Deuteronomy · chapter 22 · verse 4
Deuteronomy 22:4 in Kannada
ನೀನು ಕಾಣದವನಂತೆ ಇರಬಾರದು. ನಿನ್ನ ಸಹೋದರನ ಕತ್ತೆಯಾಗಲಿ ಎತ್ತಾಗಲಿ ಮಾರ್ಗ ದಲ್ಲಿ ಬಿದ್ದಿರುವದನ್ನು ನೋಡಿದರೆ ಅಲಕ್ಷ್ಯಮಾಡ ಬೇಡ; ಹೇಗಾದರೂ ಅವುಗಳನ್ನು ಎಬ್ಬಿಸುವದಕ್ಕೆ ಅವನಿಗೆ ಖಂಡಿತಾ ಸಹಾಯಮಾಡಬೇಕು.
Neenu kaanadavanante irabaaradu. Ninna sahodarana katteyaagali ettaagali maarga dalli biddiruvadannu nodidare alakshyamaada beda; hegaadaroo avugalannu ebbisuvadakke avanige khanditaa sahaayamaadabeku.
Deuteronomy 22:4 in English
- King James Version (KJV)
- Thou shalt not see thy brother’s ass or his ox fall down by the way, and hide thyself from them: thou shalt surely help him to lift [them] up again.
- World English Bible (WEB)
- You shall not see your brother’s donkey or his ox fallen down by the way, and hide yourself from them. You shall surely help him to lift them up again.
- American Standard Version (ASV)
- Thou shalt not see thy brother’s ass or his ox fallen down by the way, and hide thyself from them: thou shalt surely help him to lift them up again.
- Bible in Basic English (BBE)
- If you see your brother's ox or his ass falling down on the road, do not go by without giving him help in lifting it up again.
- Darby Translation (DBY)
- Thou shalt not see thy brother's ass or his ox fall by the way, and hide thyself from them: thou shalt in any case [help] him to lift them up.
- Webster's Bible (WBS)
- Thou shalt not see thy brother's ass or his ox fall down by the way, and hide thyself from them: thou shalt surely help him to lift [them] up again.
- Young's Literal Translation (YLT)
- 'Thou dost not see the ass of thy brother, or his ox, falling in the way, and hast hid thyself from them; thou dost certainly raise [them] up with him.
Read in context
- 2ಆದರೆ ನಿನ್ನ ಸಹೋದರನು ನಿನಗೆ ಸವಿಾಪವಾಗಿರದೆ ಹೋದರೆ ಇಲ್ಲವೆ ಅವನ ಗುರುತು ನಿನಗೆ ತಿಳಿಯದೆ ಇದ್ದರೆ ತಪ್ಪಿ ಹೋದದ್ದನ್ನು ನಿನ್ನ ಮನೆಗೆ ಒಯ್ಯಬೇಕು; ನಿನ್ನ ಸಹೋದರನು ಅದನ್ನು ಹುಡುಕುವ ವರೆಗೆ ಅದು ನಿನ್ನ ಸಂಗಡ ಇರಬೇಕು; ತರುವಾಯ ಅದನ್ನು ಹಿಂದಕ್ಕೆ ಅವನಿಗೆ ಕೊಡಬೇಕು.
- 3ಅವನ ಕತ್ತೆಗೆ ಹಾಗೆಯೇ ಮಾಡಬೇಕು; ಅವನ ವಸ್ತ್ರಕ್ಕೂ ಹಾಗೆಯೇ ಮಾಡ ಬೇಕು; ನಿನ್ನ ಸಹೋದರನು ಕಳೆದುಕೊಂಡ ಎಲ್ಲಾ ವಸ್ತುಗಳನ್ನು ನೀನು ಕಂಡುಕೊಂಡರೆ ಹಾಗೆಯೇ ಮಾಡಬೇಕು;
- 4ನೀನು ಕಾಣದವನಂತೆ ಇರಬಾರದು. ನಿನ್ನ ಸಹೋದರನ ಕತ್ತೆಯಾಗಲಿ ಎತ್ತಾಗಲಿ ಮಾರ್ಗ ದಲ್ಲಿ ಬಿದ್ದಿರುವದನ್ನು ನೋಡಿದರೆ ಅಲಕ್ಷ್ಯಮಾಡ ಬೇಡ; ಹೇಗಾದರೂ ಅವುಗಳನ್ನು ಎಬ್ಬಿಸುವದಕ್ಕೆ ಅವನಿಗೆ ಖಂಡಿತಾ ಸಹಾಯಮಾಡಬೇಕು.
- 5ಸ್ತ್ರೀಯು ಪುರುಷನ ಉಡಿಗೆ ಉಟ್ಟುಕೊಳ್ಳಬಾರದು; ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು; ಇವುಗಳನ್ನು ಮಾಡುವವರೆಲ್ಲಾ ಕರ್ತನಿಗೆ ಅಸಹ್ಯ.
- 6ನಿನಗೆ ಮಾರ್ಗದಲ್ಲಿ ಯಾವದಾದರೊಂದು ಗಿಡದ ಲ್ಲಾಗಲಿ ನೆಲದಲ್ಲಾಗಲಿ ಮರಿಗಳುಳ್ಳ ಇಲ್ಲವೆ ಮೊಟ್ಟೆಗ ಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ ಮರಿಗಳ ಮೇಲೆಯಾ ಗಲಿ ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತು ಕೊಂಡಿದ್ದರೆ ಮರಿಗಳ ಸಂಗಡ ತಾಯಿಯನ್ನು ತಕ್ಕೊಳ್ಳ ಬಾರದು;
Cross references
- Romans 15:1 ರೋಮಾಪುರದವರಿಗೆ 15:1ಆದದರಿಂದ ಬಲವುಳ್ಳವರಾದ ನಾವು ನಮ್ಮನ್ನೇ ಸಂತೋಷಪಡಿಸಿಕೊಳ್ಳದೆ ದುರ್ಬಲರ ಬಲಹೀನತೆಗಳನ್ನು ಸಹಿಸಿಕೊಳ್ಳತಕ್ಕದ್ದು.
- 1 Thessalonians 5:14 1 ಥೆಸಲೊನೀಕದವರಿಗೆ 5:14ಸಹೋದರರೇ, ಅಕ್ರಮವಾಗಿ ನಡೆಯುವವ ರನ್ನು ಎಚ್ಚರಿಸಿರಿ, ಮನಗುಂದಿದವರನ್ನಾದರಿಸಿರಿ. ಬಲ ಹೀನರಿಗೆ ಆಧಾರವಾಗಿರ್ರಿ. ಎಲ್ಲರಲ್ಲಿಯೂ ತಾಳ್ಮೆಯುಳ್ಳ ವರಾಗಿರ್ರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.
- Exodus 23:4–5 ವಿಮೋಚನಕಾಂಡ 23:4–5ನಿನ್ನ ವೈರಿಯ ಎತ್ತಾಗಲಿ ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗುವಾಗ ಅದು ನಿನಗೆ ಸಿಕ್ಕಿದರೆ ನೀನು ಅದನ್ನು ಖಂಡಿತವಾಗಿ ತಿರಿಗಿ ಅವನಿಗೆ ತಂದುಕೊಡಬೇಕು. ನಿನ್ನನ್ನು ಹಗೆ ಮಾಡುವವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ನೀನು ಕಂಡಾಗ ಅವನಿಗೆ ಸಹಾಯ ಮಾಡಲು ಮನಸ್ಸಿಲ್ಲದಿದ್ದರೂ ನೀನು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.
- Galatians 6:1–2 ಗಲಾತ್ಯದವರಿಗೆ 6:1–2ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು. ಒಬ್ಬನು ಮತ್ತೊಬ್ಬನ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.
- 2 Corinthians 12:15 2 ಕೊರಿಂಥದವರಿಗೆ 12:15ನಾನಂತೂ ನನಗಿರುವದನ್ನು ನಿಮಗೋಸ್ಕರ ಅತಿ ಸಂತೋಷದಿಂದ ವೆಚ್ಚಮಾಡುತ್ತೇನೆ, ನನ್ನನ್ನೇ ವೆಚ್ಚ ಮಾಡಿಕೊಳ್ಳುತ್ತೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುತ್ತೀರಿ.
- Matthew 5:44 ಮತ್ತಾಯನು 5:44ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ.
- Hebrews 12:12–13 ಇಬ್ರಿಯರಿಗೆ 12:12–13ಹೀಗಿರುವದ ರಿಂದ ಜೋಲು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ನೆಟ್ಟಗೆ ಮಾಡಿರಿ. ನಿಮ್ಮ ಪಾದ ಗಳಿಗೆ ನೀಟಾದ ದಾರಿಗಳನ್ನು ಮಾಡಿರಿ; ಹೀಗೆ ಮಾಡಿದರೆ ಕುಂಟಕಾಲು ಉಳುಕಿ ಹೋಗದೆ ವಾಸಿಯಾಗುವದು.
- Luke 10:29–37 ಲೂಕನು 10:29–37ಆದರೆ ಅವನು ತನ್ನನ್ನು ತಾನೇ ನೀತಿವಂತನೆಂದು ತೋರಿಸು ವದಕ್ಕೆ ಅಪೇಕ್ಷೆಯುಳ್ಳವನಾಗಿ ಯೇಸುವಿಗೆ--ನನ ನೆರೆಯವನು ಯಾರು ಎಂದು ಕೇಳಿದನು. ಆಗ ಯೇಸು ಪ್ರತ್ಯುತ್ತರವಾಗಿ--ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುತ್ತಿದ್ದಾಗ ಕಳ್ಳರ ಮಧ್ಯದಲ್ಲಿ ಸಿಕ್ಕಿಬಿದ್ದನು. ಅವರು ಅವನ ಬಟ್ಟೆಯನ್ನು ತೆಗೆದುಹಾಕಿ ಅವನನ್ನು ಗಾಯ ಪಡಿಸಿ ಅರೆಜೀವ ಮಾಡಿ ಬಿಟ್ಟು ಹೊರಟುಹೋದರು. ಆಗ ಅನಿರೀಕ್ಷಿತವಾಗಿ ಒಬ್ಬಾನೊಬ್ಬ ಯಾಜಕನು ಆ ಮಾರ್ಗವಾಗಿ ಬಂದು ಅವನನ್ನು ನೋಡಿ ಓರೆ ಯಾಗಿ ಹೋದನು. ಅದೇ ಪ್ರಕಾರ ಒಬ್ಬ ಲೇವಿ ಯೂ ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಓರೆಯಾಗಿ ಹೋದನು. ಆದರೆ ಒಬ್ಬಾನೊಬ್ಬ ಸಮಾರ್ಯದ ವನು ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ನೋಡಿ ಅವನ ಮೇಲೆ ಕನಿಕರಪಟು ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸ ವನ್ನೂ ಹೊಯ್ದು ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ಪಶುವಿನ ಮೇಲೆ ಕೂಡ್ರಿಸಿ ವಸತಿ ಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು. ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ನಾಣ್ಯ ಗಳನ್ನು ತೆಗೆದು ವಸತಿಗೃಹದ ಯಜಮಾನನಿಗೆ ಕೊಟ್ಟು ಅವನಿಗೆ--ಇವನನ್ನು ಆರೈಕೆ ಮಾಡು, ನೀನು ಏನಾ ದರೂ ಹೆಚ್ಚು ವೆಚ್ಚ ಮಾಡಿದರೆ ನಾನು ತಿರಿಗಿ ಬಂದಾಗ ಕೊಟ್ಟು ತೀರಿಸುತ್ತೇನೆ ಅಂದನು. ಈ ಮೂವರಲ್ಲಿ ಯಾರು ಆ ಕಳ್ಳರ ನಡುವೆ ಸಿಕ್ಕಿ ಬಿದ್ದವನಿಗೆ ನೆರೆಯವ ನಾದನೆಂದು ನೀನು ಯೋಚಿಸುತ್ತೀ ಎಂದು ಕೇಳಿದ್ದಕ್ಕೆ ಅವನು-- ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ಅಂದನು. ಆಗ ಯೇಸು ಅವನಿಗೆ--ಹೋಗು, ನೀನೂ ಅದರಂತೆಯೇ ಮಾಡು ಎಂದು ಹೇಳಿದನು.