Deuteronomy · chapter 3 · verse 6
Deuteronomy 3:6 in Kannada
ನಾವು ಹೆಷ್ಬೋನಿನ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು; ಗಂಡಸರನ್ನೂ ಹೆಂಗಸರನ್ನೂ ಮಕ್ಕ ಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣ ವಾಗಿ ನಿರ್ಮೂಲಮಾಡಿದೆವು.
Naavu heshbonina arasanaada seehonanige maadida prakaara avugalannellaa sampoornavaagi nirmoola maadidevu; gandasarannoo hengasarannoo makka lannoo pratiyondu pattanavannoo sampoorna vaagi nirmoolamaadidevu.
Deuteronomy 3:6 in English
- King James Version (KJV)
- And we utterly destroyed them, as we did unto Sihon king of Heshbon, utterly destroying the men, women, and children, of every city.
- World English Bible (WEB)
- We utterly destroyed them, as we did to Sihon king of Heshbon, utterly destroying every inhabited city, with the women and the little ones.
- American Standard Version (ASV)
- And we utterly destroyed them, as we did unto Sihon king of Heshbon, utterly destroying every inhabited city, with the women and the little ones.
- Bible in Basic English (BBE)
- And we put them to the curse, every town together with men, women, and children.
- Darby Translation (DBY)
- And we utterly destroyed them, as we had done to Sihon the king of Heshbon, utterly destroying every city, men, women and little ones.
- Webster's Bible (WBS)
- And we utterly destroyed them, as we did to Sihon king of Heshbon, utterly destroying the men, women, and children of every city.
- Young's Literal Translation (YLT)
- and we devote them, as we have done to Sihon king of Heshbon, devoting every city, men, the women, and the infants;
Read in context
- 4ಆ ಕಾಲದಲ್ಲಿ ಅವನ ಪಟ್ಟಣ ಗಳನ್ನೆಲ್ಲಾ ಹಿಡಿದೆವು; ನಾವು ಅವರಿಂದ ತಕ್ಕೊಳ್ಳದ ಪಟ್ಟಣವು ಇದ್ದಿಲ್ಲ. ಅರ್ಗೋಬಿನ ಸುತ್ತಲಿರುವ ದೇಶ ವೆಲ್ಲಾ ಅರವತ್ತು ಪಟ್ಟಣಗಳು; ಇವೇ ಬಾಷಾನಿನಲ್ಲಿ ಓಗನ ರಾಜ್ಯವು.
- 5ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆಬಾಗಲು ಅಗುಳಿಗಳಿಂದ ಭದ್ರವಾಗಿದ್ದವು; ಅವುಗಳಲ್ಲದೆ ಬೈಲು ಸೀಮೆಯ ಪಟ್ಟಣಗಳು ಬಹಳ ಇದ್ದವು.
- 6ನಾವು ಹೆಷ್ಬೋನಿನ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು; ಗಂಡಸರನ್ನೂ ಹೆಂಗಸರನ್ನೂ ಮಕ್ಕ ಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣ ವಾಗಿ ನಿರ್ಮೂಲಮಾಡಿದೆವು.
- 7ಆದರೆ ಎಲ್ಲಾ ಪಶು ಗಳನ್ನೂ ಪಟ್ಟಣಗಳ ಕೊಳ್ಳೆಯನ್ನೂ ಸುಲಿಗೆಯಾಗಿ ತಕ್ಕೊಂಡೆವು.
- 8ಆ ಕಾಲದಲ್ಲಿ ನಾವು ಯೊರ್ದನಿನ ಈಚೆಯಲ್ಲಿ ಅರ್ನೋನ್ ನದಿಯಿಂದ ಹೆರ್ಮೋನ್ ಬೆಟ್ಟದ ವರೆಗೆ ಇರುವ ದೇಶವನ್ನು ಅಮೋರಿಯರ ಇಬ್ಬರು ಅರ ಸರ ಕೈಯಿಂದ ತಕ್ಕೊಂಡೆವು.
Cross references
- Deuteronomy 2:34 ಧರ್ಮೋಪದೇಶಕಾಂಡ 2:34ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
- Psalm 135:10–12 ಕೀರ್ತನೆಗಳು 135:10–12ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು. ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು. ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು.
- Deuteronomy 2:24 ಧರ್ಮೋಪದೇಶಕಾಂಡ 2:24ಏಳಿರಿ, ಹೊರಡಿರಿ; ಅರ್ನೋನ್ ನದಿಯನ್ನು ದಾಟಿರಿ; ಇಗೋ, ಹೆಷ್ಬೋನಿನ ಅರಸ ನಾದ ಅಮೋರಿಯನಾದ ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಕೊಟ್ಟಿದ್ದೇನೆ, ಸ್ವಾಧೀನ ಪಡಿಸಿಕೊಳ್ಳುವದಕ್ಕೆ ಆರಂಭಮಾಡು. ಅವನ ಸಂಗಡ ಜಗಳವಾಡಿ ಯುದ್ಧಮಾಡು.
- Leviticus 27:28–29 ಯಾಜಕಕಾಂಡ 27:28–29ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ. ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು.
- Deuteronomy 20:16–18 ಧರ್ಮೋಪದೇಶಕಾಂಡ 20:16–18ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು. ಆದರೆ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿ ಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಅವರು ತಮ್ಮ ದೇವರುಗಳಿಗೆ ಮಾಡಿದ ಎಲ್ಲಾ ಅಸಹ್ಯಗಳನ್ನು ಮಾಡುವದಕ್ಕೆ ನಿಮಗೆ ಕಲಿಸದ ಹಾಗೆಯೂ ನೀವು ನಿಮ್ಮ ದೇವರಾದ ಕರ್ತನಿಗೆ ಪಾಪ ಮಾಡದ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಹಾಗೆ ನಿರ್ಮೂಲ ಮಾಡಬೇಕು.
- Joshua 11:14 ಯೆಹೋಶುವ 11:14ಆ ಪಟ್ಟಣಗಳ ಕೊಳ್ಳೆಯನ್ನೆಲ್ಲಾ ಪಶು ಗಳನ್ನೆಲ್ಲಾ ಇಸ್ರಾಯೇಲ್ ಮಕ್ಕಳು ತಮಗೋಸ್ಕರ ಸುಲುಕೊಂಡರು; ಆದರೆ ಮನುಷ್ಯರೆಲ್ಲರನ್ನು ಕತ್ತಿಯಿಂದ ನಾಶಮಾಡುವ ವರೆಗೂ ಹೊಡೆದುಬಿಟ್ಟರು. ಶ್ವಾಸವುಳ್ಳ ಒಂದನ್ನೂ ಅವರು ಉಳಿಯಗೊಡಿಸಲಿಲ್ಲ.
- Deuteronomy 3:2 ಧರ್ಮೋಪದೇಶಕಾಂಡ 3:2ಆಗ ಕರ್ತನು ನನಗೆ--ಅವನಿಗೆ ಭಯಪಡಬೇಡ; ಅವ ನನ್ನೂ ಅವನ ಜನರೆಲ್ಲರನ್ನೂ ಅವನ ದೇಶವನ್ನೂ ನಿನ್ನ ಕೈಯಲ್ಲಿ ಒಪ್ಪಿಸುತ್ತೇನೆ; ನೀನು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯರ ಅರಸನಾದ ಸೀಹೋನ ನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು ಅಂದನು.
- Numbers 21:2 ಅರಣ್ಯಕಾಂಡ 21:2ಆಗ ಇಸ್ರಾಯೇಲು ಕರ್ತನಿಗೆ ಪ್ರಮಾಣಮಾಡಿ ಹೇಳಿದ್ದೇನಂದರೆ--ನೀನು ಈ ಜನರನ್ನು ನನ್ನ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ ನಾನು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
- Psalm 136:19–21 ಕೀರ್ತನೆಗಳು 136:19–21ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ. ಬಾಷಾ ನಿನ ಅರಸನಾದ ಓಗನೊಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ. ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.