Deuteronomy · chapter 30 · verse 7
Deuteronomy 30:7 in Kannada
ಇದಲ್ಲದೆ ನಿನ್ನ ದೇವರಾದ ಕರ್ತನು ಆ ಶಾಪಗಳನ್ನೆಲ್ಲಾ ನಿನ್ನ ಶತ್ರುಗಳ ಮೇಲೆಯೂ ನಿನ್ನನ್ನು ಹಿಂಸಿಸಿದ ನಿನ್ನ ಹಗೆಯವರ ಮೇಲೆಯೂ ಹಾಕುವನು.
Idallade ninna devaraada kartanu aa shaapagalannellaa ninna shatrugala meleyoo ninnannu hinsisida ninna hageyavara meleyoo haakuvanu.
Deuteronomy 30:7 in English
- King James Version (KJV)
- And the LORD thy God will put all these curses upon thine enemies, and on them that hate thee, which persecuted thee.
- World English Bible (WEB)
- The LORD your God will put all these curses on your enemies and on those who hate you, who persecuted you.
- American Standard Version (ASV)
- And Jehovah thy God will put all these curses upon thine enemies, and on them that hate thee, that persecuted thee.
- Bible in Basic English (BBE)
- And the Lord your God will put all these curses on those who are against you, and on your haters who put a cruel yoke on you.
- Darby Translation (DBY)
- And Jehovah thy God will put all these curses on thine enemies, and on them that hate thee, who have persecuted thee.
- Webster's Bible (WBS)
- And the LORD thy God will put all these curses upon thy enemies, and on them that hate thee, who persecuted thee.
- Young's Literal Translation (YLT)
- and Jehovah thy God hath put all this oath on thine enemies, and on those hating thee, who have pursued thee.
Read in context
- 5ಇದಲ್ಲದೆ ನಿನ್ನ ಪಿತೃಗಳು ಸ್ವಾಧೀನಮಾಡಿಕೊಂಡ ದೇಶಕ್ಕೆ ನಿನ್ನ ದೇವರಾದ ಕರ್ತನು ನಿನ್ನನ್ನು ತರುವನು; ನೀನು ಅದನ್ನು ಸ್ವಾಧೀನಮಾಡಿಕೊಳ್ಳುವಿ; ಆತನು ನಿನಗೆ ಒಳ್ಳೇದನ್ನು ಮಾಡಿ ನಿನ್ನ ಪಿತೃಗಳಿಗಿಂತಲೂ ನಿನ್ನನ್ನು ಹೆಚ್ಚಿಸುವನು.
- 6ಆಗ ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ಪ್ರೀತಿಮಾಡಿ ನೀನು ಬದು ಕುವ ಹಾಗೆ ಆತನು ನಿನ್ನ ಹೃದಯವನ್ನೂ ನಿನ್ನ ಸಂತತಿಯ ಹೃದಯವನ್ನೂ ಪರಿಛೇದಿಸುವನು.
- 7ಇದಲ್ಲದೆ ನಿನ್ನ ದೇವರಾದ ಕರ್ತನು ಆ ಶಾಪಗಳನ್ನೆಲ್ಲಾ ನಿನ್ನ ಶತ್ರುಗಳ ಮೇಲೆಯೂ ನಿನ್ನನ್ನು ಹಿಂಸಿಸಿದ ನಿನ್ನ ಹಗೆಯವರ ಮೇಲೆಯೂ ಹಾಕುವನು.
- 8ಆದರೆ ನೀನು ತಿರುಗಿ ಕೊಂಡು ಕರ್ತನ ಮಾತನ್ನು ಕೇಳಿ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆತನ ಎಲ್ಲಾ ಆಜ್ಞೆಗಳನ್ನು ಕೈಕೊಳ್ಳುವಿ.
- 9ಇದಲ್ಲದೆ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೈಕೆಲಸದಲ್ಲಿ, ಗರ್ಭದ ಫಲದಲ್ಲಿ, ಪಶುಗಳ ಫಲದಲ್ಲಿ, ಭೂಮಿಯ ಫಲದಲ್ಲಿ ಒಳ್ಳೇದಕ್ಕೋಸ್ಕರ ಅಭಿವೃದ್ಧಿ ಮಾಡುವನು.
Cross references
- Deuteronomy 7:15 ಧರ್ಮೋಪದೇಶಕಾಂಡ 7:15ಕರ್ತನು ಎಲ್ಲಾ ರೋಗಗಳನ್ನು ನಿನ್ನಿಂದ ತೆಗೆದು ಬಿಡುವನು; ನಿನಗೆ ತಿಳಿದಿರುವ ಐಗುಪ್ತದ ಕೆಟ್ಟ ರೋಗಗಳನ್ನೆಲ್ಲಾ ನಿನ್ನ ಮೇಲೆ ಬರಮಾಡದೆ ನಿನ್ನನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರ ಮಾಡುವನು.
- Lamentations 4:21–22 ಪ್ರಲಾಪಗಳು 4:21–22ಎದೋಮಿನ ಮಗಳೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು, ಸಂತೋಷಪಡು; ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವದು, ನೀನು ಕುಡಿದು ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು. ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು.
- Jeremiah 51:24–26 ಯೆರೆಮೀಯ 51:24–26ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ. ನಾಶಮಾಡುವ ಬೆಟ್ಟವೇ! ಭೂಮಿಯನ್ನೆಲ್ಲಾ ನಾಶಮಾಡುವಂಥಾದ್ದೇ! ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. ನಿನ್ನ ಮೇಲೆ ನನ್ನ ಕೈಯನ್ನು ಚಾಚಿ ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ. ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು; ನೀನು ಎಂದೆಂದಿಗೂ ಹಾಳಾಗುವಿ ಎಂದು ಕರ್ತನು ಅನ್ನುತ್ತಾನೆ.
- Ezekiel 25:12 ಯೆಹೆಜ್ಕೇಲನು 25:12ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ.
- Isaiah 10:12 ಯೆಶಾಯ 10:12ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು.
- Numbers 24:14 ಅರಣ್ಯಕಾಂಡ 24:14ಬಾ, ಈ ಜನರು ನಿನ್ನ ಜನರಿಗೆ ಕಡೇ ದಿವಸಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುವೆನು ಅಂದನು.
- Isaiah 14:1–27 ಯೆಶಾಯ 14:1–27ಕರ್ತನು ಯಾಕೋಬ್ಯರನ್ನು ಕರುಣಿಸಿ ಮತ್ತೆ (ಇನ್ನೂ) ಇಸ್ರಾಯೇಲ್ಯರನ್ನು ಆದುಕೊಂಡು ಅವರನ್ನು ತಮ್ಮ ಸ್ವಂತ ದೇಶದಲ್ಲಿ ಸೇರಿಸಬೇಕೆಂದಿದ್ದಾನೆ. ಅನ್ಯರು ಅವರೊಂದಿಗೆ ಕೂಡಿ ಬಂದು ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು. ಜನರು ಅವರನ್ನು ತೆಗೆದುಕೊಂಡು ತಮ್ಮ ಸ್ಥಳಕ್ಕೆ ಅವರನ್ನು ಬರಮಾಡುವರು. ಆಗ ಇಸ್ರಾಯೇಲಿನ ಮನೆತನದವರು ಕರ್ತನ ದೇಶದಲ್ಲಿ ಆ ಜನಾಂಗದ ವರನ್ನು ಗಂಡು ಹೆಣ್ಣಾಳುಗಳನ್ನಾಗಿ (ದಾಸದಾಸಿಯ ರನ್ನಾಗಿ) ಇಟ್ಟುಕೊಳ್ಳುವರು. ತಮ್ಮನ್ನು ಸೆರೆಹಿಡಿದ ವರನ್ನು ಸೆರೆಹಿಡಿಯುವರು, ತಮ್ಮನ್ನು ಹಿಂಸಿಸಿದವರ ಮೇಲೆ ಅಧಿಕಾರನಡಿಸುವರು. ಕರ್ತನು ನಿಮ್ಮ ಸಂಕಟದಿಂದಲೂ ಕಳವಳದಿಂದ ಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬೆಲಿನ ರಾಜನಿಗೆ ವಿರುದ್ಧವಾದ ಈ ಸಾಮತಿಯನ್ನು (ಪದ್ಯವನ್ನು) ನೀವು ಹೀಗೆ ಎತ್ತಿ ಹೇಳಬೇಕು. ಹೀಗೆ ಹಿಂಸಕನು ಕೊನೆ ಗೊಂಡನು, ಬಂಗಾರದ ಪಟ್ಟಣವು ಸುಮ್ಮನೆ ಇದೆ. ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು. ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿ ಗೊಂಡಿದೆ. ಅವರು ಉತ್ಸಾಹಧ್ವನಿಯನ್ನು ಎತ್ತುತ್ತಾರೆ. ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ. ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ. ಅವರೆಲ್ಲರು ನಿನಗೆ--ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ, ನೀನು ನಮ್ಮ ಸಮಾನನಾಗಿದ್ದೀ ಎಂದು ಮಾತಾಡಿ ಹೇಳುವರು. ನಿನ್ನ ವೈಭವವೂ ವೀಣೆಗಳ ಸ್ವರವೂ ಸಮಾಧಿಗೆ ಇಳಿಸಲ್ಪಟ್ಟಿವೆ. ನಿನಗೆ ಹುಳುಗಳೇ ಹಾಸಿಗೆ, ನಿನ್ನ ಹೊದಿಕೆಯು ಕ್ರಿಮಿಗಳೇ; ಓ ಲೂಸಿಫರ್ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ? ಜನಾಂಗಗಳನ್ನು ಬಲಹೀನ ಮಾಡಿದ ನೀನು ಭೂಮಿಗೆ ಹೇಗೆ ಕಡಿಯಲ್ಪಟ್ಟಿದ್ದೀ? ನೀನು ನಿನ್ನ ಹೃದಯದಲ್ಲಿ ನಾನು ಆಕಾಶಕ್ಕೆ ಏರಿ ದೇವರ ನಕ್ಷತ್ರಗಳ ಮೇಲೆ ನನ್ನ ಸಿಂಹಾಸನವನ್ನು ಘನತೆಗೇರಿಸುವೆನು; ಉತ್ತರ ದಿಕ್ಕಿನ ಕಡೆಗಿರುವ ಸಮೂಹ ಪರ್ವತದ ಮೇಲೆಯೂ ನಾನು ಆಸೀನನಾ ಗುವೆನು. ಉನ್ನತವಾದ ಮೇಘ ಮಂಡಲದ ಮೇಲೆ ಏರಿ ಮಹೋನ್ನತನಿಗೆ ಸಮಾನನಾಗುತ್ತೇನೆ ಅಂದು ಕೊಂಡಿದ್ದೆಯಲ್ಲಾ; ಆದಾಗ್ಯೂ ಪಾತಾಳದ ಕುಣಿಯ ಪಾರ್ಶ್ವಗಳಿಗೆ ಇಳಿಸಲ್ಪಡುವಿ. ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು. ಜನಾಂಗಗಳ ಅರಸುಗಳೆಲ್ಲಾ ಅವರೆಲ್ಲರೂ ವೈಭವ ದಿಂದ ತಮ್ಮತಮ್ಮ ಮನೆಗಳಲ್ಲಿ ಮಲಗುತ್ತಾರೆ. ಆದರೆ ನೀನು ಅಸಹ್ಯವಾದ ಕೊಂಬೆಯಂತೆಯೂ ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಉಡುಪಿನಂತೆಯೂ ಕಾಲಕೆಳಗೆ ತುಳಿಯಲ್ಪಟ್ಟ ಹೆಣ ದಂತೆಯೂ ನಿನ್ನ ಸಮಾಧಿಯೊಳಗಿಂದ ಹೊರಗೆ ಹಾಕ ಲ್ಪಟ್ಟಿದ್ದೀ. ನೀನು ಅವರೊಂದಿಗೆ ಹೂಣಿಡುವಿಕೆ ಯಲ್ಲಿ ಕೂಡಿಕೊಳ್ಳದೆ ಇರುವಿ. ನಿನ್ನ ದೇಶವನ್ನು ನೀನು ನಾಶಮಾಡಿ ನಿನ್ನ ಜನರನ್ನು ಕೊಂದುಹಾಕಿದಿ. ಕೆಟ್ಟವರ ಸಂತಾನವು ಎಂದೆಂದಿಗೂ ಹೆಸರು ಹೊಂದು ವದಿಲ್ಲ. ಅವರು ಏಳದೆ ಇಲ್ಲವೆ ದೇಶವನ್ನು ವಶ ಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ ಅವರ ತಂದೆಗಳ ಅಪರಾಧದ ನಿಮಿತ್ತ ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ. ಅವರಿಗೆ ವಿರುದ್ಧವಾಗಿ ಏಳುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಬಾಬೆಲಿನಿಂದ ಹೆಸರನ್ನೂ ಉಳಿದ ಜನರನ್ನೂ ಮಗನನ್ನೂ ಸೋದರಳಿಯನನ್ನೂ ನಿರ್ಮೂಲ ಮಾಡುವೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಅದನ್ನು ಸಹ ಮುಳ್ಳುಹಂದಿಗೆ ಬಾಧ್ಯ ವಾಗಿಯೂ ನೀರಿನ ಕುಣಿಗಳಾಗಿಯೂ ಮಾಡಿ ನಾಶ ವೆಂಬ ಕಸಬರಿಕೆಯಿಂದ ಗುಡಿಸುತ್ತೇನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು. ಏನಂದರೆ ಅಶ್ಶೂ ರ್ಯರನ್ನು ನನ್ನ ದೇಶದಲ್ಲಿ ಮುರಿದುಬಿಡುತ್ತೇನೆ. ನನ್ನ ಪರ್ವತಗಳ ಮೇಲೆ ಅವನನ್ನು ತುಳಿದುಬಿಡುತ್ತೇನೆ; ಅವನ ನೊಗವು ಅವರ ಮೇಲಿನಿಂದ ತೊಲಗಿ ಅವ ನ ಭಾರವು ಅವನ ಭುಜದ ಮೇಲಿನಿಂದ ತೊಲಗು ವದು. ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.
- Obadiah 1:10 ಓಬದ್ಯ 1:10ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ.
- Amos 1:11 ಆಮೋಸ 1:11ಕರ್ತನು ಹೀಗೆ ಹೇಳುತ್ತಾನೆ--ಎದೋಮಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅದರ ದಂಡನೆಯಿಂದ ತಪ್ಪಿಸುವದಿಲ್ಲ. ಅವನು ತನ್ನ ಎಲ್ಲಾ ಕನಿಕರಗಳನ್ನು ಬಿಸಾಡಿಬಿಟ್ಟು ತನ್ನ ಸಹೋ ದರನನ್ನು ಕತ್ತಿಯ ಸಹಿತ ಹಿಂಬಾಲಿಸಿದನು. ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು; ತನ್ನ ರೌದ್ರ ವನ್ನು ನಿತ್ಯವಾಗಿ ಇಟ್ಟುಕೊಂಡನು.
- Lamentations 3:54–66 ಪ್ರಲಾಪಗಳು 3:54–66ಪ್ರವಾಹವು ನನ ತಲೆಯ ಮೇಲೆ ಹರಿಯಿತು; ಆಗ--ನಾನು ಸತ್ತೆನು ಅಂದುಕೊಂಡೆನು. ಓ ಕರ್ತನೇ, ನಾನು ಆಳವಾದ ಕಾರಾಗೃಹದಿಂದ ನಿನ್ನ ಹೆಸರನ್ನು ಎತ್ತಿ ಬೇಡಿಕೊಂಡೆನು. ನೀನು ನನ್ನ ಸ್ವರವನ್ನು ಕೇಳಿದ್ದೀ; ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ. ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸವಿಾಪಕ್ಕೆ ಬಂದು--ಭಯಪಡ ಬೇಡ ಎಂದು ಹೇಳಿದಿ. ಓ ಕರ್ತನೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡಿಸಿ ನನ್ನ ಜೀವವನ್ನು ವಿಮೋಚಿಸಿದ್ದೀ. ಓ ಕರ್ತನೇ, ನೀನು ನನ್ನ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯವನ್ನು ತೀರಿಸು. ಅವರ ಎಲ್ಲಾ ಪ್ರತೀಕಾರವನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನೀನು ನೋಡಿರುವಿ. ಓ ಕರ್ತನೇ, ಅವರ ನಿಂದೆಯನ್ನೂ ನನಗೆ ವಿರುದ್ಧವಾದ ಅವರ ಎಲ್ಲಾ ಕಲ್ಪನೆಗಳನ್ನೂ ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿ. ಅವರು ಕೂಡ್ರುವದನ್ನೂ ಏಳುವದನ್ನೂ ನೋಡು; ನಾನೇ ಅವರಿಗೆ ಸಂಗೀತವಾಗಿದ್ದೇನೆ. ಓ ಕರ್ತನೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡು. ಅವರಿಗೆ ದುಃಖಕರವಾದ ಹೃದಯವನ್ನೂ ನಿನ್ನ ಶಾಪವನ್ನೂ ಕೊಡು.ಕರ್ತನೇ ಆಕಾಶದ ಕೆಳಗಿರುವವರನ್ನು ನಿನ್ನ ಕೋಪದಿಂದ ಹಿಂಸಿಸಿ ಹಾಳುಮಾಡು. ಕರ್ತನೇ ಆಕಾಶದ ಕೆಳಗಿರುವವರನ್ನು ನಿನ್ನ ಕೋಪದಿಂದ ಹಿಂಸಿಸಿ ಹಾಳುಮಾಡು.
- Zechariah 12:3 ಜೆಕರ್ಯ 12:3ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.
- Ezekiel 25:15 ಯೆಹೆಜ್ಕೇಲನು 25:15ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.