Deuteronomy · chapter 4 · verse 14
Deuteronomy 4:14 in Kannada
ನೀವು ದಾಟಿಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಮಾಡತಕ್ಕ ನಿಯಮ ನ್ಯಾಯಗಳನ್ನು ನಿಮಗೆ ಬೋಧಿಸಬೇಕೆಂದು ಆಗಲೇ ಕರ್ತನು ನನಗೆ ಆಜ್ಞಾಪಿಸಿದನು.
Neevu daatihogi svatantrisikolluva deshadalli maadatakka niyama nyaayagalannu nimage bodhisabekendu aagale kartanu nanage aajnyaapisidanu.
Deuteronomy 4:14 in English
- King James Version (KJV)
- And the LORD commanded me at that time to teach you statutes and judgments, that ye might do them in the land whither ye go over to possess it.
- World English Bible (WEB)
- The LORD commanded me at that time to teach you statutes and ordinances, that you might do them in the land where you go over to possess it.
- American Standard Version (ASV)
- And Jehovah commanded me at that time to teach you statutes and ordinances, that ye might do them in the land whither ye go over to possess it.
- Bible in Basic English (BBE)
- And the Lord gave me orders at that time to make clear to you these laws and decisions, so that you might do them in the land to which you are going, and which is to be your heritage.
- Darby Translation (DBY)
- And Jehovah commanded me at that time to teach you statutes and ordinances, that ye might do them in the land whither ye are passing over to possess it.
- Webster's Bible (WBS)
- And the LORD commanded me at that time to teach you statutes and judgments, that ye might do them in the land whither ye go over to possess it.
- Young's Literal Translation (YLT)
- 'And me hath Jehovah commanded at that time to teach you statutes and judgments, for your doing them in the land whither ye are passing over to possess it;
Read in context
- 12ಬೆಂಕಿಯ ಮಧ್ಯದೊಳಗಿಂದ ಕರ್ತನು ನಿಮ್ಮ ಸಂಗಡ ಮಾತನಾಡಿದನು; ವಾಕ್ಯಗಳ ಧ್ವನಿಯನ್ನು ನೀವು ಕೇಳಿದಿರಿ; ಆದರೆ ಆಕಾರವನ್ನು ನೋಡಲಿಲ್ಲ; ಧ್ವನಿಯನ್ನು ಮಾತ್ರ ಕೇಳಿದಿರಿ.
- 13ಆತನು ಹತ್ತು ಆಜ್ಞೆಗಳೆಂಬ ತನ್ನ ಒಡಂಬಡಿಕೆಯನ್ನು ನಿಮಗೆ ತಿಳಿಸಿ ಅದನ್ನು ಅನುಸರಿಸಬೇಕೆಂದು ನಿಮಗೆ ಆಜ್ಞಾಪಿಸಿ ಅವುಗಳನ್ನು ಕಲ್ಲಿನ ಎರಡು ಹಲಗೆಗಳ ಮೇಲೆ ಬರೆದನು.
- 14ನೀವು ದಾಟಿಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಮಾಡತಕ್ಕ ನಿಯಮ ನ್ಯಾಯಗಳನ್ನು ನಿಮಗೆ ಬೋಧಿಸಬೇಕೆಂದು ಆಗಲೇ ಕರ್ತನು ನನಗೆ ಆಜ್ಞಾಪಿಸಿದನು.
- 15ಆದದರಿಂದ ನಿಮ್ಮ ವಿಷಯವಾಗಿ ಬಹಳ ಜಾಗ್ರತೆಯಾಗಿರ್ರಿ; ಕರ್ತನು ಹೋರೇಬಿನಲ್ಲಿ ಬೆಂಕಿ ಯೊಳಗಿಂದ ನಿಮ್ಮ ಸಂಗಡ ಮಾತನಾಡಿದ ದಿನದಲ್ಲಿ ನೀವು ಯಾವ ತರವಾದ ಆಕಾರವನ್ನೂ ನೋಡಲಿ ಲ್ಲವಲ್ಲಾ.
- 16ನಿಮ್ಮನ್ನು ನೀವೇ ಕೆಡಿಸಿಕೊಳ್ಳದ ಹಾಗೆ ನಿಮಗಾಗಿ ಕೆತ್ತಿದ ವಿಗ್ರಹವನ್ನು ಅಂದರೆ ಗಂಡು ಇಲ್ಲವೆ ಹೆಣ್ಣಿನ ಆಕಾರದಲ್ಲಿ ಯಾವ ವಿಧವಾದ ಪ್ರತಿಮೆ ಯನ್ನೂ
Cross references
- Ezekiel 21:1–23 ಯೆಹೆಜ್ಕೇಲನು 21:1–23ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು. ಇಸ್ರಾ ಯೇಲ್ ದೇಶಕ್ಕೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ ಮತ್ತು ನನ್ನ ಕತ್ತಿಯನ್ನು ಅದರ ಒರೆಯಿಂದ ಹೊರಗೆ ತೆಗೆದು ನಿನ್ನೊಳಗಿರುವ ನೀತಿ ವಂತನನ್ನೂ ದುಷ್ಟನನ್ನೂ ಕಡಿದುಬಿಡುವೆನು. ನಾನು ನೀತಿವಂತನನ್ನೂ ದುಷ್ಟನನ್ನೂ ಕಡಿದು ಬಿಡುವದರಿಂದ ನನ್ನ ಕತ್ತಿಯು ದಕ್ಷಿಣದಿಂದ ಮೊದಲುಗೊಂಡು ಉತ್ತ ರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆ ಯನ್ನು ಬಿಟ್ಟು ಹೋಗುವದು. ಆಗ ಕರ್ತನಾದ ನಾನೇ ನನ್ನ ಕತ್ತಿಯನ್ನು ಹೊರಗೆ ತೆಗೆದೆನೆಂದು ಮನುಷ್ಯ ರೆಲ್ಲರಿಗೂ ತಿಳಿಯುವದು; ಅದು ಮತ್ತೆ ತಿರುಗಿ ಬರು ವದೇ ಇಲ್ಲ. ಆದದರಿಂದ ಮನುಷ್ಯಪುತ್ರನೇ, ನಿನ್ನ ನಡು ಮುರಿದಂತೆ ನಿಟ್ಟುಸಿರಿಡು, ಕಹಿಯಾದ ಮನಸ್ಸಿ ನಿಂದ ಅವರ ಕಣ್ಣುಗಳ ಮುಂದೆಯೇ ನಿಟ್ಟುಸಿರಿಡು. ನೀನು ಯಾಕೆ ನಿಟ್ಟುಸಿರಿಡುತ್ತೀ ಎಂದು ಅವರು ನಿನಗೆ ಕೇಳಿದಾಗ ನೀನು ಹೇಳಬೇಕಾದದ್ದೇನಂದರೆ -- ಆ ಸುದ್ದಿಯ ನಿಮಿತ್ತವೇ ಅದು ಬರುವದು; ಯಾಕಂದರೆ ಆಗ ಹೃದಯಗಳೆಲ್ಲಾ ಕರಗುವವು; ಕೈಗಳೆಲ್ಲಾ ನಿತ್ರಾಣ ವಾಗುವವು, ಪ್ರತಿಯೊಂದು ಆತ್ಮವು ಕುಂದಿ ಹೋಗು ವದು, ಮತ್ತು ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣಗೊಳ್ಳುವವು; ಇಗೋ, ಅದು ಬರುತ್ತದೆ, ತರಲ್ಪಡುತ್ತದೆ ಎಂದು ದೇವರಾದ ಕರ್ತನು ಹೇಳುತ್ತಾನೆ. ಇದಲ್ಲದೆ ಮತ್ತೆ ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು--ಕರ್ತನು ಹೀಗೆ ಹೇಳುವನೆಂದು ಹೇಳು--ಕತ್ತಿಯು, ಆ ಒಂದು ಕತ್ತಿಯು ಹದಮಾಡ ಲ್ಪಟ್ಟಿದೆ; ಮೆರುಗು ಸಹ ಮಾಡಲ್ಪಟ್ಟಿದೆ; ಅದು ಕೊಂದೇ ಕೊಲ್ಲುವ ಹಾಗೆ ಹದಮಾಡಲ್ಪಟ್ಟಿದೆ; ಥಳಥಳಿಸುವ ಹಾಗೆ ಮಸೆಯಲ್ಪಟ್ಟಿದೆ; ಹಾಗಾದರೆ ನಾವು ಸಂತೋಷಪಡಬಹುದೋ? ನನ್ನ ಮಗನ ಕೋಲು ಪ್ರತಿಯೊಂದು ಮರವನ್ನು ತಿರಸ್ಕಾರ ಮಾಡು ತ್ತದೆ. ಕೈಗೆ ಸಿದ್ದವಾಗುವಂತೆ ಅವನು ಅದನ್ನು ಮಸೆಯುವದಕ್ಕೆ ಕೊಟ್ಟಿದ್ದಾನೆ; ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಕತ್ತಿಗೆ ಹದವನ್ನೂ ಸಾಣೆಯನ್ನೂ ಮಾಡಲಾಗಿದೆ. ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು; ಇದು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಎಲ್ಲಾ ಅಧಿಪತಿಗಳ ಮೇಲೆಯೂ ಇರುವದು; ಕತ್ತಿಯ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವದು. ಆದದರಿಂದ ತೊಡೆಯನ್ನು ಬಡಿದುಕೋ. ಇದು ಒಂದು ಶೋಧನೆ; ಕತ್ತಿಯು ತಿರಸ್ಕರಿಸಲ್ಪಟ್ಟಿದ್ದೇ; ಕೋಲು ಸಹ ತಿರಸ್ಕಾರವಾದರೆ ಗತಿಯೇನು? ಅದು ಇನ್ನು ಆಗದು ಎಂದು ದೇವರಾದ ಕರ್ತನು ಹೇಳುತ್ತಾನೆ. ಆದದರಿಂದ ಮನುಷ್ಯ ಪುತ್ರನೇ ನೀನು ಚಪ್ಪಾಳೆ ತಟ್ಟಿ ಪ್ರವಾದಿಸು; ಹತ ರಾದವರ ಕತ್ತಿಯು ಮೂರನೆಯ ಸಾರಿಯೂ ಎರಡ ರಷ್ಟು ಮಾಡಲಿ; ಅದು ತಮ್ಮ ರಹಸ್ಯ ಕೋಣೆಗಳಲ್ಲಿ ಪ್ರವೇಶಿಸಿ ಮಹಾ ಪ್ರಜೆಗಳನ್ನು ಸಂಹರಿಸಿದ ಕತ್ತಿಯೇ. ಅವರ ಹೃದಯವು ಕುಂದುವ ಹಾಗೆಯೂ ಅವರ ಎಲ್ಲಾ ಬಾಗಿಲುಗಳಲ್ಲಿ ಬೀಳೋಣವು ಹೆಚ್ಚಾಗುವ ಹಾಗೆಯೂ ಕತ್ತಿಯ ಮೊನೆಯನ್ನಿಟ್ಟಿದ್ದೇನೆ; ಹಾ, ಅದು ಥಳಥಳಿಸುತ್ತಿದೆ, ಕೊಲೆ ಮಾಡುವದಕ್ಕೆ ಮಸಿಯಲ್ಪಟ್ಟಿದೆ. ನೀನು ಯಾವ ಕಡೆಗಾದರೂ ಹೋಗು ಎಡಗಡೆ ಅಥವಾ ಬಲಗಡೆ ನೀನು ನಿನ್ನ ಮುಖವು ಇರುವ ಕಡೆಗೆ ಹೋಗು. ನಾನು ಸಹ ಕೈತಟ್ಟಿ ನನ್ನ ರೋಷವನ್ನು ತೀರಿಸಿಕೊಳ್ಳುವೆನು ಎಂದು ಕರ್ತನಾದ ನಾನು ಹೇಳಿದ್ದೇನೆ. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ-- ಮನುಷ್ಯಪುತ್ರನೇ, ಬಾಬೆಲಿನ ಅರಸನ ಕತ್ತಿಯು ಬರುವ ಹಾಗೆ ನೀನು ಎರಡು ಮಾರ್ಗಗ ಳನ್ನು ನೇಮಿಸಿಕೋ; ಅವೆರಡೂ ಒಂದೇ ದೇಶದಿಂದ ಹೊರಡಬೇಕು; ಇದರಲ್ಲಿ ಒಂದು ಸ್ಥಳವನ್ನು ಆರಿ ಸಿಕೋ, ಅದು ಪಟ್ಟಣದ ಮಾರ್ಗದ ಪ್ರಾರಂಭದಲ್ಲಿ ಆರಿಸಿಕೋ. ಅಮ್ಮೋನ್ಯರ ರಬ್ಬಾ ಎಂಬ ಕೋಟೆ ಯುಳ್ಳ ಯೆರೂಸಲೇಮಿನಲ್ಲಿರುವ ಯೆಹೂದಕ್ಕೂ ಕತ್ತಿ ಬರುವ ಹಾಗೆ ಮಾರ್ಗವನ್ನು ನೇಮಿಸಿಕೋ. ಬಾಬೆಲಿನ ಅರಸನು ಮಾರ್ಗವು ಒಡೆಯುವ ಸ್ಥಳದಲ್ಲಿ (ಎರಡು ದಾರಿಯ ಮಗ್ಗುಲಲ್ಲಿ) ಶಕುನವನ್ನು ನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿ ದನು; ಮೂರ್ತಿಗಳ ಹತ್ತಿರ ವಿಚಾರಿಸಿದನು. ಪಿತ್ತ ಚೀಲವನ್ನು ನೋಡಿದನು. ಅವನು ಬಲಗೈಯಲ್ಲಿ ಯೆರೂಸಲೇಮಿಗಾದ ಶಕುನವು ಇತ್ತು. ಬಡಿಯುವ ಆಯುಧಗಳನ್ನಿಟ್ಟು ಬಾಯಿಬಿಟ್ಟು ಸಂಹಾರ ಧ್ವನಿಗೈದು ಆರ್ಭಟದಿಂದ ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ಮೊಹರ್ಚೆಯನ್ನು ಹಾಕಿ ಕೋಟೆ ಯನ್ನು ಕಟ್ಟಿದ್ದು ಸೂಚನೆಯಾಗಿದೆ. ಅದು ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವದು; ಆಣೆಯಿಟ್ಟು ಮಾಡಿದ ಪ್ರಮಾಣಗಳು ಅವರ ಮೇಲೆ ಉಂಟಾಗು ವವು; ಆದರೆ ಅವರು ಹಿಡಿಯಲ್ಪಡುವ ಹಾಗೆ ಅಕ್ರಮವನ್ನು ಜ್ಞಾಪಕಪಡಿಸುವರು.
- Psalm 105:44–45 ಕೀರ್ತನೆಗಳು 105:44–45ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ. ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.