Jeremiah · chapter 15 · verse 10
Jeremiah 15:10 in Kannada
ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
Nanna taayiye, nanage ayyo, neenu nannannu bhoomiya melellaa vyaajyagaaranaagiyoo tarkadavanaagiyoo hettiddeeyallaa? Naanu baddige saala kodalilla illave manushyaru baddigaagi nanage saala kodalilla. Aadaagyoo avarellaru nannannu shapisuttaare.
Jeremiah 15:10 in English
- King James Version (KJV)
- Woe is me, my mother, that thou hast borne me a man of strife and a man of contention to the whole earth! I have neither lent on usury, nor men have lent to me on usury; [yet] every one of them doth curse me.
- World English Bible (WEB)
- Woe is me, my mother, that you have borne me, a man of strife, and a man of contention to the whole earth! I have not lent, neither have men lent to me; yet every one of them curses me.
- American Standard Version (ASV)
- Woe is me, my mother, that thou hast borne me a man of strife and a man of contention to the whole earth! I have not lent, neither have men lent to me; [yet] every one of them doth curse me.
- Bible in Basic English (BBE)
- Sorrow is mine, my mother, because you have given birth to me, a cause of fighting and argument in all the earth! I have not made men my creditors and I am not in debt to any, but every one of them is cursing me.
- Darby Translation (DBY)
- Woe is me, my mother, that thou hast borne me a man of strife and a man of contention to the whole land! I have not lent on usury, nor have they lent to me on usury; [yet] every one of them doth curse me.
- Webster's Bible (WBS)
- Woe is me, my mother, that thou hast borne me a man of strife and a man of contention to the whole earth! I have neither lent on usury, nor have men lent to me on usury; [yet] every one of them doth curse me.
- Young's Literal Translation (YLT)
- Woe to me, my mother, For thou hast borne me a man of strife, And a man of contention to all the land, I have not lent on usury, Nor have they lent on usury to me — All of them are reviling me.
Read in context
- 8ಅವರ ವಿಧವೆಗಳು ಸಮುದ್ರದ ಮರಳಿಗಿಂತ ನನಗೆ ಹೆಚ್ಚಾದರು. ನಾನು ಅವರ ಬಳಿಗೆ ಪ್ರಾಯದವರ ತಾಯಿಯ ಮೇಲೆ ಮಧ್ಯಾಹ್ನದಲ್ಲಿ ನಾಶನ ಮಾಡು ವವನನ್ನು ತರಿಸಿದ್ದೇನೆ; ಪಕ್ಕನೆ ಅವನು ಅವಳ ಮೇಲೆ ಬೀಳುವಂತೆ ಮಾಡುವೆನು, ಹೆದರಿಕೆಯನ್ನು ಪಟ್ಟಣದ ಮೇಲೆ ಬೀಳಮಾಡಿದ್ದೇನೆ.
- 9ಏಳು ಮಂದಿಯನ್ನು ಹೆತ್ತವಳು ಕುಂದುತ್ತಾಳೆ; ತನ್ನ ಪ್ರಾಣವನ್ನು ಬಿಡುತ್ತಾಳೆ; ಹಗಲಿರುವಾಗಲೇ ಅವಳ ಸೂರ್ಯನು ಅಸ್ತಮಿಸುತ್ತಾನೆ; ಅವಳು ನಾಚಿಕೆಪಡುತ್ತಾಳೆ; ಅವಮಾನ ಗೊಳ್ಳುತ್ತಾಳೆ; ಇದಲ್ಲದೆ ಅವರ ಶೇಷವನ್ನು ಅದರ ಶತ್ರುಗಳ ಮುಂದೆ ಕತ್ತಿಗೆ ಒಪ್ಪಿಸುವೆನು ಎಂದು ಕರ್ತನು ಅನ್ನುತ್ತಾನೆ.
- 10ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
- 11ಕರ್ತನು ಹೇಳುವದೇನಂದರೆ --ನಿಶ್ಚಯವಾಗಿ ನಿನ್ನ ಶೇಷಕ್ಕೆ ಅದು ಒಳ್ಳೆಯ ದಾಗಿರುವದು; ಕೇಡಿನ ಕಾಲದಲ್ಲಿಯೂ ಇಕ್ಕಟ್ಟಿನ ಕಾಲದಲ್ಲಿಯೂ ನಿಶ್ಚಯವಾಗಿ ನಿನ್ನ ಶತ್ರುವನ್ನು ನಿನ ಗೋಸ್ಕರ ಬೇಡಿಕೊಳ್ಳುವಂತೆ ಮಾಡಲಿಲ್ಲವೇ?
- 12ಕಬ್ಬಿ ಣವು ಉತ್ತರದ ಕಬ್ಬಿಣವನ್ನೂ ಉಕ್ಕನ್ನೂ ಮುರಿಯ ಬಲ್ಲದೇ?
Cross references
- Luke 6:22 ಲೂಕನು 6:22ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು.
- Psalm 120:5–6 ಕೀರ್ತನೆಗಳು 120:5–6ಕೇದಾರಿನ ಗುಡಾರಗಳ ಬಳಿಯಲ್ಲಿ ವಾಸ ಮಾಡಿ ಮೇಷೆಕಿನಲ್ಲಿ ಪ್ರವಾಸಿಯಾಗಿರುವದರಿಂದ ನನಗೆ ಅಯ್ಯೋ! ನನ್ನ ಪ್ರಾಣವು ಸಮಾಧಾನವನ್ನು ಹಗೆ ಮಾಡುವವರ ಸಂಗಡ ವಾಸಮಾಡಿ ಸಾಕಾಯಿತು.ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.
- Acts 16:20–22 ಅಪೊಸ್ತಲರ ಕೃತ್ಯಗಳು 16:20–22ಅವರನ್ನು ನ್ಯಾಯಾಧಿಪತಿಗಳ ಬಳಿಗೆ ಕರಕೊಂಡು ಹೋಗಿ--ಯೆಹೂದ್ಯರಾದ ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕಳವಳ ಪಡಿಸುತ್ತಾರೆ. ರೋಮಾಯರಾದ ನಾವು ಒಪ್ಪುವದ ಕ್ಕಾಗಲೀ ಕೈಕೊಳ್ಳುವದಕ್ಕಾಗಲೀ ನ್ಯಾಯವಲ್ಲದ ಆಚಾರ ಗಳನ್ನು ಬೋಧಿಸುತ್ತಾರೆ ಅಂದರು. ಸಮೂಹವು ಒಟ್ಟಾಗಿ ಕೂಡಿ ಅವರಿಗೆ ವಿರೋಧವಾಗಿ ಎದ್ದಾಗ ನ್ಯಾಯಾಧಿಪತಿಗಳು ಅವರ ವಸ್ತ್ರಗಳನ್ನು ಹರಿದು ಅವರನ್ನು ಹೊಡೆಯುವಂತೆ ಅಪ್ಪಣೆಕೊಟ್ಟರು.
- Ezekiel 3:7–9 ಯೆಹೆಜ್ಕೇಲನು 3:7–9ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ. ಇಗೋ, ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ; ಮತ್ತು ನಿನ್ನ ಹಣೆಯನ್ನು ಅವರ ಹಣೆಗಳ ಎದುರಾಗಿ ಬಲಪಡಿಸಿದ್ದೇನೆ. ನಾನು ನಿನ್ನ ಹಣೆಯನ್ನು ಅಭೇದ್ಯವಾದ ಕಲ್ಲಿಗಿಂತ ಗಟ್ಟಿಯಾಗಿ ವಜ್ರದಂತೆ ಮಾಡಿದ್ದೇನೆ; ಇಲ್ಲವೆ ತಿರುಗಿ ಬೀಳುವ ಮನೆತನದವರಾದರೂ ನೀನು ಅವರಿಗೆ ಭಯಪಡ ಬೇಡ; ಮತ್ತು ಅವರ ನೋಟಕ್ಕೆ ನೀನು ಗಾಬರಿಯಾಗ ಬೇಡ.
- Job 3:1–26 ಯೋಬನು 3:1–26ಹೀಗಾದ ಮೇಲೆ ಯೋಬನು ತನ್ನ ಬಾಯಿತೆರದು ತನ್ನ ದಿವಸವನ್ನು ಶಪಿಸಿದನು. ಯೋಬನು ಮಾತನಾಡಿ-- ನಾನು ಹುಟ್ಟಿದ ದಿವ ಸವೂ ಗಂಡು ಹುಟ್ಟಿತೆಂದು ಹೇಳಿದ ರಾತ್ರಿಯೂ ಹಾಳಾಗಲಿ. ಆ ದಿವಸವು ಕತ್ತಲಾಗಲಿ; ಮೇಲಿನಿಂದ ದೇವರು ಅದನ್ನು ಗೌರವಿಸದಿರಲಿ; ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ. ಕತ್ತಲೂ ಮರಣದ ನೆರಳೂ ಅದನ್ನು ಅಶುದ್ಧಮಾಡಲಿ; ಮೋಡವು ಅದರ ಮೇಲೆ ವಾಸಮಾಡಲಿ; ಹಗಲಿನ ಮೊಬ್ಬುಗಳು ಅದನ್ನು ಹೆದ ರಿಸಲಿ. ಆ ರಾತ್ರಿಯನ್ನು ಅಂಧಕಾರವು ಮುತ್ತಲಿ, ಅದು ವರುಷದ ದಿವಸಗಳಲ್ಲಿ ಸಂತೋಷಪಡದಿರಲಿ; ತಿಂಗಳುಗಳ ಲೆಕ್ಕದಲ್ಲಿ ಸೇರದಿರಲಿ. ಇಗೋ, ಆ ರಾತ್ರಿಯು ಒಂಟಿಯಾಗಿರಲಿ; ಆನಂದ ಸ್ವರವು ಅದಕ್ಕೆ ಬಾರದಿರಲಿ. ತಮ್ಮ ಶೋಕಕ್ಕಾಗಿ ಸಿದ್ಧವಾಗಿರುವ ಆ ದಿನವು ಶಪಿಸಲ್ಪಡಲಿ. ಅದರ ಸಂಧ್ಯಾರುಣದ ನಕ್ಷತ್ರಗಳು ಕಪ್ಪಾಗಲಿ; ಅದು ಬೆಳಕಿಗೋಸ್ಕರ ಕಾದು ಕೊಳ್ಳಲೂ ಬಾರದಿರಲಿ; ಅದು ದಿನದ ಉದಯವನ್ನು ನೋಡದಿರಲಿ. ಅದು ನನ್ನ ತಾಯಿಯ ಗರ್ಭದ ಬಾಗಲನ್ನು ಮುಚ್ಚಲಿಲ್ಲ; ದುಃಖವನ್ನು ನನ್ನ ಕಣ್ಣುಗಳಿಗೆ ಮರೆಮಾಡಲಿಲ್ಲ. ನಾನು ಗರ್ಭ ಬಿಟ್ಟಾಗಲೇ ಯಾಕೆ ಸಾಯಲಿಲ್ಲ? ಹೊಟ್ಟೆಯೊಳಗಿಂದ ಹೊರಟಾಗಲೇ ಯಾಕೆ ಪ್ರಾಣ ಬಿಡಲಿಲ್ಲ? ಮೊಣಕಾಲುಗಳು ನನ್ನನ್ನು ತಡೆಯದಿ ದ್ದದ್ದೇಕೆ? ನಾನು ಕುಡಿಯುವ ಹಾಗೆ ಮೊಲೆಗಳು ಯಾಕೆ? ಹಾಗಾಗಿದ್ದರೆ ಈಗ ಮೌನವಾಗಿ ಮಲಗಿ ಕೊಳ್ಳುತ್ತಿದ್ದೆನು; ವಿಶ್ರಾಂತಿಯಲ್ಲಿರುತ್ತಿದ್ದೆನು. ತಮಗೆ ಹಾಳಾದ ಸ್ಥಳಗಳನ್ನು ಕಟ್ಟುವ ಅರಸುಗಳ ಸಂಗಡಲೂ; ಭೂಮಿಯ ಸಲಹೆಗಾರರ ಸಂಗಡಲೂ ಇಲ್ಲವೆ ಬಂಗಾರ ಇರುವ ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸುವಂಥ ಪ್ರಧಾನರ ಸಂಗಡ ಆಗಲೇ ನನಗೆ ಶಾಂತಿಯಾಗಿರುವದು. ಇಲ್ಲವೆ ಮರೆಯಾದ ಗರ್ಭ ಪತನದ ಹಾಗೆಯೂ ಬೆಳಕನ್ನು ನೋಡದ ಕೂಸುಗಳ ಹಾಗೆಯೂ ಇಲ್ಲದೆ ಇರುವೆನು. ಅಲ್ಲಿ ದುಷ್ಟರು ತೊಂದರೆ ಕೊಡುವದನ್ನು ಬಿಟ್ಟುಬಿಡುತ್ತಾರೆ. ಶಕ್ತಿ ಕುಂದಿದವರು ಅಲ್ಲಿ ವಿಶ್ರಾಂತಿ ಹೊಂದಿದ್ದಾರೆ. ಸೆರೆ ಯವರು ಕೂಡ ಶಾಂತವಾಗಿದ್ದಾರೆ; ಬಾಧೆಪಡಿಸುವ ವನ ಶಬ್ದವನ್ನು ಕೇಳುವದಿಲ್ಲ. ಕಿರಿಯನು ಹಿರಿಯನು ಅಲ್ಲಿ ಇದ್ದಾರೆ. ದಾಸನು ಯಜಮಾನನಿಂದ ಬಿಡುಗಡೆ ಯಾಗಿದ್ದಾನೆ. ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ? ಬಾರ ದಿರುವ ಮರಣಕ್ಕೋಸ್ಕರ ಕಾದುಕೊಂಡವರಿಗೂ ಅಡ ಗಿಸಿದ ನಿಧಿಗಿಂತಲೂ ಹೆಚ್ಚಾಗಿ ಅದಕ್ಕಾಗಿ ಅಗೆಯುತ್ತಾರೆ. ಸಮಾಧಿ ಕಂಡುಕೊಂಡೆವೆಂದು ಸಂತೋಷ ಸಂಭ್ರಮವಾಗಿ ಹರ್ಷಿಸುವವರಿಗೂ ದೇವರು ಸುತ್ತು ಬೇಲಿ ಹಾಕಿದ್ದರಿಂದ ಅಡಗಿದ ಮಾರ್ಗವುಳ್ಳವರಿಗೂ ಬೆಳಕು ಯಾಕೆ? ನಾನು ತಿನ್ನುವದಕ್ಕಿಂತ ಮುಂಚೆ ನನ್ನ ನಿಟ್ಟುಸಿರು ಬರುವದು. ನೀರಿನಂತೆ ನನ್ನ ಗರ್ಜನೆ ಗಳು ಹೊಯ್ಯಲ್ಪಟ್ಟಿವೆ. ಬಹಳವಾದ ಹೆದರಿಕೆಯು ನನ್ನ ಮೇಲೆ ಬಂತು, ನಾನು ಅಂಜಿದ್ದೇ ನನಗೆ ಬಂತು.ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು. ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು.
- Matthew 10:21–23 ಮತ್ತಾಯನು 10:21–23ಸಹೋದರನು ತನ್ನ ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮತ್ತು ಮಕ್ಕಳು ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡುವರು; ಆದರೆ ಕಡೆಯ ವರೆಗೆ ತಾಳುವವನು ರಕ್ಷಣೆ ಹೊಂದುವನು. ಇದಲ್ಲದೆ ಈ ಪಟ್ಟಣದಲ್ಲಿ ಅವರು ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಪಟ್ಟಣಕ್ಕೆ ಓಡಿಹೋಗಿರಿ; ಯಾಕಂದರೆ-- ಮನುಷ್ಯ ಕುಮಾರನು ಬರುವದರೊಳಗಾಗಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವದಕ್ಕಾಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Luke 2:34 ಲೂಕನು 2:34ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.
- Jeremiah 15:20 ಯೆರೆಮೀಯ 15:20ಇದಲ್ಲದೆ ನಾನು ನಿನ್ನನ್ನು ಈ ಜನಕ್ಕೆ ಬಲವಾದ ತಾಮ್ರದ ಗೋಡೆಯಾಗಮಾಡುತ್ತೇನೆ; ನಿನಗೆ ವಿರೋಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಜಯಿಸಲಾರರು; ನಾನೇ ನಿನ್ನನ್ನು ರಕ್ಷಿಸುವದಕ್ಕೂ ತಪ್ಪಿಸು ವದಕ್ಕೂ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
- Jeremiah 1:18–19 ಯೆರೆಮೀಯ 1:18–19ಇಗೋ, ಸಮಸ್ತ ದೇಶಕ್ಕೆ ವಿರೋಧವಾಗಿ ಯೆಹೂದದ ಅರಸರಿಗೆ ವಿರೋಧ ವಾಗಿಯೂ ಅದರ ಪ್ರಧಾನರಿಗೆ ವಿರೋಧವಾಗಿಯೂ ಅದರ ಯಾಜಕರಿಗೆ ವಿರೋಧವಾಗಿಯೂ ದೇಶದ ಜನರಿಗೆ ವಿರೋಧವಾಗಿಯೂ ನಾನೇ ಈ ಹೊತು ನಿನ್ನನ್ನು ಕೋಟೆಯುಳ್ಳ ಪಟ್ಟಣವಾಗಿಯೂ ಕಬ್ಬಿಣದ ಸ್ತಂಭವಾಗಿಯೂ ಹಿತ್ತಾಳೆಯ ಗೋಡೆಗಳಾಗಿಯೂ ಮಾಡಿದ್ದೇನೆ.ಅವರು ನಿನಗೆ ವಿರೋಧವಾಗಿ ಯುದ್ಧ ಮಾಡುವರು; ಆದರೆ ನಿನ್ನನ್ನು ಗೆಲ್ಲುವದಿಲ್ಲ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ. ಅವರು ನಿನಗೆ ವಿರೋಧವಾಗಿ ಯುದ್ಧ ಮಾಡುವರು; ಆದರೆ ನಿನ್ನನ್ನು ಗೆಲ್ಲುವದಿಲ್ಲ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.
- Acts 17:6–8 ಅಪೊಸ್ತಲರ ಕೃತ್ಯಗಳು 17:6–8ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಪಟ್ಟಣದ ಅಧಿಕಾರಿ ಗಳ ಬಳಿಗೆ ಎಳಕೊಂಡು ಹೋಗಿ--ಲೋಕವನ್ನು ತಲೆಕೆಳಗೆ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ; ಯಾಸೋನನು ಅವರನ್ನು ಸೇರಿಸಿ ಕೊಂಡಿದ್ದಾನೆ; ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಕೈಸರನ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ ಎಂದು ಕೂಗಿದರು. ಜನರೂ ಪಟ್ಟಣದ ಅಧಿಕಾರಿಗಳೂ ಈ ಮಾತು ಗಳನ್ನು ಕೇಳಿ ಕಳವಳಪಟ್ಟು
- Psalm 15:5 ಕೀರ್ತನೆಗಳು 15:5ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.
- Jeremiah 20:14–18 ಯೆರೆಮೀಯ 20:14–18ನಾನು ಹುಟ್ಟಿದ ದಿನವು ಶಪಿಸಲ್ಪಡಲಿ, ನನ್ನ ತಾಯಿ ನನ್ನನ್ನು ಹೆತ್ತ ದಿನವು ಆಶೀರ್ವದಿಸಲ್ಪಡದಿರಲಿ. ನನ್ನ ತಂದೆಗೆ--ನಿನಗೆ ಗಂಡು ಕೂಸು ಹುಟ್ಟಿದೆ ಎಂಬ ಸಮಾಚಾರವನ್ನು ಹೇಳಿ ಬಹಳ ಸಂತೋಷ ಉಂಟು ಮಾಡಿದವನು ಶಪಿಸಲ್ಪಡಲಿ! ಕರ್ತನು ಪಶ್ಚಾತ್ತಾಪಪಡದೆ ಕೆಡವಿಬಿಟ್ಟ ಪಟ್ಟಣಗಳ ಗತಿಯು ಅವನಿಗೆ ಬರಲಿ; ಅವನು ಬೆಳಿಗ್ಗೆ ಕೂಗನ್ನೂ ಮಧ್ಯಾಹ್ನ ದಲ್ಲಿ ಆರ್ಭಟವನ್ನೂ ಕೇಳಲಿ ನಾನು ಗರ್ಭಬಿಟ್ಟಾ ಗಲೇ ಆತನು ನನ್ನನ್ನು ಕೊಲ್ಲದೆ ಹೋದದ್ದರಿಂದ ಇಲ್ಲವೆ ನನ್ನ ತಾಯಿ ನನಗೆ ಸಮಾಧಿಯಾಗಿದ್ದು ಅವಳ ಗರ್ಭವು ನಿತ್ಯವಾಗಿ ಬಸುರಾಗಿಯೇ ಇದ್ದರೆ ಒಳ್ಳೇದಾ ಗಿತ್ತು.ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ? ನಾನು ಕಷ್ಟವನ್ನೂ ಚಿಂತೆಯನ್ನೂ ನೋಡುವ ದಕ್ಕೂ ನನ್ನ ದಿನಗಳು ನಾಚಿಕೆಯಲ್ಲಿ ಕಳೆದುಹೋಗು ವದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಯಾಕೆ?