Deuteronomy · chapter 23 · verse 19
Deuteronomy 23:19 in Kannada
ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವ ನ್ನಾಗಲಿ, ಬಡ್ಡಿಗೆ ಕೊಡುವ ಯಾವದನ್ನಾಗಲಿ ಬಡ್ಡಿಗೆ ಕೊಡಬಾರದು.
Ninna sahodaranige hanavannaagali, ootava nnaagali, baddige koduva yaavadannaagali baddige kodabaaradu.
Deuteronomy 23:19 in English
- King James Version (KJV)
- Thou shalt not lend upon usury to thy brother; usury of money, usury of victuals, usury of any thing that is lent upon usury:
- World English Bible (WEB)
- You shall not lend on interest to your brother: interest of money, interest of food, interest of anything that is lent on interest.
- American Standard Version (ASV)
- Thou shalt not lend upon interest to thy brother; interest of money, interest of victuals, interest of anything that is lent upon interest.
- Bible in Basic English (BBE)
- Do not take interest from an Israelite on anything, money or food or any other goods, which you let him have:
- Darby Translation (DBY)
- Thou shalt take no interest of thy brother, interest of money, interest of victuals, interest of anything that can be lent upon interest:
- Webster's Bible (WBS)
- Thou shalt not lend upon interest to thy brother; interest of money, interest of victuals, interest of any thing that is lent upon interest:
- Young's Literal Translation (YLT)
- 'Thou dost not lend in usury to thy brother; usury of money, usury of food, usury of anything which is lent on usury.
Read in context
- 17ಇಸ್ರಾಯೇಲಿನ ಕುಮಾರ್ತೆಯರಲ್ಲಿ ಸೂಳೆ ಇರ ಬಾರದು; ಇಸ್ರಾಯೇಲಿನ ಕುಮಾರರಲ್ಲಿ ಪುರುಷ ಸಂಗದವನು ಇರಬಾರದು.
- 18ಸೂಳೆಯ ಕೂಲಿಯನ್ನು ಇಲ್ಲವೆ ನಾಯಿಯ ಕ್ರಯವನ್ನು ಯಾವದೊಂದು ಪ್ರಮಾಣವಾಗಿ ನಿನ್ನ ದೇವರಾದ ಕರ್ತನ ಮನೆಗೆ ತರಬಾರದು. ಅವೆರಡು ನಿನ್ನ ದೇವರಾದ ಕರ್ತನಿಗೆ ಅಸಹ್ಯ.
- 19ನಿನ್ನ ಸಹೋದರನಿಗೆ ಹಣವನ್ನಾಗಲಿ, ಊಟವ ನ್ನಾಗಲಿ, ಬಡ್ಡಿಗೆ ಕೊಡುವ ಯಾವದನ್ನಾಗಲಿ ಬಡ್ಡಿಗೆ ಕೊಡಬಾರದು.
- 20ಪರನಿಗೆ ಬಡ್ಡಿಗೋಸ್ಕರ ಕೊಡ ಬಹುದು; ಆದರೆ ನಿನ್ನ ಸಹೋದರನಿಗೆ ನೀನು ಸ್ವಾಧೀನ ಮಾಡಿಕೊಳ್ಳಲು ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೈ ಕೆಲಸದಲ್ಲಿ ಆಶೀರ್ವ ದಿಸುವ ಹಾಗೆ ಬಡ್ಡಿಗೆ ಕೊಡಬಾರದು.
- 21ನೀನು ನಿನ್ನ ದೇವರಾದ ಕರ್ತನಿಗೆ ಪ್ರಮಾಣ ಮಾಡಿದ ಮೇಲೆ ಅದನ್ನು ಸಲ್ಲಿಸುವದಕ್ಕೆ ತಡಮಾಡ ಬೇಡ; ನಿನ್ನ ದೇವರಾದ ಕರ್ತನು ಅದನ್ನು ನಿಶ್ಚಯ ವಾಗಿಯೂ ನಿನ್ನ ಬಳಿಯಲ್ಲಿ ವಿಚಾರಿಸುವನು; ಅದು ನಿನ್ನಲ್ಲಿ ಪಾಪವಾಗಿರುವದು.
Cross references
- Exodus 22:25 ವಿಮೋಚನಕಾಂಡ 22:25ನಿನ್ನ ಬಳಿಯಲ್ಲಿ ಬಡವರಾಗಿರುವ ನನ್ನ ಜನರಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಅವರಿಂದ ಬಡ್ಡಿ ತಕ್ಕೊಳ್ಳಬಾರದು. ಇಲ್ಲವೆ ಅವರ ಮೇಲೆ ಬಡ್ಡಿ ಹೊರಿಸ ಬೇಡ.
- Leviticus 25:35–37 ಯಾಜಕಕಾಂಡ 25:35–37ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು. ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು. ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ.
- Psalm 15:5 ಕೀರ್ತನೆಗಳು 15:5ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.
- Ezekiel 18:13 ಯೆಹೆಜ್ಕೇಲನು 18:13ಬಡ್ಡಿಗೆ ಕೊಟ್ಟು ಲಾಭ ತೆಗೆದುಕೊಂಡು ಅವನು ಬದುಕುವನೋ? ಅವನು ಬದುಕುವದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿ ದ್ದಾನೆ; ಅವನು ನಿಶ್ಚಯವಾಗಿ ಸಾಯುವನು ಅವನ ರಕ್ತವು ಅವನ ಮೇಲೆಯೇ ಇರುವದು.
- Ezekiel 18:16–18 ಯೆಹೆಜ್ಕೇಲನು 18:16–18ಇಲ್ಲವೆ ಯಾರಿಗೂ ತೊಂದರೆಪಡಿಸದೆ, ಒತ್ತೆಯನ್ನು ಹಿಡಿಯದೆ, ಇಲ್ಲವೆ ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಬೆತ್ತಲೆಯಾದವನಿಗೆ ವಸ್ತ್ರ ವನ್ನು ಹೊದಿಸಿ, ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನೂ ಲಾಭವನ್ನು ತೆಗೆದುಕೊಳ್ಳದೆ, ನನ್ನ ನ್ಯಾಯ ಗಳನ್ನು ಮಾಡಿ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವದಿಲ್ಲ ನಿಶ್ಚಯವಾಗಿ ಬದುಕುವನು. ಆತನ ತಂದೆಯ ವಿಷಯವಾದರೋ ಅವನು ಬಹಳ ಬಲಾತ್ಕಾರ ಮಾಡಿ ದ್ದರಿಂದಲೂ ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ ತನ್ನ ಜನರ ಮಧ್ಯದಲ್ಲಿ ಕೆಟ್ಟದನ್ನು ಮಾಡಿದ್ದರಿಂದಲೂ ಇಗೋ, ಅವನು ಅಕ್ರಮದಲಿ ಸಾಯುವನು.
- Ezekiel 22:12 ಯೆಹೆಜ್ಕೇಲನು 22:12ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.
- Luke 6:34–35 ಲೂಕನು 6:34–35ಯಾರಿಂದ ತಿರಿಗಿ ಪಡಕೊಳ್ಳಬೇಕೆಂದು ನಿರೀಕ್ಷಿಸುತ್ತಿರೋ ಅಂಥವರಿಗೆ ಸಾಲಕೊಟ್ಟರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟಷ್ಟು ತಿರಿಗಿ ಪಡೆಯುವಂತೆ ಪಾಪಿಗಳಿಗೆ ಸಾಲ ಕೊಡುತ್ತಾರೆ. ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ,
- Ezekiel 18:7–8 ಯೆಹೆಜ್ಕೇಲನು 18:7–8ಯಾರನ್ನೂ ಉಪದ್ರಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸಿಸಿ, ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆ ಯಿರುವವನಿಗೆ ಬಟ್ಟೆಯನ್ನು ಹೊದಿಸಿ, ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯ ದಿಂದ ತನ್ನ ಕೈಯನ್ನು ಹಿಂತೆಗೆದು ಒಬ್ಬರಿಗೊಬ್ಬರು ಸತ್ಯದ ನ್ಯಾಯವನ್ನು ನಡಿಸಿ,