Deuteronomy · chapter 2 · verse 34
Deuteronomy 2:34 in Kannada
ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
Aa kaaladalli avana pattanagalannellaa takkondu pratiyondu pattanada gandasarannoo hengasarannoo chikkavarannoo nirmoola maadidevu, obbarannoo ulisalilla.
Deuteronomy 2:34 in English
- King James Version (KJV)
- And we took all his cities at that time, and utterly destroyed the men, and the women, and the little ones, of every city, we left none to remain:
- World English Bible (WEB)
- We took all his cities at that time, and utterly destroyed every inhabited city, with the women and the little ones. We left no one remaining.
- American Standard Version (ASV)
- And we took all his cities at that time, and utterly destroyed every inhabited city, with the women and the little ones; we left none remaining:
- Bible in Basic English (BBE)
- At that time we took all his towns, and gave them over to complete destruction, together with men, women, and children; we had no mercy on any:
- Darby Translation (DBY)
- And we took all his cities at that time, and utterly destroyed every city, men, and women, and little ones: we let none escape.
- Webster's Bible (WBS)
- And we took all his cities at that time, and utterly destroyed the men, and the women, and the little ones of every city, we left none to remain.
- Young's Literal Translation (YLT)
- and we capture all his cities at that time, and devote the whole city, men, and the women, and the infants — we have not left a remnant;
Read in context
- 32ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ಯುದ್ಧಮಾಡುವದಕ್ಕೆ ಯಹ ಜಿಗೆ ಸವಿಾಪದಲ್ಲಿ ನಮ್ಮೆದುರಿಗೆ ಹೊರಟನು.
- 33ನಮ್ಮ ದೇವರಾದ ಕರ್ತನು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿ ದ್ದರಿಂದ ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಹೊಡೆದೆವು;
- 34ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತಕ್ಕೊಂಡು ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು, ಒಬ್ಬರನ್ನೂ ಉಳಿಸಲಿಲ್ಲ.
- 35ಪಶುಗಳನ್ನು ಮಾತ್ರ ನಮಗೆ ಸುಲುಕೊಂಡು ಪಟ್ಟಣಗಳನ್ನು ಕೊಳ್ಳೆ ಹೊಡೆದೆವು.
- 36ಅರ್ನೋನಿನ ತೀರದಲ್ಲಿರುವ ಅರೋ ಯೇರ್ ಮತ್ತು ಆ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನ ವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ; ನಮ್ಮ ದೇವರಾದ ಕರ್ತನು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದನು.ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.
Cross references
- 1 Samuel 15:3 1 ಸಮುವೇಲನು 15:3ಈಗ ನೀನು ಹೋಗಿ ಆ ಅಮಾಲೇಕ್ಯರನ್ನು ಹೊಡೆದು ಅವರಿಗೆ ಇದ್ದದ್ದನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿ ಅವರನ್ನು ಕನಿಕರಿಸದೆ ಪುರುಷರನ್ನೂ ಸ್ತ್ರೀಯರನ್ನೂ ಚಿಕ್ಕವರನ್ನೂ ಮೊಲೆ ಕೂಸುಗಳನ್ನೂ ದನ ಕುರಿ ಒಂಟೆ ಕತ್ತೆಗಳನ್ನೂ ಕೊಂದುಹಾಕು ಎಂಬದು.
- Deuteronomy 7:2 ಧರ್ಮೋಪದೇಶಕಾಂಡ 7:2ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.
- Deuteronomy 3:6 ಧರ್ಮೋಪದೇಶಕಾಂಡ 3:6ನಾವು ಹೆಷ್ಬೋನಿನ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಮೂಲ ಮಾಡಿದೆವು; ಗಂಡಸರನ್ನೂ ಹೆಂಗಸರನ್ನೂ ಮಕ್ಕ ಳನ್ನೂ ಪ್ರತಿಯೊಂದು ಪಟ್ಟಣವನ್ನೂ ಸಂಪೂರ್ಣ ವಾಗಿ ನಿರ್ಮೂಲಮಾಡಿದೆವು.
- Deuteronomy 7:26 ಧರ್ಮೋಪದೇಶಕಾಂಡ 7:26ನೀನು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿನ್ನ ಮನೆಗೆ ತಕ್ಕೊಂಡು ಬರ ಬಾರದು; ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು; ಸಂಪೂರ್ಣವಾಗಿ ಹೇಸಿಕೊಳ್ಳಬೇಕು; ಯಾಕಂದರೆ ಅದು ಶಪಿಸಲ್ಪಟ್ಟದ್ದೇ.
- Deuteronomy 20:16–18 ಧರ್ಮೋಪದೇಶಕಾಂಡ 20:16–18ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು. ಆದರೆ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿ ಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಅವರು ತಮ್ಮ ದೇವರುಗಳಿಗೆ ಮಾಡಿದ ಎಲ್ಲಾ ಅಸಹ್ಯಗಳನ್ನು ಮಾಡುವದಕ್ಕೆ ನಿಮಗೆ ಕಲಿಸದ ಹಾಗೆಯೂ ನೀವು ನಿಮ್ಮ ದೇವರಾದ ಕರ್ತನಿಗೆ ಪಾಪ ಮಾಡದ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಹಾಗೆ ನಿರ್ಮೂಲ ಮಾಡಬೇಕು.
- Joshua 7:11 ಯೆಹೋಶುವ 7:11ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.
- Leviticus 27:28–29 ಯಾಜಕಕಾಂಡ 27:28–29ಆದಾಗ್ಯೂ ಪ್ರತ್ಯೇಕಿಸಲ್ಪಟ್ಟ ಯಾವದಾದರೂ ಅಂದರೆ ಮನುಷ್ಯನನ್ನಾಗಲಿ ಪಶುವನ್ನಾಗಲಿ ತನ್ನ ಸ್ವಾಸ್ತ್ಯದ ಹೊಲವನ್ನಾಗಲಿ ತನಗಿದ್ದದ್ದನ್ನೆಲ್ಲಾ ಒಬ್ಬ ಮನುಷ್ಯನು ಕರ್ತನಿಗಾಗಿ ಪ್ರತ್ಯೇಕಿಸಿದರೆ ಅದನ್ನು ಮಾರಬಾರದು ಇಲ್ಲವೆ ವಿಮೋಚಿಸಬಾರದು; ಪ್ರತ್ಯೇಕಿ ಸಲ್ಪಟ್ಟ ಪ್ರತಿಯೊಂದು ಕರ್ತನಿಗೆ ಅತೀ ಪರಿಶುದ್ಧ ವಾದದ್ದೇ. ಮನುಷ್ಯರಲ್ಲಿ ಪ್ರತ್ಯೇಕಿಸಲ್ಪಟ್ಟವನು ಯಾವನಾದರು ಪ್ರತ್ಯೇಕಿಸಲ್ಪಡದೆ ಹೋದರೆ ಅವನನ್ನು (ಕ್ರಯಕೊಟ್ಟು) ವಿಮೋಚಿಸಬಾರದು. ಖಂಡಿತವಾಗಿ ಅವನನ್ನು ಕೊಲ್ಲಬೇಕು.
- 1 Samuel 15:8–9 1 ಸಮುವೇಲನು 15:8–9ಆದರೆ ಸಮಸ್ತ ಜನರನ್ನು ಕತ್ತಿಯಿಂದ ಸಂಪೂರ್ಣ ನಾಶಮಾಡಿದನು. ಸೌಲನು ಮತ್ತು ಜನರು ಅಗಾಗನನ್ನೂ ಪಶುಕುರಿಗಳಲ್ಲಿ ಮೇಲ್ತರವಾದ ವುಗಳನ್ನೂ ಉತ್ತಮವಾದ ಸಮಸ್ತವನ್ನೂ ಕನಿಕರಿಸಿದರು. ಅವುಗಳನ್ನು ಸಂಪೂರ್ಣ ನಾಶಮಾಡಲು ಮನಸ್ಸಿಲ್ಲದೆ ಇದ್ದನು. ಆದರೆ ತಿರಸ್ಕರಿಸಲ್ಪಡತಕ್ಕ ಕನಿಷ್ಠವಾದವು ಗಳನ್ನೆಲ್ಲಾ ಸಂಪೂರ್ಣ ನಾಶಮಾಡಿದರು.
- Numbers 21:2–3 ಅರಣ್ಯಕಾಂಡ 21:2–3ಆಗ ಇಸ್ರಾಯೇಲು ಕರ್ತನಿಗೆ ಪ್ರಮಾಣಮಾಡಿ ಹೇಳಿದ್ದೇನಂದರೆ--ನೀನು ಈ ಜನರನ್ನು ನನ್ನ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ ನಾನು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆನು. ಆಗ ಕರ್ತನು ಇಸ್ರಾಯೇಲ್ಯರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಕೊಟ್ಟುಬಿಟ್ಟನು; ಇಸ್ರಾಯೇಲ್ಯರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅವರು ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
- Joshua 11:14 ಯೆಹೋಶುವ 11:14ಆ ಪಟ್ಟಣಗಳ ಕೊಳ್ಳೆಯನ್ನೆಲ್ಲಾ ಪಶು ಗಳನ್ನೆಲ್ಲಾ ಇಸ್ರಾಯೇಲ್ ಮಕ್ಕಳು ತಮಗೋಸ್ಕರ ಸುಲುಕೊಂಡರು; ಆದರೆ ಮನುಷ್ಯರೆಲ್ಲರನ್ನು ಕತ್ತಿಯಿಂದ ನಾಶಮಾಡುವ ವರೆಗೂ ಹೊಡೆದುಬಿಟ್ಟರು. ಶ್ವಾಸವುಳ್ಳ ಒಂದನ್ನೂ ಅವರು ಉಳಿಯಗೊಡಿಸಲಿಲ್ಲ.
- Joshua 8:25–26 ಯೆಹೋಶುವ 8:25–26ಆ ದಿನದಲ್ಲಿ ಬಿದ್ದ ಸ್ತ್ರೀ ಪುರುಷರಾದ ಆಯಿಯ ಮನುಷ್ಯರೆಲ್ಲರು ಹನ್ನೆರಡು ಸಾವಿರ ಜನರು. ಯೆಹೋಶುವನು ಆಯಿಯ ನಿವಾಸಿಗಳೆಲ್ಲರನ್ನು ಸಂಪೂರ್ಣ ನಾಶಮಾಡುವ ವರೆಗೂ ಚಾಚಿಕೊಂಡಿರುವ ತನ್ನ ಕೈಯಲ್ಲಿದ್ದ ಈಟಿಯನ್ನು ಹಿಂದೆಗೆಯಲಿಲ್ಲ.
- Joshua 9:24 ಯೆಹೋಶುವ 9:24ಅದಕ್ಕವರು ಯೆಹೋಶುವ ನಿಗೆ--ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವದಕ್ಕೂ ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡು ವದಕ್ಕೂ ನಿಮ್ಮ ದೇವರಾದ ಕರ್ತನು ತನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ್ದು ನಿಮ್ಮ ಸೇವಕರಿಗೆ ನಿಶ್ಚಯವಾಗಿ ತಿಳಿಸಲ್ಪಟ್ಟದ್ದರಿಂದ ನಾವು ನಮ್ಮ ಪ್ರಾಣಗಳಿಗೋಸ್ಕರ ನಿಮಗೆ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.