Deuteronomy · chapter 33 · verse 11
Deuteronomy 33:11 in Kannada
ಕರ್ತನೇ, ಅವನ ಆಸ್ತಿಯನ್ನು ಆಶೀರ್ವದಿಸು; ಅವನ ಕೈಕೆಲಸವನ್ನು ಅಂಗೀಕರಿಸು. ಅವನಿಗೆ ವಿರೋಧ ವಾಗಿ ಏಳುವವರ ಮತ್ತು ಅವನನ್ನು ಹಗೆಮಾಡುವವರ ಸೊಂಟಗಳನ್ನು ಅವರು ತಿರಿಗಿ ಏಳದ ಹಾಗೆ ಹೊಡೆ ಅಂದನು.
Kartane, avana aastiyannu aasheervadisu; avana kaikelasavannu angeekarisu. Avanige virodha vaagi eluvavara mattu avanannu hagemaaduvavara sontagalannu avaru tirigi elada haage hode andanu.
Deuteronomy 33:11 in English
- King James Version (KJV)
- Bless, LORD, his substance, and accept the work of his hands: smite through the loins of them that rise against him, and of them that hate him, that they rise not again.
- World English Bible (WEB)
- LORD, bless his skills. Accept the work of his hands. Strike through the hips of those who rise up against him, of those who hate him, that they not rise again.”
- American Standard Version (ASV)
- Bless, Jehovah, his substance, And accept the work of his hands: Smite through the loins of them that rise up against him, And of them that hate him, that they rise not again.
- Bible in Basic English (BBE)
- Let your blessing, O Lord, be on his substance, may the work of his hands be pleasing to you: may those who take up arms against him and all who have hate for him, be wounded through the heart, never to be lifted up again.
- Darby Translation (DBY)
- Bless, Jehovah, his substance! And let the work of his hands please thee; Crush the loins of his adversaries, And of them that hate him, that they may never rise again!
- Webster's Bible (WBS)
- Bless, LORD, his substance, and accept the work of his hands: smite through the loins of them that rise against him, and of them that hate him, that they rise not again.
- Young's Literal Translation (YLT)
- Bless, O Jehovah, his strength, And the work of his hands Thou acceptest, Smite the loins of his withstanders, And of those hating him — that they rise not!
Read in context
- 9ಅವನು ತನ್ನ ತಂದೆ ತಾಯಿಗಳಿಗೆ--ನಾನು ಅವ ನನ್ನು ನೋಡಲಿಲ್ಲ ಅಂದನು. ತನ್ನ ಸಹೋದರರ ಗುರುತನ್ನು ತಿಳುಕೊಳ್ಳಲಿಲ್ಲ. ತನ್ನ ಸ್ವಂತ ಮಕ್ಕಳನ್ನು ಅರಿಯಲಿಲ್ಲ. ಯಾಕಂದರೆ ಅವರು (ಲೇವಿಯರು) ನಿನ್ನ ವಾಕ್ಯವನ್ನು ಕೈಕೊಂಡು ನಿನ್ನ ಒಡಂಬಡಿಕೆಯನ್ನು ಕಾಪಾಡಿದ್ದಾರೆ.
- 10ಅವರು ಯಾಕೋಬನಿಗೆ ನಿನ್ನ ನ್ಯಾಯಗಳನ್ನೂ ಇಸ್ರಾಯೇಲಿಗೆ ನಿನ್ನ ನ್ಯಾಯಪ್ರಮಾಣವನ್ನೂ ಬೋಧಿಸುವರು; ನಿನ್ನ ಮುಂದೆ ಧೂಪವನ್ನೂ ನಿನ್ನ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಇಡುವರು.
- 11ಕರ್ತನೇ, ಅವನ ಆಸ್ತಿಯನ್ನು ಆಶೀರ್ವದಿಸು; ಅವನ ಕೈಕೆಲಸವನ್ನು ಅಂಗೀಕರಿಸು. ಅವನಿಗೆ ವಿರೋಧ ವಾಗಿ ಏಳುವವರ ಮತ್ತು ಅವನನ್ನು ಹಗೆಮಾಡುವವರ ಸೊಂಟಗಳನ್ನು ಅವರು ತಿರಿಗಿ ಏಳದ ಹಾಗೆ ಹೊಡೆ ಅಂದನು.
- 12ಅವನು ಬೆನ್ಯಾವಿಾನನ ವಿಷಯವಾಗಿ--ಕರ್ತ ನಿಗೆ ಪ್ರಿಯನು ಸುರಕ್ಷಿತವಾಗಿ ಆತನ ಬಳಿಯಲ್ಲಿ ವಾಸ ಮಾಡುವನು; ಆತನು ಅವನಿಗೆ ದಿನವೆಲ್ಲಾ ಮರೆಯಾಗಿ ರುವನು; ಅವನು ಆತನ ಹೆಗಲುಗಳ ನಡುವೆ ವಾಸ ಮಾಡುವನು ಅಂದನು.
- 13ಯೋಸೇಫನ ವಿಷಯವಾಗಿ--ಅವನ ದೇಶವು ಆಕಾಶದ ಅಮೂಲ್ಯವಾದವುಗಳಿಂದಲೂ ಮಂಜಿ ನಿಂದಲೂ ಕೆಳಗೆ ಮಲಗಿರುವ ಅಗಾಧದಿಂದಲೂ
Cross references
- Ezekiel 43:27 ಯೆಹೆಜ್ಕೇಲನು 43:27ಈ ದಿನಗಳು ತೀರಿದಾಗ ಎಂಟನೇ ದಿನದ ತರುವಾಯ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 20:40–41 ಯೆಹೆಜ್ಕೇಲನು 20:40–41ನನ್ನ ಪರಿಶುದ್ಧ ಪರ್ವತದಲ್ಲಿ ಅಂದರೆ ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನ ದವರೆಲ್ಲರೂ ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿ ಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ ನಿಮ್ಮ ಎತ್ತುವ ಅರ್ಪಣೆಗಳನ್ನೂ ನಿಮ್ಮ ಕಾಣಿಕೆಗಳ ಪ್ರಥಮ ಫಲ ವನ್ನೂ ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು. ನಾನು ನಿಮ್ಮನ್ನು ಜನರಿಂದ ಹೊರತಂದು ನೀವು ಚದರಿರುವ ದೇಶಗಳೊಳಗಿಂದ ನಿಮ್ಮನ್ನು ಕೂಡಿಸುವಾಗ ನಿಮ್ಮ ಸುವಾಸನೆಯ ಸಂಗಡ ನಾನು ನಿಮ್ಮನ್ನು ಅಂಗೀಕರಿಸುವೆನು, ನಾನು ಅನ್ಯ ಜನಾಂಗಗಳ ಮುಂದೆ ನಿಮ್ಮಲ್ಲಿ ಪರಿಶುದ್ಧವೆನಿಸಿಕೊಳ್ಳು ವೆನು.
- 2 Samuel 24:23 2 ಸಮುವೇಲನು 24:23ಅರೌನನು ಇವುಗಳನ್ನೆಲ್ಲಾ ಅರಸನ ಸೇವಕನಾದ ನಾನು ಅರಸನಿಗೆ ಕೊಟ್ಟೆನು. ಇದಲ್ಲದೆ ಅರೌನನು ಅರಸನಿಗೆ--ನಿನ್ನ ದೇವರಾದ ಕರ್ತನು ನಿನ್ನನ್ನು ಅಂಗೀಕರಿಸಲಿ ಅಂದನು.
- Luke 10:16 ಲೂಕನು 10:16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುತ್ತಾನೆ; ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುತ್ತಾನೆ; ನನ್ನನ್ನು ತಿರಸ್ಕರಿಸುವವನು ನನ್ನನ್ನು ಕಳುಹಿಸಿದಾತನನ್ನು ತಿರಸ್ಕರಿಸುತ್ತಾನೆ ಅಂದನು.
- 1 Thessalonians 4:8 1 ಥೆಸಲೊನೀಕದವರಿಗೆ 4:8ಹೀಗಿರಲು ತಾತ್ಸಾರ ಮಾಡು ವವನು ಮನುಷ್ಯನನ್ನಲ್ಲ, ತನ್ನ ಪರಿಶುದ್ಧಾತ್ಮನನ್ನು ನಮಗೆ ದಯಪಾಲಿಸಿರುವ ದೇವರನ್ನೇ ತಾತ್ಸಾರ ಮಾಡುತ್ತಾನೆ.
- Amos 5:10 ಆಮೋಸ 5:10ಅವರು ಬಾಗಿಲಲ್ಲಿ ಬೆದರಿಸುವ ನನ್ನು ಹಗೆಮಾಡುತ್ತಾರೆ, ಯಥಾರ್ಥವಾಗಿ ಮಾತನಾ ಡುವವನನ್ನು ಅವರು ಅಸಹ್ಯಿಸುತ್ತಾರೆ.
- Numbers 35:2–8 ಅರಣ್ಯಕಾಂಡ 35:2–8ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು. ಪಟ್ಟಣಗಳು ಅವರಿಗೆ ವಾಸಮಾಡುವದಕ್ಕೂ ಅವುಗಳ ಉಪನಗರ ಗಳು ಅವರ ಪಶುಗಳಿಗೋಸ್ಕರವೂ ಸಮಸ್ತ ಸರಕುಗಳಿ ಗೋಸ್ಕರವೂ ಸಮಸ್ತ ಪ್ರಾಣಿಗಳಿಗೋಸ್ಕರವೂ ಇರ ಬೇಕು. ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣ ಗಳ ಉಪನಗರಗಳು ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು. ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು. ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು. ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು. ನೀವು ಇಸ್ರಾಯೇಲ್ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.
- Matthew 10:14–15 ಮತ್ತಾಯನು 10:14–15ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ ನೀವು ಆ ಮನೆಯಿಂದಾಗಲೀ ಪಟ್ಟಣದಿಂದಾಗಲೀ ಹೊರಡುವಾಗ ನಿಮ್ಮ ಪಾದಗಳ ಧೂಳನ್ನು ಝಾಡಿಸಿ ಬಿಡಿರಿ. ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನ್ಯಾಯತೀರ್ಪಿನ ದಿನದಲ್ಲಿ ಆ ಪಟ್ಟಣಕ್ಕಿಂತ ಸೊದೋಮ್ ಗೊಮೋರ ಪಟ್ಟಣಗಳ ಗತಿಯು ತಾಳಬಹುದಾಗಿರುವದು.
- Deuteronomy 18:1–5 ಧರ್ಮೋಪದೇಶಕಾಂಡ 18:1–5ಯಾಜಕರಾದ ಲೇವಿಯರಿಗೂ ಆ ಎಲ್ಲಾ ಲೇವಿಯ ಗೋತ್ರಕ್ಕೂ ಇಸ್ರಾಯೇಲಿನ ಸಂಗಡ ಪಾಲೂ ಸ್ವಾಸ್ತ್ಯವೂ ಇರಬಾರದು; ಅವರು ಕರ್ತನ ಬೆಂಕಿಯಿಂದ ಮಾಡಿದ ಬಲಿಗಳನ್ನೂ ಆತನ ಸ್ವಾಸ್ತ್ಯವನ್ನೂ ತಿನ್ನಬೇಕು. ಆದದರಿಂದ ಅವರಿಗೆ ಅವರ ಸಹೋದರರ ಮಧ್ಯದಲ್ಲಿ ಸ್ವಾಸ್ತ್ಯವಿರಬಾರದು; ಕರ್ತನು ಅವರಿಗೆ ಹೇಳಿದ ಹಾಗೆ ಆತನೇ ಅವರ ಸ್ವಾಸ್ತ್ಯವಾಗಿದ್ದಾನೆ. ಎತ್ತಾಗಲಿ ಕುರಿಯಾಗಲಿ ಒಂದು ಬಲಿಯನ್ನು ಅರ್ಪಿಸುವವರ ಕಡೆಯಿಂದಲೂ ಜನರ ಕಡೆಯಿಂದ ಲೂ ಯಾಜಕರಿಗೆ ಬರತಕ್ಕದ್ದು ಇದೇ: ಮುಂದೊಡೆ ಯನ್ನೂ ಎರಡು ದವಡೆಗಳನ್ನೂ ಕೋಷ್ಟವನ್ನೂ ಯಾಜ ಕನಿಗೆ ಕೊಡಬೇಕು. ನಿನ್ನ ಧಾನ್ಯ ದ್ರಾಕ್ಷಾರಸ ಎಣ್ಣೆ ಗಳ ಪ್ರಥಮ ಫಲವನ್ನೂ ನಿನ್ನ ಕುರಿಗಳ ಉಣ್ಣೆ ಯಲ್ಲಿ ಪ್ರಥಮವಾದದ್ದನ್ನೂ ಅವನಿಗೆ ಕೊಡಬೇಕು. ಅವನೂ ಅವನ ಕುಮಾರರೂ ನಿತ್ಯವಾಗಿ ಕರ್ತನ ಹೆಸರಿನಲ್ಲಿ ಸೇವಿಸುತ್ತಾ ನಿಂತಿರುವ ಹಾಗೆ ಅವನನ್ನು ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡಿದ್ದಾನೆ.
- Malachi 1:8–10 ಮಲಾಕಿಯ 1:8–10ಇದ ಲ್ಲದೆ ನೀವು ಕುರುಡಾದದ್ದನ್ನು ಬಲಿಗಾಗಿ ಅರ್ಪಿಸಿ ದರೆ ಅದು ಕೆಟ್ಟದ್ದಲ್ಲವೋ? ಕುಂಟಾದದ್ದನ್ನೂ ರೋಗ ವುಳ್ಳದ್ದನ್ನೂ ಅರ್ಪಿಸಿದರೆ ಅದು ಕೆಟ್ಟದ್ದಲ್ಲವೋ? ಸೈನ್ಯ ಗಳ ಕರ್ತನು--ಅದನ್ನು ನಿನ್ನ ದೊರೆಗೆ ಅರ್ಪಿಸು, ಅವನು ನಿನಗೆ ಮೆಚ್ಚುವನೋ? ಇಲ್ಲವೆ ನಿನಗೆ ಮುಖ ದಾಕ್ಷಿಣ್ಯ ತೋರಿಸುವನೋ? ಹಾಗಾದರೆ ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು --ಇದು ನಿಮ್ಮಿಂದಲೇ ಆಯಿತು; ನಿಮಗೆ ಆತನು ಮುಖದಾಕ್ಷಿಣ್ಯ ತೋರಿಸುವನೋ? ಉಚಿತವಾಗಿ ಬಾಗಲು ಗಳನ್ನಾದರೂ ಮುಚ್ಚವವನೂ ಇಲ್ಲವೆ ನನ್ನ ಬಲಿಪೀಠದಲ್ಲಿ ಉಚಿತವಾಗಿ ಬೆಂಕಿ ಹಚ್ಚುವವನೂ ನಿಮ್ಮಲ್ಲಿ ಯಾರು ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು--ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವದಿಲ್ಲ.
- Psalm 20:3 ಕೀರ್ತನೆಗಳು 20:3ನಿನ್ನ ಅರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿ ನಿನ್ನ ದಹನಬಲಿಯನ್ನು ಅಂಗೀಕರಿಸಲಿ. ಸೆಲಾ.
- Jeremiah 15:10 ಯೆರೆಮೀಯ 15:10ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.