Ezekiel · chapter 25 · verse 15
Ezekiel 25:15 in Kannada
ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.
Devaraada kartanu heege heluttaane. Philishtiyaru muyyige muyyi nadisi, hageyulla hrudayadinda sedu teerisikondu poorvada krodhadinda kedisidaru.
Ezekiel 25:15 in English
- King James Version (KJV)
- Thus saith the Lord GOD; Because the Philistines have dealt by revenge, and have taken vengeance with a despiteful heart, to destroy [it] for the old hatred;
- World English Bible (WEB)
- “‘The Lord GOD says: “Because the Philistines have taken revenge, and have taken vengeance with contempt of soul to destroy with perpetual hostility,”
- American Standard Version (ASV)
- Thus saith the Lord Jehovah: Because the Philistines have dealt by revenge, and have taken vengeance with despite of soul to destroy with perpetual enmity;
- Bible in Basic English (BBE)
- This is what the Lord has said: Because the Philistines have taken payment, with the purpose of causing shame and destruction with unending hate;
- Darby Translation (DBY)
- Thus saith the Lord Jehovah: Because the Philistines have dealt by revenge, and have taken vengeance with despite of soul, to destroy, from old hatred;
- Webster's Bible (WBS)
- Thus saith the Lord GOD; Because the Philistines have dealt by revenge, and have taken vengeance with a despiteful heart, to destroy [it] for the old hatred;
- Young's Literal Translation (YLT)
- Thus said the Lord Jehovah: Because of the doings of the Philistines in vengeance, And they take vengeance with despite in soul, To destroy — the enmity age-during!
Read in context
- 13ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
- 14ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ.
- 15ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.
- 16ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- 17ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
Cross references
- Ezekiel 25:6 ಯೆಹೆಜ್ಕೇಲನು 25:6ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್ ದೇಶವನ್ನು ಮನಃ ಪೂರ್ವಕವಾಗಿ ತಿರಸ್ಕರಿಸಿ ಅದರ ಆ ಸ್ಥಿತಿಗೆ ಸಂತೋಷ ಪಟ್ಟದ್ದರಿಂದ
- Isaiah 14:29–31 ಯೆಶಾಯ 14:29–31ಸಮಸ್ತ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಆತನ ಕೋಲು ಮುರಿದುಹೋಯಿ ತೆಂದು ನೀವು ಉಲ್ಲಾಸಿಸಬೇಡಿರಿ; ಹಾವಿನ ಸಂತಾನ ದಿಂದ ವಿಷಸರ್ಪವು ಉಂಟಾಗುವದು; ಅದರ ಫಲವು ಹಾರುವ ಅಗ್ನಿಮಯ ಸರ್ಪವೇ. ದೀನರ ಚೊಚ್ಚಲು ಮಕ್ಕಳು ಉಣ್ಣುವರು, ದಿಕ್ಕಿಲ್ಲದವರು ನಿರ್ಭಯವಾಗಿ ಮಲಗಿಕೊಳ್ಳುವರು; ನಿನ್ನ ಸಂತಾನವನ್ನು ಕ್ಷಾಮದಿಂದ ಸಾಯಿಸುವೆನು. ನಿನ್ನಲ್ಲಿ ಉಳಿದವರನ್ನು ಅವನು ಹತ ಮಾಡುವನು. ಓ ದ್ವಾರವೇ, ಗೋಳಾಡು; ಓ ಪಟ್ಟಣವೇ, ಕೂಗು; ನಿನ್ನ ಫಿಲಿಷ್ಟಿ ಯರೆಲ್ಲಾ ಕುಂದಿ ಹೋಗಿದ್ದಾರೆ; ಅವರ ಹೊಗೆಯು ಉತ್ತರದಿಂದ ಬರುತ್ತದೆ. ಆತನ ನೇಮಕವಾದ ಕಾಲ ಗಳಲ್ಲಿ ಯಾವನೂ ಒಂಟಿಯಾಗಿರುವದಿಲ್ಲ.ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.
- Ezekiel 25:12 ಯೆಹೆಜ್ಕೇಲನು 25:12ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ.
- Zechariah 9:5–8 ಜೆಕರ್ಯ 9:5–8ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು. ಅಷ್ಡೋದಿನಲ್ಲಿ ಜಾರತ್ವ ದಿಂದ ಹುಟ್ಟಿದವನು ವಾಸವಾಗುತ್ತಾನೆ; ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು. ಅವನ ರಕ್ತ ವನ್ನು ಅವನ ಬಾಯೊಳಗಿಂದಲೂ ಅವನ ಅಸಹ್ಯ ಗಳನ್ನು ಅವನ ಹಲ್ಲುಗಳ ನಡುವೆಯಿಂದಲೂ ನಾನು ತೆಗೆದುಹಾಕುವೆನು; ಅವನು ಸಹ ನಮ್ಮ ದೇವರಿಗಾಗಿ ಉಳಿಯುವನು; ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವನು; ಎಕ್ರೋನು ಯೆಬೂಸಿಯನ ಹಾಗೆ ಇರು ವನು. ಇದಲ್ಲದೆ ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ ಸೈನ್ಯದ ನಿಮಿತ್ತವೂ ನನ್ನ ಮನೆಯ ಹತ್ತಿರ ಪಾಳೆಯಮಾಡುತ್ತೇನೆ; ಇನ್ನು ಮೇಲೆ ಉಪದ್ರ ಕೊಡುವವನು ಅವರ ಮೇಲೆ ಹಾದು ಹೋಗುವದಿಲ್ಲ; ಯಾಕಂದರೆ ಈಗ ನನ್ನ ಕಣ್ಣುಗಳಿಂದ ನೋಡಿದ್ದೇನೆ.
- 2 Chronicles 28:18 2 ಪೂರ್ವಕಾಲವೃತ್ತಾಂತ 28:18ಇದಲ್ಲದೆ ಫಿಲಿ ಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ ಯೆಹೂ ದದ ದಕ್ಷಿಣ ಪಾರ್ಶ್ವದಲ್ಲಿಯೂ ಹೊಕ್ಕು ಬೇತ್ಷೆಮೆ ಷನ್ನೂ ಅಯ್ಯಾಲೋನನ್ನೂ ಗೆದೇರೋತನ್ನೂ ಸೋಕೋವನ್ನೂ ಅದರ ಗ್ರಾಮಗಳನ್ನೂ ತಿಮ್ನಾ ವನ್ನೂ ಅದರ ಗ್ರಾಮಗಳನ್ನೂ ಗಿಮ್ಜೋವನ್ನೂ ಅದರ ಗ್ರಾಮಗಳನ್ನೂ ತಕ್ಕೊಂಡು ಅಲ್ಲಿ ವಾಸವಾಗಿದ್ದರು.
- Jeremiah 25:20 ಯೆರೆಮೀಯ 25:20ಅವನ ಎಲ್ಲಾ ಜನರಿಗೂ ಮಿಶ್ರವಾದ ಜನರೆಲ್ಲರಿಗೂ ಊಚ್ ದೇಶದ ಅರಸರೆಲ್ಲರಿಗೂ ಫಿಲಿಷ್ಟಿಯ ದೇಶದ ಅರಸರೆಲ್ಲರಿಗೂ ಅಷ್ಕೆಲೋನಿಗೂ ಗಾಜಾಕ್ಕೂ ಎಕ್ರೋನಿಗೂ ಅಷ್ಡೋ ದಿನ ಉಳಿದವರಿಗೂ
- 2 Samuel 8:1–18 2 ಸಮುವೇಲನು 8:1–18ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು. ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು. ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ ದಾವೀದನು ಯೂಫ್ರೇ ಟಿಸ್ ನದಿಯ ಬಳಿಯಲ್ಲಿ ಅವನಿಗಿದ್ದ ಸಾವಿರ ರಥ ಗಳನ್ನೂ ಏಳು ನೂರು ಕುದುರೆ ರಾಹುತರನ್ನೂ ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಹಿಡಿದು ನೂರು ರಥಗಳಿಗೆ ತಕ್ಕ ಕುದುರೆಗಳನ್ನು ಉಳಿಸಿ ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ದುಬಿಟ್ಟನು. ಆದರೆ ದಮಸ್ಕದಲ್ಲಿರುವ ಅರಾಮ್ಯರು ಚೋಬದ ಅರಸನಾದ ಹದದೆಜೆರನಿಗೆ ಸಹಾಯಮಾಡುವದಕ್ಕೆ ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದು ಹಾಕಿದನು. ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು. ಆದರೆ ದಾವೀದನು ಹದದೆಜೆರನ ಸೇವಕ ರಿಗಿದ್ದ ಬಂಗಾರದ ಡಾಲುಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು. ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯ ಧಿಕವಾಗಿ ಹಿತ್ತಾಳೆಯನ್ನು ತೆಗೆದುಕೊಂಡು ಬಂದನು. ದಾವೀದನು ಹದದೆಜೆರನ ಎಲ್ಲಾ ಸೈನ್ಯವನ್ನು ಹೊಡೆದನೆಂದು ಹಮಾತಿನ ಅರಸನಾದ ತೋವು ಕೇಳಿದಾಗ ಅವನು ದಾವೀದನನ್ನು ವಂದಿಸುವ ದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮ ನನ್ನು ಕಳುಹಿಸಿದನು; ಯಾಕಂದರೆ ತೋವಿಗೂ ಹದ ದೆಜೆರನಿಗೂ ವಿರೋಧವಾಗಿ ಯುದ್ಧಮಾಡಿದಾಗ ದಾವೀದನು ಅವನನ್ನು ಹೊಡೆದಿದ್ದನು; ಹದದೆಜೆರನಿಗೆ ತೋವು ಸಂಗಡ ಯುದ್ಧಗಳಿದ್ದವು. ಯೋರಾಮನು ಬೆಳ್ಳಿ ಬಂಗಾರ ಹಿತ್ತಾಳೆಯ ಪಾತ್ರೆಗಳನ್ನೂ ತನ್ನೊಂದಿಗೆ ತಂದನು. ಇವುಗಳನ್ನು ಅರಸನಾದ ದಾವೀದನು ವಶಮಾಡಿಕೊಂಡು ಅರಾಮ್ಯರೂ ಮೋವಾಬ್ಯರೂ ಅಮ್ಮೋನನ ಮಕ್ಕಳೂ ಫಿಲಿಷ್ಟಿಯರೂ ಅಮಾಲೇಕ್ಯರೂ ಎಂಬ ಸಕಲ ಜನಾಂಗಗಳಿಂದ ತೆಗೆದು ಪ್ರತಿಷ್ಠೆ ಮಾಡಿದ ಬೆಳ್ಳಿ ಬಂಗಾರದ ಸಂಗಡಲೂ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಲ್ಲಿ ಕೊಳ್ಳೆ ಇಟ್ಟದರ ಸಂಗಡಲೂ ಕರ್ತನಿಗೆ ಪ್ರತಿಷ್ಠೆಮಾಡಿ ಇಟ್ಟನು. ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂತಿರುಗಿದಾಗ ಹೆಸರುಗೊಂಡನು. ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು. ಹೀಗೆಯೇ ದಾವೀದನು ಎಲ್ಲಾ ಇಸ್ರಾಯೇಲಿನ ಮೇಲೆ ಆಳಿ ತನ್ನ ಎಲ್ಲಾ ಜನರಿಗೂ ನೀತಿ ನ್ಯಾಯಗಳನ್ನು ನಡಿಸುತ್ತಾ ಬಂದನು. ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕನಾ ಗಿದ್ದನು. ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜ ಕರಾಗಿದ್ದರು; ಸೆರಾಯನು ಮಂತ್ರಿಯಾಗಿದ್ದನು.ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.
- 1 Samuel 21:1–15 1 ಸಮುವೇಲನು 21:1–15ತರುವಾಯ ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆ ಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ--ಒಬ್ಬರೂ ನಿನ್ನ ಸಂಗಡ ಬಾರದೆ ನೀನು ಒಂಟಿಯಾಗಿ ಬಂದದ್ದು ಏನೆಂದು ಅವನನ್ನು ಕೇಳಿದನು. ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ. ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ಐದು ರೊಟ್ಟಿಗಳನ್ನಾದರೂ ನಿನಗೆ ದೊರಕಿದ ಯಾವದನ್ನಾದರೂ ನನಗೆ ಕೊಡು ಅಂದನು. ಯಾಜಕನು ದಾವೀದನಿಗೆ ಪ್ರತ್ಯುತ್ತರ ವಾಗಿ--ಪರಿಶುದ್ಧ ರೊಟ್ಟಿಯ ಹೊರತಾಗಿ ನನ್ನ ಕೈಯಲ್ಲಿ ಬಳಕೆಯಾದ ರೊಟ್ಟಿ ಒಂದಾದರೂ ಇಲ್ಲ; ಯೌವನ ಸ್ಥರು ಸ್ತ್ರೀಯರ ಬಳಿಗೆ ಸೇರದಿದ್ದರೆ ಅದು ಆಗಲಿ ಅಂದನು. ದಾವೀದನು ಯಾಜಕನಿಗೆ ಪ್ರತ್ಯುತ್ತರ ವಾಗಿ--ನಾನು ಹೊರಡುವದಕ್ಕಿಂತ ಮುಂಚೆ ನಿನ್ನೆಯೂ ಮೊನ್ನೆಯೂ ಸ್ತ್ರೀಯರು ನಮಗೆ ದೂರವಾ ಗಿದ್ದರು. ಯೌವನಸ್ಥರ ಪಾತ್ರೆಗಳು ಪರಿಶುದ್ಧವಾಗಿವೆ; ರೊಟ್ಟಿಯು ಈ ಹೊತ್ತು ಪಾತ್ರೆಯಲ್ಲಿ ಪರಿಶುದ್ಧ ಮಾಡಲ್ಪಟ್ಟದ್ದಾಗಿದ್ದರೂ ಅದು ಒಂದು ವಿಧವಾಗಿ ಬಳಕೆಯಾಗಿದೆ ಅಂದನು. ಆಗ ಕರ್ತನ ಸನ್ನಿಧಿಯಿಂದ ತೆಗೆದುಕೊಳ್ಳಲ್ಪಟ್ಟ ಸಮ್ಮುಖದ ರೊಟ್ಟಿಗಳ ಹೊರತು ಬೇರೆ ರೊಟ್ಟಿಯು ಅಲ್ಲಿ ಇಲ್ಲದ್ದರಿಂದ ಯಾಜಕನು ಅವನಿಗೆ ಪರಿಶುದ್ಧ ರೊಟ್ಟಿಯನ್ನು ಕೊಟ್ಟನು. ಅವುಗಳನ್ನು ತೆಗೆದುಕೊಳ್ಳುವ ದಿವಸದಲ್ಲಿ ಅವುಗಳಿಗೆ ಬದಲಾಗಿ ಬಿಸಿರೊಟ್ಟಿಗಳು ಇಡಲ್ಪಡುವವು. ಆದರೆ ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗ ನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಕರ್ತನ ಮುಂದೆ ತಡೆಯಲ್ಪಟ್ಟಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು. ಆಗ ದಾವೀದ ನು ಅಹೀಮೆಲೆಕನಿಗೆ--ನಿನ್ನ ಕೈಯಲ್ಲಿ ಈಟಿಯಾದರೂ ಕತ್ತಿಯಾದರೂ ಇಲ್ಲವೋ? ಯಾಕಂದರೆ ಅರಸನ ಕಾರ್ಯವು ಅವಸರವಾದದ್ದರಿಂದ ನಾನು ನನ್ನ ಕತ್ತಿ ಯನ್ನಾದರೂ ಆಯುಧಗಳನ್ನಾದರೂ ತಕ್ಕೊಂಡು ಬರಲಿಲ್ಲ ಅಂದನು. ಅದಕ್ಕೆ ಯಾಜಕನು--ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾ ತನ ಕತ್ತಿಯನ್ನು ಎಫೋದಿನ ಹಿಂದೆ ಒಂದು ಬಟ್ಟೆ ಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೊಂಡರೆ ತೆಗೆದುಕೋ ಯಾಕಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ ಅಂದನು. ಅದಕ್ಕೆ ದಾವೀದನು ಅದರಂಥದ್ದು ಇನ್ನಿಲ್ಲ; ಅದನ್ನು ನನಗೆ ಕೊಡು ಅಂದನು. ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿ ಬಂದನು. ಆಕೀಷನ ಸೇವಕರು ಅವನಿಗೆ--ಇವನು ದೇಶದ ಅರಸನಾದ ದಾವೀದನಲ್ಲವೋ? ಸೌಲನು ಸಾವಿರಗಳನ್ನೂ ದಾವೀದನು ಹತ್ತು ಸಾವಿರಗಳನ್ನೂ ಸಂಹರಿಸಿದನೆಂದು ಇವನನ್ನು ಕುರಿತು ನಾಟ್ಯದಲ್ಲಿ ಒಬ್ಬರಿಗೊಬ್ಬರು ಹಾಡಿದರಲ್ಲವೇ ಅಂದರು. ಆಗ ದಾವೀದನು ಈ ಮಾತುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಗತ್ ಊರಿನ ಅರಸನಾದ ಆಕೀಷನಿ ಗೋಸ್ಕರ ಮಹಾಭಯಸ್ಥನಾಗಿ ಅವರ ಕಣ್ಣುಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿ ತನ್ನನ್ನು ಹುಚ್ಚನ ಹಾಗೆ ತೋರಮಾಡಿ ದ್ವಾರದ ಕದಗಳನ್ನು ಕೆರೆಯುತ್ತಾ ತನ್ನ ಬಾಯಿಯ ಜೊಲ್ಲನ್ನು ತನ್ನ ಗಡ್ಡದ ಮೇಲೆ ಸುರಿಸಿಕೊಂಡನು. ಆಗ ಆಕೀಷನು ತನ್ನ ಸೇವಕ ರಿಗೆ--ಇಗೋ, ಈ ಮನುಷ್ಯನು ಹುಚ್ಚು ಹಿಡಿದವ ನೆಂದು ನೋಡುತ್ತೀರಲ್ಲಾ. ಇವನನ್ನು ನನ್ನ ಬಳಿಗೆ ಏಕೆ ತೆಗೆದುಕೊಂಡು ಬಂದಿರಿ?ಹುಚ್ಚರು ನನಗೆ ಅವಶ್ಯವೆಂದು ಹುಚ್ಚು ಆಟ ಆಡಲು ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇಂಥವನು ನನ್ನ ಮನೆಯಲ್ಲಿ ಬರಬೇಕೋ ಅಂದನು. ಹುಚ್ಚರು ನನಗೆ ಅವಶ್ಯವೆಂದು ಹುಚ್ಚು ಆಟ ಆಡಲು ಇವನನ್ನು ನನ್ನ ಮುಂದೆ ತೆಗೆದುಕೊಂಡು ಬಂದಿರೋ? ಇಂಥವನು ನನ್ನ ಮನೆಯಲ್ಲಿ ಬರಬೇಕೋ ಅಂದನು.
- 1 Samuel 13:1–14 1 ಸಮುವೇಲನು 13:1–14ಸೌಲನು ಒಂದು ವರುಷ ಆಳಿದನು;ಇಸ್ರಾಯೇಲ್ಯರನ್ನು ಎರಡು ವರುಷ ಆಳಿ ದಾಗ ಸೌಲನು ಇಸ್ರಾಯೇಲ್ಯರಲ್ಲಿ ಮೂರು ಸಾವಿರ ಜನರನ್ನು ಆದುಕೊಂಡನು. ಮೂರು ಸಾವಿರ ಜನರಲ್ಲಿ ಎರಡು ಸಾವಿರ ಜನರು ಸೌಲನು ಇರುವ ಮಿಕ್ಮಾಷಿ ನಲ್ಲಿಯೂ ಬೇತೇಲಿನ ಪರ್ವತದಲ್ಲಿಯೂ ಇದ್ದರು; ಸಾವಿರ ಜನರು ಯೋನಾತಾನನ ಸಂಗಡ ಬೆನ್ಯಾವಿಾನ್ ದೇಶದ ಗಿಬೆಯದಲ್ಲಿದ್ದರು. ಉಳಿದ ಜನರನ್ನು ಅವರ ವರ ಡೇರೆಗಳಿಗೆ ಕಳುಹಿಸಿಬಿಟ್ಟನು. ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ಕೇಳಿಬಂತು. ಆದದರಿಂದ ಸೌಲನು ದೇಶದಲ್ಲೆಲ್ಲಾ ಇಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು. ಫಿಲಿಷ್ಟಿಯರ ಠಾಣ ವನ್ನು ಸೌಲನು ಹೊಡೆದನೆಂದೂ ಫಿಲಿಷ್ಟಿಯರಿಗೆ ಇಸ್ರಾಯೇಲ್ಯರು ಅಸಹ್ಯವಾದವರಾದರೆಂದೂ ಸಮಸ್ತ ಇಸ್ರಾಯೇಲ್ಯರು ಕೇಳಿದಾಗ ಸೌಲನ ಹಿಂದೆ ಹೋಗಲು ಗಿಲ್ಗಾಲಿಗೆ ಕರೆಸಿಕೊಳ್ಳಲ್ಪಟ್ಟರು. ಆಗ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಲು ಫಿಲಿಷ್ಟಿಯರ ಮೂವತ್ತು ಸಾವಿರ ರಥಗಳೂ ಆರು ಸಾವಿರ ಕುದುರೆ ರಾಹುತರೂ ಸಮುದ್ರತೀರದ ಮರಳಷ್ಟು ಜನವೂ ಕೂಡಿಕೊಂಡು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಇಳುಕೊಂಡರು. ಆಗ ಇಸ್ರಾಯೇಲ್ ಜನರು ತಮಗೆ ಶ್ರಮೆ ಉಂಟಾದ್ದದರಿಂದ ತಾವು ಇಕ್ಕಟ್ಟಿನಲ್ಲಿ ಇರುವದನ್ನು ನೋಡಿ ಗವಿಗಳಲ್ಲಿಯೂ ಮುಳ್ಳಿನ ಪೊದೆಗಳಲ್ಲಿಯೂ ಗುಡ್ಡಗಳಲ್ಲಿಯೂ ದುರ್ಗಗಳಲ್ಲಿಯೂ ಕುಣಿಗಳಲ್ಲಿಯೂ ಅಡಗಿಕೊಂಡರು. ಇದಲ್ಲದೆ ಇಬ್ರಿಯರಲ್ಲಿರುವ ಕೆಲವರು ಯೊರ್ದನನ್ನು ದಾಟಿ ಗಾದ್ ದೇಶಕ್ಕೂ ಗಿಲ್ಯಾದಿಗೂ ಹೋದರು. ಆದರೆ ಸೌಲನು ಇನ್ನೂ ಗಿಲ್ಗಾಲಿನಲ್ಲಿದ್ದನು; ಜನರೆಲ್ಲರು ನಡುಗಿದವರಾಗಿ ಅವನನ್ನು ಹಿಂಬಾಲಿಸಿದರು. ಸೌಲನು ತನಗೆ ಸಮುವೇಲನು ನೇಮಿಸಿದ ಕಾಲದ ಪ್ರಕಾರ ಏಳು ದಿವಸ ಕಾದಿದ್ದನು. ಸಮುವೇಲನು ಗಿಲ್ಗಾಲಿಗೆ ಬಾರದೆ ಇದ್ದದರಿಂದ ಜನರು ಅವನನ್ನು ಬಿಟ್ಟು ಚದರಿಹೋದರು. ಆಗ ಸೌಲನು--ದಹನ ಬಲಿಯನ್ನೂ ಸಮಾಧಾನದ ಬಲಿಗಳನ್ನೂ ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿ ದಹನಬಲಿಯನ್ನು ಅರ್ಪಿಸಿದನು. ಅವನು ದಹನಬಲಿಯನ್ನು ಅರ್ಪಿಸಿ ತೀರಿಸುವಷ್ಟರೊಳಗೆ ಇಗೋ, ಸಮುವೇಲನು ಬಂದನು. ಆಗ ಸೌಲನು ಅವನನ್ನು ವಂದಿಸುವದಕ್ಕಾಗಿ ಎದುರುಗೊಳ್ಳಲು ಹೋದನು. ಸಮುವೇಲನುನೀನೇನು ಮಾಡಿದಿ ಎಂದು ಸೌಲನನ್ನು ಕೇಳಿದಾಗ ಅವನು--ಜನರು ನನ್ನನ್ನು ಬಿಟ್ಟು ಚದರಿಹೋದದ್ದನ್ನೂ ನೇಮಿಸಿದ ದಿವಸಗಳ ಪ್ರಕಾರಕ್ಕೆ ನೀನು ಬಾರದ್ದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವದನ್ನೂ ನಾನು ಕಂಡಿದ್ದರಿಂದ ಫಿಲಿಷ್ಟಿಯರು ಗಿಲ್ಗಾಲಿನಲ್ಲಿ ರುವ ನನ್ನ ಬಳಿಗೆ ಬರುವರು ಎಂದೂ ನಾನು ಕರ್ತನ ದಯೆ ಬೇಡಿಕೊಳ್ಳಲಿಲ್ಲವೆಂದೂ ಹೇಳಿ ಮುಂದಾಗಿ ದಹನಬಲಿಯನ್ನು ಅರ್ಪಿಸಿದೆನು ಅಂದನು. ಸಮು ವೇಲನು ಸೌಲನಿಗೆ--ನೀನು ಬುದ್ಧಿಹೀನವಾದ ಕೆಲಸ ಮಾಡಿದ್ದೀ; ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕರ್ತನು ಇಸ್ರಾಯೇಲ್ಯರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವದಕ್ಕೆ ಇದ್ದನು. ಆದರೆ ಈಗ ನಿನ್ನ ರಾಜ್ಯವು ನಿಲ್ಲಲಾರದು. ಕರ್ತನು ನಿನಗೆ ಆಜ್ಞಾಪಿಸಿ ದ್ದನ್ನು ನೀನು ಕೈಕೊಳ್ಳದೆ ಹೋದದರಿಂದ ಆತನು ತನ್ನ ಹೃದಯಕ್ಕೆ ಅನುಸರಣೆಯಾದ ಒಬ್ಬ ಮನುಷ್ಯ ನನ್ನು ಹುಡುಕಿ ಅವನನ್ನು ತನ್ನ ಜನರ ಮೇಲೆ ನಾಯಕನನ್ನಾಗಿ ನೇಮಿಸಿದ್ದಾನೆ ಅಂದನು.
- 1 Chronicles 7:21 1 ಪೂರ್ವಕಾಲವೃತ್ತಾಂತ 7:21ಇವನ ಮಗನು ಜಾಬಾದನು; ಇವನ ಮಕ್ಕಳು --ಶೂತೆಲಹನು ಎಜೆರನೂ ಎಲ್ಲಾದನೂ. ಆ ದೇಶ ದಲ್ಲಿ ಹುಟ್ಟಿದ ಗತ್ನವರು ಇವರ ದನಗಳನ್ನು ಸುಲು ಕೊಳ್ಳಲು ಇಳಿದು ಬಂದಾಗ ಇವರನ್ನು ಕೊಂದು ಹಾಕಿದರು.
- Judges 14:1–16 ನ್ಯಾಯಸ್ಥಾಪಕರು 14:1–16ಸಂಸೋನನು ತಿಮ್ನಾಗೆ ಹೋಗಿ ತಿಮ್ನಾ ದೊಳಗೆ ಪಿಲಿಷ್ಟಿಯರ ಕುಮಾರ್ತೆಯರಲ್ಲಿ ಒಬ್ಬ ಸ್ತ್ರೀಯನ್ನು ನೋಡಿ ತನ್ನ ತಂದೆತಾಯಿಗಳ ಬಳಿಗೆ ಬಂದು ಅವರಿಗೆ--ನಾನು ತಿಮ್ನಾದಲ್ಲಿ ಫಿಲಿಷ್ಟಿಯರ ಕುರ್ಮಾತೆಯರೊಳಗೆ ಒಬ್ಬ ಸ್ತ್ರೀಯನ್ನು ನೋಡಿದೆನು. ಈಗ ಅವಳನ್ನು ಹೆಂಡತಿಯಾಗುವದಕ್ಕೆ ನನಗೆ ತಕ್ಕೊಳ್ಳಿರಿ ಅಂದನು. ಆಗ ಅವನ ತಂದೆ ತಾಯಿಯೂ ಅವನಿಗೆ--ನಿನಗೆ ಸುನ್ನತಿ ಇಲ್ಲದ ಫಿಲಿಷ್ಟಿ ಯರಲ್ಲಿ ಹೆಂಡತಿಯನ್ನು ತಕ್ಕೊಳ್ಳುವದಕ್ಕೆ ನಿನ್ನ ಸಹೋ ದರರ ಕುಮಾರ್ತೆಯರಲ್ಲಿಯೂ ನಮ್ಮ ಎಲ್ಲಾ ಜನರ ಲ್ಲಿಯೂ ಸ್ತ್ರೀ ಇಲ್ಲವೋ ಅಂದರು. ಆದರೆ ಸಂಸೋನನು ತನ್ನ ತಂದೆಗೆ--ಅವಳನ್ನು ನನಗೆ ತೆಗೆದುಕೋ; ಅವಳು ನನ್ನ ಮನಸ್ಸಿಗೆ ಒಪ್ಪಿದ್ದಾಳೆ ಅಂದನು. ಇದು ಕರ್ತನಿಂದ ಉಂಟಾಯಿತೆಂದು ಅವನ ತಂದೆ ತಾಯಂದಿರು ಅರಿ ಯದೆ ಇದ್ದರು. ಏನಂದರೆ ಫಿಲಿಷ್ಟಿಯರಿಗೆ ವಿರೋಧ ವಾಗಿ ಅವನು ಕಾರಣವನ್ನು ಹುಡುಕಿದನು. ಆ ಕಾಲ ದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರನ್ನೂ ಆಳುತ್ತಿದ್ದರು. ಆಗ ಸಂಸೋನನೂ ಅವನ ತಂದೆತಾಯಿಯೂ ತಿಮ್ನಾಗೆ ಹೋಗುತ್ತಿದ್ದರು. ಅವರು ತಿಮ್ನಾದ ದ್ರಾಕ್ಷೇ ತೋಟಗಳ ಬಳಿಗೆ ಬಂದಾಗ ಇಗೋ, ಪ್ರಾಯದ ಸಿಂಹವು ಅವನ ಎದುರಿಗೆ ಬಂದು ಗರ್ಜಿಸಿತು. ಆಗ ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಕರ್ತನ ಆತ್ಮವು ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆ ಮರಿಯ ಹಾಗೆ ಸೀಳಿಬಿಟ್ಟನು. ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ. ಅವನು ಹೋಗಿ ಆ ಸ್ತ್ರೀಯ ಸಂಗಡ ಮಾತನಾ ಡಿದನು. ಅವಳು ಸಂಸೋನನ ಕಣ್ಣಿಗೆ ಒಪ್ಪುವವಳಾ ಗಿದ್ದಳು. ಸ್ವಲ್ಪ ಸಮಯವಾದ ಮೇಲೆ ಅವನು ಅವಳನ್ನು ತಕ್ಕೊಳ್ಳುವದಕ್ಕೆ ತಿರಿಗಿ ಬರುವಾಗ ಸಿಂಹದ ಹೆಣವನ್ನು ನೋಡಲು ಪಕ್ಕಕ್ಕೆ ಹೋದನು. ಇಗೋ, ಸಿಂಹದ ಹೆಣದಲ್ಲಿ ಜೇನು ಹುಳಗಳೂ ಜೇನೂ ಇದ್ದವು. ಅದನ್ನು ಅವನು ತನ್ನ ಕೈಗಳಲ್ಲಿ ತೆಗೆದುಕೊಂಡು ತಿನ್ನುತ್ತಾ ತನ್ನ ತಂದೆ ತಾಯಿಗಳ ಬಳಿಗೆ ಹೋಗಿ ಅವರಿಗೂ ಕೊಟ್ಟನು; ಅವರೂ ತಿಂದರು. ಆದರೆ ಸಿಂಹದ ಹೆಣದಲ್ಲಿ ತಾನು ಜೇನು ತೆಗೆದುಕೊಂಡೆನೆಂದು ಅವರಿಗೆ ತಿಳಿಸಲಿಲ್ಲ. ಅವನ ತಂದೆಯು ಆ ಸ್ತ್ರೀ ಇರುವ ಸ್ಥಳಕ್ಕೆ ಬಂದಾಗ ಯೌವನಸ್ಥರು ಮಾಡುವ ಮರ್ಯಾದೆಯ ಹಾಗೆ, ಸಂಸೋನನು ಅಲ್ಲಿ ಔತಣಮಾಡಿಸಿದನು. ತರು ವಾಯ ಅವರು ಅವನನ್ನು ನೋಡಲಾಗಿ ಅವನ ಸಂಗಡ ಇರುವದಕ್ಕೆ ಮೂವತ್ತು ಮಂದಿ ಸಂಗಡಿಗರನ್ನು ಕೊಟ್ಟರು. ಅವರಿಗೆ ಸಂಸೋನನು--ನಾನು ನಿಮಗೆ ಒಂದು ಒಗಟನ್ನು ಹೇಳುವೆನು; ನೀವು ಅದನ್ನು ಔತಣದ ಈ ಏಳು ದಿವಸಗಳಲ್ಲಿ ಗ್ರಹಿಸಿಕೊಂಡು ನನಗೆ ಅದರ ಅರ್ಥವನ್ನು ನಿಜವಾಗಿ ಹೇಳಿದರೆ ನಾನು ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತು ವಸ್ತ್ರಗಳನ್ನೂ ಕೊಡುವೆನು. ಅದರ ಅರ್ಥವನ್ನು ನೀವು ನನಗೆ ಹೇಳದೆ ಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ದುಸ್ತುವಸ್ತ್ರ ಗಳನ್ನೂ ಕೊಡಬೇಕು ಅಂದನು. ಅವರು ಅವನಿಗೆನೀನು ನಿನ್ನ ಒಗಟನ್ನು ಹೇಳು, ಅದನ್ನು ಕೇಳೋಣ ಅಂದರು. ಆಗ ಅವನು ಅವರಿಗೆ--ತಿನ್ನುವಂಥದ್ದರಿಂದ ತಿನ್ನ ತಕ್ಕದ್ದು ಹೊರಟಿತು, ಬಲವಾದದ್ದರಿಂದ ಸಿಹಿಯು ಹೊರಟಿತು ಅಂದನು. ಒಗಟನ್ನು ಅವರು ಮೂರು ದಿವಸ ಬಿಡಿಸಲಾರದೆ ಹೋದರು. ಏಳನೇ ದಿವಸದಲ್ಲಿ ಆದದ್ದೇನಂದರೆ, ಅವರು ಸಂಸೋನನ ಹೆಂಡತಿಗೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯನ್ನೂ ಬೆಂಕಿ ಯಿಂದ ಸುಟ್ಟು ಬಿಡದಹಾಗೆ ನೀನು ನಿನ್ನ ಗಂಡನ ಆ ಒಗಟನ್ನು ನಮಗೆ ತಿಳಿಸುವ ಹಾಗೆ ಅವನನ್ನು ಮರುಳುಗೊಳಿಸು. ನೀನು ನಮಗೆ ಉಂಟಾದದ್ದನ್ನು ಕಸಕೊಳ್ಳುವದಕ್ಕಲ್ಲವೇ ನಮ್ಮನ್ನು ಕರೆಸಿದಿ ಅಂದರು. ಆಗ ಸಂಸೋನನ ಹೆಂಡತಿ ಅವನ ಮುಂದೆ ಅತ್ತು--ನೀನು ನನ್ನನ್ನು ಪ್ರೀತಿಮಾಡದೆ ನನ್ನನ್ನು ಹಗೆ ಮಾಡುತ್ತೀ. ನೀನು ನನ್ನ ಜನರ ಮಕ್ಕಳಿಗೆ ಒಂದು ಒಗಟನ್ನು ಹೇಳಿ ಅದನ್ನು ನನಗೆ ತಿಳಿಸದೆ ಹೋದಿ ಅಂದಳು. ಅವನು ಅವಳಿಗೆ--ಇಗೋ, ನಾನು ನನ್ನ ತಂದೆ ತಾಯಿಗಳಿಗೆ ಅದನ್ನು ತಿಳಿಸಲಿಲ್ಲ; ನಿನಗೆ ತಿಳಿಸುವೆನೋ? ಅಂದನು.
- Amos 1:6–8 ಆಮೋಸ 1:6–8ಕರ್ತನು ಹೀಗೆ ಹೇಳುತ್ತಾನೆ--ಗಾಜದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತ ನಾನು ಅದರ ದಂಡನೆಯ ಕಡೆಯಿಂದ ತಿರುಗಿಸಿಬಿಡುವದಿಲ್ಲ; ಅವ ರನ್ನು ಸೆರೆಗೆ ಒಪ್ಪಿಸುವದಕ್ಕಾಗಿ ಎದೋಮಿಗೆ ಎಲ್ಲಾ ಸೆರೆಯವರನ್ನು ಕರೆತಂದರು. ಆದರೆ ನಾನು ಗಾಜದ ಗೋಡೆಯಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅದು ಅವರ ಅರಮನೆಗಳನ್ನು ನುಂಗಿಬಿಡುವದು. ಅಷ್ಡೋ ದಿನಿಂದ ನಿವಾಸಿಯನ್ನು ಅಷ್ಕೆಲೋನಿನಿಂದ ರಾಜದಂಡ ಹಿಡಿಯುವವನನ್ನು ಕಡಿದುಬಿಟ್ಟು ನಾನು ಎಕ್ರೋನಿಗೆ ವಿರೋಧವಾಗಿ ನನ್ನ ಕೈಯನ್ನು ತಿರುಗಿಸುತ್ತೇನೆ. ಉಳಿದ ಫಿಲಿಪ್ಪಿಯರು ನಾಶವಾಗುವರೆಂದು ಕರ್ತನಾದ ದೇವರು ಹೇಳುತ್ತಾನೆ.
Original words (Hebrew)
- saith · H559אָמַר ʼâmar
- Lord · H136אֲדֹנָי ʼĂdônây
- Philistines · H6430פְּלִשְׁתִּי Pᵉlishtîy
- dealt · H6213עָשָׂה ʻâsâh
- revenge · H5360נְקָמָה nᵉqâmâh
- taken · H5358נָקַם nâqam
- vengeance · H5359נָקָם nâqâm
- despiteful · H7589שְׁאָט shᵉʼâṭ
- heart · H5315נֶפֶשׁ nephesh
- destroy · H4889מַשְׁחִית mashchîyth
- old · H5769עוֹלָם ʻôwlâm
- hatred · H342אֵיבָה ʼêybâh