Deuteronomy · chapter 33 · verse 23
Deuteronomy 33:23 in Kannada
ಅವನು ನಫ್ತಾಲಿಯ ವಿಷಯವಾಗಿ--ಓ ನಫ್ತಾಲಿಯೇ, ಅನುಗ್ರಹದಿಂದ ತೃಪ್ತನೇ, ಕರ್ತನ ಆಶೀರ್ವಾದದಿಂದ ತುಂಬಿದವನೇ, ಪಶ್ಚಿಮವನ್ನೂ ದಕ್ಷಿಣವನ್ನೂ ಸ್ವಾಧೀನಮಾಡಿಕೋ ಎಂದು ಹೇಳಿದನು.
Avanu naphtaaliya vishayavaagi--o naphtaaliye, anugrahadinda truptane, kartana aasheervaadadinda tumbidavane, pashchimavannoo dakshinavannoo svaadheenamaadiko endu helidanu.
Deuteronomy 33:23 in English
- King James Version (KJV)
- And of Naphtali he said, O Naphtali, satisfied with favour, and full with the blessing of the LORD: possess thou the west and the south.
- World English Bible (WEB)
- About Naphtali he said, “Naphtali, satisfied with favor, full of the LORD’s blessing, Possess the west and the south.”
- American Standard Version (ASV)
- And of Naphtali he said, O Naphtali, satisfied with favor, And full with the blessing of Jehovah, Possess thou the west and the south.
- Bible in Basic English (BBE)
- And of Naphtali he said, O Naphtali, made glad with grace and full of the blessing of the Lord: the sea and its fishes will be his.
- Darby Translation (DBY)
- And of Naphtali he said, Naphtali, satisfied with favour, And full of the blessing of Jehovah, Possess thou the west and the south.
- Webster's Bible (WBS)
- And of Naphtali he said, O Naphtali, satisfied with favor, and full with the blessing of the LORD: possess thou the west and the south.
- Young's Literal Translation (YLT)
- And of Naphtali he said: — O Naphtali, satisfied with pleasure, And full of the blessing of Jehovah, West and south possess thou.
Read in context
- 21ಅವನು ಮೊದಲನೇ ಪಾಲನ್ನು ತನಗೆ ಒದಗಿಸಿ ಕೊಂಡನು; ಯಾಕಂದರೆ ಅಲ್ಲಿ ನ್ಯಾಯಾಧಿಪತಿಯ ಭಾಗ ನೇಮಿಸಲ್ಪಟ್ಟದೆ; ಜನರ ಮುಖ್ಯಸ್ಥರ ಸಂಗಡ ಬಂದು ಕರ್ತನ ನೀತಿಯನ್ನೂ ಇಸ್ರಾಯೇಲಿನ ಸಂಗಡ ಆತನ ನ್ಯಾಯಗಳನ್ನೂ ತೀರಿಸಿದನು ಎಂದು ಹೇಳಿದನು.
- 22ಅವನು ದಾನನ ವಿಷಯವಾಗಿ--ದಾನನು ಸಿಂಹದ ಮರಿಯೇ, ಬಾಶಾನಿನಿಂದ ಹಾರಿ ಬರುವನು ಎಂದು ಹೇಳಿದನು.
- 23ಅವನು ನಫ್ತಾಲಿಯ ವಿಷಯವಾಗಿ--ಓ ನಫ್ತಾಲಿಯೇ, ಅನುಗ್ರಹದಿಂದ ತೃಪ್ತನೇ, ಕರ್ತನ ಆಶೀರ್ವಾದದಿಂದ ತುಂಬಿದವನೇ, ಪಶ್ಚಿಮವನ್ನೂ ದಕ್ಷಿಣವನ್ನೂ ಸ್ವಾಧೀನಮಾಡಿಕೋ ಎಂದು ಹೇಳಿದನು.
- 24ಅವನು ಆಶೇರನ ವಿಷಯವಾಗಿ--ಆಶೇರನು ಮಕ್ಕಳ ಆಶೀರ್ವಾದವನ್ನು ಹೊಂದಲಿ. ತನ್ನ ಸಹೋದ ರರ ಅಂಗೀಕಾರವನ್ನು ಹೊಂದಲಿ. ಅವನ ಕಾಲು ಎಣ್ಣೆಯಲ್ಲಿ ಅದ್ದಿರಲಿ.
- 25ಕಬ್ಬಿಣವೂ ತಾಮ್ರವೂ ನಿನ್ನ ಪಾದರಕ್ಷೆಯಾಗಿರಲಿ. ನಿನ್ನ ದಿವಸಗಳ ಪ್ರಕಾರ ನಿನ್ನ ಬಲವು ಇರಲಿ ಎಂದು ಹೇಳಿದನು.
Cross references
- Genesis 49:21 ಆದಿಕಾಂಡ 49:21ನಫ್ತಾಲಿ ಬಿಡಲ್ಪಟ್ಟ ಜಿಂಕೆ, ಅವನು ಮೆಚ್ಚಿಗೆಯ ಮಾತುಗಳನ್ನಾಡುತ್ತಾನೆ.
- Psalm 36:8 ಕೀರ್ತನೆಗಳು 36:8ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ.
- Matthew 4:16 ಮತ್ತಾಯನು 4:16ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು; ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ.
- Jeremiah 31:14 ಯೆರೆಮೀಯ 31:14ಇದಲ್ಲದೆ ಯಾಜಕರ ಪ್ರಾಣವನ್ನು ಕೊಬ್ಬಿನಿಂದ ತುಂಬಿಸುವೆನು; ನನ್ನ ಜನರು ನನ್ನ ಒಳ್ಳೇತನದಿಂದ ತೃಪ್ತಿಪಡುವರೆಂದು ಕರ್ತನು ಅನ್ನುತ್ತಾನೆ.
- Matthew 4:13 ಮತ್ತಾಯನು 4:13ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್, ನೆಫ್ತಲೀಮ್ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
- Psalm 90:14 ಕೀರ್ತನೆಗಳು 90:14ಬೆಳಿಗ್ಗೆ ನಿನ್ನ ಕರುಣೆಯಿಂದ ನಮಗೆ ತೃಪ್ತಿಪಡಿಸು; ಆಗ ನಮ್ಮ ದಿವಸಗಳಲ್ಲೆಲ್ಲಾ ಉತ್ಸಾಹಧ್ವನಿಗೈದು ಸಂತೋಷ ಪಡುವೆವು.
- Joshua 19:32–39 ಯೆಹೋಶುವ 19:32–39ಆರನೇ ಚೀಟು ನಫ್ತಾಲಿಯ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಿತ್ತು. ಅವರ ಮೇರೆಯು ಹೆಲೇಫಿನಿಂದ ಅಲ್ಲೋನಿನಿಂದ ಚಾನನ್ನಿಮ್, ಅದಾಮಿ, ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮಿನವರೆಗೂ ಹೋಗಿ ಯೊರ್ದನಿಗೆ ಮುಗಿಯು ವದು. ಆ ಮೇರೆಯು ಪಶ್ಚಿಮಕ್ಕೆ ಅಜ್ನೊತ್ ತಾಬಾರಿಗೆ ತಿರುಗಿ ಅಲ್ಲಿಂದ ಹುಕ್ಕೋಕಿಗೆ ಹೊರಟು ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನನ್ನೂ ಸೂರ್ಯೋದಯದ ದಿಕ್ಕಿನಲ್ಲಿ ಯೊರ್ದನಿನ ಬಳಿಯ ಲ್ಲಿರುವ ಯೂದವನ್ನೂ ಮುಟ್ಟಿ ಬರುವದು. ಇದರಲ್ಲಿ ರುವ ಕೋಟೆಗಳುಳ್ಳ ಪಟ್ಟಣಗಳು ಯಾವವಂದರೆ, ಚಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್ ಆದಾಮಾ, ರಾಮಾ, ಹಾಚೋರ್, ಕೆದೆಷ್, ಎದ್ರೈ, ಎನ್ಹಾಚೊರ್, ಇರೋನ್, ಮಿಗ್ದಲೇಲ್, ಹೊರೇಮ್, ಬೇತ್ಷೆಮೆಷೆ ಬೆತನಾತ್ ಮೊದಲಾದ ಹತ್ತೊಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದೇ ನಫ್ತಾಲಿಯ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ ಅವುಗಳ ಗ್ರಾಮಗಳೂ ದೊರೆತ ಬಾಧ್ಯತೆಯಾಗಿದೆ.
- Isaiah 9:1–2 ಯೆಶಾಯ 9:1–2ಆದಾಗ್ಯೂ ಸಂಕಟಪಟ್ಟ ದೇಶಕ್ಕೆ ಅಂಧ ಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬು ಲೋನ್ ಮತ್ತು ನಫ್ತಾಲೀ ಸೀಮೆಗಳನ್ನು ಆತನು ಅವಮಾನಕ್ಕೆ ಗುರಿಮಾಡಿ ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ ಈ ಪ್ರಾಂತ್ಯ ವನ್ನೆಲ್ಲಾ ಘನಪಡಿಸಿದ್ದಾನೆ. ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ.
- Matthew 11:28 ಮತ್ತಾಯನು 11:28ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.