Deuteronomy · chapter 33 · verse 20
Deuteronomy 33:20 in Kannada
ಗಾದನ ವಿಷಯವಾಗಿ--ಗಾದನನ್ನು ವಿಸ್ತರಿಸ ಮಾಡಿದಾತನು ಸ್ತುತಿಹೊಂದಲಿ; ಅವನು ಸಿಂಹದಂತೆ ಮಲಗಿಕೊಂಡು ತೋಳನ್ನೂ ನೆತ್ತಿಯನ್ನೂ ಕೀಳುತ್ತಾನೆ.
Gaadana vishayavaagi--gaadanannu vistarisa maadidaatanu stutihondali; avanu sinhadante malagikondu tolannoo nettiyannoo keeluttaane.
Deuteronomy 33:20 in English
- King James Version (KJV)
- And of Gad he said, Blessed [be] he that enlargeth Gad: he dwelleth as a lion, and teareth the arm with the crown of the head.
- World English Bible (WEB)
- About Gad he said, “He who enlarges Gad is blessed. He dwells as a lioness, and tears the arm and the crown of the head.
- American Standard Version (ASV)
- And of Gad he said, Blessed be he that enlargeth Gad: He dwelleth as a lioness, And teareth the arm, yea, the crown of the head.
- Bible in Basic English (BBE)
- Of Gad he said, A blessing be on him who makes wide the limits of Gad: he takes his rest like a she-lion, taking for himself the arm and the crown of the head.
- Darby Translation (DBY)
- And of Gad he said, Blessed be he that enlargeth Gad! As a lion doth he dwell, and teareth the arm, even the top of the head.
- Webster's Bible (WBS)
- And of Gad he said: Blessed [be] he that enlargeth Gad: he dwelleth as a lion, and teareth the arm with the crown of the head.
- Young's Literal Translation (YLT)
- And of Gad he said: — Blessed of the Enlarger [is] Gad, As a lioness he doth tabernacle, And hath torn the arm — also the crown!
Read in context
- 18ಅವನು ಜೆಬುಲೂನನ ವಿಷಯವಾಗಿ--ಜೆಬು ಲೂನನೇ, ನೀನು ಹೊರಡುವದರಲ್ಲಿ ಸಂತೋಷ ಪಡು. ಇಸ್ಸಾಕಾರನೇ ನಿನ್ನ ಗುಡಾರಗಳಲ್ಲಿ ಸಂತೋಷ ಪಡು.
- 19ಅವರು ಜನಗಳನ್ನು ಬೆಟ್ಟಕ್ಕೆ ಕರೆಯುವರು. ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು. ಯಾಕಂದರೆ ಸಮುದ್ರಗಳ ಉಗ್ರಾಣವನ್ನೂ ಮರಳಿನ ಗುಪ್ತವಾದ ದ್ರವ್ಯವನ್ನೂ ಹೀರಿಕೊಳ್ಳುವರು ಎಂದು ಹೇಳಿದನು.
- 20ಗಾದನ ವಿಷಯವಾಗಿ--ಗಾದನನ್ನು ವಿಸ್ತರಿಸ ಮಾಡಿದಾತನು ಸ್ತುತಿಹೊಂದಲಿ; ಅವನು ಸಿಂಹದಂತೆ ಮಲಗಿಕೊಂಡು ತೋಳನ್ನೂ ನೆತ್ತಿಯನ್ನೂ ಕೀಳುತ್ತಾನೆ.
- 21ಅವನು ಮೊದಲನೇ ಪಾಲನ್ನು ತನಗೆ ಒದಗಿಸಿ ಕೊಂಡನು; ಯಾಕಂದರೆ ಅಲ್ಲಿ ನ್ಯಾಯಾಧಿಪತಿಯ ಭಾಗ ನೇಮಿಸಲ್ಪಟ್ಟದೆ; ಜನರ ಮುಖ್ಯಸ್ಥರ ಸಂಗಡ ಬಂದು ಕರ್ತನ ನೀತಿಯನ್ನೂ ಇಸ್ರಾಯೇಲಿನ ಸಂಗಡ ಆತನ ನ್ಯಾಯಗಳನ್ನೂ ತೀರಿಸಿದನು ಎಂದು ಹೇಳಿದನು.
- 22ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು.
Cross references
- 1 Chronicles 12:8–14 1 ಪೂರ್ವಕಾಲವೃತ್ತಾಂತ 12:8–14ಇದಲ್ಲದೆ ಅರಣ್ಯದಲ್ಲಿ ಬಲವಾದ ಸ್ಥಳದಲ್ಲಿರುವ ದಾವೀದನ ಬಳಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿದ ಗಾದ್ಯರು ಇದ್ದರು. ಇವರು ಖೇಡ್ಯವನ್ನೂ ಭಲ್ಲೆಯನ್ನೂ ಹಿಡಿದು ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ತಕ್ಕ ಸೈನಿಕರಾಗಿಯೂ ಇದ್ದರು; ಅವರ ಮುಖಗಳು ಸಿಂಹದ ಮುಖಗಳ ಹಾಗಿದ್ದವು ಮತ್ತು ಪರ್ವತಗಳ ಮೇಲೆ ಇರುವ ಜಿಂಕೆಗಳ ಹಾಗೆ ವೇಗವುಳ್ಳವರಾಗಿದ್ದರು. ಮೊದಲನೆಯವನು ಏಜೆರನು, ಎರಡನೆಯವನು ಓಬದ್ಯನು, ಮೂರನೆಯವನು ಎಲೀಯಾಬನು, ನಾಲ್ಕನೆಯವನು ಮಷ್ಮನ್ನನು, ಐದನೆಯವನು ಯೆರೆವಿಾಯನು, ಆರನೆಯವನು ಅತ್ತೈಯು, ಏಳನೆ ಯವನು ಎಲೀಯೇಲನು, ಎಂಟನೆಯವನು ಯೋಹನಾನನು, ಒಂಭತ್ತನೆಯವನು ಎಲ್ಜಾಬಾದನು, ಹತ್ತನೆಯವನು ಯೆರೆವಿಾಯನು, ಹನ್ನೊಂದನೆ ಯವನು ಮಕ್ಬನ್ನೈಯು. ಗಾದನ ಕುಮಾರರಾದ ಇವರು ಸೈನ್ಯದಲ್ಲಿ ಅಧಿಪತಿಗಳಾಗಿದ್ದರು; ಕಿರಿಯನು ನೂರು ಮಂದಿಯ ಮೇಲೆಯೂ ಹಿರಿಯನು ಸಾವಿರ ಮಂದಿಯ ಮೇಲೆಯೂ ಇದ್ದರು.
- Genesis 49:19 ಆದಿಕಾಂಡ 49:19ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು.
- Psalm 18:19 ಕೀರ್ತನೆಗಳು 18:19ಆತನು ನನ್ನನ್ನು ವಿಶಾಲಸ್ಥಳಕ್ಕೆ ತಂದು ನನ್ನನ್ನು ತಪ್ಪಿಸಿಬಿಟ್ಟನು. ಯಾಕಂದರೆ ಆತನು ನನ್ನಲ್ಲಿ ಸಂತೋಷಪಟ್ಟನು.
- Joshua 13:24–28 ಯೆಹೋಶುವ 13:24–28ಇದಲ್ಲದೆ ಮೋಶೆಯು ಗಾದನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರ ಬಾಧ್ಯತೆಯಾಗಿ ಕೊಟ್ಟನು. ಯಗ್ಜೇರ್; ಗಿಲ್ಯಾದಿನ ಸಮಸ್ತ ಪಟ್ಟಣ ಗಳೂ ರಬ್ಬಾಕ್ಕೆ ಎದುರಾಗಿರುವ ಅರೋಯೆರಿನ ವರೆಗೂ ಇರುವ ಅಮ್ಮೋನಿನ ಮಕ್ಕಳ ಅರ್ಧ ದೇಶವು; ಹೆಷ್ಬೋನಿನಿಂದ ರಾಮತ್ಮಿಚ್ಪೆ, ಬೆಟೊನೀಮ್ ಇವುಗಳ ವರೆಗೂ ಮಹನಯಿಮಿನಿಂದ ದೆಬೀರ್ ಮೇರೆಯ ವರೆಗೂ ಇರುವ ದೇಶವು; ತಗ್ಗಿನಲ್ಲಿರುವ ಬೇತ್ಹಾರಾಮ್; ಬೇತ್ನಿಮ್ರಾ, ಸುಕ್ಕೋತ್, ಚಾಫೋನ್; ಹೆಷ್ಬೋನಿನ ಅರಸನಾದ ಸೀಹೋನನ ಉಳಿದ ರಾಜ್ಯವೂ ಯೊರ್ದನಿಗೆ ಆಚೆಯಲ್ಲಿರುವ ಮೂಡಲ ಯೊರ್ದನಿನ ತೀರವಾಗಿ ಕಿನ್ನೆರೆತ್ ಸಮುದ್ರದ ಪರ್ಯಂತರಕ್ಕೂ ಇರುವ ದೇಶವೂ ಅವರ ಮೇರೆಗೆ ಒಳಗಾದವು. ಈ ಪಟ್ಟಣಗಳೂ ಇವುಗಳ ಗ್ರಾಮಗಳೂ ಗಾದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಾಧ್ಯತೆಯಾಗಿವೆ.
- 1 Chronicles 4:10 1 ಪೂರ್ವಕಾಲವೃತ್ತಾಂತ 4:10ಆದರೆ ಯಾಬೇಚನು ಇಸ್ರಾಯೇಲಿನ ದೇವರನ್ನು ಕೂಗಿ ಹೇಳಿದ್ದು--ನೀನು ನನ್ನನು ನಿಜವಾಗಿ ಆಶೀರ್ವ ದಿಸಬೇಕು; ನನ್ನ ಮೇರೆಯನ್ನು ವಿಸ್ತರಿಸಬೇಕು; ನಿನ್ನ ಕೈ ನನ್ನ ಸಂಗಡ ಇರಲಿ; ಅದು ನನ್ನನ್ನು ವ್ಯಥೆಪಡಿಸದ ಹಾಗೆ ನನ್ನನು ಕೇಡಿನಿಂದ ತಪ್ಪಿಸು. ಮತ್ತು ಅವನು ಬೇಡಿಕೊಂಡದ್ದನ್ನು ದೇವರು ದೊರಕಿಸಿದನು.
- Joshua 13:10 ಯೆಹೋಶುವ 13:10ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸನಾದ ಸೀಹೋನನಿಗೆ
- Micah 5:8 ಮೀಕ 5:8ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ, ಜನಾಂಗಗಳೊಳಗೆ ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವದು; ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸ ಲಾರರು.
- Joshua 13:8 ಯೆಹೋಶುವ 13:8ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ:
- 1 Chronicles 5:18–21 1 ಪೂರ್ವಕಾಲವೃತ್ತಾಂತ 5:18–21ರೂಬೇನನ ಕುಮಾರರಲ್ಲಿಯೂ ಗಾದ್ಯರಲ್ಲಿಯೂ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಗುರಾಣಿಯನ್ನು ಕತ್ತಿಯನ್ನು ಹಿಡಿಯುವದಕ್ಕೆ ಬಿಲ್ಲೆಸೆಯುವದಕ್ಕೆ ಯುದ್ಧ ದಲ್ಲಿ ಪ್ರವೀಣರೂ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡುವವರು ನಾಲ್ವತ್ತುನಾಲ್ಕುಸಾವಿರದ ಏಳು ನೂರ ಅರವತ್ತು ಮಂದಿಯಾಗಿದ್ದರು. ಇವರು ಹಗ್ರೀಯರಾದ ಯೆಟೂರನು ನಾಫೀಷನು ನೋದಾ ಬನು ಎಂಬ ಇವರ ಸಂಗಡ ಯುದ್ಧಮಾಡಿದರು. ಇವರು ಅವರಿಗೆ ವಿರೋಧವಾಗಿ ಸಹಾಯಹೊಂದಿ ದ್ದರಿಂದ ಹಗ್ರೀಯರೂ ಅವರ ಸಂಗಡ ಕೂಡಿದ್ದ ವರೆಲ್ಲರೂ ಇವರ ಕೈಯಲ್ಲಿ ಒಪ್ಪಿಸಲ್ಪಟ್ಟರು. ಯಾಕಂದರೆ ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು ಆತನಲ್ಲಿ ಭರವಸವಿಟ್ಟದ್ದರಿಂದ ಆತನು ಅವರ ಮನವಿಯನ್ನು ಕೇಳಿದನು. ಅವರು ಸುಲುಕೊಂಡ ಪಶುಗಳುಅವರ ಒಂಟೆಗಳು ಐವತ್ತು ಸಾವಿರ, ಕುರಿಗಳು ಎರಡು ವರೆ ಲಕ್ಷ, ಕತ್ತೆಗಳು ಎರಡು ಸಾವಿರ, ಮನುಷ್ಯರು ಒಂದುಲಕ್ಷ ಮಂದಿ.
- Psalm 18:36 ಕೀರ್ತನೆಗಳು 18:36ನನ್ನ ಹೆಜ್ಜೆಗ ಳನ್ನು ವಿಶಾಲಮಾಡಿ ನನ್ನ ಪಾದಗಳನ್ನು ಎಡವದಂತೆ ಮಾಡಿದ್ದೀ.
- Genesis 9:26–27 ಆದಿಕಾಂಡ 9:26–27ಶೇಮನ ದೇವ ರಾದ ಕರ್ತನು ಸ್ತುತಿಸಲ್ಪಡಲಿ; ಕಾನಾನನು ಅವನಿಗೆ ದಾಸನಾಗಿರಲಿ. ಯೆಫೆತನನ್ನು ದೇವರು ವಿಸ್ತರಿಸಲಿ; ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ; ಕಾನಾನನು ಅವನಿಗೆ ದಾಸನಾಗಿರಲಿ ಅಂದನು.
- 1 Chronicles 12:37–38 1 ಪೂರ್ವಕಾಲವೃತ್ತಾಂತ 12:37–38ಯೊರ್ದನಿನ ಆಚೆಯಲ್ಲಿರುವ ರೂಬೇನ್ಯರಲ್ಲಿಯೂ ಗಾದನವರಲ್ಲಿಯೂ ಮನಸ್ಸೆಯ ಅರ್ಧ ಗೋತ್ರದ ಲ್ಲಿಯೂ ಯುದ್ಧಕ್ಕೆ ತಕ್ಕಂಥ ಸಕಲ ಆಯುಧಗಳನ್ನು ಧರಿಸಿಕೊಂಡವರು ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿಯು. ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು.