Deuteronomy · chapter 4 · verse 3
Deuteronomy 4:3 in Kannada
ಬಾಳ್ಪೆಯೋರನ ವಿಷಯದಲ್ಲಿ ಕರ್ತನು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು; ಬಾಳ್ಪೆ ಯೋರನನ್ನು ಹಿಂಬಾಲಿಸಿದ ಮನುಷ್ಯರನ್ನೆಲ್ಲಾ ನಿನ್ನ ದೇವರಾದ ಕರ್ತನು ನಿಮ್ಮ ಮಧ್ಯದಲ್ಲಿಂದ ನಾಶ ಮಾಡಿದನಲ್ಲವೇ?
Baalpeyorana vishayadalli kartanu maadidavugalannu nimma kannugalu nodidavu; baalpe yoranannu himbaalisida manushyarannellaa ninna devaraada kartanu nimma madhyadallinda naasha maadidanallave?
Deuteronomy 4:3 in English
- King James Version (KJV)
- Your eyes have seen what the LORD did because of Baal-peor: for all the men that followed Baal-peor, the LORD thy God hath destroyed them from among you.
- World English Bible (WEB)
- Your eyes have seen what the LORD did because of Baal Peor; for the LORD your God has destroyed all the men who followed Baal Peor from among you.
- American Standard Version (ASV)
- Your eyes have seen what Jehovah did because of Baal-peor; for all the men that followed Baal-peor, Jehovah thy God hath destroyed them from the midst of thee.
- Bible in Basic English (BBE)
- Your eyes have seen what the Lord did because of Baal-peor: for destruction came from the Lord on all those among you who went after Baal-peor.
- Darby Translation (DBY)
- Your eyes have seen what Jehovah did because of Baal-Peor; for all the men that followed Baal-Peor, Jehovah thy God hath destroyed them from among you;
- Webster's Bible (WBS)
- Your eyes have seen what the LORD did because of Baal-peor: for all the men that followed Baal-peor, the LORD thy God hath destroyed them from among you.
- Young's Literal Translation (YLT)
- 'Your eyes are seeing that which Jehovah hath done in Baal-Peor, for every man who hath gone after Baal-Peor, Jehovah thy God hath destroyed him from thy midst;
Read in context
- 1ಹೀಗಿರುವದರಿಂದ ಈಗ ಇಸ್ರಾಯೇಲೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿ ಅವುಗಳನ್ನು ಮಾಡಿರಿ.
- 2ನಾನು ನಿಮಗೆ ಆಜ್ಞಾಪಿಸುವ ವಾಕ್ಯದ ಸಂಗಡ ಏನನ್ನೂ ಕೂಡಿಸಬೇಡಿರಿ; ಅದರಿಂದ ಏನನ್ನೂ ತೆಗೆಯಬೇಡಿರಿ; ನಾನು ನಿಮಗೆ ಆಜ್ಞಾಪಿಸುವಂಥ ನಿಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಳ್ಳಬೇಕು.
- 3ಬಾಳ್ಪೆಯೋರನ ವಿಷಯದಲ್ಲಿ ಕರ್ತನು ಮಾಡಿದವುಗಳನ್ನು ನಿಮ್ಮ ಕಣ್ಣುಗಳು ನೋಡಿದವು; ಬಾಳ್ಪೆ ಯೋರನನ್ನು ಹಿಂಬಾಲಿಸಿದ ಮನುಷ್ಯರನ್ನೆಲ್ಲಾ ನಿನ್ನ ದೇವರಾದ ಕರ್ತನು ನಿಮ್ಮ ಮಧ್ಯದಲ್ಲಿಂದ ನಾಶ ಮಾಡಿದನಲ್ಲವೇ?
- 4ಆದರೆ ನಿಮ್ಮ ದೇವರಾದ ಕರ್ತನಿಗೆ ಅಂಟಿಕೊಂಡವರಾದ ನೀವೆಲ್ಲರು ಇಂದು ಬದುಕುತ್ತೀರಿ.
- 5ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.
Cross references
- Numbers 25:1–9 ಅರಣ್ಯಕಾಂಡ 25:1–9ಆಗ ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಜನರು ಮೋವಾಬಿನ ಕುಮಾರ್ತೆಯರ ಸಂಗಡ ಜಾರತ್ವ ಮಾಡಲಾರಂಭಿ ಸಿದರು. ಇವರು ಜನರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು; ಜನರು ತಿಂದು ಅವರ ದೇವರು ಗಳಿಗೆ ಅಡ್ಡಬಿದ್ದರು. ಇಸ್ರಾಯೇಲ್ ಬಾಳ್ಪೆಯೋರಿಗೆ ತಾನೇ ಕೂಡಿಕೊಂಡದ್ದರಿಂದ ಕರ್ತನ ಕೋಪವು ಇಸ್ರಾಯೇಲಿನ ಮೇಲೆ ಉರಿಯಿತು. ಆಗ ಕರ್ತನು ಮೋಶೆಗೆ--ಕರ್ತನ ಕೋಪಾಗ್ನಿಯು ಇಸ್ರಾಯೇಲಿ ನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥ ರೆಲ್ಲರನ್ನು ತಕ್ಕೊಂಡು ಅವರನ್ನು ಸೂರ್ಯನಿಗೆದುರಾಗಿ ಕರ್ತನ ಮುಂದೆ ತೂಗಹಾಕು. ಮೋಶೆ ಇಸ್ರಾಯೇ ಲಿನ ನ್ಯಾಯಾಧಿಪತಿಗಳಿಗೆ--ನಿಮ್ಮಲ್ಲಿ ಒಬ್ಬೊಬ್ಬನು ಬಾಳ್ಪೆಯೋರಿಗೆ ಕೂಡಿಕೊಂಡಿರುವ ತನ್ನ ಮನುಷ್ಯರನ್ನು ಕೊಲ್ಲಬೇಕು ಅಂದನು. ಇಗೋ, ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬನು ಬಂದು ಮೋಶೆಗೂ ಸಭೆಯ ಗುಡಾರದ ಮುಂದೆ ಅಳುತ್ತಿರುವ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಗೂ ಕಾಣುವ ಹಾಗೆ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತಂದನು. ಆರೋನನ ಮಗನಾಗಿದ್ದ ಎಲೀಯಾಜರನ ಮಗನಾದ ಫೀನೆಹಾಸನೆಂಬ ಯಾಜಕನು ಅದನ್ನು ನೋಡಿ ಸಭೆಯ ಮಧ್ಯದಿಂದ ಎದ್ದು ತನ್ನ ಕೈಯಲ್ಲಿ ಭಲ್ಲೆಯನ್ನು ಹಿಡುಕೊಂಡು ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು. ಆದರೆ ವ್ಯಾಧಿ ಯಿಂದ ಸತ್ತವರು ಇಪ್ಪತ್ತುನಾಲ್ಕು ಸಾವಿರ ಮಂದಿಯಾಗಿದ್ದರು.
- Psalm 106:28–29 ಕೀರ್ತನೆಗಳು 106:28–29ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.
- Numbers 31:16 ಅರಣ್ಯಕಾಂಡ 31:16ಇಗೋ, ಇವರೇ ಬಿಳಾಮನ ಮಾತಿನಿಂದ ಪೆಗೋರನ ಕಾರ್ಯದಲ್ಲಿ ಕರ್ತನಿಗೆ ವಿರೋಧವಾಗಿ ದ್ರೋಹ ಮಾಡುವದಕ್ಕೆ ಇಸ್ರಾ ಯೇಲ್ ಮಕ್ಕಳಿಗೆ ಕಾರಣವಾಗಿದ್ದರು. ಕರ್ತನ ಸಭೆ ಯೊಳಗೆ ಇವರಿಂದಲೇ ವ್ಯಾಧಿಯಾಯಿತು.
- Joshua 22:17 ಯೆಹೋಶುವ 22:17ಪೆಗೋರದಲ್ಲಿ ಆದ ದುಷ್ಟ ತನವು ನಮಗೆ ಅಲ್ಪವೋ? ಕರ್ತನ ಸಭೆಯ ಮೇಲೆ ವ್ಯಾಧಿ ಬಂದಾಗ್ಯೂ ಈ ದಿನದ ವರೆಗೂ ಅದರಿಂದ ನಾವು ಶುದ್ಧವಾಗಲಿಲ್ಲ.
- Numbers 26:64 ಅರಣ್ಯಕಾಂಡ 26:64ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲ್ ಮಕ್ಕಳನ್ನು ಎಣಿಸಿದಾಗ ಎಣಿಸಲ್ಪಟ್ಟವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.ಕರ್ತನು--ಅವರು ಅರಣ್ಯದಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಅವರಿಗೆ ಹೇಳಿದ್ದನು; ಈ ಪ್ರಕಾರ ಯೆಫುನ್ನೆಯ ಮಗನಾದ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನಾದರೂ ಉಳಿಯಲಿಲ್ಲ.
- Hosea 9:10 ಹೋಶೇಯ 9:10ನಾನು ಅರಣ್ಯದಲ್ಲಿ ದ್ರಾಕ್ಷೆಯ ಫಲದ ಹಾಗೆ ಇಸ್ರಾಯೇಲನ್ನು ಕಂಡುಕೊಂಡೆನು. ಅಂಜೂರದ ಗಿಡ ದಲ್ಲಿ ಮೊದಲನೆಯ ಹಣ್ಣುಗಳ ಹಾಗೆ ನಿಮ್ಮ ಪಿತೃಗಳನ್ನು ನೋಡಿದೆನು; ಆದರೆ ಅವರು ಬಾಳ್ ಪೆಗೋರಿಗೆ ಹತ್ತಿರ ಬಂದು ನಾಚಿಕೆಯಾದದ್ದಕ್ಕೆ ತಮ್ಮನ್ನು ಪ್ರತ್ಯೇ ಕಿಸಿಕೊಂಡರು; ಅವರು ಪ್ರೀತಿಮಾಡಿದ್ದರ ಹಾಗೆ ಅಸಹ್ಯರಾದರು.