Deuteronomy · chapter 31 · verse 3
Deuteronomy 31:3 in Kannada
ನಿನ್ನ ದೇವರಾದ ಕರ್ತನು ತಾನೇ ನಿನ್ನ ಮುಂದೆ ಹೋಗುವನು. ಆತನು ಆ ಜನಾಂಗಗಳನ್ನು ನಿನ್ನ ಮುಂದೆ ನಾಶಮಾಡುವನು; ನೀನು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿ; ಕರ್ತನು ಹೇಳಿದ ಪ್ರಕಾರ ಯೆಹೋಶುವನು ನಿನ್ನ ಮುಂದೆ ಹೋಗುವನು.
Ninna devaraada kartanu taane ninna munde hoguvanu. Aatanu aa janaangagalannu ninna munde naashamaaduvanu; neenu avugalannu svaadheenapadisikolluvi; kartanu helida prakaara yehoshuvanu ninna munde hoguvanu.
Deuteronomy 31:3 in English
- King James Version (KJV)
- The LORD thy God, he will go over before thee, [and] he will destroy these nations from before thee, and thou shalt possess them: [and] Joshua, he shall go over before thee, as the LORD hath said.
- World English Bible (WEB)
- The LORD your God himself will go over before you. He will destroy these nations from before you, and you shall dispossess them. Joshua will go over before you, as the LORD has spoken.
- American Standard Version (ASV)
- Jehovah thy God, he will go over before thee; he will destroy these nations from before thee, and thou shalt dispossess them: [and] Joshua, he shall go over before thee, as Jehovah hath spoken.
- Bible in Basic English (BBE)
- The Lord your God, he will go over before you; he will send destruction on all those nations, and you will take their land as your heritage: and Joshua will go over at your head as the Lord has said.
- Darby Translation (DBY)
- Jehovah thy God, he will go over before thee, he will destroy these nations from before thee, that thou mayest take possession of them: Joshua, he shall go over before thee, as Jehovah hath said.
- Webster's Bible (WBS)
- The LORD thy God, he will go over before thee, [and] he will destroy these nations from before thee, and thou shalt possess them: [and] Joshua he shall go over before thee, as the LORD hath said.
- Young's Literal Translation (YLT)
- 'Jehovah thy God He is passing over before thee, He doth destroy these nations from before thee, and thou hast possessed them; Joshua — he is passing over before thee as Jehovah hath spoken,
Read in context
- 1ಆಗ ಮೋಶೆ ಹೋಗಿ ಇಸ್ರಾಯೇಲ್ಯರಿಗೆಲ್ಲಾ ಈ ಮಾತುಗಳನ್ನು ಹೇಳಿದನು.
- 2ಅವನು ಅವರಿಗೆ--ನಾನು ಈಹೊತ್ತು ನೂರ ಇಪ್ಪತ್ತು ವರುಷದವನಾಗಿದ್ದೇನೆ; ನಾನು ಇನ್ನು ಹೊರಗೆ ಹೋಗುವದಕ್ಕೂ ಬರುವದಕ್ಕೂ ಶಕ್ತನಲ್ಲ; ಇದಲ್ಲದೆ ಕರ್ತನು ನನಗೆ--ನೀನು ಈ ಯೊರ್ದನನ್ನು ದಾಟುವದಿ ಲ್ಲವೆಂದು ಹೇಳಿದ್ದಾನೆ.
- 3ನಿನ್ನ ದೇವರಾದ ಕರ್ತನು ತಾನೇ ನಿನ್ನ ಮುಂದೆ ಹೋಗುವನು. ಆತನು ಆ ಜನಾಂಗಗಳನ್ನು ನಿನ್ನ ಮುಂದೆ ನಾಶಮಾಡುವನು; ನೀನು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವಿ; ಕರ್ತನು ಹೇಳಿದ ಪ್ರಕಾರ ಯೆಹೋಶುವನು ನಿನ್ನ ಮುಂದೆ ಹೋಗುವನು.
- 4ಕರ್ತನು ಅಮೋರಿಯರ ಅರಸನಾದ ಸೀಹೋನನಿಗೂ ಓಗನಿಗೂ ಆತನು ನಾಶಮಾಡಿದ ಅವರ ದೇಶಕ್ಕೂ ಮಾಡಿದಂತೆ ಆ ಜನಾಂಗಗಳಿಗೆ ಮಾಡುವನು.
- 5ನಾನು ನಿಮಗೆ ಆಜ್ಞಾಪಿಸಿದ ಸಮಸ್ತ ಆಜ್ಞೆಯ ಪ್ರಕಾರ ನೀವು ಅವರಿಗೆ ಮಾಡುವಹಾಗೆ ಕರ್ತನು ಅವರನ್ನು ನಿಮ್ಮ ಮುಂದೆ ಒಪ್ಪಿಸಿಬಿಡುವನು.
Cross references
- Deuteronomy 9:3 ಧರ್ಮೋಪದೇಶಕಾಂಡ 9:3ಹೀಗಿರುವದರಿಂದ ನೀನು ಈಹೊತ್ತು ತಿಳಿದುಕೊಳ್ಳತಕ್ಕದ್ದೇನಂದರೆ--ನಿನ್ನ ದೇವ ರಾದ ಕರ್ತನೇ ನಿನ್ನ ಮುಂದೆ ದಾಟಿಹೋಗುತ್ತಾನೆ; ಆತನು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡು ವನು; ಆತನು ಅವರನ್ನು ನಿನ್ನ ಮುಂದೆ ತಗ್ಗಿಸುವನು; ಈ ಪ್ರಕಾರ ಅವರನ್ನು ಸ್ವಾಧೀನಪಡಿಸಿಕೊಂಡು ಕರ್ತನು ನಿನಗೆ ಹೇಳಿದ ಹಾಗೆ ಅವರನ್ನು ಬೇಗ ನಾಶಮಾಡುವಿ.
- Deuteronomy 31:23 ಧರ್ಮೋಪದೇಶಕಾಂಡ 31:23ಆತನು ನೂನನ ಮಗನಾದ ಯೆಹೋಶುವನಿಗೆ ಆಜ್ಞೆಕೊಟ್ಟು--ಬಲವಾಗಿರು; ಧೈರ್ಯವಾಗಿರು; ನಾನು ಇಸ್ರಾಯೇಲ್ ಮಕ್ಕಳಿಗೆ ಪ್ರಮಾಣಮಾಡಿದ ದೇಶಕ್ಕೆ ನೀನು ತರುವಿ; ನಾನು ನಿನ್ನ ಸಂಗಡ ಇರುವೆನು ಅಂದನು.
- Deuteronomy 3:28 ಧರ್ಮೋಪದೇಶಕಾಂಡ 3:28ಆದರೆ ಯೆಹೋಶು ವನಿಗೆ ಆಜ್ಞಾಪಿಸಿ ಅವನಿಗೆ ದೃಢಮಾಡಿ ಬಲಪಡಿಸು; ಅವನು ಈ ಜನರ ಮುಂದೆ ದಾಟಿಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಸ್ತ್ಯ ವಾಗಿ ಹೊಂದುವಂತೆ ಮಾಡುವನು ಎಂದು ಹೇಳಿದನು.ಆಗ ನಾವು ಬೇತ್ಪೆಗೋರಿಗೆ ಎದುರಾಗಿರುವ ತಗ್ಗಿನಲ್ಲಿ ವಾಸವಾಗಿದ್ದೆವು.
- Joshua 4:14 ಯೆಹೋಶುವ 4:14ಆ ದಿನದಲ್ಲಿ ಕರ್ತನು ಯೆಹೋಶುವ ನನ್ನು ಇಸ್ರಾಯೇಲ್ಯರೆಲ್ಲರ ಮುಂದೆ ಘನಪಡಿಸಿದನು. ಅವರು ಮೋಶೆಗೆ ಭಯಪಟ್ಟ ಹಾಗೆಯೇ ಅವನು ಬದುಕಿದ ದಿನಗಳಲ್ಲೆಲ್ಲಾ ಅವನಿಗೂ ಭಯಪಟ್ಟರು.
- Joshua 1:2 ಯೆಹೋಶುವ 1:2ನನ್ನ ಸೇವಕನಾದ ಮೋಶೆಯು ಸತ್ತನು; ಈಗ ನೀನು ಈ ಜನರೆಲ್ಲರ ಸಹಿತವಾಗಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶಕ್ಕೆ ಹೋಗು.
- Deuteronomy 34:9 ಧರ್ಮೋಪದೇಶಕಾಂಡ 34:9ಇದಲ್ಲದೆ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದ್ದನು. ಯಾಕಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿ ಅವನ ಮಾತು ಕೇಳಿದರು.
- Genesis 48:21 ಆದಿಕಾಂಡ 48:21ಆಗ ಇಸ್ರಾಯೇಲನು ಯೋಸೇಫನಿಗೆ--ಇಗೋ, ನಾನು ಸಾಯುತ್ತೇನೆ; ಆದರೆ ದೇವರು ನಿಮ್ಮ ಸಂಗಡವಿದ್ದು ನಿಮ್ಮನ್ನು ನಿಮ್ಮ ತಂದೆಗಳ ದೇಶಕ್ಕೆ ಮತ್ತೆ ಸೇರಿಸುವನು.ಇದಲ್ಲದೆ ನಾನು ನನ್ನ ಕತ್ತಿ ಬಿಲ್ಲುಗಳಿಂದ ಅಮೋರಿಯರ ವಶದಿಂದ ತಕ್ಕೊಂಡ ಒಂದು ಪಾಲನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ ಅಂದನು.
- Deuteronomy 31:7–8 ಧರ್ಮೋಪದೇಶಕಾಂಡ 31:7–8ಆಗ ಮೋಶೆಯು ಯೆಹೋಶುವನನ್ನು ಕರೆದು ಸಮಸ್ತ ಇಸ್ರಾಯೇಲಿನ ಮುಂದೆ ಅವನಿಗೆ--ಬಲ ವಾಗಿರು; ಧೈರ್ಯವಾಗಿರು; ಯಾಕಂದರೆ ನೀನು ಈ ಜನರ ಸಂಗಡ ಹೋಗಿ ಕರ್ತನು ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ಸೇರ ಬೇಕು; ನೀನು ಅದನ್ನು ಅವರಿಗೆ ಸ್ವಾಸ್ತ್ಯವಾಗಿ ಕೊಡ ಬೇಕು. ಇದಲ್ಲದೆ ಕರ್ತನು ತಾನೇ ನಿನ್ನ ಮುಂದೆ ಹೋಗುತ್ತಾನೆ; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ತೊರೆಯುವದಿಲ್ಲ, ವಿಸರ್ಜಿಸುವದಿಲ್ಲ; ನೀನು ಭಯಪಡಬೇಡ; ಅಂಜಿಕೊಳ್ಳಬೇಡ ಎಂದು ಹೇಳಿದನು.
- Deuteronomy 31:14 ಧರ್ಮೋಪದೇಶಕಾಂಡ 31:14ಇದಲ್ಲದೆ ಕರ್ತನು ಮೋಶೆಗೆ--ಇಗೋ, ನೀನು ಸಾಯುವ ದಿನಗಳು ಸವಿಾಪವಾದವು. ಯೆಹೋಶುವ ನನ್ನು ಕರೆದು ನೀವು ಸಭೆಯ ಗುಡಾರದಲ್ಲಿ ನಿಂತು ಕೊಳ್ಳಿರಿ; ಆಗ ಅವನಿಗೆ ಆಜ್ಞೆ ಕೊಡುವೆನು ಅಂದನು. ಈ ಪ್ರಕಾರ ಮೋಶೆಯೂ ಯೆಹೋಶುವನೂ ಹೋಗಿ ಸಭೆಯ ಗುಡಾರದಲ್ಲಿ ನಿಂತುಕೊಂಡರು.
- Numbers 27:18–21 ಅರಣ್ಯಕಾಂಡ 27:18–21ಆಗ ಕರ್ತನು ಮೋಶೆಗೆ--ಆತ್ಮವುಳ್ಳ ಮನುಷ್ಯನಾಗಿರುವ ನೂನನ ಮಗನಾದ ಯೆಹೋಶು ವನನ್ನು ತಕ್ಕೊಂಡು ನಿನ್ನ ಕೈಯನ್ನು ಅವನ ಮೇಲೆ ಇಟ್ಟು ಅವನನ್ನು ಯಾಜಕನಾದ ಎಲ್ಲಾಜಾರನ ಮುಂದೆಯೂ ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ ಅವರಿಗೆದುರಾಗಿ ಅವನನ್ನು ನೇಮಿಸು. ಇಸ್ರಾ ಯೇಲ್ ಮಕ್ಕಳ ಸಮಸ್ತ ಸಭೆಯು ಅವನಿಗೆ ವಿಧೇಯ ರಾಗುವ ಹಾಗೆ ನಿನ್ನ ಗೌರವವನ್ನು ಅವನ ಮೇಲೆ ಇಡು. ಅವನು ಯಾಜಕನಾದ ಎಲ್ಲಾಜಾರನ ಮುಂದೆ ನಿಲ್ಲಬೇಕು; ಇವನು ಕರ್ತನ ಮುಂದೆ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ಆಲೋಚನೆಯ ಸಭೆಯನ್ನು ಕೇಳಬೇಕು; ಅವನ ಆಜ್ಞೆಯ ಪ್ರಕಾರವೇ ಅವನೂ ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲ್ ಮಕ್ಕಳೂ ಸಮಸ್ತ ಸಭೆಯೂ ಹೋಗುತ್ತಾ ಬರುತ್ತಾ ಇರಬೇಕು ಅಂದನು.
- Hebrews 4:8 ಇಬ್ರಿಯರಿಗೆ 4:8ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.
- Psalm 44:2–3 ಕೀರ್ತನೆಗಳು 44:2–3ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ. ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.