Deuteronomy · chapter 28 · verse 49
Deuteronomy 28:49 in Kannada
ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ
Kartanu dooradinda andare bhoomiya antyadinda haaruva haddige samaanavaada janaanga vannoo ninage tiliyada bhaasheya janaangavannoo
Deuteronomy 28:49 in English
- King James Version (KJV)
- The LORD shall bring a nation against thee from far, from the end of the earth, [as swift] as the eagle flieth; a nation whose tongue thou shalt not understand;
- World English Bible (WEB)
- The LORD will bring a nation against you from far away, from the end of the earth, as the eagle flies: a nation whose language you will not understand,
- American Standard Version (ASV)
- Jehovah will bring a nation against thee from far, from the end of the earth, as the eagle flieth; a nation whose tongue thou shalt not understand;
- Bible in Basic English (BBE)
- The Lord will send a nation against you from the farthest ends of the earth, coming with the flight of an eagle; a nation whose language is strange to you;
- Darby Translation (DBY)
- Jehovah will bring a nation against thee from afar, from the end of the earth, like as the eagle flieth, a nation whose tongue thou understandest not;
- Webster's Bible (WBS)
- The LORD shall bring a nation against thee from far, from the end of the earth, [as swift] as the eagle flieth, a nation whose language thou shalt not understand:
- Young's Literal Translation (YLT)
- 'Jehovah doth lift up against thee a nation, from afar, from the end of the earth, as the eagle it flieth; a nation whose tongue thou hast not heard,
Read in context
- 47ನೀನು ಎಲ್ಲವುಗಳ ಸಮೃದ್ಧಿಯಲ್ಲಿ ನಿನ್ನ ದೇವರಾದ ಕರ್ತನಿಗೆ ಸಂತೋಷದಿಂದಲೂ ಮನಸ್ಸಿನ ಸೌಖ್ಯ ದಿಂದಲೂ ಸೇವಿಸದೆ ಇದದ್ದರಿಂದ
- 48ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.
- 49ಕರ್ತನು ದೂರದಿಂದ ಅಂದರೆ ಭೂಮಿಯ ಅಂತ್ಯದಿಂದ ಹಾರುವ ಹದ್ದಿಗೆ ಸಮಾನವಾದ ಜನಾಂಗ ವನ್ನೂ ನಿನಗೆ ತಿಳಿಯದ ಭಾಷೆಯ ಜನಾಂಗವನ್ನೂ
- 50ಮುದುಕರ ಮುಖದಾಕ್ಷಿಣ್ಯ ನೋಡದೆಯೂ ಚಿಕ್ಕವ ರಿಗೆ ದಯೆತೋರಿಸದೆ ಇರುವಂಥ ಕಠಿಣ ಮುಖವುಳ್ಳ ಜನಾಂಗವನ್ನೂ ನಿನ್ನ ಮೇಲೆ ಬರಮಾಡುವನು.
- 51ಅದು ನಿನ್ನ ಪಶುಗಳ ಫಲವನ್ನೂ ನಿನ್ನ ಭೂಮಿಯ ಫಲವನ್ನೂ ನೀನು ನಾಶವಾಗುವ ವರೆಗೆ ತಿಂದು ಬಿಡುವದು; ಅದು ನಿನ್ನನ್ನು ಕೆಡಿಸುವ ವರೆಗೆ ಧಾನ್ಯ ದ್ರಾಕ್ಷಾರಸ ಎಣ್ಣೆಗಳನ್ನೂ ಪಶುಗಳ ಅಭಿವೃದ್ಧಿಯನ್ನೂ ಕುರಿಗಳ ಮಂದೆಗಳನ್ನೂ ನಿನಗೆ ಉಳಿಸದು.
Cross references
- Lamentations 4:19 ಪ್ರಲಾಪಗಳು 4:19ನಮ್ಮನ್ನು ಹಿಂಸಿಸುವವರು ಆಕಾಶದಲ್ಲಿ ಹಾರುವ ಹದ್ದುಗಳಿಗಿಂತ ತೀವ್ರ ವಾಗಿದ್ದಾರೆ; ಅವರು ಪರ್ವತಗಳ ಮೇಲೆ ನಮ್ಮನ್ನು ಹಿಂದಟ್ಟಿ ಅರಣ್ಯದಲ್ಲಿ ಹೊಂಚುಹಾಕಿದರು.
- Jeremiah 48:40 ಯೆರೆಮೀಯ 48:40ಕರ್ತನು ಹೀಗೆ ಹೇಳುತ್ತಾನೆ--ಇಗೋ, ಅವನು ಹದ್ದಿನ ಹಾಗೆ ಹಾರಿ ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವೆನು.
- Jeremiah 49:22 ಯೆರೆಮೀಯ 49:22ಇಗೋ, ಅವನು ಹದ್ದಿನಂತೆ ಹಾರುವನು; ಬೊಚ್ರದ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು; ಎದೋಮಿನ ಪರಾಕ್ರಮ ಶಾಲಿಗಳ ಹೃದಯವು ಆ ದಿವಸದಲ್ಲಿ ಪ್ರಸವ ವೇದನೆಯುಳ್ಳ ಸ್ತ್ರೀಯ ಹೃದಯದ ಹಾಗೆ ಇರುವದು.
- Hosea 8:1 ಹೋಶೇಯ 8:1ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.
- Jeremiah 5:15–17 ಯೆರೆಮೀಯ 5:15–17ಇಗೋ, ಇಸ್ರಾಯೇಲ್ಯನ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆಂದು ಕರ್ತನು ಅನ್ನುತ್ತಾನೆ. ಅದು ಬಲವಾದ ಜನಾಂಗವು ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು. ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ; ಅವರೆಲ್ಲರೂ ಪರಾಕ್ರಮ ಶಾಲಿಗಳೇ. ನಿನ್ನ ಕುಮಾರರು, ಕುಮಾರ್ತೆಯರು ತಿನ್ನತಕ್ಕ ನಿನ್ನ ಪೈರನ್ನೂ ರೊಟ್ಟಿಯನ್ನೂ ತಿನ್ನುವರು, ಕುರಿಗಳನ್ನೂ ದನಗಳನ್ನೂ ತಿನ್ನುವರು, ದ್ರಾಕ್ಷೇ ಗಿಡ ಗಳನ್ನೂ ಅಂಜೂರದ ಗಿಡಗಳನ್ನೂ ತಿನ್ನುವರು. ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಕತ್ತಿಯಿಂದ ಬಡವಾಗ ಮಾಡುವರು.
- Isaiah 5:26–30 ಯೆಶಾಯ 5:26–30ಆತನು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಅಂಚಿನಿಂದ ಅವರಿಗೆ ಸಿಳ್ಳುಹಾಕುವನು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು; ಅವರಲ್ಲಿ ಯಾರೂ ದಣಿದು ಮುಗ್ಗರಿಸರು; ಅಥವಾ ಅವರು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ, ಇಲ್ಲವೆ ಅವರ ನಡುಕಟ್ಟು ಬಿಚ್ಚಿಕೊಳ್ಳುವದಿಲ್ಲ. ಕೆರದ ಬಾರು ಹರಿಯುವದಿಲ್ಲ. ಅವರ ಬಾಣಗಳು ಹದವಾಗಿವೆ, ಅವರ ಬಿಲ್ಲುಗಳು ಬೊಗ್ಗಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ ಅವರ ಚಕ್ರಗಳು ಬಿರು ಗಾಳಿಯಂತೆಯೂ ರಭಸವಾಗಿವೆ. ಅವರ ಘರ್ಜ ನೆಯು ಸಿಂಹದಂತೆ ಅದೆ. ಪ್ರಾಯದ ಸಿಂಹಗಳಂತೆ ಆರ್ಭಟಿಸುತ್ತಾರೆ; ಹೌದು, ಘರ್ಜಿಸುತ್ತಾ ಬೇಟೆ ಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು. ಆ ದಿನದಲ್ಲಿ ಅವರು ಸಮುದ್ರವು ಬೋರ್ಗರೆಯುವಂತೆ ಅವರ ಮೇಲೆ ಘರ್ಜಿಸುವರು; ಭೂಮಿಯನ್ನು ದೃಷ್ಟಿ ಸಿದರೆ ಅಂಧಕಾರವನ್ನೂ ದುಃಖವನ್ನೂ ನೋಡುವಿ. ಆಕಾಶಮಂಡಲದಲ್ಲಿ ಬೆಳಕು ಕತ್ತಲಾಗುವದು.
- Ezekiel 17:3 ಯೆಹೆಜ್ಕೇಲನು 17:3ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು.
- Ezekiel 17:12 ಯೆಹೆಜ್ಕೇಲನು 17:12ಇದರ ಅಭಿಪ್ರಾಯ ನಿಮಗೆ ತಿಳಿಯುವದಿಲ್ಲವೋ? ಅವರಿಗೆ ಎದುರು ಬೀಳುವ ಮನೆಯವರಿಗೆ ಹೀಗೆ ಹೇಳು--ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸ ನನ್ನೂ ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಬಾಬೆಲಿಗೆ ಒಯ್ದಿದ್ದಾನೆ.
- Jeremiah 6:22–23 ಯೆರೆಮೀಯ 6:22–23ಕರ್ತನು ಹೀಗೆ ಹೇಳುತ್ತಾನೆ--ಇಗೋ, ಒಂದು ಜನವು ಉತ್ತರ ದೇಶದಿಂದ ಬರುತ್ತದೆ; ದೊಡ್ಡ ಜನಾಂಗವು ಭೂಮಿಯ ಮೇರೆಗಳಿಂದ ಎದ್ದು ಬರು ತ್ತದೆ. ಅವರು ಬಿಲ್ಲನ್ನೂ ಬಲ್ಲೆಯನ್ನೂ ಹಿಡಿದ ಕ್ರೂರಿಗಳಾಗಿದ್ದಾರೆ, ಕನಿಕರ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುತ್ತದೆ; ಕುದುರೆ ಗಳ ಮೇಲೆ ಸವಾರಿ ಮಾಡುತ್ತಾರೆ; ಚೀಯೋನಿನ ಕುಮಾರಿಯೇ, ನಿನಗೆ ವಿರೋಧವಾಗಿ ಯುದ್ದ ಮಾಡುವ ಮನುಷ್ಯರಂತೆ ಸಿದ್ಧಮಾಡಿಕೊಂಡಿದ್ದಾರೆ;
- Luke 19:43–44 ಲೂಕನು 19:43–44ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು. ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.
- Habakkuk 1:6–7 ಹಬಕ್ಕೂಕ 1:6–7ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು. ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ.
- 1 Corinthians 14:21 1 ಕೊರಿಂಥದವರಿಗೆ 14:21ಬೇರೆ ಭಾಷೆಯವರ ಮೂಲಕವಾಗಿಯೂ ಬೇರೆ ಯವರ ತುಟಿಗಳಿಂದಲೂ ನಾನು ಈ ಜನರೊಂದಿಗೆ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವದಿಲ್ಲ ಎಂದು ಕರ್ತನು ಹೇಳುತ್ತಾನೆಂಬ ದಾಗಿ ನ್ಯಾಯಪ್ರಮಾಣದಲ್ಲಿ ಬರೆದದೆ.