Deuteronomy · chapter 27 · verse 2
Deuteronomy 27:2 in Kannada
ನೀವು ಯೊರ್ದನನ್ನು ದಾಟಿ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ಬರುವ ದಿವಸದಲ್ಲಿ ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಿ
Neevu yordanannu daati ninna devaraada kartanu ninage koduva deshakke baruva divasadalli dodda kallugalannu nillisi avugalige gilaavu maadisi
Deuteronomy 27:2 in English
- King James Version (KJV)
- And it shall be on the day when ye shall pass over Jordan unto the land which the LORD thy God giveth thee, that thou shalt set thee up great stones, and plaister them with plaister:
- World English Bible (WEB)
- It shall be on the day when you shall pass over the Jordan to the land which the LORD your God gives you, that you shall set yourself up great stones, and coat them with plaster.
- American Standard Version (ASV)
- And it shall be on the day when ye shall pass over the Jordan unto the land which Jehovah thy God giveth thee, that thou shalt set thee up great stones, and plaster them with plaster:
- Bible in Basic English (BBE)
- And on the day when you go over Jordan into the land which the Lord your God is giving you, put up great stones, coating them with building-paste,
- Darby Translation (DBY)
- And it shall be on the day when ye pass over the Jordan unto the land which Jehovah thy God giveth thee, that thou shalt set thee up great stones, and plaster them with plaster:
- Webster's Bible (WBS)
- And it shall be on the day when ye shall pass over Jordan to the land which the LORD thy God giveth thee, that thou shalt set thee up great stones, and plaster them with plaster:
- Young's Literal Translation (YLT)
- and it hath been, in the day that ye pass over the Jordan unto the land which Jehovah thy God is giving to thee, that thou hast raised up for thee great stones, and plaistered them with plaister,
Read in context
- 1ಇದಲ್ಲದೆ ಮೋಶೆ ಇಸ್ರಾಯೇಲಿನ ಹಿರಿಯರ ಸಂಗಡ ಜನರಿಗೆ--ನಾನು ನಿಮಗೆ ಈ ಹೊತ್ತು ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಕಾಪಾ ಡಬೇಕು.
- 2ನೀವು ಯೊರ್ದನನ್ನು ದಾಟಿ ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ಬರುವ ದಿವಸದಲ್ಲಿ ದೊಡ್ಡ ಕಲ್ಲುಗಳನ್ನು ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಿ
- 3ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.
- 4ಆದದರಿಂದ ನೀವು ಯೊರ್ದನನ್ನು ದಾಟಿದ ಮೇಲೆ ನಾನು ಈಹೊತ್ತು ನಿಮಗೆ ಆಜ್ಞಾಪಿಸುವ ಕಲ್ಲುಗಳನ್ನು ಏಬಾಲ್ ಬೆಟ್ಟದಲ್ಲಿ ನಿಲ್ಲಿಸಿ ಅವುಗಳಿಗೆ ಗಿಲಾವು ಮಾಡಿಸಬೇಕು.
Cross references
- Joshua 8:31 ಯೆಹೋಶುವ 8:31ಆಗ ಅವರು ಅದರ ಮೇಲೆ ಕರ್ತನಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.
- Joshua 4:1 ಯೆಹೋಶುವ 4:1ಜನರೆಲ್ಲರು ಯೊರ್ದನನ್ನು ದಾಟಿ ಮುಗಿಸಿದಾಗ ಕರ್ತನು ಯೆಹೋಶುವ ನೊಂದಿಗೆ ಮಾತನಾಡಿ--
- Ezekiel 36:26 ಯೆಹೆಜ್ಕೇಲನು 36:26ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
- Deuteronomy 26:1 ಧರ್ಮೋಪದೇಶಕಾಂಡ 26:1ಇದಲ್ಲದೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ
- Ezekiel 11:19 ಯೆಹೆಜ್ಕೇಲನು 11:19ಅವರಿಗೆ ಒಂದು ಹೃದಯವನ್ನು ಕೊಡು ವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು; ಅವರೊಳಗಿಂದ ಕಠಿಣ ಹೃದಯವನ್ನು ಹೊರಗೆ ತೆಗೆದು ಮೃದು ಹೃದಯವನ್ನು ಕೊಡುವೆನು.
- Deuteronomy 6:1 ಧರ್ಮೋಪದೇಶಕಾಂಡ 6:1ನೀವು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಮಾಡತಕ್ಕವುಗಳು;
- Joshua 1:11 ಯೆಹೋಶುವ 1:11ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.
- Deuteronomy 11:31 ಧರ್ಮೋಪದೇಶಕಾಂಡ 11:31ನಿಮ್ಮ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವದಕ್ಕೆ ನೀವು ಯೊರ್ದನನ್ನು ದಾಟಿಹೋಗಬೇಕು; ಆಗ ಅದನ್ನು ನೀವು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡು ವಿರಿ.ನಾನು ಈಹೊತ್ತು ನಿಮ್ಮ ಮುಂದೆ ಇಡುವ ಎಲ್ಲಾ ನಿಯಮ ನ್ಯಾಯಗಳನ್ನು ಕಾಪಾಡಿ ನಡೆದು ಕೊಳ್ಳಬೇಕು.
- Deuteronomy 27:3 ಧರ್ಮೋಪದೇಶಕಾಂಡ 27:3ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.
- Deuteronomy 9:1 ಧರ್ಮೋಪದೇಶಕಾಂಡ 9:1ಓ ಇಸ್ರಾಯೇಲೇ, ಕೇಳು; ನೀನು ಹೋಗಿ ನಿನಗಿಂತ ದೊಡ್ಡದಾದ ಬಲಿಷ್ಠ ಜನಾಂಗ ಗಳನ್ನೂ ಆಕಾಶದ ವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ
- Joshua 4:5–24 ಯೆಹೋಶುವ 4:5–24ಯೆಹೋಶುವನು ಅವರಿಗೆ--ನೀವು ಯೊರ್ದನಿನ ಮಧ್ಯದಲ್ಲಿ ನಿಮ್ಮ ದೇವರಾದ ಕರ್ತನ ಮಂಜೂಷದ ಮುಂದೆ ಇಸ್ರಾಯೇಲ್ ಮಕ್ಕಳ ಗೋತ್ರ ಗಳ ಲೆಕ್ಕಕ್ಕೆ ಸರಿಯಾಗಿ ಒಬ್ಬೊಬ್ಬನು ಒಂದೊಂದು ಕಲ್ಲನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರಿ. ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು; ಬರುವ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಈ ಕಲ್ಲುಗಳೇನೆಂದು ಕೇಳಿದಾಗ ನೀವು ಅವರಿಗೆ--ಯೊರ್ದನಿನ ನೀರು ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ವಿಭಾಗಿಸಲ್ಪಟ್ಟಿತು; ಅದು ಯೊರ್ದನನ್ನು ದಾಟುವಾಗ ಯೊರ್ದನಿನ ನೀರು ಭೇದಿಸಲ್ಪಟ್ಟಿತ್ತು. ಈ ಕಲ್ಲುಗಳು ಇಸ್ರಾಯೇಲ್ ಮಕ್ಕಳಿಗೆ ಎಂದೆಂದಿಗೂ ಜ್ಞಾಪಕಾರ್ಥ ವಾದ ಗುರುತಾಗಿರುವವು ಎಂದು ಉತ್ತರ ಕೊಡಬೇಕು ಅಂದನು. ಆಗ ಇಸ್ರಾಯೇಲ್ ಮಕ್ಕಳು ಯೆಹೋಶುವನು ಆಜ್ಞಾಪಿಸಿದ ಹಾಗೆ ಮಾಡಿದರು; ಕರ್ತನು ಯೆಹೋಶುವನಿಗೆ ಹೇಳಿದ ಪ್ರಕಾರ ಇಸ್ರಾ ಯೇಲ್ ಮಕ್ಕಳ ಗೋತ್ರಗಳ ಲೆಕ್ಕಕ್ಕೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ಯೊರ್ದನಿನ ಮಧ್ಯದಿಂದ ತೆಗೆದುಕೊಂಡು ಅವುಗಳನ್ನು ತಮ್ಮ ಸಂಗಡ ತಂದು ತಾವು ಇಳಿದುಕೊಂಡ ಸ್ಥಳದಲ್ಲಿ ಅವುಗಳನ್ನು ನಿಲ್ಲಿಸಿ ದರು. ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ. ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿದ ಪ್ರಕಾರ ಜನರಿಗೆ ಹೇಳಲು ಕರ್ತನು ಯೆಹೋಶುವನಿಗೆ ಆಜ್ಞಾಪಿಸಿದ್ದೆಲ್ಲಾ ತೀರುವ ವರೆಗೂ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ನಡುವೆ ನಿಂತರು; ಜನರು ತ್ವರೆಯಾಗಿ ದಾಟಿಹೋದರು. ಜನರೆಲ್ಲರೂ ದಾಟಿದ ಮೇಲೆ ಕರ್ತನ ಮಂಜೂಷವೂ ಯಾಜಕರೂ ಜನರ ಎದುರಿನಲ್ಲಿ ದಾಟಿದರು. ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರವೂ ಮೋಶೆಯು ತಮಗೆ ಹೇಳಿದ ಹಾಗೆಯೇ ಯುದ್ಧಸನ್ನದ್ಧರಾಗಿ ಇಸ್ರಾಯೇಲ್ ಮಕ್ಕಳ ಮುಂದೆ ಹಾದುಹೋದರು. ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಕರ್ತನ ಎದುರಿನಲ್ಲಿ ಯುದ್ಧ ಮಾಡುವದಕ್ಕೆ ಯೆರಿಕೋವಿನ ಬೈಲುಗಳಿಗೆ ಹಾದು ಹೋದರು. ಆ ದಿನದಲ್ಲಿ ಕರ್ತನು ಯೆಹೋಶುವ ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಭಯಪಟ್ಟ ಹಾಗೆಯೇ ಅವನು ಬದುಕಿದ ದಿನಗಳಲ್ಲೆಲ್ಲಾ ಅವನಿಗೂ ಭಯಪಟ್ಟರು. ಕರ್ತನು ಯೆಹೋಶುವನ ಸಂಗಡ ಮಾತ ನಾಡಿ -- ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ ಯೊರ್ದನಿನಿಂದ ಮೇಲಕ್ಕೆ ಬರುವದಕ್ಕೆ ಆಜ್ಞಾಪಿಸು ಎಂದು ಹೇಳಿದನು. ಆಗ ಯೆಹೋಶುವನು ಯಾಜಕರಿಗೆ ಆಜ್ಞಾಪಿಸಿ--ಯೊರ್ದ ನಿನಿಂದ ಮೇಲಕ್ಕೆ ಬನ್ನಿರಿ ಎಂದು ಹೇಳಿದನು. ಆಗ ಆದದ್ದೇನಂದರೆ, ಕರ್ತನ ಒಡಂಬಡಿಕೆಯ ಮಂಜೂಷ ವನ್ನು ಹೊರುವ ಯಾಜಕರು ಯೊರ್ದನಿನ ಮಧ್ಯ ದಲ್ಲಿಂದ ತಮ್ಮ ಪಾದಗಳನ್ನು ಒಣಗಿದ ಭೂಮಿಗೆ ಇಟ್ಟಾಗ ಯೊರ್ದನಿನ ನೀರು ತಿರಿಗಿ ಮೊದಲಿನ ಹಾಗೆಯೇ ದಡಗಳ ಮೇಲೆಲ್ಲಾ ಹರಿಯಿತು. ಜನರು ಮೊದಲನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಯೊರ್ದನನ್ನು ದಾಟಿ ಬಂದು ಯೆರಿಕೋವಿನ ಮೂಡಣ ಮೇರೆಯಾದ ಗಿಲ್ಗಾಲಿನಲ್ಲಿ ಇಳಿದು ಕೊಂಡರು. ಅಲ್ಲಿ ಅವರು ಯೊರ್ದನಿನಿಂದ ತೆಗೆದು ಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು. ಅವನು ಇಸ್ರಾಯೇಲ್ ಮಕ್ಕಳಿಗೆ--ನಿಮ್ಮ ಮಕ್ಕಳು ಈ ಕಲ್ಲುಗಳು ಏನೆಂದು ಬರುವ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳಿದಾಗ ನೀವು ಅವರಿಗೆ ತಿಳಿಸಬೇಕಾದದ್ದೇನಂದರೆ--ಇಸ್ರಾ ಯೇಲ್ಯರು ಒಣಗಿದ ಭೂಮಿಯಲ್ಲಿ ಈ ಯೊರ್ದನನ್ನು ದಾಟಿ ಬಂದರು. ಭೂಮಿಯ ಜನರೆಲ್ಲಾ ಕರ್ತನ ಹಸ್ತವು ಬಲವುಳ್ಳದ್ದೆಂದು ತಿಳಿಯುವ ಹಾಗೆಯೂ ನೀವು ನಿರಂತರವೂ ನಿಮ್ಮ ಕರ್ತನಾದ ದೇವರಿಗೆ ಭಯಪಡುವ ಹಾಗೆಯೂನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು. ನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.