿ ಇರುವ ಬೇಚೆರ್, ಗಾದನವರಿಗೆ ಗಿಲ್ಯಾದಿನಲ್ಲಿರುವ ರಾಮೋತ್, ಮನಸ್ಸೆಯವರಿಗೆ ಬಾಷಾನಿನಲ್ಲಿರುವ ಗೋಲಾನ್.
- Numbers 35:10–15 ಅರಣ್ಯಕಾಂಡ 35:10–15ನೀನು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಯೊರ್ದ ನನ್ನು ದಾಟಿ ಕಾನಾನ್ ದೇಶಕ್ಕೆ ಬಂದಾಗ ಕೈತಪ್ಪಿ ಒಬ್ಬನನ್ನು ಕೊಂದ ಯಾವನಾದರೂ ಅಲ್ಲಿಗೆ ಓಡಿ ಹೋಗುವ ಹಾಗೆ ನಿಮಗೆ ಆಶ್ರಯಕ್ಕಾಗಿ ಪಟ್ಟಣಗಳನ್ನು ನೇಮಿಸಬೇಕು. ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವ ವರೆಗೂ ಸಾಯದ ಹಾಗೆ ಅವು ನಿಮಗೆ ಸೇಡು ತೀರಿಸುವವನ ದೆಸೆಯಿಂದ ಆಶ್ರಯದ ಪಟ್ಟಣಗಳಾಗಿರಬೇಕು. ನೀವು ಕೊಡುವ ಪಟ್ಟಣಗಳೊಳಗೆ ಆರು ಆಶ್ರಯದ ಪಟ್ಟಣಗಳು ಇರಬೇಕು. ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನೂ ಕಾನಾನ್ ದೇಶದಲ್ಲಿ ಮೂರು ಪಟ್ಟಣ ಗಳನ್ನೂ ಆಶ್ರಯದ ಪಟ್ಟಣಗಳಾಗಿ ಕೊಡಬೇಕು. ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
- Joshua 20:2–7 ಯೆಹೋಶುವ 20:2–7ನೀನು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕಾದ ದ್ದೇನಂದರೆ, ಯಾವನಾದರೂ ಅರಿಯದೆ ಕೈತಪ್ಪಿ ಹೊಡೆದು ಕೊಂದು ಹಾಕಿದವನು ಅಲ್ಲಿ ಓಡಿಹೋಗು ವದಕ್ಕೆ ನಾನು ಮೋಶೆಯ ಮುಖಾಂತರ ನಿಮಗೆ ಹೇಳಿದ ಆಶ್ರಯ ಪಟ್ಟಣಗಳನ್ನು ಗೊತ್ತು ಮಾಡಿ ಕೊಳ್ಳಿರಿ. ಅವು ನಿಮಗೆ ರಕ್ತದ ಸೇಡು ತೀರಿಸುವ ವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರುವವು. ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತು ಆ ಪಟ್ಟಣದ ಹಿರಿಯರು ಕೇಳುವ ಹಾಗೆ ತನ್ನ ಮಾತುಗಳನ್ನು ಹೇಳುವಾಗ ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಂಡು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಬೇಕು. ರಕ್ತದ ಸೇಡು ತೀರಿಸಿಕೊಳ್ಳುವವನು ಅವನನ್ನು ಹಿಂದಟ್ಟಿ ಬಂದರೆ ಕೊಲೆ ಮಾಡಿದವನನ್ನು ಅವನ ಕೈಗೆ ಒಪ್ಪಿಸಿಕೊಡಬಾರದು; ಯಾಕಂದರೆ ಪೂರ್ವದಲ್ಲಿ ಅವನನ್ನು ಹಗೆಮಾಡಲಿಲ್ಲ ಅರಿಯದೆ ತನ್ನ ನೆರೆಯವನನ್ನು ಹೊಡೆದನು. ಇದಲ್ಲದೆ ಅವನು ನ್ಯಾಯವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆಗಿನ ಪ್ರಧಾನ ಯಾಜಕನು ಮರಣ ಹೊಂದುವ ವರೆಗೂ ಆ ಪಟ್ಟಣದಲ್ಲೇ ವಾಸವಾಗಿರ ಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿಹೋದ ತನ್ನ ಪಟ್ಟಣಕ್ಕೂ ಮನೆಗೂ ತಿರುಗಿ ಬರಬಹುದು. ಹಾಗೆಯೇ ಅವರು ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ ಎಫ್ರಾ ಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಯೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯರ್ತ್ಬ ವನ್ನೂ ನೇಮಿಸಿದರು.