Deuteronomy · chapter 33 · verse 21
Deuteronomy 33:21 in Kannada
ಅವನು ಮೊದಲನೇ ಪಾಲನ್ನು ತನಗೆ ಒದಗಿಸಿ ಕೊಂಡನು; ಯಾಕಂದರೆ ಅಲ್ಲಿ ನ್ಯಾಯಾಧಿಪತಿಯ ಭಾಗ ನೇಮಿಸಲ್ಪಟ್ಟದೆ; ಜನರ ಮುಖ್ಯಸ್ಥರ ಸಂಗಡ ಬಂದು ಕರ್ತನ ನೀತಿಯನ್ನೂ ಇಸ್ರಾಯೇಲಿನ ಸಂಗಡ ಆತನ ನ್ಯಾಯಗಳನ್ನೂ ತೀರಿಸಿದನು ಎಂದು ಹೇಳಿದನು.
Avanu modalane paalannu tanage odagisi kondanu; yaakandare alli nyaayaadhipatiya bhaaga nemisalpattade; janara mukhyasthara sangada bandu kartana neetiyannoo israayelina sangada aatana nyaayagalannoo teerisidanu endu helidanu.
Deuteronomy 33:21 in English
- King James Version (KJV)
- And he provided the first part for himself, because there, [in] a portion of the lawgiver, [was he] seated; and he came with the heads of the people, he executed the justice of the LORD, and his judgments with Israel.
- World English Bible (WEB)
- He provided the first part for himself, for the lawgiver’s portion was reserved for him. He came with the heads of the people. He executed the righteousness of the LORD, His ordinances with Israel.”
- American Standard Version (ASV)
- And he provided the first part for himself, For there was the lawgiver’s portion reserved; And he came [with] the heads of the people; He executed the righteousness of Jehovah, And his ordinances with Israel.
- Bible in Basic English (BBE)
- He kept for himself the first part, for his was the ruler's right: he put in force the righteousness of the Lord, and his decisions for Israel.
- Darby Translation (DBY)
- And he provided the first part for himself, For there was reserved the portion of the lawgiver; And he came with the heads of the people; The justice of Jehovah and his judgments Hath he executed with Israel.
- Webster's Bible (WBS)
- And he provided the first part for himself, because there, [in] a portion of the lawgiver, [was he] seated: and he came with the heads of the people, he executed the justice of the LORD, and his judgments with Israel.
- Young's Literal Translation (YLT)
- And he provideth the first part for himself, For there the portion of the lawgiver is covered, And he cometh [with] the heads of the people; The righteousness of Jehovah he hath done, And His judgments with Israel.
Read in context
- 19ಅವರು ಜನಗಳನ್ನು ಬೆಟ್ಟಕ್ಕೆ ಕರೆಯುವರು. ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು. ಯಾಕಂದರೆ ಸಮುದ್ರಗಳ ಉಗ್ರಾಣವನ್ನೂ ಮರಳಿನ ಗುಪ್ತವಾದ ದ್ರವ್ಯವನ್ನೂ ಹೀರಿಕೊಳ್ಳುವರು ಎಂದು ಹೇಳಿದನು.
- 20ಗಾದನ ವಿಷಯವಾಗಿ--ಗಾದನನ್ನು ವಿಸ್ತರಿಸ ಮಾಡಿದಾತನು ಸ್ತುತಿಹೊಂದಲಿ; ಅವನು ಸಿಂಹದಂತೆ ಮಲಗಿಕೊಂಡು ತೋಳನ್ನೂ ನೆತ್ತಿಯನ್ನೂ ಕೀಳುತ್ತಾನೆ.
- 21ಅವನು ಮೊದಲನೇ ಪಾಲನ್ನು ತನಗೆ ಒದಗಿಸಿ ಕೊಂಡನು; ಯಾಕಂದರೆ ಅಲ್ಲಿ ನ್ಯಾಯಾಧಿಪತಿಯ ಭಾಗ ನೇಮಿಸಲ್ಪಟ್ಟದೆ; ಜನರ ಮುಖ್ಯಸ್ಥರ ಸಂಗಡ ಬಂದು ಕರ್ತನ ನೀತಿಯನ್ನೂ ಇಸ್ರಾಯೇಲಿನ ಸಂಗಡ ಆತನ ನ್ಯಾಯಗಳನ್ನೂ ತೀರಿಸಿದನು ಎಂದು ಹೇಳಿದನು.
- 22ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು.
- 23ಅವನು ನಫ್ತಾಲಿಯ ವಿಷಯವಾಗಿ--ಓ ನಫ್ತಾಲಿಯೇ, ಅನುಗ್ರಹದಿಂದ ತೃಪ್ತನೇ, ಕರ್ತನ ಆಶೀರ್ವಾದದಿಂದ ತುಂಬಿದವನೇ, ಪಶ್ಚಿಮವನ್ನೂ ದಕ್ಷಿಣವನ್ನೂ ಸ್ವಾಧೀನಮಾಡಿಕೋ ಎಂದು ಹೇಳಿದನು.
Cross references
- Joshua 4:12–13 ಯೆಹೋಶುವ 4:12–13ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರವೂ ಮೋಶೆಯು ತಮಗೆ ಹೇಳಿದ ಹಾಗೆಯೇ ಯುದ್ಧಸನ್ನದ್ಧರಾಗಿ ಇಸ್ರಾಯೇಲ್ ಮಕ್ಕಳ ಮುಂದೆ ಹಾದುಹೋದರು. ಹೆಚ್ಚು ಕಡಿಮೆ ನಾಲ್ವತ್ತು ಸಾವಿರ ಜನರು ಯುದ್ಧಕ್ಕೆ ಸಿದ್ಧರಾಗಿ ಕರ್ತನ ಎದುರಿನಲ್ಲಿ ಯುದ್ಧ ಮಾಡುವದಕ್ಕೆ ಯೆರಿಕೋವಿನ ಬೈಲುಗಳಿಗೆ ಹಾದು ಹೋದರು.
- Judges 5:11 ನ್ಯಾಯಸ್ಥಾಪಕರು 5:11ನೀರು ಸೇದುವ ಸ್ಥಳಗಳ ಹತ್ತಿರ ಬಿಲ್ಲುಗಾರರ ಶಬ್ದದಿಂದ ತಪ್ಪಿಸಲ್ಪಟ್ಟವರು ಅಲ್ಲಿ ಕರ್ತನ ನೀತಿಯುಳ್ಳ ಕ್ರಿಯೆಗಳನ್ನು ಇಸ್ರಾಯೇಲಿನಲ್ಲಿ ಆತನ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ನೀತಿಯುಳ್ಳ ಕ್ರಿಯೆಗಳನ್ನು ತಿರುತಿರುಗಿ ಪ್ರಕಟಿಸುವರು; ಕರ್ತನ ಜನರು ಬಾಗಲು ಗಳಿಗೆ ಇಳಿದು ಬರುವರು.
- Joshua 22:1–4 ಯೆಹೋಶುವ 22:1–4ಆಗ ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರ ದವರನ್ನೂ ಕರಿಸಿ ಅವರಿಗೆ-- ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ನೀವು ಕೈಕೊಂಡು ನಾನು ನಿಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನನ್ನ ಮಾತಿಗೆ ವಿಧೇಯರಾದಿರಿ. ನೀವು ಬಹಳ ದಿವಸ ಗಳಿಂದ ಇಂದಿನ ವರೆಗೂ ನಿಮ್ಮ ಸಹೋದರರನ್ನು ಕೈ ಬಿಡದೆ ನಿಮ್ಮ ದೇವರಾದ ಕರ್ತನು ಆಜ್ಞಾಪಿಸಿದ ಅಪ್ಪಣೆಯನ್ನು ಕೈಕೊಂಡಿರಿ. ಈಗ ನಿಮ್ಮ ದೇವರಾದ ಕರ್ತನು ಅವರಿಗೆ ವಾಗ್ದಾನಮಾಡಿದ ಪ್ರಕಾರ ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟನು. ಮತ್ತು ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ನಿಮಗೆ ಕೊಟ್ಟ ಸ್ವಾಸ್ತ್ಯವಾದ ನಿಮ್ಮ ದೇಶದಲ್ಲಿರುವ ನಿಮ್ಮ ಡೇರೆಗಳಿಗೆ ತಿರಿಗಿ ಹೋಗಿರಿ.
- Numbers 32:1–6 ಅರಣ್ಯಕಾಂಡ 32:1–6ಇದಲ್ಲದೆ ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಬಹಳ ಅಧಿಕವಾದ ಪಶುಗಳು ಇದ್ದವು; ಅವರು ಯಗ್ಜೇರೂ ಗಿಲ್ಯಾದೂ ಎಂಬ ದೇಶ ಗಳನ್ನು ನೋಡಿದಾಗ ಅಗೋ, ಆ ಸ್ಥಳವು ಪಶುಗಳ ಸ್ಥಳವಾಗಿತ್ತು. ಆದದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಬಂದು ಮಾತನಾಡಿ ಮೋಶೆಗೂ ಯಾಜಕನಾದ ಎಲ್ಲಾಜಾರನಿಗೂ ಸಭೆಯ ಪ್ರಧಾನ ರಿಗೂ-- ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳೂ ಕರ್ತನು ಇಸ್ರಾಯೇಲ್ಯರ ಸಭೆಯ ಮುಂದೆ ಹೊಡೆದ ದೇಶವೂ ಪಶುಗಳ ದೇಶವಾಗಿದೆ; ನಿನ್ನ ಸೇವಕರಿಗೆ ಪಶುಗಳು ಉಂಟು. ಆದದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯವು ಸಿಕ್ಕಿದ್ದಾದರೆ ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು; ನಮ್ಮನ್ನು ಯೊರ್ದನ್ ನದಿಯ ಆಚೆಗೆ ತಕ್ಕೊಂಡು ಹೋಗಬೇಡಿರಿ ಎಂದು ಹೇಳಿದರು. ಆಗ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ--ನಿಮ್ಮ ಸಹೋದರರು ಯುದ್ಧಕ್ಕೆ ಹೋಗ ಲಾಗಿ ನೀವು ಇಲ್ಲಿ ಕೂತಿರಬೇಕೋ?
- Judges 5:2 ನ್ಯಾಯಸ್ಥಾಪಕರು 5:2ಜನರು ಸ್ವೇಚ್ಛೆಯಿಂದ ತಮ್ಮನ್ನು ಸಮ ರ್ಪಿಸಿಕೊಂಡಾಗ ಕರ್ತನು ಇಸ್ರಾಯೇಲಿಗೋಸ್ಕರ ಮುಯ್ಯಿಗೆ ಮುಯ್ಯಿ ಮಾಡಿದ್ದರಿಂದ ನೀವು ಆತನನ್ನು ಕೊಂಡಾಡಿರಿ.
- Joshua 1:14 ಯೆಹೋಶುವ 1:14ಹೇಗಂದರೆ ನಿಮ್ಮ ಹೆಂಡತಿಯರೂ ಚಿಕ್ಕವರೂ ಪಶುಗಳೂ ಮೋಶೆ ನಿಮಗೆ ಕೊಟ್ಟ ಯೊರ್ದನಿಗೆ ಈಚೆ ಇರುವ ದೇಶದಲ್ಲೇ ಇರಲಿ; ಆದರೆ ನಿಮ್ಮಲ್ಲಿ ಇರುವ ಪರಾಕ್ರಮಶಾಲಿಗಳೆಲ್ಲಾ ನಿಮ್ಮ ಸಹೋದರರ ಮುಂದೆ ಯುದ್ಧಸನ್ನದ್ಧರಾಗಿ ನಡೆದುಹೋಗಿ
- Numbers 32:16–42 ಅರಣ್ಯಕಾಂಡ 32:16–42ಆಗ ಅವರು ಅವನ ಬಳಿಗೆ ಬಂದು--ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ ನಮ್ಮ ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು. ಆದರೆ ನಾವು ಇಸ್ರಾಯೇಲ್ ಮಕ್ಕಳ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವ ವರೆಗೆ ಯುದ್ಧಕ್ಕೆ ಸಿದ್ಧ ವಾಗಿ ಓಡುವೆವು; ನಮ್ಮ ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು. ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬೊಬ್ಬನು ತನ್ನ ಸ್ವಾಸ್ತ್ಯವನ್ನು ಹೊಂದಿಕೊಳ್ಳುವ ವರೆಗೆ ನಾವು ನಮ್ಮ ಮನೆಗಳಿಗೆ ತಿರುಗುವದಿಲ್ಲ. ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸ್ವಾಸ್ತ್ಯವನ್ನು ತಕ್ಕೊಳ್ಳುವದಿಲ್ಲ. ಯಾಕಂದರೆ ನಮ್ಮ ಸ್ವಾಸ್ತ್ಯವು ನಮಗೆ ಯೊರ್ದನ್ ನದಿಯ ಈಚೆಯಲ್ಲಿ ಮೂಡಣ ಕಡೆಯಲ್ಲಿ ಬಂತು ಎಂದು ಹೇಳಿದರು. ಆಗ ಮೋಶೆಯು ಇವರಿಗೆ--ನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆ ನಿಮ್ಮಲ್ಲಿ ಯುದ್ಧಕ್ಕೆ ಸಿದ್ಧವಾದವರೆಲ್ಲರು ಕರ್ತನು ತನ್ನ ಶತ್ರುಗಳನ್ನು ತನ್ನ ಸನ್ನಿಧಿಯಿಂದ ಹೊರಡಿಸುವ ವರೆಗೆ ಕರ್ತನ ಮುಂದೆ ಯೊರ್ದನ್ ನದಿಯನ್ನು ದಾಟಿದರೆ ದೇಶವು ಕರ್ತನ ಮುಂದೆ ವಶವಾದ ತರುವಾಯ ನೀವು ಕರ್ತನಿಂದಲೂ ಇಸ್ರಾ ಯೇಲ್ಯರಿಂದಲೂ ನಿರಪರಾಧಿಗಳಾಗಿದ್ದು ತಿರುಗಿಕೊಳ್ಳ ಬಹುದು; ಈ ದೇಶವು ಕರ್ತನ ಮುಂದೆ ನಿಮ್ಮ ಸ್ವಾಸ್ತ್ಯಕ್ಕಾಗುವದು. ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಕರ್ತನಿಗೆ ವಿರೋಧವಾಗಿ ಪಾಪಮಾಡಿದವರಾಗುವಿರಿ; ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವದೆಂದು ತಿಳುಕೊಳ್ಳಿರಿ. ನಿಮ್ಮ ಮಕ್ಕಳಿ ಗೋಸ್ಕರ ಪಟ್ಟಣಗಳನ್ನೂ ನಿಮ್ಮ ಕುರಿಗಳಿಗೋಸ್ಕರ ಹಟ್ಟಿಗಳನ್ನೂ ಕಟ್ಟಿ ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ ಎಂದು ಹೇಳಿದನು. ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು. ನಮ್ಮ ಮಕ್ಕಳೂ ಹೆಂಡತಿಯರೂ ಸಂಪತ್ತೂ ಪಶು ಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ. ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರು ನಮ್ಮ ಒಡೆಯನು ಹೇಳಿದ ಪ್ರಕಾರ ಕರ್ತನ ಮುಂದೆ ಯುದ್ಧಕ್ಕೆ ದಾಟಿ ಹೋಗುವರು ಅಂದರು. ಆಗ ಮೋಶೆಯು ಅವರ ವಿಷಯವಾಗಿ ಯಾಜಕ ನಾದ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋ ಶುವನಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದನು. ಮೋಶೆಯು ಅವರಿಗೆ--ಗಾದನ ಮಕ್ಕಳೂ ರೂಬೇನನ ಮಕ್ಕಳೂ ಎಲ್ಲರು ಯುದ್ಧಕ್ಕೆ ಸಿದ್ಧವಾಗಿದ್ದು ನಿಮ್ಮ ಸಂಗಡ ಯೊರ್ದನ್ ನದಿಯನ್ನು ಕರ್ತನ ಮುಂದೆ ದಾಟಿದರೆ ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು. ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟದಿದ್ದರೆ ಅವರು ನಿಮ್ಮೊಳಗೆ ಕಾನಾನ್ ದೇಶದಲ್ಲಿ ಸ್ವಾಸ್ತ್ಯವನ್ನು ಹೊಂದಬೇಕು ಅಂದನು. ಆಗ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಪ್ರತ್ಯುತ್ತರವಾಗಿ--ಕರ್ತನು ನಿನ್ನ ಸೇವಕರಿಗೆ ಹೇಳಿ ದ್ದಂತೆಯೇ ನಾವು ಮಾಡುವೆವು. ನಾವು ಯುದ್ಧಕ್ಕೆ ಸಿದ್ಧವಾಗಿ ಕರ್ತನ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು; ಆದರೆ ಯೊರ್ದನ್ ನದಿಯ ಈಚೆ ಯಲ್ಲಿರುವ ನಮ್ಮ ಸ್ವಾಸ್ತ್ಯದ ಭಾಗವೇ ನಮಗಿರಲಿ ಎಂದು ಹೇಳಿದರು. ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು. ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್, ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು. ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು. ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು. ಆದರೆ ಮನಸ್ಸೆಯ ಮಗನಾದ ಯಾಯಾ ರನು ಹೋಗಿ, ಅವರ ನಗರಗಳನ್ನು ತಕ್ಕೊಂಡು, ಅವುಗಳಿಗೆ ಯಾಯಾರನ ನಗರಗಳೆಂದು ಹೆಸರಿಟ್ಟನು.ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು. ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು.
Original words (Hebrew)
- provided · H7200רָאָה râʼâh
- part · H7225רֵאשִׁית rêʼshîyth
- portion · H2513חֶלְקָה chelqâh
- lawgiver · H2710חָקַק châqaq
- seated · H5603סָפַן çâphan
- came · H857אָתָה ʼâthâh
- heads · H7218רֹאשׁ rôʼsh
- people · H5971עַם ʻam
- executed · H6213עָשָׂה ʻâsâh
- justice · H6666צְדָקָה tsᵉdâqâh
- judgments · H4941מִשְׁפָּט mishpâṭ
- Israel · H3478יִשְׂרָאֵל Yisrâʼêl