Deuteronomy · chapter 31 · verse 26
Deuteronomy 31:26 in Kannada
ನ್ಯಾಯ ಪ್ರಮಾಣದ ಈ ಪುಸ್ತಕವನ್ನು ತಕ್ಕೊಂಡು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷದ ಒಂದು ಪಾರ್ಶ್ವದಲ್ಲಿ ಇಡಿರಿ; ಅದು ನಿಮಗೆ ವಿರೋಧವಾದ ಸಾಕ್ಷಿಗೆ ಅಲ್ಲಿ ಇರಲಿ.
Nyaaya pramaanada ee pustakavannu takkondu nimma deva raada kartana odambadikeya manjooshada ondu paarshvadalli idiri; adu nimage virodhavaada saakshige alli irali.
Deuteronomy 31:26 in English
- King James Version (KJV)
- Take this book of the law, and put it in the side of the ark of the covenant of the LORD your God, that it may be there for a witness against thee.
- World English Bible (WEB)
- “Take this book of the law, and put it by the side of the ark of the LORD your God’s covenant, that it may be there for a witness against you.
- American Standard Version (ASV)
- Take this book of the law, and put it by the side of the ark of the covenant of Jehovah your God, that it may be there for a witness against thee.
- Bible in Basic English (BBE)
- Take this book of the law and put it by the ark of the Lord's agreement, so that it may be a witness against you.
- Darby Translation (DBY)
- Take this book of the law, and put it at the side of the ark of the covenant of Jehovah your God, that it may be there for a witness against thee;
- Webster's Bible (WBS)
- Take this book of the law, and put it in the side of the ark of the covenant of the LORD your God, that it may be there for a witness against thee.
- Young's Literal Translation (YLT)
- 'Take this Book of the Law, and thou hast set it on the side of the ark of the covenant of Jehovah your God, and it hath been there against thee for a witness;
Read in context
- 24ಇದಲ್ಲದೆ ಮೋಶೆ ಈ ನ್ಯಾಯಪ್ರಮಾಣದ ವಾಕ್ಯಗಳನ್ನು ಪುಸ್ತಕದಲ್ಲಿ ಬರೆದು ಮುಗಿಸಿದಾಗ
- 25ಮೋಶೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಿಗೆ ಆಜ್ಞಾಪಿಸಿ--
- 26ನ್ಯಾಯ ಪ್ರಮಾಣದ ಈ ಪುಸ್ತಕವನ್ನು ತಕ್ಕೊಂಡು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷದ ಒಂದು ಪಾರ್ಶ್ವದಲ್ಲಿ ಇಡಿರಿ; ಅದು ನಿಮಗೆ ವಿರೋಧವಾದ ಸಾಕ್ಷಿಗೆ ಅಲ್ಲಿ ಇರಲಿ.
- 27ನಿನ್ನ ದ್ರೋಹವನ್ನೂ ನಿನ್ನ ಬಗ್ಗದ ಕುತ್ತಿಗೆಯನ್ನೂ ನಾನು ಬಲ್ಲೆನು; ಇಗೋ, ಈಹೊತ್ತು ನಾನು ಇನ್ನೂ ನಿಮ್ಮ ಸಂಗಡ ಬದುಕಿರು ವಾಗಲೇ ಕರ್ತನಿಗೆ ದ್ರೋಹಮಾಡಿದವರಾದಿರಿ; ನಾನು ಸತ್ತ ಮೇಲೆ ಇನ್ನೇನ್ನಾಗುವದು?
- 28ನಿಮ್ಮ ಗೋತ್ರಗಳ ಎಲ್ಲಾ ಹಿರಿಯರನ್ನೂ ನಿಮ್ಮ ಅಧಿಕಾರಿ ಗಳನ್ನೂ ನನ್ನ ಬಳಿಗೆ ಕೂಡಿಸಿರಿ; ಆಗ ಈ ಮಾತುಗಳನ್ನು ಅವರು ಕೇಳುವಹಾಗೆ ಆಡುವೆನು; ಆಕಾಶವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆಯುವೆನು.
Cross references
- Deuteronomy 31:19 ಧರ್ಮೋಪದೇಶಕಾಂಡ 31:19ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು.
- 2 Chronicles 34:14–15 2 ಪೂರ್ವಕಾಲವೃತ್ತಾಂತ 34:14–15ಆದರೆ ಕರ್ತನ ಆಲಯಕ್ಕೆ ತಂದ ಹಣವನ್ನು ಅವರು ಹೊರಗೆ ತಕ್ಕೊಂಡು ಬರುವಾಗ ಯಾಜಕ ನಾದ ಹಿಲ್ಕೀಯನು ಮೋಶೆಯ ಕೈಯಿಂದಾದ ಕರ್ತನ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡನು. ಆಗ ಹಿಲ್ಕೀಯನು ಪ್ರತ್ಯುತ್ತರ ಕೊಟ್ಟು ರಾಯಸದ ವನಾದ ಶಾಫಾನನಿಗೆ--ಕರ್ತನ ಆಲಯದಲ್ಲಿ ನ್ಯಾಯ ಪ್ರಮಾಣದ ಪುಸ್ತಕವು ನನಗೆ ಸಿಕ್ಕಿತು ಎಂದು ಹೇಳಿ ದನು. ಮತ್ತು ಹಿಲ್ಕೀಯನು ಆ ಪುಸ್ತಕವನ್ನು ಶಾಫಾನ ನಿಗೆ ಒಪ್ಪಿಸಿದನು.
- Galatians 2:19 ಗಲಾತ್ಯದವರಿಗೆ 2:19ಯಾಕಂ ದರೆ ನಾನಂತೂ ದೇವರಿಗಾಗಿ ಜೀವಿಸುವದಕ್ಕೊಸ್ಕರ ನ್ಯಾಯಪ್ರಮಾಣದ ಮೂಲಕವಾಗಿ ನ್ಯಾಯಪ್ರಮಾ ಣದ ಪಾಲಿಗೆ ಸತ್ತೆನು.
- 2 Kings 22:8–11 2 ಅರಸುಗಳು 22:8–11ಆಗ ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕ ನಾದ ಶಾಫಾನನಿಗೆ--ನಾನು ಕರ್ತನ ಮನೆಯಲ್ಲಿ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡಿದ್ದೇನೆ ಅಂದನು; ಹಿಲ್ಕೀಯನು ಆ ಪುಸ್ತಕವನ್ನು ಶಾಫಾನನಿಗೆ ಕೊಟ್ಟನು; ಅವನು ಅದನ್ನು ಓದಿದನು. ಲೇಖಕನಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆಕರ್ತನ ಮನೆಯಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ ಕರ್ತನ ಆಲಯದ ಕೆಲಸ ಮಾಡು ವವರ ಮೇಲಿರುವ ಕೆಲಸಗಾರರ ಕೈಯಲ್ಲಿ ಒಪ್ಪಿಸಿದ್ದಾರೆ ಅಂದನು. ಇದಲ್ಲದೆ ಲೇಖಕನಾದ ಶಾಫಾನನು ಅರಸನಿಗೆ--ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆಂದು ತೋರಿಸಿದನು; ಶಾಫಾ ನನು ಅದನ್ನು ಅರಸನ ಮುಂದೆ ಓದಿದನು. ಅರಸನು ನ್ಯಾಯಪ್ರಮಾಣದ ಪುಸ್ತಕದ ಮಾತು ಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು.
- Romans 3:19–20 ರೋಮಾಪುರದವರಿಗೆ 3:19–20ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು. ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
- 1 Kings 8:9 1 ಅರಸುಗಳು 8:9ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದೊಳಗಿಂದ ಬಂದ ಕಾಲದಲ್ಲಿ ಕರ್ತನು ಅವರಿಗೆ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬಿನ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತಾಗಿ ಅದರಲ್ಲಿ ಮತ್ತೇನೂ ಇರಲಿಲ್ಲ.
- 2 Kings 22:13–19 2 ಅರಸುಗಳು 22:13–19ನೀವು ಹೋಗಿ ಸಿಕ್ಕಿದ ಈ ಪುಸ್ತಕದ ಮಾತುಗಳನ್ನು ಕುರಿತು ನನಗೋಸ್ಕರವೂ ಜನರಿಗೋಸ್ಕರವೂ ಎಲ್ಲಾ ಯೆಹೂದ್ಯರಿಗೋಸ್ಕರವೂ ಕರ್ತನ ಬಳಿಯಲ್ಲಿ ವಿಚಾರಿಸಿರಿ. ಯಾಕಂದರೆ ನಮ್ಮನ್ನು ಕುರಿತು ಬರೆಯಲ್ಪಟ್ಟ ಎಲ್ಲಾದರ ಪ್ರಕಾರ ಮಾಡಲು ನಮ್ಮ ಪಿತೃಗಳು ಈ ಪುಸ್ತಕದ ಮಾತುಗಳನ್ನು ಕೇಳದೆ ಹೋದದರಿಂದ ನಮಗೆ ವಿರೋಧವಾಗಿ ಉರಿ ಯುವ ದೇವರ ಕೋಪವು ದೊಡ್ಡದಾಗಿದೆ ಅಂದನು. ಹಾಗೆಯೇ ಯಾಜಕನಾದ ಹಿಲ್ಕೀಯನೂ ಅಹೀಕಾ ಮನೂ ಅಕ್ಬೋರನೂ ಶಾಫಾನನೂ ಅಸಾಯನೂ ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ವಸ್ತ್ರಗಳ ಕೆಲಸಗಾರರಾದ ಶಲ್ಲೂಮನ ಹೆಂಡತಿಯಾದ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಮಾತನಾಡಿದರು. ಅವಳು ಯೆರೂಸಲೇಮಿ ನೊಳಗೆ ಎರಡನೇ ಭಾಗದಲ್ಲಿ ವಾಸವಾಗಿದ್ದಳು. ಆಗ ಅವಳು--ಅವರಿಗೆ ಹೇಳಿದ್ದು--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ--ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು. ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ. ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ--ನೀವು ಕೇಳಿದ ಮಾತು ಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ -- ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ವಿರೋಧವಾಗಿ ಅವರು ನಾಶವೂ ಶಾಪವೂ ಆಗುವದೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ನಿನ್ನನ್ನು ಕರ್ತನ ಮುಂದೆ ತಗ್ಗಿಸಿ ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದನ್ನು ನಾನೇ ಕೇಳಿದ್ದೇನೆಂದು ಕರ್ತನು ಹೇಳುತ್ತಾನೆ.ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.