Deuteronomy · chapter 28 · verse 18
Deuteronomy 28:18 in Kannada
ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ.
Ninna garbhada phalakkoo ninna bhoomiya phalakkoo pashugala hindigoo kurigala mandegaligoo shaapa.
Deuteronomy 28:18 in English
- King James Version (KJV)
- Cursed [shall be] the fruit of thy body, and the fruit of thy land, the increase of thy kine, and the flocks of thy sheep.
- World English Bible (WEB)
- The fruit of your body, the fruit of your ground, the increase of your livestock, and the young of your flock will be cursed.
- American Standard Version (ASV)
- Cursed shall be the fruit of thy body, and the fruit of thy ground, the increase of thy cattle, and the young of thy flock.
- Bible in Basic English (BBE)
- A curse will be on the fruit of your body, and on the fruit of your land, on the increase of your cattle, and the young of your flock.
- Darby Translation (DBY)
- Cursed shall be the fruit of thy womb, and the fruit of thy ground, the offspring of thy kine, and the increase of thy sheep.
- Webster's Bible (WBS)
- Cursed [shall be] the fruit of thy body, and the fruit of thy land, the increase of thy kine, and the flocks of thy sheep.
- Young's Literal Translation (YLT)
- 'Cursed [is] the fruit of thy body, and the fruit of thy land, increase of thine oxen, and wealth of thy flock.
Read in context
- 16ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ;
- 17ನಿನ್ನ ಪುಟ್ಟಿಗೂ ಕಣಜಕ್ಕೂ ಶಾಪ.
- 18ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಶಾಪ.
- 19ಬರು ವಾಗ ನಿನಗೆ ಶಾಪ; ಹೊರಡುವಾಗ ನಿನಗೆ ಶಾಪ.
- 20ನೀನು ನನ್ನನ್ನು ಬಿಟ್ಟು ನಿನ್ನ ದುಷ್ಕ್ರಿಯೆಗಳ ಕೆಟ್ಟತ ನದ ನಿಮಿತ್ತ ನೀನು ನಾಶವಾಗುವ ವರೆಗೂ ಶೀಘ್ರ ವಾಗಿ ಕೆಟ್ಟುಹೋಗುವ ವರೆಗೂ ನೀನು ಮಾಡುವ ಎಲ್ಲಾ ಕೈಕೆಲಸದಲ್ಲಿ ಶಾಪವನ್ನೂ ಗಾಬರಿಯನ್ನೂ ಗದರಿಕೆಯನ್ನೂ ಕರ್ತನು ನಿನ್ನ ಮೇಲೆ ಕಳುಹಿಸುವನು.
Cross references
- Leviticus 26:26 ಯಾಜಕಕಾಂಡ 26:26ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ.
- Deuteronomy 28:4 ಧರ್ಮೋಪದೇಶಕಾಂಡ 28:4ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ.
- Deuteronomy 5:9 ಧರ್ಮೋಪದೇಶಕಾಂಡ 5:9ಅವುಗಳಿಗೆ ಅಡ್ಡಬೀಳಲೂಬಾರದು, ಸೇವಿಸಲೂಬಾರದು. ಯಾಕಂದರೆ ನಿನ್ನ ದೇವರಾದ ಕರ್ತನಾಗಿರುವ ನಾನು ರೋಷವುಳ್ಳ ದೇವರಾಗಿದ್ದೇನೆ. ನನ್ನನ್ನು ಹಗೆಮಾಡುವವರಲ್ಲಿ ಪಿತೃಗಳ ಅಕ್ರಮವನ್ನು ಮಕ್ಕಳ ಮೇಲೆ ಮೂರನೆಯ ನಾಲ್ಕನೆಯ ತಲಾಂತರದ ವರೆಗೆ ನ್ಯಾಯತೀರಿಸುತ್ತೇನೆ.
- Lamentations 2:20 ಪ್ರಲಾಪಗಳು 2:20ಓ ಕರ್ತನೇ, ನೋಡು, ನೀನು ಇದನ್ನು ಯಾರಿಗೆ ಮಾಡಿದಿಯೋ ಯೋಚಿಸು. ಸ್ತ್ರೀಯರು ತಮ್ಮ ಫಲವಾದ ಗೇಣುದ್ದದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಪ್ರವಾದಿಯು ಕರ್ತನ ಪರಿಶುದ್ಧ ಸ್ಥಳದಲ್ಲಿ ಕೊಲ್ಲಲ್ಪಡಬೇಕೋ?
- Leviticus 26:19–20 ಯಾಜಕಕಾಂಡ 26:19–20ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು. ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು.
- Psalm 109:9–15 ಕೀರ್ತನೆಗಳು 109:9–15ಅವನ ಮಕ್ಕಳು ದಿಕ್ಕಿಲ್ಲದವರೂ ಹೆಂಡತಿ ವಿಧವೆಯೂ ಆಗಲಿ. ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಿ ತಮ್ಮ ಹಾಳು ಸ್ಥಳಗಳೊಳಗಿಂದ ರೊಟ್ಟಿಯನ್ನು ಹುಡುಕಲಿ. ಸಾಲಗಾರನು ಅವನಿಗೆ ಇರುವದನ್ನೆಲ್ಲಾ ದೋಚಿ ಕೊಳ್ಳಲಿ; ಅನ್ಯರು ಅವನ ಕಷ್ಟಾರ್ಜಿತವನ್ನು ಸುಲು ಕೊಳ್ಳಲಿ. ಅವನಿಗೆ ಕರುಣೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ಇಲ್ಲವೆ ದಿಕ್ಕಿಲ್ಲದ ಅವನ ಮಕ್ಕಳನ್ನು ಕರುಣಿಸುವವನು ಯಾವನೂ ಇಲ್ಲದೆ ಇರಲಿ. ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ. ಅವನ ತಂದೆಗಳ ಅಕ್ರಮವು ಕರ್ತನ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ. ಅವು ಯಾವಾಗಲೂ ಕರ್ತನ ಮುಂದೆ ಇರಲಿ; ಆತನು ಅವನ ಜ್ಞಾಪಕವನ್ನು ಭೂಮಿಯೊಳಗಿಂದ ಕಡಿದುಬಿಡಲಿ.
- Deuteronomy 28:16 ಧರ್ಮೋಪದೇಶಕಾಂಡ 28:16ಪಟ್ಟಣದಲ್ಲಿ ನಿನಗೆ ಶಾಪ; ಹೊಲದಲ್ಲಿ ನಿನಗೆ ಶಾಪ;
- Job 18:16–19 ಯೋಬನು 18:16–19ಕೆಳಗಿನಿಂದ ಅವನ ಬೇರುಗಳು ಒಣ ಗುವವು; ಮೇಲಿನಿಂದ ಅವನ ಕೊಂಬೆಯು ಕೊಯ್ಯ ಲ್ಪಡುವದು; ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು. ಬೆಳಕಿನಿಂದ ಅವನನ್ನು ಕತ್ತ ಲೆಗೆ ದೊಬ್ಬುವರು; ಲೋಕದಿಂದ ಓಡಿಸುವರು. ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ.
- Habakkuk 3:17 ಹಬಕ್ಕೂಕ 3:17ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ
- Lamentations 2:11–12 ಪ್ರಲಾಪಗಳು 2:11–12ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ. ಅವರು ನಗರದ ಬೀದಿ ಗಳಲ್ಲಿ ಗಾಯ ಪಟ್ಟವರ ಹಾಗೆ ಮೂರ್ಛೆ ಹೋಗಿ, ತಮ್ಮ ತಾಯಂದಿರ ಎದೆಯಲ್ಲಿ ಬೀಳುತ್ತಾ--ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ ಎಂದು ತಮ ತಾಯಂದಿರಿಗೆ ಹೇಳುತ್ತಾರೆ.
- Luke 23:29–30 ಲೂಕನು 23:29–30ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ. ಆಗ ಅವರು ಬೆಟ್ಟಗಳಿಗೆ--ನಮ್ಮ ಮೇಲೆ ಬೀಳಿರಿ; ಗುಡ್ಡಗಳಿಗೆ-- ನಮ್ಮನ್ನು ಮುಚ್ಚಿಕೊಳ್ಳಿರಿ ಎಂದು ಹೇಳಲಾರಂಭಿಸು ವರು.
- Malachi 2:3 ಮಲಾಕಿಯ 2:3ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು.