Deuteronomy · chapter 5 · verse 4
Deuteronomy 5:4 in Kannada
ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.
Mukhaamukhiyaagi kartanu nimma sangada bettadalli benkiyolaginda maatanaadidanu.
Deuteronomy 5:4 in English
- King James Version (KJV)
- The LORD talked with you face to face in the mount out of the midst of the fire,
- World English Bible (WEB)
- The LORD spoke with you face to face on the mountain out of the middle of the fire,
- American Standard Version (ASV)
- Jehovah spake with you face to face in the mount out of the midst of the fire
- Bible in Basic English (BBE)
- The word of the Lord came to you face to face on the mountain, out of the heart of the fire,
- Darby Translation (DBY)
- Face to face on the mountain from the midst of the fire Jehovah spoke with you
- Webster's Bible (WBS)
- The LORD talked with you face to face on the mount, from the midst of the fire,
- Young's Literal Translation (YLT)
- Face to face hath Jehovah spoken with you, in the mount, out of the midst of the fire;
Read in context
- 2ನಮ್ಮ ದೇವರಾದ ಕರ್ತನು ಹೋರೇ ಬಿನಲ್ಲಿ ನಮ್ಮ ಸಂಗಡ ಆ ಒಡಂಬಡಿಕೆಯನ್ನು ಮಾಡಿದನು.
- 3ಕರ್ತನು ಆ ಒಡಂಬಡಿಕೆಯನ್ನು ನಮ್ಮ ಪಿತೃಗಳ ಸಂಗಡ ಅಲ್ಲ, ನಮ್ಮ ಸಂಗಡವೇ ಮಾಡಿದನು. ನಾವೆಲ್ಲರೂ ಈಹೊತ್ತು ಇಲ್ಲಿ ಜೀವಿತರಾಗಿದ್ದೇವೆ.
- 4ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.
- 5(ಆ ಕಾಲದಲ್ಲಿ ನಾನು ಕರ್ತನ ವಾಕ್ಯವನ್ನು ನಿಮಗೆ ತಿಳಿಸುವ ಹಾಗೆ ಕರ್ತನಿಗೂ ನಿಮಗೂ ನಡುವೆ ನಿಂತಿದ್ದೆನು; ನೀವು ಆ ಬೆಂಕಿಗೆ ಭಯಪಟ್ಟು ಬೆಟ್ಟದ ಮೇಲೆ ಏರಲಿಲ್ಲ.) ಆತನು ಹೇಳಿದ್ದೇನಂದರೆ--
- 6ನಿನ್ನನ್ನು ಐಗುಪ್ತದೇಶದೊಳಗಿಂದ ಅಂದರೆ ದಾಸ ತ್ವದ ಮನೆಯೊಳಗಿಂದ ಹೊರಗೆ ಬರಮಾಡಿದ ನಿನ್ನ ದೇವರಾದ ಕರ್ತನು ನಾನೇ.
Cross references
- Exodus 19:18–19 ವಿಮೋಚನಕಾಂಡ 19:18–19ಕರ್ತನು ಅಗ್ನಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದದ್ದರಿಂದ ಆ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆ ಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು. ತುತೂರಿಯ ಶಬ್ದವು ಬರಬರುತ್ತಾ ಹೆಚ್ಚಾಗುತಿತ್ತು. ಮೋಶೆಯು ಮಾತನಾಡಿದಾಗ ದೇವರು ಅವನಿಗೆ ತನ್ನ ಸ್ವರದಿಂದ ಉತ್ತರಕೊಟ್ಟನು.
- Deuteronomy 34:10 ಧರ್ಮೋಪದೇಶಕಾಂಡ 34:10ಆದರೆ ಐಗುಪ್ತದೇಶದಲ್ಲಿ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿ ದಕ್ಕೆ ಕರ್ತನು ಅವನನ್ನು ಕಳುಹಿಸಿದ ಸಮಸ್ತ ಗುರುತು ಗಳ ಮತ್ತು ಅದ್ಭುತಗಳ ವಿಷಯದಲ್ಲಿಯೂ
- Deuteronomy 4:36 ಧರ್ಮೋಪದೇಶಕಾಂಡ 4:36ಆತನು ನಿನ್ನ ಶಿಕ್ಷಣಕ್ಕಾಗಿ ಆಕಾಶದೊಳಗಿಂದ ತನ್ನ ಶಬ್ದವನ್ನು ನಿನಗೆ ಕೇಳ ಮಾಡಿದನು; ಭೂಮಿಯ ಮೇಲೆ ತನ್ನ ಮಹಾಅಗ್ನಿ ಯನ್ನು ನಿನಗೆ ತೋರಿಸಿದನು; ಬೆಂಕಿಯೊಳಗಿಂದ ಆತನ ಮಾತುಗಳನ್ನು ಕೇಳಿದಿ.
- Exodus 19:9 ವಿಮೋಚನಕಾಂಡ 19:9ಕರ್ತನು ಮೋಶೆಗೆ--ಇಗೋ, ನಾನು ನಿನ್ನ ಸಂಗಡ ಮಾತನಾಡುವದನ್ನು ಜನರು ಕೇಳುವ ಹಾಗೆಯೂ ಅವರು ಸದಾಕಾಲ ನಿನ್ನನ್ನು ನಂಬುವಂತೆಯೂ ಮಂದ ವಾದ ಮೇಘದಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ ಅಂದನು. ಮೋಶೆಯು ಜನರ ಮಾತುಗಳನ್ನು ಕರ್ತನಿಗೆ ತಿಳಿಸಿದನು.
- Deuteronomy 4:33 ಧರ್ಮೋಪದೇಶಕಾಂಡ 4:33ನೀನು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೆಯೇ?
- Numbers 12:8 ಅರಣ್ಯಕಾಂಡ 12:8ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
- Exodus 33:11 ವಿಮೋಚನಕಾಂಡ 33:11ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಕರ್ತನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡು ತ್ತಿದ್ದನು. ತರುವಾಯ ಅವನು ಪಾಳೆಯಕ್ಕೆ ಹಿಂತಿರಿಗಿ ಹೋದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವ ಎಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ.
- Deuteronomy 5:24–26 ಧರ್ಮೋಪದೇಶಕಾಂಡ 5:24–26ಇಗೋ, ನಮ್ಮ ದೇವರಾದ ಕರ್ತನು ತನ್ನ ಮಹಿಮೆಯನ್ನೂ ತನ್ನ ಘನವನ್ನೂ ನಮಗೆ ತೋರಿಸಿದ್ದಾನೆ; ಆತನ ಶಬ್ದವನ್ನು ಬೆಂಕಿಯೊಳಗಿಂದ ಕೇಳಿದ್ದೇವೆ; ದೇವರು ಮನುಷ್ಯರ ಸಂಗಡ ಮಾತ ನಾಡಲು ಅವರು ಬದುಕುತ್ತಾರೆಂದು ಈಹೊತ್ತು ನೋಡಿದ್ದೇವೆ. ಹಾಗಾದರೆ ಈಗ ನಾವು ಯಾಕೆ ಸಾಯಬೇಕು? ಈ ಮಹಾಅಗ್ನಿಯು ನಿಶ್ಚಯವಾಗಿ ನಮ್ಮನ್ನು ದಹಿಸಿಬಿಡುವದು; ನಾವು ಇನ್ನೂ ನಮ್ಮ ದೇವರಾದ ಕರ್ತನ ಶಬ್ದವನ್ನು ಕೇಳಿದರೆ ಸಾಯುತ್ತೇವೆ. ಸಮಸ್ತ ಜನರಲ್ಲಿ ಯಾರು ನಮ್ಮ ಹಾಗೆ ಬೆಂಕಿಯೊಳ ಗಿಂದ ಮಾತನಾಡುವ ಜೀವವುಳ್ಳ ದೇವರ ಶಬ್ದವನ್ನು ಕೇಳಿ ಬದುಕಿದರು?
- Numbers 14:14 ಅರಣ್ಯಕಾಂಡ 14:14ಅವರು ಈ ದೇಶದ ನಿವಾಸಿ ಗಳಿಗೆ ಅದನ್ನು ಹೇಳುವರು; ಯಾಕಂದರೆ ಕರ್ತನಾದ ನೀನೇ ಈ ಜನರ ಸಂಗಡ ಇದ್ದೀಯೆಂದೂ ಕರ್ತ ನಾದ ನೀನೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀ ಯೆಂದೂ ನಿನ್ನ ಮೇಘವು ಅವರ ಮೇಲೆ ನಿಂತಿದೆ ಯೆಂದೂ ನೀನು ಹಗಲು ಹೊತ್ತಿನಲ್ಲಿ ಮೇಘ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀಯೆಂದೂ ಅವರು ಕೇಳಿದ್ದಾರೆ.
- Exodus 20:18–22 ವಿಮೋಚನಕಾಂಡ 20:18–22ಜನರೆಲ್ಲಾ ಗುಡುಗುಗಳನ್ನೂ ಮಿಂಚುಗಳನ್ನೂ ತುತೂರಿಯ ಶಬ್ದವನ್ನೂ ಬೆಟ್ಟವು ಹೊಗೆ ಹಾಯು ವದನ್ನೂ ನೋಡಿದರು; ಜನರು ಅದನ್ನು ನೋಡಿ ದೂರ ಹೋಗಿ ನಿಂತುಕೊಂಡರು. ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು. ಆಗ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು. ಆಗ ಜನರು ದೂರದಲ್ಲಿ ನಿಂತರು. ಮೋಶೆಯು ದೇವರಿದ್ದ ಕಾರ್ಗತ್ತಲೆಯ ಹತ್ತಿರ ಬಂದನು. ಕರ್ತನು ಮೋಶೆಗೆ--ನೀನು ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.