Deuteronomy · chapter 28 · verse 38
Deuteronomy 28:38 in Kannada
ಬಹಳ ಬೀಜವನ್ನು ಹೊಲಕ್ಕೆ ತಂದು ಸ್ವಲ್ಪ ಕೂಡಿಸುವಿ; ಯಾಕಂದರೆ ಮಿಡತೆ ಅದನ್ನು ತಿಂದು ಬಿಡುವದು.
Bahala beejavannu holakke tandu svalpa koodisuvi; yaakandare midate adannu tindu biduvadu.
Deuteronomy 28:38 in English
- King James Version (KJV)
- Thou shalt carry much seed out into the field, and shalt gather [but] little in; for the locust shall consume it.
- World English Bible (WEB)
- You will carry much seed out into the field, and will gather little in, for the locust will consume it.
- American Standard Version (ASV)
- Thou shalt carry much seed out into the field, and shalt gather little in; for the locust shall consume it.
- Bible in Basic English (BBE)
- You will take much seed out into the field, and get little in; for the locust will get it.
- Darby Translation (DBY)
- Thou shalt carry much seed out into the field, and shalt gather little in; for the locust shall devour it.
- Webster's Bible (WBS)
- Thou shalt carry much seed into the field, and shalt gather [but] little: for the locust shall consume it.
- Young's Literal Translation (YLT)
- 'Much seed thou dost take out into the field, and little thou dost gather in, for the locust doth consume it;
Read in context
- 36ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ.
- 37ಇದಲ್ಲದೆ ದೇವರು ನಿನ್ನನ್ನು ನಡಿಸುವ ಎಲ್ಲಾ ಜನಾಂಗಗಳಲ್ಲಿ ವಿಸ್ಮಯಕ್ಕೂ ಗಾದೆಗೂ ಹಾಸ್ಯಕ್ಕೂ ಗುರಿಯಾಗುವಿ.
- 38ಬಹಳ ಬೀಜವನ್ನು ಹೊಲಕ್ಕೆ ತಂದು ಸ್ವಲ್ಪ ಕೂಡಿಸುವಿ; ಯಾಕಂದರೆ ಮಿಡತೆ ಅದನ್ನು ತಿಂದು ಬಿಡುವದು.
- 39ದ್ರಾಕ್ಷೇತೋಟಗಳನ್ನು ನೆಟ್ಟು ಕಾಪಾ ಡುವಿ; ಆದರೆ ದ್ರಾಕ್ಷಾರಸವನ್ನು ಕುಡಿಯುವದಿಲ್ಲ. ಹಣ್ಣು ಕೂಡಿಸುವದಿಲ್ಲ; ಯಾಕಂದರೆ ಹುಳ ಅದನ್ನು ತಿಂದುಬಿಡುವದು.
- 40ಎಣ್ಣೇ ಮರಗಳು ನಿನ್ನ ಎಲ್ಲಾ ಮೇರೆಗಳಲ್ಲಿ ಇರುವವು. ಆದರೆ ನೀನು ಎಣ್ಣೆ ಹಚ್ಚಿಕೊಳ್ಳುವದಿಲ್ಲ; ಯಾಕಂದರೆ ನಿನ್ನ ಎಣ್ಣೇ ಫಲಗಳು ಉದುರುವವು.
Cross references
- Haggai 1:6 ಹಗ್ಗಾಯ 1:6ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ.
- Joel 1:4 ಯೋವೇಲ 1:4ಹುಳವು ಉಳಿಸಿದ್ದನ್ನು ಮಿಡತೆ ತಿಂದುಬಿಟ್ಟಿದೆ; ಮಿಡತೆ ಉಳಿಸಿದ್ದನ್ನು ಒಳಗೆ ನಾಶ ಮಾಡುವ ಹುಳವು ತಿಂದುಬಿಟ್ಟಿದೆ; ಅದು ಉಳಿಸಿದ್ದನ್ನು ಕಂಬಳಿ ಹುಳವು ತಿಂದುಬಿಟ್ಟಿದೆ.
- Micah 6:15 ಮೀಕ 6:15ನೀನು ಬೀಜ ಬಿತ್ತಿ ಕೊಯ್ಯದೆ ಇರುವಿ; ಇಪ್ಪೆಗಳನ್ನು ತುಳಿದು ಎಣ್ಣೆ ಹಚ್ಚಿಕೊಳ್ಳದೆ ಇರುವಿ; ದ್ರಾಕ್ಷಾರಸ ಮಾಡಿ ಕುಡಿಯದೆ ಇರುವಿ.ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
- Joel 2:25 ಯೋವೇಲ 2:25ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.
- Amos 4:9 ಆಮೋಸ 4:9ನಿಮ್ಮ ಪೈರನ್ನು ಹಾಳುಮಾಡುವ ಬಿರುಗಾಳಿಯಿಂದ ಹೊಡೆದಿದ್ದೇನೆ; ನಿಮ್ಮ ತೋಟಗಳು, ದ್ರಾಕ್ಷೇತೋಟ ಗಳು, ಅಂಜೂರದ ಗಿಡಗಳು ಮತ್ತು ಎಣ್ಣೇ ಮರಗಳು ಹೆಚ್ಚಾದಾಗ ಕಂಬಳಿ ಹುಳಗಳು ಅವುಗಳನ್ನು ತಿಂದು ಬಿಟ್ಟವು; ಆದರೂ ನೀವು ನನ್ನ ಕಡೆಗೆ ಹಿಂತಿರುಗಿ ಕೊಳ್ಳಲಿಲ್ಲವೆಂದು ಕರ್ತನು ಹೇಳುತ್ತಾನೆ.
- Joel 2:3 ಯೋವೇಲ 2:3ಅವರ ಮುಂದೆ ಬೆಂಕಿ ದಹಿಸುತ್ತದೆ; ಅವರ ಹಿಂದೆ ಜ್ವಾಲೆ ಸುಡುತ್ತದೆ; ಅವರ ಮುಂದೆ ದೇಶವು ಏದೆನ್ ತೋಟದ ಹಾಗಿದೆ; ಅವರ ಹಿಂದೆ ಹಾಳಾದ ಕಾಡು; ಹೌದು, ಅವುಗಳಿಗೆ ಯಾವದೂ ತಪ್ಪಿಸಿಕೊಳ್ಳಲಾರದು.
- Exodus 10:14–15 ವಿಮೋಚನಕಾಂಡ 10:14–15ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು. ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.
- Amos 7:1–2 ಆಮೋಸ 7:1–2ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು. ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು
- Isaiah 5:10 ಯೆಶಾಯ 5:10ಹೌದು, ಹತ್ತು ಎಕರೆ ದ್ರಾಕ್ಷೇ ತೋಟವು ಒಂದು ಬಾತು ಕೊಡುತ್ತದೆ. ಹೋಮೆರಷ್ಟು ಬೀಜ ಎಫವನ್ನು ಕೊಡುವದು.