Psalms · chapter 44 · verse 2
Psalm 44:2 in Kannada
ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
Neenu ninna kaiyinda janaangagalannu horadisi (namma tandegalannu) nettiddee; janarannu baadhepadisi avarannu horage haakidi.
Psalm 44:2 in English
- King James Version (KJV)
- [How] thou didst drive out the heathen with thy hand, and plantedst them; [how] thou didst afflict the people, and cast them out.
- World English Bible (WEB)
- You drove out the nations with your hand, but you planted them. You afflicted the peoples, but you spread them abroad.
- American Standard Version (ASV)
- Thou didst drive out the nations with thy hand; But them thou didst plant: Thou didst afflict the peoples; But them thou didst spread abroad.
- Bible in Basic English (BBE)
- Uprooting the nations with your hand, and planting our fathers in their place; cutting down the nations, but increasing the growth of your people.
- Darby Translation (DBY)
- Thou, by thy hand, didst dispossess the nations, but them thou didst plant; thou didst afflict the peoples, but them didst thou cause to spread out.
- Webster's Bible (WBS)
- [How] thou didst drive out the heathen with thy hand, and didst plant them; [how] thou didst afflict the people, and cast them out.
- Young's Literal Translation (YLT)
- Thou, [with] Thy hand, nations hast dispossessed. And Thou dost plant them. Thou afflictest peoples, and sendest them away.
Read in context
- 1ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ.
- 2ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
- 3ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
- 4ಓ ದೇವರೇ, ನೀನೇ ನನ್ನ ಅರಸನು; ಯಾಕೋಬ ನಿಗೆ ಬಿಡುಗಡೆಗಳನ್ನು ಆಜ್ಞಾಪಿಸು.
Cross references
- Exodus 15:17 ವಿಮೋಚನಕಾಂಡ 15:17ನೀನು ಅವರನ್ನು ಒಳಗೆ ಬರಮಾಡಿ ಓ ಕರ್ತನೇ, ನಿನ್ನ ಕೈಗಳು ಸ್ಥಾಪಿಸಿದ ಪರಿಶುದ್ಧ ನಿವಾಸದಲ್ಲಿಯೂ (ಓ ಕರ್ತನೇ,) ನೀನು ವಾಸಿಸುವದಕ್ಕೆ ಮಾಡಿಕೊಂಡಿರುವ ನಿನ್ನ ಸ್ವಾಸ್ಥ್ಯದ ಪರ್ವತದಲ್ಲಿಯೂ ಅವರನ್ನು ಸ್ಥಾಪಿಸುವಿ.
- Psalm 78:55 ಕೀರ್ತನೆಗಳು 78:55ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
- 2 Samuel 7:10 2 ಸಮುವೇಲನು 7:10ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಏರ್ಪಡಿಸಿ ಅವರು ಇನ್ನು ಮೇಲೆ ಚಲಿಸದೆ ಸ್ವಸ್ಥಳದಲ್ಲಿ ವಾಸವಾಗಿರುವ ಹಾಗೆ ಅವರನ್ನು ನೆಡು ವೆನು. ಪೂರ್ವದ ಹಾಗೆಯೂ ನಾನು ನನ್ನ ಜನವಾದ ಇಸ್ರಾಯೇಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿ ಸಿದ ದಿವಸದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು.
- Joshua 21:43 ಯೆಹೋಶುವ 21:43ಕರ್ತನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟನು; ಅವರು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸವಾಗಿದ್ದರು.
- Psalm 135:10–12 ಕೀರ್ತನೆಗಳು 135:10–12ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು. ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು. ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು.
- Joshua 11:23 ಯೆಹೋಶುವ 11:23ಹೀಗೆಯೇ ಯೆಹೋಶುವನು ದೇಶವನ್ನೆಲ್ಲಾ ಕರ್ತನು ಮೋಶೆಗೆ ಹೇಳಿದ ಪ್ರಕಾರವೇ ಹಿಡಿದು ಅದನ್ನು ಇಸ್ರಾಯೇಲಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿ ಕೊಂಡಿತು.
- Psalm 80:8–11 ಕೀರ್ತನೆಗಳು 80:8–11ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ. ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು. ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು. ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.
- Exodus 34:11 ವಿಮೋಚನಕಾಂಡ 34:11ನಾನು ಈ ಹೊತ್ತು ನಿನಗೆ ಆಜ್ಞಾಪಿಸುವದನ್ನು ಅನುಸರಿಸು; ಇಗೋ, ಅಮೋರಿಯರನ್ನೂ ಕಾನಾನ್ಯ ರನ್ನೂ ಹಿತ್ತಿಯರನ್ನೂ ಪೆರಿಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ನಿನ್ನ ಎದುರಿನಿಂದ ಹೊರಡಿಸಿ ಬಿಡುತ್ತೇನೆ.
- Deuteronomy 7:1 ಧರ್ಮೋಪದೇಶಕಾಂಡ 7:1ನೀನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಬರಮಾಡಿದಾಗ ಆತನು ನಿನಗಿಂತ ದೊಡ್ಡ ವರೂ ಬಲಿಷ್ಠರೂ ಆದ ಏಳು ಜನಾಂಗಗಳನ್ನು ಅಂದರೆ ಹಿತ್ತಿಯರನ್ನೂ ಗಿರ್ಗಾಷಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ ಈ ಪ್ರಕಾರ ಬಹಳ ಜನಾಂಗ ಗಳನ್ನು ನಿನ್ನ ಮುಂದೆ ಹೊರಡಿಸಿ
- Joshua 10:11 ಯೆಹೋಶುವ 10:11ತರುವಾಯ ಅವರು ಬೇತ್ಹೋರೋನಿಂದ ಇಳಿದು ಅಜೇಕದ ವರೆಗೆ ಇಸ್ರಾಯೇಲಿನ ಮುಂದೆ ಓಡಿ ಹೋಗುವಾಗ ಅವರ ಮೇಲೆ ಕರ್ತನು ಆಕಾಶದಿಂದ ಅವರನ್ನು ಕೊಲ್ಲುವ ದೊಡ್ಡ ಕಲ್ಲುಗಳನ್ನು ಬೀಳಿಸಿದನು. ಇಸ್ರಾಯೇಲ್ ಮಕ್ಕಳು ಕತ್ತಿಯಿಂದ ಕೊಂದವರಿಗಿಂತ ಕಲ್ಲು ಮಳೆ ಯಿಂದ ಸತ್ತವರು ಹೆಚ್ಚಾಗಿದ್ದರು.
- Joshua 10:42 ಯೆಹೋಶುವ 10:42ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.ಆಗ ಯೆಹೋಶುವನು ಇಸ್ರಾಯೇಲ್ಯ ರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂತಿರುಗಿ ಬಂದನು.
- Joshua 3:10 ಯೆಹೋಶುವ 3:10ಯೆಹೋಶು ವನು--ಜೀವವುಳ್ಳ ದೇವರು ನಿಮ್ಮ ಮಧ್ಯದಲ್ಲಿರು ವದನ್ನೂ ಆತನು ಕಾನಾನ್ಯರು ಹಿತ್ತಿಯರು ಹಿವ್ವಿಯರು ಪೆರಿಜೀಯರು ಗಿರ್ಗಾಷಿಯರು ಅಮೋರಿಯರು ಯೊಬೂಸಿಯರು ಇವರನ್ನು ನಿಮ್ಮ ಮುಂದೆ ನಿಶ್ಚಯ ವಾಗಿ ಓಡಿಸಿ ಬಿಡುವದನ್ನೂ ನೀವು ತಿಳಿಯುವ ಹಾಗೆ