Deuteronomy · chapter 31 · verse 19
Deuteronomy 31:19 in Kannada
ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು.
Heegiruvadarinda eega ee haadannu baredu kolliri; israayel makkalige adannu kalisu; israayel makkalalli ee haadu nanage saakshiyaa giruva haage adannu avara baayigalalli idu.
Deuteronomy 31:19 in English
- King James Version (KJV)
- Now therefore write ye this song for you, and teach it the children of Israel: put it in their mouths, that this song may be a witness for me against the children of Israel.
- World English Bible (WEB)
- “Now therefore write this song for yourselves, and teach it to the children of Israel. Put it in their mouths, that this song may be a witness for me against the children of Israel.
- American Standard Version (ASV)
- Now therefore write ye this song for you, and teach thou it the children of Israel: put it in their mouths, that this song may be a witness for me against the children of Israel.
- Bible in Basic English (BBE)
- Make then this song for yourselves, teaching it to the children of Israel: put it in their mouths, so that this song may be a witness for me against the children of Israel.
- Darby Translation (DBY)
- And now, write ye this song, and teach it to the children of Israel; put it in their mouths, that this song may be a witness for me against the children of Israel.
- Webster's Bible (WBS)
- Now therefore write ye this song for you, and teach it to the children of Israel: put it in their mouths, that this song may be a witness for me against the children of Israel.
- Young's Literal Translation (YLT)
- 'And now, write for you this song, and teach it the sons of Israel; put it in their mouths, so that this song is to Me for a witness against the sons of Israel,
Read in context
- 17ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು.
- 18ಅವರು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತವೂ ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತವಾಗಿ ಮರೆಮಾಡುವೆನು.
- 19ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು.
- 20ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ ಅವರು ತಿಂದು ತೃಪ್ತಿಯಾಗಿ ಕೊಬ್ಬಿದವ ರಾದಾಗ ಅವರು ಅನ್ಯದೇವರುಗಳ ಕಡೆಗೆ ತಿರುಗಿ ಕೊಂಡು ಅವುಗಳನ್ನು ಸೇವಿಸಿ ನನಗೆ ಕೋಪವನ್ನೆಬ್ಬಿಸಿ ನನ್ನ ಒಡಂಬಡಿಕೆಯನ್ನು ವಿಾರುವರು.
- 21ಅನಂತರ ಬಹಳ ಕೇಡುಗಳೂ ಇಕ್ಕಟ್ಟುಗಳೂ ಅವರಿಗೆ ಸಂಭವಿಸು ವಾಗ ಈ ಹಾಡು ಅವರಿಗೆ ವಿರೋಧವಾಗಿ ಸಾಕ್ಷಿಯಾಗಿ ಉತ್ತರ ಕೊಡುವದು; ಯಾಕಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತುಹೋಗುವದಿಲ್ಲ; ನಾನು ಪ್ರಮಾಣಮಾಡಿದ ದೇಶದಲ್ಲಿ ಅವರನ್ನು ತರುವದಕ್ಕಿಂತ ಮುಂಚೆ ಅವರು ಈಹೊತ್ತು ಮಾಡುವ ಕಲ್ಪನೆಗಳನ್ನು ನಾನು ಬಲ್ಲೆನು.
Cross references
- Deuteronomy 31:21–22 ಧರ್ಮೋಪದೇಶಕಾಂಡ 31:21–22ಅನಂತರ ಬಹಳ ಕೇಡುಗಳೂ ಇಕ್ಕಟ್ಟುಗಳೂ ಅವರಿಗೆ ಸಂಭವಿಸು ವಾಗ ಈ ಹಾಡು ಅವರಿಗೆ ವಿರೋಧವಾಗಿ ಸಾಕ್ಷಿಯಾಗಿ ಉತ್ತರ ಕೊಡುವದು; ಯಾಕಂದರೆ ಅದು ಅವರ ಸಂತತಿಯ ಬಾಯಿಯಲ್ಲಿಂದ ಮರೆತುಹೋಗುವದಿಲ್ಲ; ನಾನು ಪ್ರಮಾಣಮಾಡಿದ ದೇಶದಲ್ಲಿ ಅವರನ್ನು ತರುವದಕ್ಕಿಂತ ಮುಂಚೆ ಅವರು ಈಹೊತ್ತು ಮಾಡುವ ಕಲ್ಪನೆಗಳನ್ನು ನಾನು ಬಲ್ಲೆನು. ಆದದರಿಂದ ಮೋಶೆ ಅದೇ ದಿವಸದಲ್ಲಿ ಈ ಹಾಡನ್ನು ಬರೆದು ಇಸ್ರಾಯೇಲ್ ಮಕ್ಕಳಿಗೆ ಕಲಿಸಿದನು.
- Deuteronomy 6:7 ಧರ್ಮೋಪದೇಶಕಾಂಡ 6:7ಅವು ಗಳನ್ನು ನಿನ್ನ ಮಕ್ಕಳಿಗೆ ಅಭ್ಯಾಸಮಾಡಿಸಿ ನಿನ್ನ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ಹೋಗುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ವಾಗಿ ಮಾತನಾಡಬೇಕು.
- Deuteronomy 31:26 ಧರ್ಮೋಪದೇಶಕಾಂಡ 31:26ನ್ಯಾಯ ಪ್ರಮಾಣದ ಈ ಪುಸ್ತಕವನ್ನು ತಕ್ಕೊಂಡು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷದ ಒಂದು ಪಾರ್ಶ್ವದಲ್ಲಿ ಇಡಿರಿ; ಅದು ನಿಮಗೆ ವಿರೋಧವಾದ ಸಾಕ್ಷಿಗೆ ಅಲ್ಲಿ ಇರಲಿ.
- John 12:48 ಯೋಹಾನನು 12:48ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.
- 2 Samuel 14:3 2 ಸಮುವೇಲನು 14:3ತಲೆಗೆ ಎಣ್ಣೆಹಚ್ಚಿಕೊಳ್ಳದೆ ಸತ್ತವರಿ ಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು ಎಂದು ಹೇಳಿ ಯೋವಾ ಬನು ಅವಳಿಗೆ ಕಲಿಸಿಕೊಟ್ಟನು.
- Deuteronomy 4:9–10 ಧರ್ಮೋಪದೇಶಕಾಂಡ 4:9–10ನಿನ್ನ ಕಣ್ಣುಗಳು ನೋಡಿದ ಕಾರ್ಯಗಳನ್ನು ನೀನು ಮರೆಯದ ಹಾಗೆಯೂ ನೀನು ಬದುಕುವ ದಿನಗಳೆಲ್ಲಾ ಅವು ನಿನ್ನ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು ನಿನ್ನ ಪ್ರಾಣ ವನ್ನು ಬಹಳವಾಗಿ ಕಾಪಾಡು; ಅವುಗಳನ್ನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ಬೋಧಿಸು. ನೀನು ಹೋರೇಬಿನಲ್ಲಿ ಕರ್ತನ ಮುಂದೆ ನಿಂತ ದಿವಸ ಉಂಟಲ್ಲವೇ? ಆಗ ಕರ್ತನು ನನಗೆ--ಜನರನ್ನು ನನಗಾಗಿ ಕೂಡಿಸು; ಅವರು ಭೂಮಿಯ ಮೇಲೆ ಬದುಕುವ ದಿವಸಗಳೆಲ್ಲಾ ನನಗೆ ಭಯಭಕ್ತಿಯಿಂದಿ ರುವದನ್ನು ಕಲಿತು ತಮ್ಮ ಮಕ್ಕಳಿಗೂ ಬೋಧಿಸುವ ಹಾಗೆ ಅವರಿಗೆ ನನ್ನ ವಾಕ್ಯಗಳನ್ನು ಹೇಳಿಕೊಡು ವೆನು ಅಂದನು
- Deuteronomy 11:19 ಧರ್ಮೋಪದೇಶಕಾಂಡ 11:19ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು.
- Deuteronomy 31:30–45 ಧರ್ಮೋಪದೇಶಕಾಂಡ 31:30–45ಆಗ ಮೋಶೆ ಇಸ್ರಾಯೇಲ್ ಸಭೆಗೆ ಕೇಳುವ ಹಾಗೆ ಈ ಹಾಡಿನ ಮಾತುಗಳನ್ನು ಹೇಳಿ ಮುಗಿಸಿದನು.
- Ezekiel 2:5 ಯೆಹೆಜ್ಕೇಲನು 2:5ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು.
- Matthew 10:18 ಮತ್ತಾಯನು 10:18ಇದಲ್ಲದೆ ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿ ಕಾರಿಗಳ ಮತ್ತು ಅರಸುಗಳ ಮುಂದಕ್ಕೆ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು.
- Isaiah 51:16 ಯೆಶಾಯ 51:16ಆಕಾಶಗಳನ್ನು ನಿಲ್ಲಿಸುವದಕ್ಕೂ ಭೂಮಿಗೆ ಅಸ್ತಿವಾರವನ್ನು ಹಾಕುವ ದಕ್ಕೂ ಚೀಯೋನಿಗೆ ನೀನು ನನ್ನ ಜನರೆಂದು ಹೇಳುವ ದಕ್ಕೂ ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.
- Isaiah 59:21 ಯೆಶಾಯ 59:21ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.