Deuteronomy · chapter 34 · verse 10
Deuteronomy 34:10 in Kannada
ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
Aadare aiguptadeshadalli pharohanigoo avana ellaa sevakarigoo avana ellaa deshakkoo maadi dakke kartanu avanannu kaluhisida samasta gurutu gala mattu adbhutagala vishayadalliyoo
Deuteronomy 34:10 in English
- King James Version (KJV)
- And there arose not a prophet since in Israel like unto Moses, whom the LORD knew face to face,
- World English Bible (WEB)
- Since then, there has not arisen a prophet in Israel like Moses, whom the LORD knew face to face,
- American Standard Version (ASV)
- And there hath not arisen a prophet since in Israel like unto Moses, whom Jehovah knew face to face,
- Bible in Basic English (BBE)
- There has never been another prophet in Israel like Moses, whom the Lord had knowledge of face to face;
- Darby Translation (DBY)
- And there arose no prophet since in Israel like Moses, whom Jehovah had known face to face;
- Webster's Bible (WBS)
- And there arose not a prophet afterwards in Israel like to Moses, whom the LORD knew face to face,
- Young's Literal Translation (YLT)
- And there hath not arisen a prophet any more in Israel like Moses, whom Jehovah hath known face unto face,
Read in context
- 8ಇಸ್ರಾಯೇಲ್ ಮಕ್ಕಳು ಮೋವಾಬಿನ ಬೈಲಿನಲ್ಲಿ ಮೋಶೆಯ ನಿಮಿತ್ತ ಮೂವತ್ತು ದಿವಸ ಅತ್ತರು. ಈ ಪ್ರಕಾರ ಮೋಶೆಯ ನಿಮಿತ್ತವಾದ ಗೋಳಾಟದಲ್ಲಿ ಅಳುವ ದಿವಸಗಳು ಮುಗಿದವು.
- 9ಇದಲ್ಲದೆ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದ್ದನು. ಯಾಕಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು. ಇಸ್ರಾಯೇಲ್ ಮಕ್ಕಳು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿ ಅವನ ಮಾತು ಕೇಳಿದರು.
- 10ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
- 11ಮೋಶೆ ಸಮಸ್ತ ಇಸ್ರಾಯೇಲಿನ ಮುಂದೆ ತೋರಿಸಿದ ಸಮಸ್ತ ಬಲವಾದ ಕೈಯ ಸಮಸ್ತ ಮಹಾಭಯದ ವಿಷಯ ದಲ್ಲಿಯೂಕರ್ತನು ಮುಖಾಮುಖಿಯಾಗಿ ತಿಳಿದ ಮೋಶೆಯ ಹಾಗೆ ಮತ್ತೊಬ್ಬ ಪ್ರವಾದಿ ಇಸ್ರಾ ಯೇಲಿನಲ್ಲಿ ಏಳಲಿಲ್ಲ.
- 12ಕರ್ತನು ಮುಖಾಮುಖಿಯಾಗಿ ತಿಳಿದ ಮೋಶೆಯ ಹಾಗೆ ಮತ್ತೊಬ್ಬ ಪ್ರವಾದಿ ಇಸ್ರಾ ಯೇಲಿನಲ್ಲಿ ಏಳಲಿಲ್ಲ.
Cross references
- Exodus 33:11 ವಿಮೋಚನಕಾಂಡ 33:11ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಕರ್ತನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡು ತ್ತಿದ್ದನು. ತರುವಾಯ ಅವನು ಪಾಳೆಯಕ್ಕೆ ಹಿಂತಿರಿಗಿ ಹೋದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವ ಎಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.
- Numbers 12:6–8 ಅರಣ್ಯಕಾಂಡ 12:6–8ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು. ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ. ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
- Deuteronomy 18:15–18 ಧರ್ಮೋಪದೇಶಕಾಂಡ 18:15–18ನನ್ನ ಹಾಗಿರುವ ಪ್ರವಾದಿಯನ್ನು ನಿನ್ನ ದೇವ ರಾದ ಕರ್ತನು ನಿನಗೆ ನಿನ್ನ ಮಧ್ಯದಲ್ಲಿ ನಿನ್ನ ಸಹೋದರ ರಿಂದ ಎಬ್ಬಿಸುವನು; ಅವನ ಮಾತು ನೀವು ಕೇಳ ಬೇಕು.-- ನೀನು ಹೋರೇಬಿನಲ್ಲಿ ಸಭೆಯ ದಿವಸ ದಲ್ಲಿ ನಿನ್ನ ದೇವರಾದ ಕರ್ತನಿಂದ ಬೇಡಿಕೊಂಡ ಎಲ್ಲಾದರ ಪ್ರಕಾರ ಆಗುವದು; ನಾನು ಸಾಯದ ಹಾಗೆ ಇನ್ನು ಮೇಲೆ ನನ್ನ ದೇವರಾದ ಕರ್ತನ ಶಬ್ದವನ್ನು ನಾನು ಕೇಳುವದಿಲ್ಲ; ಈ ಘೋರವಾದ ಬೆಂಕಿಯನ್ನೂ ನೋಡುವದಿಲ್ಲವೆಂದು ಹೇಳಿದೆಯಲ್ಲಾ. ಆಗ ಕರ್ತನು ನನಗೆ--ಅವರು ಹೇಳಿದ್ದನ್ನು ಚೆನ್ನಾಗಿ ಹೇಳಿ ದ್ದಾರೆ. ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು.
- Acts 3:22–23 ಅಪೊಸ್ತಲರ ಕೃತ್ಯಗಳು 3:22–23ಯಾಕಂದರೆ ಪಿತೃಗಳಿಗೆ ಮೋಶೆಯು ನಿಜವಾಗಿಯೂ ಹೇಳಿದ್ದೇನಂದರೆ--ನನ್ನ ಹಾಗೆ ಒಬ್ಬ ಪ್ರವಾದಿಯನ್ನು ನಿಮ್ಮ ಸಹೋದರರಲ್ಲಿ ನಿಮ್ಮ ದೇವರಾದ ಕರ್ತನು ನಿಮಗಾಗಿ ಎಬ್ಬಿಸುವನು; ಆತನು ನಿಮಗೆ ಹೇಳುವ ಎಲ್ಲಾ ವಿಷಯಗಳಿಗೆ ನೀವು ಕಿವಿಗೊಡತಕ್ಕದ್ದು; ಆ ಪ್ರವಾದಿಗೆ ಕಿವಿಗೊಡದಿರುವ ಪ್ರತಿಯೊಬ್ಬನೂ ಜನ ರೊಳಗಿಂದ ನಾಶವಾಗುವನು ಎಂಬದು.
- Hebrews 3:5–6 ಇಬ್ರಿಯರಿಗೆ 3:5–6ನಿಜವಾಗಿಯೂ ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು; ಅವನು ಮುಂದೆ ಪ್ರಕಟವಾಗಬೇಕಾಗಿದ್ದವುಗಳಿಗೆ ಸಾಕ್ಷಿಯಾಗಿ ದ್ದನು. ಕ್ರಿಸ್ತನಾದರೋ ಮಗನಾಗಿ ತನ್ನ ಸ್ವಂತ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ; ನಾವು ನಮ್ಮ ಧೈರ್ಯ ವನ್ನೂ ನಮ್ಮ ನಿರೀಕ್ಷೆಯಿಂದುಂಟಾಗುವ ಉತ್ಸಾಹವನ್ನೂ ಕಡೇತನಕ ದೃಢವಾಗಿ ಹಿಡುಕೊಂಡವರಾದರೆ ನಾವೇ ಆತನ ಮನೆಯಾಗಿದ್ದೇವೆ.
- Deuteronomy 5:4–5 ಧರ್ಮೋಪದೇಶಕಾಂಡ 5:4–5ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು. (ಆ ಕಾಲದಲ್ಲಿ ನಾನು ಕರ್ತನ ವಾಕ್ಯವನ್ನು ನಿಮಗೆ ತಿಳಿಸುವ ಹಾಗೆ ಕರ್ತನಿಗೂ ನಿಮಗೂ ನಡುವೆ ನಿಂತಿದ್ದೆನು; ನೀವು ಆ ಬೆಂಕಿಗೆ ಭಯಪಟ್ಟು ಬೆಟ್ಟದ ಮೇಲೆ ಏರಲಿಲ್ಲ.) ಆತನು ಹೇಳಿದ್ದೇನಂದರೆ--
- Acts 7:37 ಅಪೊಸ್ತಲರ ಕೃತ್ಯಗಳು 7:37ನಿಮ್ಮ ದೇವರಾದ ಕರ್ತನು ನನ್ನನ್ನು ಎಬ್ಬಿಸಿದಂತೆ ನಿಮ್ಮ ಸಹೋದರರಲ್ಲಿ ಒಬ್ಬ ಪ್ರವಾದಿಯನ್ನು ನಿಮ ಗಾಗಿ ಎಬ್ಬಿಸುವನು; ನೀವು ಆತನ ಮಾತಿಗೆ ಕಿವಿಗೊಡ ಬೇಕೆಂದು ಇಸ್ರಾಯೇಲ್ ಜನರಿಗೆ ಹೇಳಿದ ಆ ಮೋಶೆಯು ಇವನೇ.